ಹೈ ಸ್ಪೀಡ್ ಕಾರ್ಯವೈಖರಿಯ ಅತ್ಯುತ್ತಮ ಫ್ಲ್ಯಾಗ್‌ಶಿಪ್ ಫೋನ್‌ಗಳ ಲಿಸ್ಟ್ ಇಲ್ಲಿದೆ!
ಮಾರುಕಟ್ಟೆಯಲ್ಲಿ ಅತ್ಯುತ್ತಮ ಕಾರ್ಯವೈಖರಿಯ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಸ್ಯಾಮ್‌ಸಂಗ್, ಆಪಲ್, ಒನ್‌ಪ್ಲಸ್, ಶಿಯೋಮಿ, ವಿವೋ ಸಂಸ್ಥೆ ಸೇರಿದಂತೆ ಇತರೆ ಬ್ರ್ಯಾಂಡ್‌ಗಳು ತಮ್ಮ ಫ್ಲ್ಯಾಗ್‌ಶಿಪ್ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಸಾಗಿವೆ. ಅಂದಹಾಗೆ ಫ್ಲ್ಯಾಗ್‌ಶಿಪ್ ಫೋನ್‌ಗಳು ಆಕರ್ಷಕ ಡಿಸೈನ್ ಅಷ್ಟೇ ಅಲ್ಲದೇ, ಹೈ ಎಂಡ್ ಫೀಚರ್ಸ್‌ಗಳನ್ನು ಪಡೆದಿರುತ್ತವೆ. ಮುಖ್ಯವಾಗಿ ಪ್ರೊಸೆಸರ್, ಅಧಿಕ ಸ್ಟೋರೇಜ್, ಅತ್ಯುತ್ತಮ ಕ್ಯಾಮೆರಾ ವ್ಯವಸ್ಥೆ, ಬಿಗ್ ಬ್ಯಾಟರಿ, ಅತ್ಯುತ್ತಮ ಡಿಸ್‌ಪ್ಲೇ ಸೇರಿದಂತೆ ಎಲ್ಲ ವಿಭಾಗದಲ್ಲಿ ಬೆಸ್ಟ್ ಆಯ್ಕೆಗಳನ್ನು ಒಳಗೊಂಡಿರುತ್ತವೆ. ಅದಾಗ್ಯೂ, ಕೆಲವು ಫೋನ್‌ಗಳು ಮಾತ್ರ ಗ್ರಾಹಕರನ್ನು ಸೆಳೆಯುತ್ತವೆ.
ಹೌದು, ಅತ್ಯುತ್ತಮ ಕಾರ್ಯವೈಖರಿಯ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಸೃಷ್ಠಿ ಮಾಡಿವೆ. ಬೆಲೆಯು ದುಬಾರಿ ಅನಿಸಿದರೂ, ಇವುಗಳ ಫೀಚರ್ಸ್ ಆಕರ್ಷಕ ಎನಿಸುತ್ತವೆ. ಹಾಗಾದರೇ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿರುವ ಅತ್ಯುತ್ತಮ ಕಾರ್ಯವೈಖರಿಯ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ವಿವೋ X ಫೋಲ್ಡ್ 3 ಪ್ರೊ 5G ಸ್ಮಾರ್ಟ್‌ಫೋನ್
ವಿವೋ X ಫೋಲ್ಡ್ 3 ಪ್ರೊ 5G ಫೋನ್ 8.03 ಇಂಚಿನ ಪ್ರಾಥಮಿಕ 2K (2,200x2,480 ಪಿಕ್ಸೆಲ್ ರೆಸಲ್ಯೂಶನ್) E7 AMOLED ಡಿಸ್‌ಪ್ಲೇ ಜೊತೆಗೆ 4,500 nits ಪೀಕ್ ಬ್ರೈಟ್‌ನೆಸ್, ಡಾಲ್ಬಿ ವಿಷನ್ ಬೆಂಬಲ ಮತ್ತು HDR10 ಬೆಂಬಲ. ಸೆಕೆಂಡರಿ ಡಿಸ್‌ಪ್ಲೇಯು 6.53 ಇಂಚಿನ (1,172x2,748 ಪಿಕ್ಸೆಲ್ ರೆಸಲ್ಯೂಶನ್) AMOLED ಕವರ್ ಡಿಸ್‌ಪ್ಲೇಯನ್ನು ಹೊಂದಿದ್ದು, ಎರಡೂ ಸ್ಕ್ರೀನ್‌ಗಳು 120Hz ರಿಫ್ರೆಶ್ ರೇಟ್ ಅನ್ನು ಪಡೆದಿವೆ.
ಹಾಗೆಯೇ ವಿವೋ X ಫೋಲ್ಡ್ 3 ಪ್ರೊ 5G (Vivo X Fold 3 Pro 5G) ಫೋನ್ ಸ್ನ್ಯಾಪ್‌ಡ್ರಾಗನ್ 8 ಜೆನ್ 3 SoC ಪ್ರೊಸೆಸರ್ ಪಡೆದಿದ್ದು, ಹಾಗೆಯೇ 16GB RAM ಮತ್ತು 512GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ. ಅಲ್ಲದೇ 5,700mAh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಸಹ ಒಳಗೊಂಡಿದ್ದು, ಜೊತೆಗೆ 100W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಇದೆ.
ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್
ಒನ್‌ಪ್ಲಸ್ 12 ಮೊಬೈಲ್ 6.82 ಇಂಚಿನ QHD+ ಡಿಸ್‌ಪ್ಲೇ ಸೌಲಭ್ಯವನ್ನು ಹೊಂದಿದ್ದು, ಈ ಡಿಸ್‌ಪ್ಲೇಯು 1440 x 3168 ಪಿಕ್ಸೆಲ್ ಸ್ಕ್ರೀನ್ ಸೂಪರ್ ಕ್ರಿಸ್ಪ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ 3 SoC ಪ್ರೊಸೆಸರ್ ಪವರ್ ಪಡೆದಿದ್ದು, ಇದು ಆಂಡ್ರಾಯ್ಡ್ 14 ಓಎಸ್ ನಲ್ಲಿ ಕಾರ್ಯ ಮಾಡಲಿದೆ. ಇನ್ನು ಇದು 12GB RAM + 256GB ಹಾಗೂ 16GB RAM + 512GB ವೇರಿಯಂಟ್ ಆಯ್ಕೆ ಪಡೆದಿದೆ.
ಇನ್ನು ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದ್ದು, 50 ಮೆಗಾಪಿಕ್ಸಲ್‌ನ ಮುಖ್ಯ ಕ್ಯಾಮೆರಾ ಹೊಂದಿದೆ. ಅಲ್ಲದೇ ಇದು 5400mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸಹ ಪಡೆದಿದ್ದು, ಇದು 100W ಸೂಪರ್‌ವೂಕ್ ಚಾರ್ಜಿಂಗ್ ಅನ್ನು ಬೆಂಬಲ ಕೂಡಾ ಪಡೆದುಕೊಂಡಿದೆ.
ಶಿಯೋಮಿ 14 ಸ್ಮಾರ್ಟ್‌ಫೋನ್
ಶಿಯೋಮಿ 14 ಮೊಬೈಲ್ 6.3 ಇಂಚಿನ ಕೇಂದ್ರಿತ ಪಂಚ್-ಹೋಲ್ ಫ್ಲಾಟ್ OLED ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇಯು 2670 x 1200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. ಅಲ್ಲದೇ ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 3 SoC ಪ್ರೊಸೆಸರ್ ವೇಗವನ್ನು ಪಡೆದಿದ್ದು, ಇದು ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಜೊತೆಗೆ ಕೆಲಸ ನಿರ್ವಹಿಸಲಿದೆ.
ಅಂದಹಾಗೆ ಈ ಮೊಬೈಲ್ ಮೂರು ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇದರೊಂದಿಗೆ ಈ ಫೋನ್ 4,610mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಆಯ್ಕೆಯನ್ನು ಹೊಂದಿದೆ.


Click it and Unblock the Notifications








