ಮಾರುಕಟ್ಟೆಯಲ್ಲಿರುವ ಟಾಪ್ ಲೆನೊವೊ ಸ್ಮಾರ್ಟ್‌ಫೋನ್‌ಗಳು
ಯಾವುದೇ ದೇಶದ ಕಂಪೆನಿಗಳ ಉತ್ಪನ್ನಗಳ ಖರೀದಿಸಬಹುದು ಆದರೆ ಚೈನಾ ಕಂಪೆನಿಗಳ ಉತ್ಪನ್ನಗಳನ್ನು ಖರೀದಿಸಬಾರದು. ಆದರಲ್ಲೂ ಚೈನಾದಲ್ಲಿ ತಯಾರಾದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಖರೀದಿಸಲೇಬಾರದು. ಸಾಧನ ಗುಣಮಟ್ಟ ಕಳಪೆ ಜೊತೆಗೆ ವಾರಂಟಿ, ಗ್ಯಾರಂಟಿಯನ್ನು ಚೈನಾ ಕಂಪೆನಿಗಳು ನೀಡುವುದಿಲ್ಲ.ಬೇರೆ ಕಂಪೆನಿಗಳಂತೆ ಚೈನಾ ಕಂಪೆನಿಗಳು ಸರಿಯಾದ ಸೇವೆ ನೀಡುವುದಿಲ್ಲ.ಬಹಳಷ್ಟು ಜನ ಚೈನಾ ಕಂಪೆನಿಗಳ ಬಗ್ಗೆ ಈ ರೀತಿಯ ದೂರನ್ನು ಹೇಳುತ್ತಾರೆ.
ಚೈನಾದ ಕೆಲವೊಂದು ಕಂಪೆನಿಗಳಿಗೆ ಈ ಮಾತು ಅನ್ವಯವಾದರೂ ಕೆಲವೊಂದು ಕಂಪೆನಿಗಳಿಗೆ ಈ ರೀತಿಯ ಆರೋಪ ಮಾಡುವಂತಿಲ್ಲ. ಈ ರೀತಿಯ ಅಪವಾದಕ್ಕೆ ಹೊರತಾದ ಕಂಪೆನಿ ಲೆನೊವೊ.ವಿಶ್ವದ ಪರ್ಸನಲ್ ಕಂಪ್ಯೂಟರ್ ಮಾರುಕಟ್ಟೆಯಲ್ಲಿ ಕಳೆದ ವರ್ಷ ಎಚ್‌ಪಿ ಕಂಪೆನಿಯನ್ನು ಸೋಲಿಸಿ ನಂಬರ್ ಒನ್ ಸ್ಥಾನ ಪಡೆದುಕೊಂಡ ಲೆನೊವೊ ವಿಶ್ವದ ಸ್ಮಾರ್ಟ್‌ಫೋನ್ ಉತ್ಪಾದಿಸುವ ಕಂಪೆನಿಗಳ ಪೈಕಿ ಎಂಟನೇ ಸ್ಥಾನದಲ್ಲಿದೆ. ಸ್ಮಾರ್ಟ್‌ಫೋನ್ ಕ್ಷೇತ್ರದ ಮಾರುಕಟ್ಟೆಯಲ್ಲಿ ಯಶಸ್ವಿಯಾಗುತ್ತಿರುವ ಲೆನೊವೊ ಕಳೆದ ಜನವರಿಯಲ್ಲಿ ಗೂಗಲ್ ತೆಕ್ಕೆಯಲ್ಲಿದ್ದ ಮೋಟರೋಲಾ ಕಂಪೆನಿಯನ್ನು ಖರೀದಿಸಿದೆ. ದುಬಾರಿ ಬೆಲೆಯ ಜೊತೆಗೆ ಕಡಿಮೆ ಬೆಲೆಯಲ್ಲೇ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿರುವ ಲೆನೊವೊ ಗೂಗಲ್‌ನ ನೆಕ್ಸಸ್6 ಸ್ಮಾರ್ಟ್‌ಫೋನ್ ತಯಾರಿಸಲಿದೆ ಎಂದು ಹೇಳಲಾಗುತ್ತಿದೆ.
ವಿಶ್ವದ ಟಾಪ್ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿಗಳಲ್ಲಿ ಒಂದಾಗಿರುವ ಲೆನೊವೊ ಭಾರತದ ಮಾರುಕಟ್ಟೆಗೆ ಬಹಳಷ್ಟು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಹೀಗಾಗಿ ಇಲ್ಲಿ ಲೆನೊವೊ ಕಂಪೆನಿ ಬಿಡುಗಡೆ ಮಾಡಿರುವ ಹೊಸ ಸ್ಮಾರ್ಟ್‌ಫೋನ್‌ಗಳ ವಿವರವನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.
ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌ಬಾಟ್‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ.

ಲೆನೊವೊ ಎ526
ಬೆಲೆ:8811
ವಿಶೇಷತೆ:
ಡ್ಯುಯಲ್ ಸಿಮ್
4.5 ಇಂಚಿನ FWVGA ಸ್ಕ್ರೀನ್(854 x 480 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.3 GHz ಮೀಡಿಯಾ ಟೆಕ್ ಪ್ರೊಸೆಸರ್
4ಜಿಬಿ ಆಂತರಿಕ ಮೆಮೊರಿ
1 GB RAM
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್
2000 mAh ಬ್ಯಾಟರಿ

ಲೆನೊವೊ ವೈಬ್ ಝಿ
ಬೆಲೆ:33,989
ವಿಶೇಷತೆ:
ಸಿಂಗಲ್ ಸಿಮ್(ಮೈಕ್ರೋ ಸಿಮ್)
5.5 ಇಂಚಿನ ಐಪಿಎಸ್ ಎಲ್‌ಸಿಡಿ ಸ್ಕ್ರೀನ್(1080x1920 ಪಿಕ್ಸೆಲ್)
2.2 GHz ಕ್ವಾಲಕಂ ಸ್ನಾಪ್‌ಡ್ರಾಗನ್ ಕ್ವಾಡ್ ಕೋರ್ ಪ್ರೊಸೆಸರ್
Adreno 330 ಗ್ರಾಫಿಕ್ ಪ್ರೊಸೆಸರ್
ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಓಎಸ್
16 ಜಿಬಿ ಆಂತರಿಕ ಮೆಮೊರಿ
2 GB RAM
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
ಮೆಮೊರಿ ವಿಸ್ತರಣೆಗೆ ಕಾರ್ಡ್ ಸ್ಲಾಟ್ ಇಲ್ಲ
3ಜಿ,4ಜಿ,ವೈಫೈ,ಬ್ಲೂಟೂತ್,ಜಿಪಿಎಸ್
3000 mAh ಬ್ಯಾಟರಿ

ಲೆನೊವೊ ಎಸ್660
ಬೆಲೆ:12,999
ವಿಶೇಷತೆ:
ಡ್ಯುಯಲ್ ಸಿಮ್
4.7 ಇಂಚಿನ ಐಪಿಎಸ್ ಎಲ್‌ಸಿಡಿ ಕೆಪಾಸಿಟಿವ್ ಸ್ಕ್ರೀನ್(540 x 960 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.3 GHz ಕ್ವಾಡ್ ಕೋರ್ ಪ್ರೊಸೆಸರ್
8 ಜಿಬಿ ಆಂತರಿಕ ಮೆಮೊರಿ
1 ಜಿಬಿ ರ್‍ಯಾಮ್
8 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
32ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್
3000 mAh ಬ್ಯಾಟರಿ

ಲೆನೊವೊ ವೈಬ್ ಎಕ್ಸ್
ಬೆಲೆ: 22499
ವಿಶೇಷತೆ:
ಸಿಂಗಲ್ ಸಿಮ್
5 ಇಂಚಿನ ಫುಲ್ ಎಚ್‌ಡಿ ಕೆಪಾಸಿಟಿವ್ ಟಚ್‌ಸ್ಕ್ರೀನ್(1080x1920 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.5GHz ಕ್ವಾಡ್ ಕೋರ್ ಮೀಡಿಯಾಟೆಕ್ ಪ್ರೊಸೆಸರ್
2GB ರ್‍ಯಾಮ್
16GB ಆಂತರಿಕ ಮೆಮೊರಿ
13 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್)
5 ಎಂಪಿ ಮುಂದುಗಡೆ ಕ್ಯಾಮೆರಾ
ಹೆಚ್ಚುವರಿ ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾರ್ಟ್ ಇಲ್ಲ
ವೈಫೈ,ಬ್ಲೂಟೂತ್,3ಜಿ,ಮೈಕ್ರೋಯುಎಸ್‌ಬಿ
2,000 mAh ಬ್ಯಾಟರಿ

ಲೆನೊವೊ ಎಸ್ 930
ಬೆಲೆ:17999
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
6 ಇಂಚಿನ ಐಪಿಎಸ್ ಎಲ್‌ಸಿಡಿ ಕೆಪಾಸಿಟಿವ್ ಸ್ಕ್ರೀನ್(720 x 1280 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.3 GHz ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ ರ್‍ಯಾಮ್
8ಜಿಬಿ ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್)
1.6 ಎಂಪಿ ಮುಂದುಗಡೆ ಕ್ಯಾಮೆರಾ
32 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್
3000 mAh ಬ್ಯಾಟರಿ

ಲೆನೊವೊ ಎಸ್ 650
ಬೆಲೆ: 12999
ವಿಶೇಷತೆ:
4.7 ಇಂಚಿನ ಕ್ಯೂ ಎಚ್‌ಡಿ ಕೆಪಾಸಿಟಿವ್ ಸ್ಕ್ರೀನ್(540 x 960 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.3 GHz ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ ರ್‍ಯಾಮ್
8ಜಿಬಿ ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್)
ಮುಂದುಗಡೆ ವಿಜಿಎಕ್ಯಾಮೆರಾ
32 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್
2000 mAh ಬ್ಯಾಟರಿ

ಲೆನೊವೊ ಎ859
ಬೆಲೆ:14999
ವಿಶೇಷತೆ:
ಡ್ಯುಯಲ್ ಸಿಮ್
5 ಇಂಚಿನ ಐಪಿಎಸ್ ಎಲ್‌ಸಿಡಿ ಕೆಪಾಸಿಟಿವ್ ಟಚ್‌ಸ್ಕ್ರೀನ್(720 x 128 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.3 GHz ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ ರ್‍ಯಾಮ್
8ಜಿಬಿ ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್)
1.6 ಎಂಪಿ ಮುಂದುಗಡೆ ಕ್ಯಾಮೆರಾ
32 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್
2250 mAh ಬ್ಯಾಟರಿ

ಲೆನೊವೊ ಕೆ 900
ಬೆಲೆ:22841
ವಿಶೇಷತೆ:
ಸಿಂಗಲ್ ಸಿಮ್
5.5 ಇಂಚಿನ ಐಪಿಎಸ್ ಎಲ್‌ಸಿಡಿ ಸ್ಕ್ರೀನ್( 1080x1920 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
2 GHz ಡ್ಯುಯಲ್ ಕೋರ್ ಪ್ರೊಸೆಸರ್
2GB RAM
16GB ಆಂತರಿಕ ಮೆಮೊರಿ
13 ಎಂಪಿ ಹಿಂದುಗಡೆ ಕ್ಯಾಮೆರಾ(ಅಟೋ ಫೋಕಸ್,ಎಲ್‌ಇಡಿ ಫ್ಲ್ಯಾಶ್)
2 ಎಂಪಿ ಮುಂದುಗಡೆ ಕ್ಯಾಮೆರಾ
3G, ವೈಫೈ,ಬ್ಲೂಟೂತ್,ಜಿಪಿಎಸ್
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2500 mAh ಬ್ಯಾಟರಿ

ಲೆನೊವೊ ಪಿ 780
ಬೆಲೆ:15,611
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಐಪಿಎಸ್ ಎಚ್‌ಡಿ ಸ್ಕ್ರೀನ್(1280 x 720 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.2 GHz ಕ್ವಾಡ್ ಕೋರ್ ಪ್ರೊಸೆಸರ್
4 GB ಆಂತರಿಕ ಮೆಮೋರಿ
1 GB ರ್‍ಯಾಮ್
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಜಿಪಿಎಸ್,ವೈಫೈ,ಬ್ಲೂಟೂತ್,ಮೈಕ್ರೋ ಯುಎಸ್‌ಬಿ
ಪ್ರಾಕ್ಸಿಮಿಟಿ ಸೆನ್ಸರ್,ಲೈಟ್ ಸೆನ್ಸರ್,ಗ್ರಾವಿಟಿ ಸೆನ್ಸರ್
4000 mAh ಬ್ಯಾಟರಿ


Click it and Unblock the Notifications



