Home
ಮೊಬೈಲ್

ಹೊಸ ಫೋನ್‌ ಖರೀದಿಸಬೇಕೆ?..ಹಾಗಿದ್ರೆ ಈ ಫ್ಲಾಗ್‌ಶಿಫ್‌ ಕಿಲ್ಲರ್‌ ಫೋನ್‌ಗಳ ಲಿಸ್ಟ್‌ ನೋಡಿ!

ಹೊಸ ಮೊಬೈಲ್‌ ಖರೀದಿಸಲು ಪ್ಲ್ಯಾನ್‌ ಮಾಡಿದ್ದೀರಾ?.. ವೇಗದ ಪ್ರೊಸೆಸರ್‌ ಜೊತೆಗೆ ಹೈ ಎಂಡ್‌ ಮಾದರಿಯ ಫೀಚರ್ಸ್‌ ಇರುವ ಫೋನ್‌ ಇಷ್ಟವೇ? ಮಾರುಕಟ್ಟೆಯಲ್ಲಿ ಸುಮಾರು 50 ಸಾವಿರ ರೂ. ಒಳಗೆ ಅತ್ಯುತ್ತಮ ಫ್ಲ್ಯಾಗ್‌ಶಿಪ್ ಫೋನ್‌ಗಳು ಆಯ್ಕೆ ನಿಮಗಿದೆ. ಆ ಪಥಕಿ ಕೆಲವು ಬೆಸ್ಟ್‌ ಎನಿಸುವ ಫೋನ್‌ಗಳ ಮಾಹಿತಿ ಇಲ್ಲಿದೆ.

ಹೌದು, ಕೆಲವರು ಹೈ ಎಂಡ್‌ ಮಾದರಿಯ ಫೀಚರ್ಸ್‌ ಇರುವ ಸ್ಮಾರ್ಟ್‌ಫೋನ್‌ ಖರೀದಿಗೆ ಮುಂದಾಗುತ್ತಾರೆ. ಮುಖ್ಯವಾಗಿ ಪವರ್‌ಫುಲ್‌ ಪ್ರೊಸೆಸರ್‌, ಉತ್ತಮ ಕ್ಯಾಮೆರಾ, ಅಧಿಕ RAM, ಬಿಗ್ ಬ್ಯಾಟರಿ ಅಲ್ಲದೇ ಆ ಫೋನ್‌ ಗೇಮಿಂಗ್‌ಗೂ ಸೈ ಎನಿಸಿರಬೇಕು ಎಂದು ಬಯಸುತ್ತಾರೆ. ಹೀಗೆ ನೀವು ಕೂಡಾ ಸುಮಾರು 50 ಸಾವಿರದೊಳಗೆ ಒಂದೊಳ್ಳೆ ಫ್ಲಾಗ್‌ಶಿಫ್‌ ಕಿಲ್ಲರ್‌ ಫೋನ್‌ ಖರೀದಿಸುವ ಯೋಚನೆ ಇದ್ರೆ, ಈ ಲಿಸ್ಟ್‌ ನೋಡಿ.

ಫೋನ್‌ ಖರೀದಿಸಬೇಕೆ?..ಹಾಗಿದ್ರೆ ಈ ಫ್ಲಾಗ್‌ಶಿಫ್‌ ಫೋನ್‌ಗಳ ಲಿಸ್ಟ್‌ ನೋಡಿ!

ಐಕ್ಯೂ ನಿಯೋ 9 ಪ್ರೊ

ಈ ಫೋನ್‌ 6.78 ಇಂಚಿನ LTPO AMOLED ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದು 1260 x 2800 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಇದೆ. ಇನ್ನು ಈ ಮೊಬೈಲ್‌ ಸ್ನಾಪ್‌ಡ್ರಾಗನ್‌ 8 ಜೆನ್‌ 2 SoC ಪ್ರೊಸೆಸರ್‌ ಪವರ್‌ ಅನ್ನು ಪಡೆದಿದ್ದು, ಆಂಡ್ರಾಯ್ಡ್ 14 ಓಎಸ್‌ ಸಪೋರ್ಟ್‌ ಜೊತೆಗೆ ಕೆಲಸ ನಿರ್ವಹಿಸಲಿದೆ. ಇದರೊಂದಿಗೆ 8 GB RAM ಮತ್ತು 256 GB ಹಾಗೂ 12 GB RAM ಮತ್ತು 256 GB ಸ್ಟೋರೇಜ್ ವೇರಿಯೆಂಟ್‌ ಆಯ್ಕೆಗಳಲ್ಲಿ ಲಭ್ಯ.

ಅಲ್ಲದೇ ಈ ಮೊಬೈಲ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಪಡೆದಿದೆ. ಇದರೊಂದಿಗೆ 5160 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದ್ದು, ಇದಕ್ಕೆ ಪೂರಕವಾಗಿ 120W FlashCharge ಫಾಸ್ಟ್‌ ಚಾರ್ಜಿಂಗ್‌ ಸಪೋರ್ಟ್ ಪಡೆದಿದೆ.

ಫೋನ್‌ ಖರೀದಿಸಬೇಕೆ?..ಹಾಗಿದ್ರೆ ಈ ಫ್ಲಾಗ್‌ಶಿಫ್‌ ಫೋನ್‌ಗಳ ಲಿಸ್ಟ್‌ ನೋಡಿ!

ಒನ್‌ಪ್ಲಸ್‌ 12R

ಈ ನೂತನ ಮೊಬೈಲ್‌ 6.78 ಇಂಚಿನ BOE X1 OLED ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇಯು 1,264x2,780 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ ಸ್ನಾಪ್‌ಡ್ರಾಗನ್‌ 8 ಜೆನ್‌ 2 SoC ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಇದು ಆಂಡ್ರಾಯ್ಡ್ 14 ಓಎಸ್‌ ನಲ್ಲಿ ಕೆಲಸ ನಿರ್ವಹಿಸುತ್ತದೆ. ಹಾಗೆಯೇ 8GB RAM + 128GB ಮತ್ತು 16GB RAM + 256GB ಸ್ಟೋರೇಜ್‌ ಸಾಮರ್ಥ್ಯದ ವೇರಿಯೆಂಟ್‌ ಆಯ್ಕೆಗಳನ್ನು ಪಡೆದಿದೆ.

ಹಾಗೆಯೇ ಈ ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾವನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಪಡೆದಿದೆ. ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಇದು 100W SuperVOOC ವೈರ್ಡ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.


ನಥಿಂಗ್ ಫೋನ್ 2

ಈ ಮೊಬೈಲ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ LTPO OLED ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 1,080x2,412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದು ಆಂಡ್ರಾಯ್ಡ್‌ 13 ಆಧಾರಿತ ನಥಿಂಗ್ ಓಎಸ್ 2.0 ನಲ್ಲಿ ಕಾರ್ಯ ನಿರ್ವಹಿಸಲಿದೆ.

ಈ ಮೊಬೈಲ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಪಡೆದಿದೆ. ಇದರ ಜೊತೆಗೆ 4,700mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಒಳಗೊಂಡಿದ್ದು, ಇದು 45W PPS ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Best Mobiles in India

English summary
Best Mobiles in India under Rs 50000 in March 2024. Top Phones List is here. check details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+