ಕಡಿಮೆ ಬೆಲೆಗೆ 5G ಫೋನ್ ಖರೀದಿಸಬೇಕೆ?..ಹಾಗಿದ್ರೆ, ಇಲ್ಲಿ ಒಮ್ಮೆ ಗಮನಿಸಿ!
ಪ್ರಸ್ತುತ ನೂತನ ಮೊಬೈಲ್ ಖರೀದಿ ಮಾಡುವಾಗ ಅನೇಕ ಗ್ರಾಹಕರು 5G ಸೌಲಭ್ಯ ಇರುವ ಸ್ಮಾರ್ಟ್‌ಫೋನ್‌ಗಳತ್ತ ಮನಸ್ಸು ಮಾಡುತ್ತಾರೆ. ಅದರಲ್ಲಿಯೂ ಅಗ್ಗದ ಅಥವಾ ಬಜೆಟ್ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಫೀಚರ್ಸ್ ಒಳಗೊಂಡ 5G ಮೊಬೈಲ್‌ಗಳಿಗೆ ಅಧಿಕ ಡಿಮ್ಯಾಂಡ್ ಎನ್ನಬಹುದು. ಸದ್ಯ ಸುಮಾರು 10,000ರೂ. ಗಳ ಪ್ರೈಸ್‌ಟ್ಯಾಗ್ ಒಳಗೆ ಅತ್ಯುತ್ತಮ 5G ಮೊಬೈಲ್‌ಗಳು ಖರೀದಿಗೆ ಲಭ್ಯ ಇದ್ದು, ಗ್ರಾಹಕರಿಗೆ ಖುಷಿ ಸಂಗತಿ ಎನಿಸಿದೆ.
ಹೌದು, ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯಲ್ಲಿ 5G ಸ್ಮಾರ್ಟ್‌ಫನ್‌ಗಳಿಗೆ ಬೇಡಿಕೆ ಅಧಿಕ. ಈ ನಿಟ್ಟಿನಲ್ಲಿ ಬಹುತೇಕ ಮೊಬೈಲ್ ಸಂಸ್ಥೆಗಳು ಕಡಿಮೆ ದರದಲ್ಲಿ ತಮ್ಮ 5G ಫೋನ್‌ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಿವೆ. ಅದಾಗ್ಯೂ, ಬೆಲೆ ಹಾಗೂ 5G ಜೊತೆಗೆ ಬೆಸ್ಟ್ ಕ್ಯಾಮೆರಾ, ಬಿಗ್ ಬ್ಯಾಟರಿ, ಉತ್ತಮ ಪ್ರೊಸೆಸರ್‌ನಂತಹ ಫೀಚರ್ಸ್‌ಗಳನ್ನು ಒಳಗೊಂಡ ಫೋನ್‌ಗಳು ಹೆಚ್ಚು ಆಕರ್ಷಕ ಎನಿಸುತ್ತವೆ. ಅಂತಹ ಕೆಲವು ಫೋನ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.

ಮೊಟೊ G45 5G ಮೊಬೈಲ್
ಮೊಟೊ G45 5G ಮೊಬೈಲ್ 120Hz ರಿಫ್ರೆಶ್ ರೇಟ್ ಜೊತೆಗೆ 6.5 ಇಂಚಿನ ಡಿಸ್‌ಪ್ಲೇ ಅನ್ನು ಹೊಂದಿದೆ. ಹಾಗೆಯೇ ಇದು 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್, 1600 x 720 ಪಿಕ್ಸೆಲ್ ರೆಸಲ್ಯೂಶನ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಪಡೆದಿದೆ. ಅದಲ್ಲದೇ ಈ ಫೋನ್ ಆಕ್ಟಾ-ಕೋರ್ Qualcomm Snapdragon 6s Gen 3 ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 14 ನಲ್ಲಿ ಕೆಲಸ ಮಾಡಲಿದೆ.
ಹಾಗೆಯೇ ಮೊಟೊ ಸಂಸ್ಥೆಯ ಈ ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಪಿಕ್ಸೆಲ್ ಸೌಲಭ್ಯ ಹೊಂದಿದೆ. ಇನ್ನು ಇದು 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸಹ ಹೊಂದಿದ್ದು, ಇದಕ್ಕೆ ಪೂರಕವಾಗಿ 18W ಚಾರ್ಜಿಂಗ್ ಸಪೋರ್ಟ್ ಸಹ ಪಡೆದುಕೊಂಡಿದೆ.
ಇನ್ಫಿನಿಕ್ಸ್ ಹಾಟ್ 50 5G ಮೊಬೈಲ್
ಇನ್ಫಿನಿಕ್ಸ್ ಹಾಟ್ 50 5G ಮೊಬೈಲ್ 6.7 ಇಂಚಿನ HD+ LCD ಡಿಸ್‌ಪ್ಲೇ ಪಡೆದಿದ್ದು, ಇದರ ಜೊತೆಗೆ 1600 x 720 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್ ಸಹ ಹೊಂದಿದೆ. ಇನ್ನು ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಪವರ್ ಪಡೆದಿದ್ದು, ಜೊತೆಗೆ ಮಾಲಿ G57 MC2 GPU ಸಪೋರ್ಟ್ ಕೂಡಾ ಇದೆ. ಅಲ್ಲದೇ ಇದು 8GB RAM ಮತ್ತು 128GB ಸೌಲಭ್ಯ ಪಡೆದಿದೆ.
ಹಾಗೆಯೇ ಇನ್ಫಿನಿಕ್ಸ್ ಹಾಟ್ 50 5G ಮೊಬೈಲ್ ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸೌಲಭ್ಯ ಹೊಂದಿದೆ. ಹಾಗೆಯೇ ಇದು 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸಹ ಹೊಂದಿದ್ದು, ಇದಕ್ಕೆ ಪೂರಕವಾಗಿ 18W ಚಾರ್ಜಿಂಗ್ ಸಪೋರ್ಟ್ ಸಹ ಪಡೆದುಕೊಂಡಿದೆ.
ರಿಯಲ್‌ಮಿ C63 5G ಮೊಬೈಲ್
ರಿಯಲ್‌ಮಿ C63 5G ಮೊಬೈಲ್ 6.7 ಇಂಚಿನ HD+ ಡಿಸ್‌ಪ್ಲೇ ಪಡೆದಿದ್ದು, ಇದರ ಜೊತೆಗೆ 1600 x 720 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್ ಸಹ ಹೊಂದಿದೆ. ಇನ್ನು ಈ ಫೋನ್ ಸಹ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಸಾಮರ್ಥ್ಯ ಒಳಗೊಂಡಿದ್ದು, ಜೊತೆಗೆ Mali-G57 MC2 GPU ಸಪೋರ್ಟ್ ಕೂಡಾ ಇದೆ. ಅಲ್ಲದೇ ಇದು 8GB RAM + 128GB ಸೌಲಭ್ಯ ಪಡೆದಿದೆ.
ಹಾಗೆಯೇ ಇನ್ಫಿನಿಕ್ಸ್ ಹಾಟ್ 50 5G ಮೊಬೈಲ್ ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸೌಲಭ್ಯ ಹೊಂದಿದೆ. ಹಾಗೆಯೇ ಇದು 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸಹ ಹೊಂದಿದ್ದು, ಇದಕ್ಕೆ ಪೂರಕವಾಗಿ 10W ಚಾರ್ಜಿಂಗ್ ಸಪೋರ್ಟ್ ಸಹ ಪಡೆದುಕೊಂಡಿದೆ.


Click it and Unblock the Notifications








