ರೂ 10,000 ದ ಒಳಗಿನ ಬೆಲೆಯಲ್ಲಿ ಬೆಸ್ಟ್ ಕ್ಯಾಮೆರಾ ಫೋನ್ಸ್

Written By:

ಸ್ಮಾರ್ಟ್‌ಫೋನ್ ಕ್ಯಾಮೆರಾಗಳು ಗುಣಮಟ್ಟ ಮತ್ತು ಚಿತ್ರ ತೆಗೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು ಕ್ಯಾಮೆರಾ ಸೆನ್ಸಾರ್‌ಗಳೊಂದಿಗೆ ಮಾರುಕಟ್ಟೆಗೆ ಕಾಲಿಡುತ್ತಿದೆ. ಆದರೆ ಇವುಗಳು ದುಬಾರಿ ಬೆಲೆಯನ್ನು ಹೊಂದಿರುತ್ತದೆ.

ಓದಿರಿ: 3ಜಿಬಿ RAM ಉಳ್ಳ ಸೋನಿಯ ಅತ್ಯಾಧುನಿಕ ಡಿವೈಸ್ ಜೆಡ್ 3 ಪ್ಲಸ್ ಲಾಂಚ್

ಹುವಾಯಿಯಂತಹ ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿಗಳು ಅತ್ಯುತ್ತಮ ಕ್ಯಾಮೆರಾಗಳೊಂದಿಗೆ ಬರುತ್ತಿದ್ದು ಕಡಿಮೆ ಬೆಲೆಯಲ್ಲಿ ನಿಮಗೆ ಇವನ್ನು ಖರೀದಿಸಬಹುದಾಗಿದೆ. ರೂ 10,000 ದ ಒಳಗೆ ಬರುವ ಟಾಪ್ 10 ಫೋನ್‌ಗಳ ವಿವರಗಳನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಕಡಿಮೆ ಬೆಲೆಯಲ್ಲಿ ಉತ್ತಮ ಹುವಾಯಿ ಕ್ಯಾಮೆರಾಗಳ ಖರೀದಿಯನ್ನು ನಿಮಗೆ ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಲೆ ರೂ 8,999

ಹೋನರ್ 4ಸಿ

13 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾದೊಂದಿಗೆ ಬಂದಿರುವ ಹೋನರ್ 4ಸಿ ಆಟೊ ಫೋಕಸ್, ಟಚ್ ಫೋಕಸ್, ಪನೋರಮಾ, ಎಚ್‌ಡಿಆರ್ ಮತ್ತು ಜಿಯೋ ಟ್ಯಾಗಿಂಗ್ ಅಂಶಗಳನ್ನು ಒಳಗೊಂಡು ಬಂದಿದೆ. ಮುಂಭಾಗ ಕ್ಯಾಮೆರಾ 5 ಮೆಗಾಪಿಕ್ಸೆಲ್ ಆಗಿದೆ. 5 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಇದರಲ್ಲಿದ್ದು 1.2GHZ ಓಕ್ಟಾ ಕೋರ್ ಪ್ರೊಸೆಸರ್ ಇದರಲ್ಲಿದೆ.

ಬೆಲೆ ರೂ 9,999

ಹೋನರ್ 4ಎಕ್ಸ್

ಹೋನರ್ 4ಎಕ್ಸ್ ಅತ್ಯಂತ ಶಕ್ತಿಯುತ ಸ್ಮಾರ್ಟ್‌ಫೋನ್ ಆಗಿದ್ದು 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಆಟೊ ಫೋಕಸ್ ವಿಶೇಷತೆ, ಟಚ್ ಫೋಕಸ್, ಪನೋರಮಾ, ಎಚ್‌ಡಿಆರ್ ಮೋಡ್‌ನೊಂದಿಗೆ ಬಂದಿದೆ. 5.5 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಫೋನ್ ಹೊಂದಿದ್ದು 1.2GHZ ಓಕ್ಟಾ ಕೋರ್ ಪ್ರೊಸೆಸರ್ ಇದರಲ್ಲಿದೆ.

ಬೆಲೆ ರೂ: 4,499

ಹೋನರ್ ಬೀ

ಪವರ್ ಫುಲ್ ಹಾರ್ಡ್‌ವೇರ್‌ನೊಂದಿಗೆ ಬಂದಿರುವ ಹೋನರ್ ಬೀ 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾದ ಜೊತೆಗೆ ಆಟೊ ಫೋಕಸ್, ಎಲ್‌ಇಡಿ ಫ್ಲ್ಯಾಶ್ ಮೊದಲಾದ ವೈಶಿಷ್ಟ್ಯತೆಗಳೊಂದಿಗೆ ಬಂದಿದೆ. ಇದರ ಮುಂಭಾಗ ಕ್ಯಾಮೆರಾ 2 ಮೆಗಾಪಿಕ್ಸೆಲ್ ಆಗಿದೆ. 4.5 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇಯನ್ನು ಫೋನ್ ಹೊಂದಿದ್ದು ಕ್ವಾಡ್ ಕೋರ್ 1.2GHZ ಕೋರ್ಟೆಕ್ಸ್ ಎ7 ಪ್ರೊಸೆಸರ್ ಇದರಲ್ಲಿದೆ.

ಬೆಲೆ ರೂ 8,999

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ನಿಟ್ರೊ A311

13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾದೊಂದಿಗೆ ಬಂದಿರುವ ನಿಟ್ರೊ A311 ಸೋನಿಯ CMOS ಇಮೇಜ್ ಸೆನ್ಸಾರ್ ಮತ್ತು ಶಾಟ್ ಬ್ಲ್ಯೂ ಗ್ಲಾಸ್ ಫಿಲ್ಟರ್ ಅನ್ನು ಪಡೆದುಕೊಂಡಿದೆ. 5 ಇಂಚಿನ ಎಚ್‌ಡಿ ಡಿಸ್‌ಪ್ಲೇ ಫೋನ್‌ನಲ್ಲಿದೆ.

ಬೆಲೆ ರೂ 6,999

ರೆಡ್ಮೀ 2

ರೆಡ್ಮೀ 2, 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾದೊಂದಿಗೆ ಬಂದಿದ್ದು ಬಿಎಸ್ಐ ಸೆನ್ಸಾರ್ ಅನ್ನು ಹೊಂದಿದೆ. ಉತ್ತಮ ಗುಣಮಟ್ಟದ ಫೋಟೋಗಳನ್ನು ಈ ಡಿವೈಸ್‌ನಲ್ಲಿ ಸೆರೆಹಿಡಿಯಬಹುದಾಗಿದ್ದು ಮುಂಭಾಗ ಕ್ಯಾಮೆರಾ 2 ಮೆಗಾಪಿಕ್ಸೆಲ್ ಆಗಿದೆ. 4.7 ಇಂಚಿನ ಐಪಿಎಸ್ ಡಿಸ್‌ಪ್ಲೇಯನ್ನು ಡಿವೈಸ್ ಹೊಂದಿದ್ದು 1.2GHZ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್ ಇದರಲ್ಲಿದೆ.

ಬೆಲೆ ರೂ 6,999

ಮೋಟೋ ಇ (2 ನೇ ಜನರೇಶನ್)

ಸೆಕೆಂಡ್ ಜನರೇಶನ್ ಮೋಟೋ ಇ ಕಡಿಮೆ ಬಜೆಟ್‌ನ ಫೋನ್ ಆಗಿದ್ದು 5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾದೊಂದಿಗೆ ವಿಜಿಎ ಮುಂಭಾಗ ಕ್ಯಾಮೆರಾವನ್ನು ಪಡೆದುಕೊಂಡು ಬಂದಿದೆ. ಆಟೊ ಫೋಕಸ್, ತ್ವರಿತ ಕ್ಯಾಪ್ಚರ್ ಮೋಡ್, ಪನೋರಮಾ ಮೋಡ್ ಅನ್ನು ಡಿವೈಸ್ ಹೊಂದಿದೆ. 4.5 ಇಂಚಿನ ಡಿಸ್‌ಪ್ಲೇಯನ್ನು ಮೊಬೈಲ್ ಪಡೆದುಕೊಂಡಿದ್ದು 1.2GHZ ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದೆ.

ಬೆಲೆ ರೂ 9,999

ಅಸೂಸ್ ಜೆನ್‌ಫೋನ್ 5

ಅಸೂಸ್ ಜೆನ್‌ಫೋನ್ 5, 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾದೊಂದಿಗೆ ಬಂದಿದ್ದು ಆಟೊ ಫೋಕಸ್ ಎಲ್‌ಇಡಿ ಫ್ಲ್ಯಾಶ್ ಇದರಲ್ಲಿದೆ. ಮುಂಭಾಗದಲ್ಲಿ 2 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಫೋನ್ ಹೊಂದಿದ್ದು 5 ಇಂಚಿನ ಎಚ್‌ಡಿ ಡಿಸ್‌ಪ್ಲೇ ಇಂಟೆಲ್ ಆಟಮ್ ಪ್ರೊಸೆಸರ್ ಅನ್ನು ಡಿವೈಸ್ ಪಡೆದುಕೊಂಡಿದೆ.

ಬೆಲೆ ರೂ 8,999

ಕಾರ್ಬನ್ ಪ್ಲಾಟಿನಮ್

ಪ್ಲಾಟಿನಮ್ ಪಿ9, 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಮುಂಭಾಗ ಮತ್ತು ಹಿಂಭಾಗದಲ್ಲಿ ಹೊಂದಿದೆ. ಹಿಂಭಾಗ ಕ್ಯಾಮೆರಾದಲ್ಲಿ ಎಲ್‌ಇಡಿ ಫ್ಲ್ಯಾಶ್ ಅನ್ನು ಕಾಣಬಹುದಾಗಿದ್ದು ಆಟೊ ಫೋಕಸ್, ಪನೋರಮಾ ಮತ್ತು ನಿರಂತರ ಶಾಟ್‌ಗಳನ್ನು ಇದು ಒಳಗೊಂಡಿದೆ. ಫೋನ್ 6 ಇಂಚಿನ ಐಪಿಎಸ್ ಡಿಸ್‌ಪ್ಲೇ ಜೊತೆಗೆ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಪಡೆದುಕೊಂಡಿದೆ.

ಬೆಲೆ ರೂ 8,499

ಕಾರ್ಬನ್ ಮ್ಯಾಚ್ ಟು ಟೈಟಾನಿಯಮ್

ಕಾರ್ಬನ್ ಸ್ಮಾರ್ಟ್‌ಫೋನ್ ಮ್ಯಾಚ್ ಟು ಟೈಟಾನಿಯಮ್ 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾದೊಂದಿಗೆ ಬಂದಿದ್ದು ಮುಂಭಾಗ ಕ್ಯಾಮೆರಾ ಕೂಡ ಒಂದೇ ಮೆಗಾಪಿಕ್ಸೆಲ್ ಅನ್ನು ಹೊಂದಿದೆ. ಸೋನಿ ಬಿಎಸ್ಐ ಇಮೇಜ್ ಸೆನ್ಸಾರ್ ಅನ್ನು ಕ್ಯಾಮೆರಾ ಪಡೆದುಕೊಂಡಿದ್ದು ಎಲ್‌ಇಡಿ ಫ್ಲ್ಯಾಶ್, ಫೇಸ್ ಬ್ಯೂಟಿ, ಸ್ಲೈಲ್ ಶಾಟ್ ಮತ್ತು ಎಚ್‌ಡಿಆರ್ ಅನ್ನು ಒಳಗೊಂಡಿದೆ.

ಬೆಲೆ ರೂ 6,999

ಐಬಾಲ್ ಎಂಜಿಮಾ ಆಂಡಿ 4.5 ಎಮ್

ಈ ಡಿವೈಸ್ 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾದೊಂದಿಗೆ ಬಂದಿದ್ದು ಮುಂಭಾಗ ಕ್ಯಾಮೆರಾ 8 ಮೆಗಾಪಿಕ್ಸೆಲ್ ಆಗಿದೆ. ಪೂರ್ಣ ಎಚ್‌ಡಿ ವೀಡಿಯೋಗಳನ್ನು ಶೂಟ್ ಮಾಡುವ ಸಾಮರ್ಥ್ಯವನ್ನು ಡಿವೈಸ್ ಪಡೆದುಕೊಂಡಿದೆ. 4.5 ಇಂಚಿನ ಡಿಸ್‌ಪ್ಲೇ, 1.3GHZ ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Smartphone cameras are approaching the quality of point-and-shoot cameras and many of us like to own smartphones with brilliant in-built camera.Here are the best smartphone that houses the stunning rear camera at a price tag of Rs. 10,000.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot