Home
ಮೊಬೈಲ್

ಕಡಿಮೆ ಬೆಲೆಯಲ್ಲಿ ಟ್ರೆಂಡಿಂಗ್‌ ಫೀಚರ್ಸ್‌ ಪಡೆದಿರುವ ಟಾಪ್‌ ಫೋನ್‌ಗಳ ಲಿಸ್ಟ್‌ ಇಲ್ಲಿದೆ!

ಪ್ರಸ್ತುತ ಅನೇಕ ಕೆಲಸಗಳು ಮೊಬೈಲ್‌ ಮೂಲಕವೇ ನಡೆಯುತ್ತವೆ. ಈ ನಿಟ್ಟಿನಲ್ಲಿ ಸ್ಮಾರ್ಟ್‌ಫೋನ್‌ ಎಲ್ಲರಿಗೂ ಅಗತ್ಯ ಮತ್ತು ಅವಶ್ಯ ಡಿವೈಸ್‌ ಎನಿಸಿದೆ. ಇನ್ನು ಖರೀದಿದಾರರು ಅವರ ಬಜೆಟ್‌ಗೆ ಅನುಸಾರವಾಗಿ, ಉತ್ತಮ ಮೊಬೈಲ್‌ ಅನ್ನು ಖರೀದಿ ಮಾಡಲು ಬಯಸುತ್ತಾರೆ. ಅನೇಕರು ಸ್ಮಾರ್ಟ್‌ಫೋನ್‌ ಖರೀದಿ ಮಾಡುವಾಗ ಅಗ್ಗದ ದರದ ಜೊತೆಗೆ ಮೊಬೈಲ್‌ನ ಕ್ಯಾಮೆರಾ, ಬ್ಯಾಟರಿ ಹಾಗೂ ಪ್ರೊಸೆಸರ್‌ ಬಗ್ಗೆಯೂ ಗಮನ ನೀಡುತ್ತಾರೆ. ಮಾರುಕಟ್ಟೆಯಲ್ಲಿ ಸುಮಾರು 10000ರೂ. ಒಳಗೂ ಜಬರ್ದಸ್ತ್‌ ಫೋನ್‌ಗಳು ಲಭ್ಯ ಇವೆ.

ಹೌದು, ಸಾಮಾನ್ಯವಾಗಿ ಗ್ರಾಹಕರು ಹೊಸ ಮೊಬೈಲ್‌ ಖರೀದಿಸುವಾಗ ಮೊಬೈಲ್‌ನ ಬೆಲೆ ಬಗ್ಗೆ ಗಮನ ನೀಡುತ್ತಾರೆ. ಮಾರುಕಟ್ಟೆಯಲ್ಲಿ ಸುಮಾರು 10000ರೂ. ಗಳ ಒಳಗೂ ಅತ್ಯುತ್ತಮ ಫೋನ್‌ಗಳು ಖರೀದಿಗೆ ಲಭ್ಯ ಇವೆ, ಅದರಲ್ಲಿಯೂ ಕೆಲವು ಫೋನ್‌ಗಳು ಅಗತ್ಯ ಟ್ರೆಂಡಿಂಗ್‌ ಫೀಚರ್ಸ್‌ಗಳನ್ನು ಪಡೆದುಕೊಂಡಿವೆ. ಹಾಗಾದರೇ ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯ ಇರುವ ಕೆಲವು ಅತ್ಯುತ್ತಮ ಫೀಚರ್ಸ್‌ ಫೋನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಕಡಿಮೆ ಬೆಲೆಯಲ್ಲಿ ಟ್ರೆಂಡಿಂಗ್‌ ಫೀಚರ್ಸ್‌ ಪಡೆದಿರುವ ಫೋನ್‌ಗಳ ಲಿಸ್ಟ್‌ ಇಲ್ಲಿದೆ

ಪೊಕೊ M6 5G ಫೋನ್‌

ಪೊಕೊ M6 5G ಮೊಬೈಲ್‌ 6.74 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಅಲ್ಲದೇ ಈ ಡಿಸ್‌ಪ್ಲೇ 90Hz ರಿಫ್ರೆಶ್‌ ರೇಟ್‌ ಸಪೋರ್ಟ್ ಮಾಡಲಿದ್ದು, 600nits ಗರಿಷ್ಠ ಬ್ರೈಟ್‌ನೆಸ್‌ ಪಡೆದಿದೆ. ಇನ್ನು ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್‌ ಪವರ್‌ ಅನ್ನು ಹೊಂದಿದ್ದು, ಇದು ಆಂಡ್ರಾಯ್ಡ್‌ 13 ಆಧಾರಿತ MIUI 14 ನಲ್ಲಿ ಕೆಲಸ ಮಾಡುತ್ತದೆ.

ಹಾಗೆಯೇ ಈ ಫೋನ್‌ 4GB RAM ಮತ್ತು 128GB, 6GB RAM ಮತ್ತು 128GB ಹಾಗೂ 8GB RAM ಮತ್ತು 256GB ಸ್ಟೋರೇಜ್‌ ವೇರಿಯೆಂಟ್‌ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಅಲ್ಲದೇ ಈ ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 18W ಫಾಸ್ಟ್‌ ಚಾರ್ಜಿಂಗ್ ಅನ್ನು ಪಡೆದಿದೆ. ಇದು ಡ್ಯುಯಲ್‌ ಕ್ಯಾಮೆರಾ ರಚನೆ ಸಹ ಪಡೆದುಕೊಂಡಿದೆ.

ಟೆಕ್ನೋ ಪಾಪ್‌ 9 5G ಮೊಬೈಲ್‌

ಟೆಕ್ನೋ ಸಂಸ್ಥೆಯ ಇತ್ತೀಚಿನ ಫೋನ್‌ ಟೆಕ್ನೋ ಪಾಪ್‌ 9 5G ಮೊಬೈಲ್‌ ಕೆಲವು ಆಕರ್ಷಕ ಫೀಚರ್ಸ್‌ ಮೂಲಕ ಗಮನ ಸೆಳದಿದೆ. ಈ ಫೋನ್‌ 6.67 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ರಚನೆ ಅನ್ನು ಪಡೆದುಕೊಂಡಿದೆ. ಹಾಗೆಯೇ ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ ಪವರ್‌ ಅನ್ನು ಸಹ ಪಡೆದುಕೊಂಡಿದೆ. ಅಲ್ಲದೇ ಇದು 4GB RAM + 128GB ಸ್ಟೋರೇಜ್‌ ಆಯ್ಕೆಯನ್ನು ಸಹ ಪಡೆದುಕೊಂಡಿದೆ. ಅಲ್ಲದೇ 5000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಇದು ಪಡೆದುಕೊಂಡಿದೆ. ಹಾಗೆಯೇ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಒಳಗೊಂಡಿದೆ.

ಲಾವಾ ಬ್ಲೇಜ್‌ 5G ಮೊಬೈಲ್‌

ಲಾವಾ ಸಂಸ್ಥೆಯ ಲಾವಾ ಬ್ಲೇಜ್‌ 5G ಮೊಬೈಲ್‌ 6.65 ಇಂಚಿನ ಡಿಸ್‌ಪ್ಲೇ ರಚನೆ ಅನ್ನು ಪಡೆದುಕೊಂಡಿದೆ. ಹಾಗೆಯೇ ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 700 ಆಕ್ಟಾ ಕೋರ್ ಪ್ರೊಸೆಸರ್ ಪವರ್‌ ಅನ್ನು ಸಹ ಪಡೆದುಕೊಂಡಿದೆ. ಅಲ್ಲದೇ ಇದು 6 GB RAM + 128GB ಸ್ಟೋರೇಜ್‌ ಆಯ್ಕೆಯನ್ನು ಸಹ ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಆಗಿದೆ. ಅಲ್ಲದೇ 5000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಇದು ಪಡೆದುಕೊಂಡಿದೆ.

Best Mobiles in India

English summary
Best Phones Under Rs 10000 That Offer Trending Features. check trending phones list here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+