Home
ಮೊಬೈಲ್

smartphones: ಕರ್ವ್ಡ್ ಡಿಸ್‌ಪ್ಲೇ ಆಯ್ಕೆಯ 25,000ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು!

ಸ್ಮಾರ್ಟ್‌ಫೋನ್‌ಗಳ (smartphones) ವಿಭಾಗದಲ್ಲಿ ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿರುವ ಫೋನ್‌ಗಳು ಎಂದರೆ ಕರ್ವ್ಡ್ ಡಿಸ್‌ಪ್ಲೇ (Curved Display) ಇರುವ ಫೋನ್‌ಗಳು. ಇವು ಪ್ಲಾಟ್‌ ಡಿಸ್‌ಪ್ಲೇಗಿಂತ ಭಿನ್ನ ಅನುಭವ ನೀಡಲಿದ್ದು, ಅತ್ಯದ್ಭುತ ಅನುಭವ ಪಡೆಯಬಹುದು.

ಹೌದು, ಕರ್ವ್ಡ್ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಇಂದು ಹೆಚ್ಚು ಜನಪ್ರಿಯತೆ ಪಡೆಯುತ್ತಿದ್ದು, ಈ ನಡುವೆ ಮೊಟೊರೊಲಾ, ವಿವೋ, ಇನ್ಫಿನಿಕ್ಸ್, ರಿಯಲ್‌ಮಿ ಸೇರಿದಂತೆ ಅನೇಕ ಕಂಪೆಯ ಫೋನ್‌ಗಳು ಕರ್ವ್ಡ್ ಡಿಸ್‌ಪ್ಲೇ ಆಯ್ಕೆಯ ಫೋನ್‌ಗಳನ್ನು ಲಾಂಚ್‌ ಮಾಡಿವೆ. ಅದರಂತೆ ನೀವು ಏನಾದರೂ 25,000ರೂ. ಒಳಗಿನ ಅತ್ಯುತ್ತಮ ಕರ್ವ್ಡ್ ಡಿಸ್‌ಪ್ಲೇ ಆಯ್ಕೆಯ ಫೋನ್‌ಗಳನ್ನು ಖರೀದಿ ಮಾಡಲು ಮುಂದಾಗಿದ್ರೆ ಈ ಲೇಖನ ನಿಮಗೆ ಅನುಕೂಲ ಆಗಲಿದೆ. ಬನ್ನಿ ಯಾವೆಲ್ಲಾ ಫೋನ್‌ಗಳು ಏನೆಲ್ಲಾ ಫೀಚರ್ಸ್‌ ಪಡೆದಿವೆ, ಬೆಲೆ ಎಷ್ಟು ಅನ್ನೋ ಮಾಹಿತಿ ತಿಳಿಯೋಣ.

ಕರ್ವ್ಡ್ ಡಿಸ್‌ಪ್ಲೇ ಆಯ್ಕೆಯ 25,000ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು!

ಮೊಟೊರೊಲಾ ಎಡ್ಜ್ 40 ನಿಯೋ: ಈ ಸ್ಮಾರ್ಟ್‌ಫೋನ್‌ (Motorola Edge 40 Neo) ನಿಮಗೆ 22,999 ರೂ.ಗಳ ಆಫರ್ ಬೆಲೆಗೆ ಲಭ್ಯ ಇದೆ. ಈ ಫೋನ್ 6.55 ಇಂಚಿನ 1080 x 2400 px, 144 Hz ರಿಫ್ರೆಶ್‌ ರೇಟ್‌ ಆಯ್ಕೆಯ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಡೈಮೆನ್ಸಿಟಿ 7030, ಆಕ್ಟಾ ಕೋರ್, 2.5 GHz ಪ್ರೊಸೆಸರ್ ಬಲ ಪಡೆದಿದೆ. ಇದರೊಂದಿಗೆ 8 GB RAM, 128 GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ. ಇದರ ಜೊತೆಗೆ 50 MP + 13 MP ಡ್ಯುಯಲ್ ರಿಯರ್ ಹಾಗೂ 32 MP ಸೆಲ್ಫಿ ಕ್ಯಾಮೆರಾದ ಜೊತೆಗೆ 68W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದೆ.

ವಿವೋ T2 ಪ್ರೊ 5G: ಈ ಸ್ಮಾರ್ಟ್‌ಫೋನ್ (Vivo T2 Pro 5G) 23,999 ರೂ.ಗಳ ಬೆಲೆ ಹೊಂದಿದೆ. ಈ ಫೋನ್ 6.78 ಇಂಚಿನ 1080 x 2400 px, 120 Hz ರಿಫ್ರೆಶ್‌ ರೇಟ್‌ ಇರುವ ಡಿಸ್‌ಪ್ಲೇ ಹೊಂದಿದ್ದು, ಡೈಮೆನ್ಸಿಟಿ 7200 ಪ್ರೊಸೆಸರ್ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ 8 GB RAM, 128 GB ಇಂಟರ್‌ ಸ್ಟೋರೇಜ್‌ ಮತ್ತು 64 MP + 2 MP ಡ್ಯುಯಲ್ ರಿಯರ್ ಮತ್ತು 16 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ. ಇದರ ಜೊತೆಗೆ 4600 mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 66W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ.

ಕರ್ವ್ಡ್ ಡಿಸ್‌ಪ್ಲೇ ಆಯ್ಕೆಯ 25,000ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು!

ಇನ್ಫಿನಿಕ್ಸ್ ಜೀರೋ 30 5G: ಈ ಫೋನ್‌ (Infinix Zero 30 5G) ಅನ್ನು ನೀವು 22,890 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದು 6.78 ಇಂಚಿನ 1080 x 2400 px, 144 Hz ರಿಫ್ರೆಶ್‌ ರೇಟ್‌ ಇರುವ ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಇದರೊಂದಿಗೆ ಡೈಮೆನ್ಸಿಟಿ 8020 ಪ್ರೊಸೆಸರ್‌ನೊಂದಿಗೆ 12 GB RAM, 256 GB ಇಂಟರ್‌ ಸ್ಟೋರೇಜ್‌ ಬೆಂಬಲ ಪಡೆದಿದೆ. ಇದರ ಜೊತೆಗೆ 108 MP + 13 MP + 2 MP ಟ್ರಿಪಲ್ ರಿಯರ್ ಹಾಗೂ 50 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ. ಉಳಿದಂತೆ ಈ ಫೋನ್ 68W ಫಾಸ್ಟ್ ಚಾರ್ಜಿಂಗ್ ಬೆಂಬಲದ ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ.


ರಿಯಲ್‌ಮಿ 11 ಪ್ರೊ: ಈ ಸ್ಮಾರ್ಟ್‌ಫೋನ್‌ (

ಕರ್ವ್ಡ್ ಡಿಸ್‌ಪ್ಲೇ ಆಯ್ಕೆಯ 25,000ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು!
) 23,999 ರೂ.ಗಳ ಬೆಲೆ ಹೊಂದಿದೆ. ಇದು 6.7 ಇಂಚಿನ 1080 x 2412 px, 120 Hz ರಿಫ್ರೆಶ್‌ ರೇಟ್‌ ಆಯ್ಕೆಯ ಡಿಸ್‌ಪ್ಲೇ ಹೊಂದಿದ್ದು, ಡೈಮೆನ್ಸಿಟಿ 7050 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ 8 GB RAM, 128 GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದ್ದು, 100 MP + 2 MP ಡ್ಯುಯಲ್ ರಿಯರ್ ಹಾಗೂ 16 MP ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದರ ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 67W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ.

Best Mobiles in India

English summary
These are the best curved display smartphones available under Rs 25000. Motorola Edge 40 Neo, Vivo T2 Pro 5G, Infinix Zero 30 5G, Realme 11 Pro smartphones can be found in this category.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+