7,000ರೂ. ಒಳಗೆ ಈ ಬೊಂಬಾಟ್ ಫೀಚರ್ಸ್ ಫೋನ್ ಖರೀದಿ ಮಾಡಬಹುದು!
ಪ್ರಸ್ತುತ ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಜನರಿಗೆ ಅನುಕೂಲಕರ ಡಿವೈಸ್ ಆಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇನ್ನು ಮೊಬೈಲ್ ಖರೀದಿಸುವ ಗ್ರಾಹಕರು ಅವರ ಬಳಕೆಗೆ ಅನುಗುಣವಾಗಿ, ಸ್ಮಾರ್ಟ್‌ಫೋನ್ ಖರೀದಿ ಮಾಡಲು ಮುಂದಾಗುತ್ತಾರೆ. ಅದಾಗ್ಯೂ, ಕೆಲವು ಬಳಕೆದಾರರು ಅಗ್ಗದ ಪ್ರೈಸ್ ಟ್ಯಾಗ್‌ನಲ್ಲಿ ಆಕರ್ಷಕ ಫೀಚರ್ಸ್ ಇರುವ ಫೋನ್‌ಗಳನ್ನು ಖರೀದಿ ಮಾಡಲು ಇಷ್ಟಪಡುತ್ತಾರೆ.
ಹೌದು, ಮಾರುಕಟ್ಟೆಯಲ್ಲಿ ಭಿನ್ನ ಬೆಲೆಯಲ್ಲಿ ಹಲವು ಫೋನ್‌ಗಳ ಆಯ್ಕೆ ಲಭ್ಯ ಇದೆ. ಅವುಗಳ ಪೈಕಿ ಕೆಲವು ಸ್ಮಾರ್ಟ್‌ಫೋನ್‌ಗಳು ಸುಮಾರು 7,000ರೂ. ಒಳಗೂ ಖರೀದಿಗೆ ದೊರೆಯುತ್ತವೆ. ಈ ಫೋನ್‌ಗಳು ಅಗ್ಗದ ಬೆಲೆ ಹೊಂದಿದ್ದರೂ, ಕ್ಯಾಮೆರಾ, ಆಕರ್ಷಕ ಡಿಸೈನ್, ದೀರ್ಘ ಬಾಳಿಕೆ ಪೂರಕವಾಗದ ಬ್ಯಾಟರಿಗಳಂತಹ ಕೆಲವು ಅತ್ಯುತ್ತಮ ಫೀಚರ್ಸ್ ಪಡೆದಿವೆ. ಈ ಲೇಖನದಲ್ಲಿ 7,000ರೂ. ಒಳಗೆ ಖರೀದಿಸಬಹುದಾದ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರೆಡ್ಮಿ A2 ಸ್ಮಾರ್ಟ್‌ಫೋನ್ :
ರೆಡ್ಮಿ A2 ಸ್ಮಾರ್ಟ್‌ಫೋನ್ 6.52 ಇಂಚಿನ IPS LCD ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದು ಡಿಸ್‌ಪ್ಲೇ 1600 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ ಮೀಡಿಯಾ ಟೆಕ್ ಹಿಲಿಯೋ G36 SoC ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಇದರೊಂದಿಗೆ 4GB RAM ಮತ್ತು 64GB ಆಂತರೀಕ ಸ್ಟೋರೇಜ್ ಅನ್ನು ಹೊಂದಿದೆ. ಇದು ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಆಗಿದೆ. ಅಲ್ಲದೇ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.
ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್ :
ಜಿಯೋಫೋನ್ ನೆಕ್ಸ್ಟ್ 3500 mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ. ಈ ಫೋನ್ ಹಿಂಭಾಗದಲ್ಲಿ ಸಿಂಗಲ್ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಅದು 13 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿದೆ. ಅದೇ ರೀತಿ ಮುಂಭಾಗದಲ್ಲಿ 8 ಮೆಗಾ ಪಿಕ್ಸಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಪಡೆದುಕೊಂಡಿದೆ. ಅಲ್ಲದೇ ಜಿಯೋಫೋನ್ ನೆಕ್ಸ್ಟ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 215 SoC ಓಎಸ್ ಸಪೋರ್ಟ್ ಪಡೆದಿದ್ದು, 2GB RAM ಮತ್ತು 32GB ಯ ಆಂತರಿಕ ಸ್ಟೋರೇಜ್ ಸಾಮರ್ಥ್ಯದ ಆಯ್ಕೆ ಇದೆ.
ಟೆಕ್ನೋ ಪಾಪ್ 7 ಪ್ರೊ ಸ್ಮಾರ್ಟ್‌ಫೋನ್ :
ಟೆಕ್ನೋ ಪಾಪ್ 7 ಪ್ರೊ ಸ್ಮಾರ್ಟ್‌ಫೋನ್ 6.56 ಇಂಚಿನ ಹೆಚ್‌ಡಿ+ ಡಾಟ್ ನಾಚ್ IPS ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇಯು 1612 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರೊಂದಿಗೆ ಈ ಫೋನ್ ಮೀಡಿಯಾ ಟೆಕ್ ಹಿಲಿಯೋ A22 SoC ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಆಂಡ್ರಾಯ್ಡ್ 12 ಓಎಸ್ ಸಪೋರ್ಟ್ ಪಡೆದಿದೆ. ಹಾಗೆಯೇ ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.
ನೋಕಿಯಾ C12 ಸ್ಮಾರ್ಟ್‌ಫೋನ್ :
ನೋಕಿಯಾ C12 ಮೊಬೈಲ್ 6.3 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಅನ್ನು ಹೊಂದಿದ್ದು, 720 × 1600 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಆಕ್ಟಾ ಕೋರ್ UniSoC SC9863A ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಇದು 8 ಮೆಗಾ ಪಿಕ್ಸಲ್ ಸಿಂಗಲ್ ಕ್ಯಾಮೆರಾ ಪಡೆದಿರುವ ಜೊತೆಗೆ ಈ ಫೋನ್ 3000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದೆ.
ಹಾಗೆಯೇ ನೋಕಿಯಾ C12 ಸ್ಮಾರ್ಟ್‌ಫೋನ್ 2GB + 64 GB ಸ್ಟೋರೇಜ್ ಸಿಂಗಲ್ ವೇರಿಯಂಟ್ ಆಯ್ಕೆ ಪಡೆದಿದ್ದು, 2GB ವರ್ಚುವಲ್ RAM ಕೂಡಾ ಹೊಂದಿದೆ. ಇನ್ನು ಈ ಫೋನ್ ಡಾರ್ಕ್ ಸಯಾನ್, ಲೈಟ್ ಮಿಂಟ್ ಮತ್ತು ಚಾರ್ಕೋಲ್ ಕಲರ್ ಆಯ್ಕೆ ಪಡೆದಿದೆ.


Click it and Unblock the Notifications








