Home
ಮೊಬೈಲ್

64ಎಂಪಿ ಕ್ಯಾಮೆರಾ ಫೋನ್‌ ಖರೀದಿಸಬೇಕೆ?..ಇಲ್ಲಿವೆ ನೋಡಿ ಬೆಸ್ಟ್‌ ಆಯ್ಕೆ!

ಪ್ರಸ್ತುತ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ಯಾಮೆರಾ ಫೀಚರ್ ಅತೀ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ಮೆಗಾಪಿಕ್ಸಲ್‌ ಸೆನ್ಸಾರ್‌ ಆಯ್ಕೆಯನ್ನು ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ನೀಡುತ್ತಿದ್ದಾರೆ. ಸದ್ಯ ಸ್ಮಾರ್ಟ್‌ಫೋನ್‌ಗಳಲ್ಲಿ ತ್ರಿವಳಿ ಮತ್ತು ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಸಾಮಾನ್ಯ ಎನ್ನುವಂತಾಗಿದೆ. ಅದರೊಂದಿಗೆ ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ ಇಲ್ಲವೇ 64ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿರುತ್ತವೆ.

ಸ್ಮಾರ್ಟ್‌ಫೋನ್‌ಗಳು

ಹೌದು, ಇಂದಿನ ಬಹುತೇಕ ಚೀನಾ ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಹೈ ಎಂಡ್ ಸೆನ್ಸಾರ್ ಪಡೆದಿರುತ್ತವೆ. ಮುಖ್ಯವಾಗಿ 48ಎಂಪಿ ಮತ್ತು 64ಎಂಪಿ ಸೆನ್ಸಾರ್ ಕ್ಯಾಮೆರಾಗಳು ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್‌ ರೂಪಿಸಿವೆ. ಬಜೆಟ್‌ ಬೆಲೆಯಲ್ಲಿಯೇ ಅತ್ಯುತ್ತಮ ಕ್ಯಾಮೆರಾ ಲಭ್ಯವಾಗುತ್ತಿರುವ ಕಾರಣದಿಂದಾಗಿ ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರು 64ಎಂಪಿ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳತ್ತ ಚಿತ್ತ ಹರಿಸುವಂತಾಗಿದೆ. ಹಾಗಾದರೇ ಪ್ರಸ್ತುತ ಲಭ್ಯವಿರುವ 64ಎಂಪಿ ಸೆನ್ಸಾರ್ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ರಿಯಲ್‌ ಮಿ XT

ರಿಯಲ್‌ ಮಿ XT

ಚೀನಾ ಮೂಲದ ರಿಯಲ್ ಮಿ ಸ್ಮಾರ್ಟ್‌ಫೋನ್ ಕಂಪನಿಯು ರಿಯಲ್‌ ಮಿ XT ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದ್ದು, ಈ ಫೋನ್ 64ಎಂಪಿ ಕ್ಯಾಮೆರಾ ಫೀಚರ್‌ನಿಂದ ಭಾರಿ ಸದ್ದು ಮಾಡಿತ್ತು. ಈ ಫೋನ್ ಕ್ವಾಡ್‌ ಕ್ಯಾಮೆರಾ ಹೊಂದಿದ್ದು, ಮುಖ್ಯ ಕ್ಯಾಮೆರಾ 64ಎಂಪಿ ಸೆನ್ಸಾರ್‌ನಲ್ಲಿದೆ. ಒಟ್ಟು ಮೂರು ವೇರಿಯಂಟ್‌ ಮಾದರಿಯ ಆಯ್ಕೆ ಹೊಂದಿದ್ದು, ಅವುಗಳಲ್ಲಿ 4GB+64GB ಸ್ಟೋರೇಜ್‌ ಬೇಸ್‌ ವೇರಿಯಂಟ್‌ನ ಸ್ಮಾರ್ಟ್‌ಫೋನ್ ಬೆಲೆಯು 15,999ರೂ.ಗಳು ಆಗಿದೆ.

ಶಿಯೋಮಿ ರೆಡ್ಮಿ ನೋಟ್ 8 ಪ್ರೊ

ಶಿಯೋಮಿ ರೆಡ್ಮಿ ನೋಟ್ 8 ಪ್ರೊ

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅಬ್ಬರಿಸುತ್ತಿರುವ 'ರೆಡ್ಮಿ ನೋಟ್ 8 ಪ್ರೊ' ಸ್ಮಾರ್ಟ್‌ಫೋನ್ ಮುಖ್ಯ ಹೈಲೈಟ್ ಅಂದರೇ ಅದುವೇ 64ಎಂಪಿ ಸೆನ್ಸಾರ್ ಕ್ಯಾಮೆರಾ. ಈ ಸ್ಮಾರ್ಟ್‌ಫೋನ್ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, ಇದರೊಂದಿಗೆ ಮೀಡಿಯಾ ಟೆಕ್‌ ಹಿಲಿಯೊ G90T ಪ್ರೊಸೆಸರ್, ಆಂಡ್ರಾಯ್ಡ್ 9 ಓಎಸ್‌, 4500mAh ಬ್ಯಾಟರಿ ಫೀಚರ್ ಪಡೆದಿದೆ. 6GB+64GB ಸ್ಟೋರೇಜ್‌ನ ಬೇಸ್‌ ಬೆಲೆಯು 14,999ರೂ.ಗಳಾಗಿದೆ.

ರಿಯಲ್‌ ಮಿ x2 ಪ್ರೊ

ರಿಯಲ್‌ ಮಿ x2 ಪ್ರೊ

ರಿಯಲ್‌ ಮಿ x2 ಪ್ರೊ ಸ್ಮಾರ್ಟ್‌ಫೋನ್ ರಿಯಲ್ ಮಿ ಕಂಪನಿಯು ಫ್ಲ್ಯಾಗ್‌ಶಿಫ್ ಮಾದರಿ ಫೋನಾಗಿದ್ದು, ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆದಿದೆ. ಈ ಫೋನಿನ ಕ್ವಾಡ್‌ ಕ್ಯಾಮೆರಾ ಹೊಂದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ನಲ್ಲಿದೆ. ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಹಾಗೂ 4000mAh ಬ್ಯಾಟರಿ ಬಾಳಿಕೆ ಪಡೆದಿದೆ. 8GB+128GB ಸ್ಟೋರೇಜ್‌ ಬೇಸ್‌ ವೇರಿಯಂಟ್‌ನ ಸ್ಮಾರ್ಟ್‌ಫೋನ್ ಬೆಲೆಯು 29,999 ರೂ.ಗಳು ಆಗಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ A70S

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ A70S

ಸ್ಯಾಮ್‌ಸಂಗ್ ಕಂಪನಿಯ ಗ್ಯಾಲ್ಯಾಕ್ಸಿ ಎ70ಎಸ್‌ ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್ ಕ್ಯಾಮೆರಾವನ್ನು ಒಳಗೊಂಡಿದ್ದು, ಸ್ನ್ಯಾಪ್‌ಡ್ರಾಗನ್ 675 ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸುತ್ತದೆ. 6GB RAM ಮತ್ತು 128GB ಸ್ಟೋರೇಜ್‌ನ ಬೇಸ್‌ ವೇರಿಯಂಟ್‌ ಬೆಲೆಯು 28,999ರೂ.ಗಳಾಗಿದೆ.

Best Mobiles in India

English summary
Best 64MP Camera Phones to Buy in India: Realme XT, Redmi Note 8 Pro, Samsung Galaxy A70s and Realme X2 Pro now available in india.to know more visit to kannada.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+