Home
ಮೊಬೈಲ್

HONOR ಫೋನ್‌ ಖರೀದಿಸುವ ಪ್ಲ್ಯಾನ್‌ ಇದ್ರೆ, ಇಲ್ಲಿ ಗಮನಿಸಿ!..ವಾವ್‌ ಕ್ಯಾಮೆರಾ!

ದೇಶಿಯ ಮೊಬೈಲ್‌ ಮಾರುಕಟ್ಟೆಯಲ್ಲಿ ಹಾನರ್‌ (HONOR) ಸಂಸ್ಥೆಯು ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ತನ್ನದೇ ಗ್ರಾಹಕ ಬಳಗವನ್ನು ಹೊಂದಿದೆ. ಹಾನರ್‌ ಕಂಪನಿಯ ಬಹುತೇಕ ಮೊಬೈಲ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಸಕತ್ ಸೌಂಡ್‌ ಮಾಡುತ್ತಿವೆ. ಆ ಲಿಸ್ಟ್‌ನಲ್ಲಿ ಮುಖ್ಯವಾಗಿ ಹಾನರ್‌ ಮ್ಯಾಜಿಕ್‌ ಸರಣಿಯ ಹಾಗೂ ಹಾನರ್‌ 200 ಪ್ರೊ ಮಾಡೆಲ್‌ಗಳು ಹೂ ಎಂಡ್‌ ಮಾದರಿಯ ಫೀಚರ್ಸ್‌ ಮೂಲಕ ಮೊಬೈಲ್‌ ಪ್ರಿಯರ ಚಿತ್ತ ಸೆಳೆದಿವೆ.

ಹೌದು, ಹಾನರ್‌ ಮೊಬೈಲ್‌ ಕಂಪನಿಯು ಬಜೆಟ್‌ ಬೆಲೆಯಲ್ಲಿ ಫೋನ್‌ ಖರೀದಿಸುವ ಗ್ರಾಹಕರನ್ನು ಸೆಳೆಯಲು ಹಾನರ್‌ 200 ಲೈಟ್‌ 5G ಮಾಡೆಲ್‌ ಅನ್ನು ಪರಿಚಯಿಸಿ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಇನ್ನು ಹಾನರ್‌ ಫೋನ್‌ಗಳ ಡಿಸೈನ್‌, ಕ್ಯಾಮೆರಾ, ಪ್ರೊಸೆಸರ್‌ ಹಾಗೂ ದೀರ್ಘಬಾಳಿಕೆ ಅಂಶಗಳಿಂದ ಗ್ರಾಹಕರನ್ನು ಸೆಳೆದಿವೆ. ಹಾಗಾದರೇ ಸದ್ಯ ಜನಪ್ರಿಯತೆ ಪಡೆದಿರುವ ಹಾನರ್‌ ಸಂಸ್ಥೆಯ ಕೆಲವು ಬೆಸ್ಟ್‌ ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ. ಮುಂದೆ ಓದಿರಿ.

HONOR ಫೋನ್‌ ಖರೀದಿಸುವ ಪ್ಲ್ಯಾನ್‌ ಇದ್ರೆ, ಇಲ್ಲಿ ಗಮನಿಸಿ!..ವಾವ್‌ ಕ್ಯಾಮೆರಾ!

ಹಾನರ್‌ 200 5G ಮೊಬೈಲ್‌

ಹಾನರ್‌ 200 5G ಮೊಬೈಲ್‌ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇಯು ಕ್ವಾಡ್‌ ಕರ್ವ್ಡ್‌ ಡಿಸ್‌ಪ್ಲೇ ರಚನೆ ಅನ್ನು ಹೊಂದಿದೆ. ಇದು ಸ್ನಾಪ್‌ಡ್ರಾಗನ್ 7 Gen 3 ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ಮಾಡುತ್ತದೆ. ಹಾಗೆಯೇ ಈ ಫೋನ್‌ MagicOS 8 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಜೊತೆಗೆ 8GB RAM + 256GB ಹಾಗೂ 12GB + 512GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದಿದೆ.

ಇನ್ನು ಈ ಫೋನ್‌ ಹಿಂಭಾಗದಲ್ಲಿ ಮೂರು ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ನಲ್ಲಿ ಇದೆ. ಅದೇ ರೀತಿ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. ಇದರ ಜೊತೆಗೆ 5,200mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 100W ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲ ಇದೆ.

ಹಾನರ್‌ 200 ಲೈಟ್‌ 5G ಮೊಬೈಲ್‌

ಹಾನರ್‌ 200 ಲೈಟ್‌ 5G ಫೋನ್‌ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಹೊಂದಿದ್ದು, 3240Hz PWM ಡಿಮ್ಮಿಂಗ್ ಹಾಗೂ 2412x1080 ರೆಸಲ್ಯೂಶನ್ ಸೌಲಭ್ಯ ಪಡೆದಿದೆ. ಅಲ್ಲದೇ ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಆಕ್ಟಾ-ಕೋರ್ ಪ್ರೊಸೆಸರ್ ಪಡೆದಿದ್ದು, MagicOS 8 ಓಎಸ್‌ ಸೌಲಭ್ಯ ಇದೆ. ಜೊತೆಗೆ 8GB RAM + 256GB ಆಯ್ಕೆ ಇದ್ದು, 8GB RAM ಹಾನರ್‌ ಟರ್ಬೋ ಆಯ್ಕೆ ಇದೆ.

ಇನ್ನು ಈ ಫೋನ್‌ ಹಿಂಭಾಗದಲ್ಲಿ ತ್ರಿವಳಿ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 108 ಮೆಗಾ ಪಿಕ್ಸೆಲ್‌ ಸೆನ್ಸಾರ್‌ನಲ್ಲಿ ಇದೆ. ಹಾಗೆಯೇ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. ಇದರ ಜೊತೆಗೆ 4500mAh ಬ್ಯಾಟರಿ ಸೌಲಭ್ಯವನ್ನು ಪಡೆದಿದೆ.

ಹಾನರ್‌ 200 ಪ್ರೊ 5G ಮೊಬೈಲ್‌

ಹಾನರ್‌ 200 ಪ್ರೊ 5G ಫೋನ್‌ 6.78 ಇಂಚಿನ ಫುಲ್‌ AMOLED ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇಯು ಕ್ವಾಡ್‌ ಕರ್ವ್ಡ್‌ ಡಿಸ್‌ಪ್ಲೇ ರಚನೆ ಅನ್ನು ಒಳಗೊಂಡಿದೆ. ಹಾಗೆಯೇ ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8s ಜೆನ್ 3 ಪ್ರೊಸೆಸರ್‌ ಪಡೆದಿದ್ದು, MagicOS 8 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದು 12GB + 512GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದೆ.

ಇನ್ನು ಈ ಫೋನ್‌ ಹಿಂಭಾಗದಲ್ಲಿ OIS ಬೆಂಬಲಿತ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ನಲ್ಲಿ ಇದೆ. ಹಾಗೆಯೇ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. ಇದರ ಜೊತೆಗೆ 5,200mAh 2ನೇ ಜನ್ ಸಿಲಿಕಾನ್-ಕಾರ್ಬನ್ ಬ್ಯಾಟರಿ ಸೌಲಭ್ಯವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 100W ಫಾಸ್ಟ್‌ ಚಾರ್ಜಿಂಗ್‌, 66W ವೈರ್‌ಲೆಸ್ ಸೂಪರ್‌ಚಾರ್ಜಿಂಗ್ ಸೌಲಭ್ಯ ಇದೆ.

Best Mobiles in India

English summary
Best Honor Smartphones in India October 2024. Check mobile list and specifications details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+