ನಷ್ಟದ ಸುಳಿಯಲ್ಲಿ ಸೋನಿ:ಉದ್ಯೋಗಿಗಳು ಮನೆಗೆ

Written By:

ಜಪಾನಿನ ಎಲೆಕ್ಟ್ರಾನಿಕ್ಸ್‌ ಕಂಪೆನಿ ಸೋನಿ ನಷ್ಟದಲ್ಲಿದ್ದು 5,000 ನೌಕರರನ್ನು ಮನೆಗೆ ಕಳುಹಿಸಲು ನಿರ್ಧರಿಸಿದೆ.ಲ್ಯಾಪ್‌ಟಾಪ್‌,ಪರ್ಸನಲ್‌ ಕಂಪ್ಯೂಟರ್‌‌‌ ಕ್ಷೇತ್ರದಲ್ಲಿ ಕೆಲ ವರ್ಷದ ಹಿಂದೆ ಮುಂಚೂಣಿಯಲ್ಲಿದ್ದ ಸೋನಿ 1.08 ಶತಕೋಟಿ ಡಾಲರ್‌ ನಷ್ಟದ ಭೀತಿ ಎದುರಿಸುತ್ತಿದ್ದು, ಜಪಾನಿನಲ್ಲಿ 1,500,ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಇರುವ 5 ಸಾವಿರ ನೌಕರರನ್ನು ಮನೆಗೆ ಕಳುಹಿಸಲು ನಿರ್ಧರಿಸಿದೆ.

ನಷ್ಟದ ಹೊರೆ ತಪ್ಪಿಸಲು ಸೋನಿ ವಾಯೋ ಬ್ರ್ಯಾಂಡ್‌ ಲ್ಯಾಪ್‌ಟಾಪ್‌ ಮತ್ತು ಪರ್ಸ‌ನಲ್‌ ಕಂಪ್ಯೂಟರ್‌ಗಳ ಉತ್ಪಾದನೆಯನ್ನು ತಕ್ಷಣವೇ ನಿಲ್ಲಿಸಲಿದೆ. ಜೊತೆಗೆ ಈ ವರ್ಷದಿಂದಲೇ ಲ್ಯಾಪ್‌ಟಾಪ್‌ ಮತ್ತು ಪರ್ಸ‌ನಲ್‌ ಕಂಪ್ಯೂಟರ್‌ ವ್ಯವಹಾರ ದಿಂದ ನಿರ್ಗಮಿಸಲು ನಿರ್ಧರಿಸಿದೆ. ವಾಯೋ ಬ್ರ್ಯಾಂಡ್‌ನ್ನು ಜಪಾನ್‌ ಇಂಡಸ್ಟ್ರಿಯಲ್‌ ಪಾರ್ಟ್‌ನರ್ಸ್‌ (Japan Industrial Partners ) 50 ಶತಕೋಟಿ ಯಾನ್‌( ಅಂದಾಜು 305 ಕೋಟಿ ರೂಪಾಯಿ) ಮಾರಾಟ ಮಾಡಲು ನಿರ್ಧರಿಸಿದೆ. ಇಷ್ಟೇ ಅಲ್ಲದೇ ಬ್ರಾವಿಯಾ ಟಿವಿ ನಷ್ಟದದಲ್ಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಮೆರಿಕದ ಆಪಲ್‌, ಚೀನಾದ ಲೆನೊವೊ, ಕೊರಿಯಾದ ಸ್ಯಾಮ್‌ಸಂಗ್‌,ಎಲ್‌ಜಿ ಎಲೆಕ್ಟ್ರಾನಿಕ್ಸ್‌‌ ಕಂಪೆನಿಗಳ ಉತ್ಪನ್ನಗಳ ನಡುವೆ ಮಾರುಕಟ್ಟೆಯಲ್ಲಿ ನಷ್ಟ ಅನುಭವಿಸಿದ ಸೋನಿ ಮುಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್ಲೆಟ್‌ ಮೇಲೆ ಹೆಚ್ಚಿನ ಗಮನಹರಿಸಲು ನಿರ್ಧರಿಸಿದೆ.

ಇತ್ತೀಚಿನ ಗಾರ್ಟ್‌ನರ್‍ ವರದಿ ಪ್ರಕಾರ ಕಳೆದ ವರ್ಷ‌ ಪರ್ಸ‌ನಲ್‌ ಕಂಪ್ಯೂಟರ್‌ ಮಾರಾಟದಲ್ಲಿ ಚೀನಾದ ಲೆನೊವೊ ಕಂಪೆನಿ ನಂಬರ್‌ ಒನ್‌ ಸ್ಥಾನಗಳಿದಿದ್ದರೆ,ಎಚ್‌ಪಿ,ಡೆಲ್‌,ಏಸರ್‌ ಕಂಪೆನಿಗಳು ಕ್ರಮವಾಗಿ ಎರಡು ಮೂರು ಸ್ಥಾನಗಳನ್ನು ಪಡೆದಕೊಂಡಿತ್ತು.

ನಷ್ಟದ ಸುಳಿಯಲ್ಲಿ ಸೋನಿ:ಉದ್ಯೋಗಿಗಳು ಮನೆಗೆ

ಸೋನಿ ಕಂಪೆನಿ ಸ್ಮಾರ್ಟ್‌ಫೋನ್‌ ಕ್ಷೇತ್ರದಲ್ಲಿ ತನ್ನ ಪ್ರಭುತ್ವವನ್ನು ಉಳಿಸಿದ್ದು, ಕಳೆದ ವರ್ಷ‌ ಗಾರ್ಟ್‌ನರ್‌ ವರದಿಯಲ್ಲಿ ವಿಶ್ವದಲ್ಲಿ 9 ಸ್ಥಾನ ಪಡೆದುಕೊಂಡಿತ್ತು. ಆ ಕಾರಣಕ್ಕಾಗಿ ಸ್ಮಾರ್ಟ್‌‌ಫೋನ್‌ ಮತ್ತು ಟ್ಯಾಬ್ಲೆಟ್‌ ಕ್ಷೇತ್ರದ ಕಡೆ ಹೆಚ್ಚಿನ ಗಮನ ಹರಿಸಲು ಸೋನಿ ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ.

ನಷ್ಟದ ಸುಳಿಯಲ್ಲಿ ಸೋನಿ:ಉದ್ಯೋಗಿಗಳು ಮನೆಗೆ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot