Home
ಮೊಬೈಲ್

2016ರ ಬೆಸ್ಟ್ ಸ್ಮಾರ್ಟ್‌ಪೋನ್‌ಗಳು ಯಾವುದು ಅಂತೀರಾ..? ಇಲ್ಲಿದೇ ನೋಡಿ ಡಿಟ್ಲೈಲ್ಸ್

2016ರಲ್ಲಿ ಸ್ಮಾರ್ಟ್‌ಪೋನ್ ಭರಾಟೆ ಜೋರಾಗಿಯೇ ನಡೆದಿದ್ದು, ಅದರಲ್ಲೂ ಮಧ್ಯಂತರದ ನಂತರದಲ್ಲಿ 4G ಸಪೋರ್ಟ್ ಮಾಡುವ ಸ್ಮಾರ್ಟ್‌ಪೋನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಬಂದಿದ್ದಲ್ಲದೇ ಜನರಿಗೂ ಹತ್ತಿರವಾಗಿವೆ.

By Srinidhi

ಸದ್ಯ ಭಾರತದ ಗ್ಯಾಜೆಟ್ ಲೋಕದಲ್ಲಿ ಸ್ಮಾರ್ಟ್‌ಪೋನ್‌ಗಳದ್ದೇ ಸಿಂಹಪಾಲು ಎಂದರೆ ತಪ್ಪಾಗುವುದಿಲ್ಲ. ಕಾರಣ ಪ್ರತಿಯೊಂದು ಮನೆಯಲ್ಲೂ ಎರಡದಿಂದ ಮೂರು ಸ್ಮಾರ್ಟ್‌ಪೋನ್‌ಗಳಿದ್ದು, ಕೆಲವು ವ್ಯಕ್ತಿಗಳ ಬಳಿಯೇ ಒಂದಕ್ಕಿಂತ ಹೆಚ್ಚಿನ ಸ್ಮಾರ್ಟ್‌ಪೋನ್‌ಗಳಿರುವ ಉದಾರಹಣೆ ನಮ್ಮ ನಿಮ್ಮ ನಡುವೆಯೇ ಇದೆ.

2016ರ ಬೆಸ್ಟ್ ಸ್ಮಾರ್ಟ್‌ಪೋನ್‌ಗಳು ಯಾವುದು ಅಂತೀರಾ..? ಇಲ್ಲಿದೇ ನೋಡಿ ಡಿಟ್ಲೈಲ್ಸ

2,799 ರೂ.ಗೆ VoLTE 4G ಸ್ಮಾರ್ಟ್ ಪೋನ್...!

2016ರಲ್ಲಿ ಸ್ಮಾರ್ಟ್‌ಪೋನ್ ಭರಾಟೆ ಜೋರಾಗಿಯೇ ನಡೆದಿದ್ದು, ಅದರಲ್ಲೂ ಮಧ್ಯಂತರದ ನಂತರದಲ್ಲಿ 4G ಸಪೋರ್ಟ್ ಮಾಡುವ ಸ್ಮಾರ್ಟ್‌ಪೋನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಬಂದಿದ್ದಲ್ಲದೇ ಜನರಿಗೂ ಹತ್ತಿರವಾಗಿವೆ, ಇಂತಹ ಟಾಪ್ ಪೋನ್ ಗಳು ಯಾವುವು ಎಂಬುದನ್ನು ನೋಡೋಣ

Xiaomi Redmi 3S Prime: ಬೆಲೆ 8,999 ರೂ.

Xiaomi Redmi 3S Prime: ಬೆಲೆ 8,999 ರೂ.

2015ರ ಬೆಸ್ಟ್ ಸ್ಮಾರ್ಟ್‌ಪೋನ್‌ಗಳ ಸಾಲಿನಲ್ಲಿ ಮೊದಲನೇ ಸ್ಥಾನದಲ್ಲಿರುವ Xiaomi Redmi 3S Prime ಬೆಲೆ ಮತ್ತು ಗುಣಮಟ್ಟ ಎರಡರಲ್ಲೂ ಗ್ರಾಹಕರಿಗೆ ಹಿಡಿಸಿದೆ. ಮೆಟಲ್ ಬಾಡಿ, ಫಿಂಗರ್ ಪ್ರಿಂಟ್ ಸೆನ್ಸರ್, 4000 mAh ಬ್ಯಾಟರಿ ಮತ್ತು ಗುಣಮಟ್ಟದ ಕ್ಯಾಮೆರಾಗಳು ಈ ಪೋನ್‌ನ ಜನಪ್ರಿಯತೆಗೆ ಕಾರಣವಾಗಿದೆ ಎಂದರೆ ತಪ್ಪಾಗುವುದಿಲ್ಲ. ಒಟ್ಟಿನಲ್ಲಿ ಕೊಟ್ಟ ಕಾಸಿಗಂತೂ ಈ ಪೋನ್ ಮೊಸವಿಲ್ಲ. ಅ ಕಾರಣಕ್ಕಾಗಿಯೇ ಜನ ಮುಗಿಬಿದ್ದು ಈ ಪೋನ್ ಖರೀದಿಸಿದರು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Asus ZenFone Max:  ಬೆಲೆ 9,999 ರೂ.

Asus ZenFone Max: ಬೆಲೆ 9,999 ರೂ.

ಆಸಸ್ ಕಂಪನಿಯ ಸ್ಮಾರ್ಟ್‌ಪೋನ್‌ಗಳು ಈ ವರ್ಷ ಜನ ಸಾಮಾನ್ಯರ ಮನಗೆಲ್ಲುವಲ್ಲಿ ಯಶಸ್ಸಿಯಾಗಿವೆ. ಜೆನ್ ಪೋನ್ ಸರಣಿಯ ಪೋನ್ ಗಳು ಹೆಚ್ಚು ಮಾರಾಟವಾಗಿರುವುದು ಅಂಶವನ್ನು ಎತ್ತಿ ತೋರಿಸುತ್ತದೆ. ಈ ಸರಣಿಯಲ್ಲಿ Asus ZenFone Max ಉತ್ತಮ ಗುಣಮಟ್ಟದ ಪರದೆ ಮತ್ತು ವೇಗಕ್ಕೆ ಖ್ಯಾತಿ ಗಳಿಸಿದ್ದು, ಬ್ಯಾಟರಿ ಬಾಳಿಕೆ ಸಹ ಉತ್ತಮವಾಗಿದೆ. ಅಲ್ಲದೇ ತನ್ನಲ್ಲಿರುವ ಬ್ಯಾಟರಿಯನ್ನು ಬೇರೆ ಪೋನ್ ಗಳಿಗೆ ವರ್ಗಹಿಸುವ ಶಕ್ತಿ ಸಹ ಹೊಂದಿತ್ತು. ಹೆಚ್ಚು ಬ್ಯಾಟರಿ ಬೇಕು ಎನ್ನುವವರಿಗೆ ಹೇಳಿ ಮಾಡಿಸಿದಂತಿತ್ತು. ಹೀಗಾಗಿ ಬೆಸ್ಟ್ ಪೋನ್ ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

Lenovo K6 Power: ಬೆಲೆ 9,999 ರೂ.

Lenovo K6 Power: ಬೆಲೆ 9,999 ರೂ.

Redmi 3S Prime ಪೋನಿಗೆ ಪ್ರತಿ ಸ್ಪರ್ಥಿಯಾಗಿ ಕಾಣಿಸಿಕೊಂಡ Lenovo K6 Power ಈ ವರ್ಷ ಅತಿ ಹೆಚ್ಚು ಸೇಲ್ ಆದ ಮೊಬೈಲ್ ಗಳ ಸಾಲಿನಲ್ಲಿ ಸ್ಥಾನ ಪಡೆದಿದೆ. ಉತ್ತಮ ಗುಣಮಟ್ಟದ ಆಡಿಯೋ ಇಂಜಿನ್ ಮತ್ತು ಕ್ಯಾಮೆರಾ ಹೊಂದಿದ್ದು, Redmi 3S Prime ಪೋನಿನ ಎಲ್ಲಾ ಫೀಚರ್ ಗಳನ್ನು ಒಳಗೊಂಡಿತ್ತು. ಈ ಹಿನ್ನಲೆಯಲ್ಲಿ ರೆಡ್‌ಮಿ ಬೇಡ ಎಂದವರು ಲಿನೋವ ಕಡೆಗೆ ಮುಖ ಮಾಡಿದ್ದರು.

Xiaomi Redmi Note 3: ಬೆಲೆ 11,999 ರೂ.

Xiaomi Redmi Note 3: ಬೆಲೆ 11,999 ರೂ.

ಈ ವರ್ಷದ ಜನ ಮೆಚ್ಚಿದ ಸ್ಮಾರ್ಟ್‌ಪೋನ್ ಸಾಲಿನಲ್ಲಿ ಶ್ಯೋಮಿಯ ಮತ್ತೊಂದು ಪೋನ್ ಸ್ಥಾನ ಪಡೆದುಕೊಂಡಿದೆ. Redmi Note 3 ಪೋನ್ 10 ಸಾವಿರಕ್ಕಿಂತ ಸ್ಪಲ್ಪ ಜಾಸ್ತಿ ಬೆಲೆಯನ್ನು ಹೊಂದಿದ್ದರು ಸಹ ಸಾಮಾನ್ಯರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. Full HD ಡಿಸ್‌ಪ್ಲೇ, ಗುಣಮಟ್ಟದ ಕ್ಯಾಮೆರಾ, ವೇಗದ ಪೋಸೆಸರ್, ಹೆಚ್ಚಿನ ಅಂತರಿಕ ಮೆಮೊರಿ ಇವೇಲ್ಲವೂ ಟಾಪ್ ಎಂಡ್ ಸ್ಮಾರ್ಟ್‌ಪೋನಿನ ಸೌಲಭ್ಯಗಳಾಗಿದ್ದು, ಈ ಪೋನ್ ನಲ್ಲಿ ಆ ಎಲ್ಲಾ ಸೌಲಭ್ಯಗಳು ಲಭ್ಯವಿತ್ತು. ಈ ಹಿನ್ನಲೆಯಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

LeEco Le Max 2: ಬೆಲೆ 17,999 ರೂ

LeEco Le Max 2: ಬೆಲೆ 17,999 ರೂ

ಬೆಲೆಯ ವಿಚಾರದಲ್ಲಿ ಸ್ಪಲ್ಪ ಜಾಸ್ತಿ ಎನ್ನಿಸಿದರು ವಿಶೇಷತೆಗಳ ವಿಚಾರದಲ್ಲಿ ಕೊಟ್ಟ ಕಾಸಿಗೆ ಮೋಸವಿಲ್ಲ. ಮೊದಲು 22,999 ರೂ ಇದ್ದ ಬೆಲೆ ನಂತರದಲ್ಲಿ 17,999 ಇಳಿದ್ದು ಈ ಪೋನ್ ಹೆಚ್ಚು ಮಾರಾಟವಾಗಲು ಕಾರಣವಾಯಿತು ಎನ್ನಲಾಗಿದೆ. ವೇಗದ ಪ್ರೋಸೆಸರ್, 4GB RAM, 32GB ಇಂಟರ್ನಲ್ ಮೊಮೊರಿ, 5.7 ಇಂಚಿನ 2K ಡಿಸ್‌ಪ್ಲೇ ಸೇರಿದಂತೆ ಮುಂತಾದ ವಿಷೇಶತೆಗಳು ಈ ಪೋನ್ ಜನಪ್ರಿಯತೆಗೆ ಕಾರಣವಾಗಿದೆ. ಟಾಪ್ ಕ್ಲಾಸ್ ಪೋನ್ ಎಲ್ಲಾ ವಿಶೇಷೆಗಳು ಈ ಪೋನ್ ನಲ್ಲಿಯೇ ಆಡಕವಾಗಿತ್ತು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
its been an interesting year for smartphones, a list of the best smartphones of 2016 irrespective of budget, features and function. to know more visit kannnada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+