2,799 ರೂ.ಗೆ VoLTE 4G ಸ್ಮಾರ್ಟ್ ಪೋನ್...!

|

ರಿಲಯನ್ಸ್ ಜಿಯೋ ಉಚಿತ 4G ಡೇಟಾ ಮತ್ತು ಉಚಿತ ಕರೆಗಳ ಸೌಲಭ್ಯವನ್ನು ನೀಡಿದ ನಂತರ ಭಾರತೀಯ ಮಾರುಕಟ್ಟೆಯಲ್ಲಿ 4G ಸಪೋರ್ಟ್ ಮಾಡುವ ಸ್ಮಾರ್ಟ್‌ಪೋನ್ ಗಳ ಮಾರಾಟ ಹೆಚ್ಚಾಗಿದ್ದು, ಕಾರಣ ಜಿಯೋ ಸಿಮ್ 4G ಬಿಟ್ಟು ಇನ್ಯಾವುದೇ ನೆಟ್‌ವರ್ಕ್ ನಲ್ಲಿ ಬಳಸಲು ಸಾಧ್ಯವಿಲ್ಲ.

2,799 ರೂ.ಗೆ VoLTE 4G ಸ್ಮಾರ್ಟ್ ಪೋನ್...!

ಶಾಕಿಂಗ್ ನ್ಯೂಸ್..ಜಿಯೋ ವೆಲಕಮ್ 2 ಆಫರ್ ಇಲ್ಲ!!?

ಎಷ್ಟೊ ಮಂದಿ ಜಿಯೋ ಸಿಮ್ ಬಳಸುವುದಕ್ಕಾಗಿಯೇ 4G ಸಪೋರ್ಟ್ ಮಾಡುವ ಹೊಸ ಸ್ಮಾರ್ಟ್‌ಪೋನ್ ಖರೀದಿಸಲು ಮುಗಿಬಿದ್ದರು. ಆದರೆ 4G ಸಪೋರ್ಟ್ ಮಾಡುವ ಹ್ಯಾಂಡ್ ಸೆಟ್‌ಗಳ ಬೆಲೆ 10 ಸಾವಿರ ಮೇಲ್ಪಟ್ಟಿದ್ದು ಜನ ಸಾಮಾನ್ಯರಿಗೆ ಸ್ಪಲ್ಪ ದುಬಾರಿಯಾಗಿತ್ತು. ಈ ಹಿನ್ನಲೆಯಲ್ಲಿ ಭಾರತೀಯ ಮೂಲದ ಸ್ಪೈಪ್ ಕಂಪನಿ ಕೇವಲ 2,799 ರೂ.ಗೆ VoLTE 4G ಸಪೋರ್ಟ್ ಮಾಡುವ ಸ್ಮಾರ್ಟ್ ಪೋನ್ ಬಿಡುಗಡೆ ಮಾಡಿದೆ.

ಸ್ವೈಪ್ ಕನೆಕ್ಟ್ 4G ನೂತನ ಸ್ಮಾರ್ಟ್‌ಪೋನ್

ಸ್ವೈಪ್ ಕನೆಕ್ಟ್ 4G ನೂತನ ಸ್ಮಾರ್ಟ್‌ಪೋನ್

ಸದ್ಯ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ವಿದೇಶಿಯ ಮೊಬೈಲ್ ಕಂಪನಿಗಳೇ ರಾರಾಜಿಸುತ್ತಿದ್ದು, ಅವುಗಳಿಗೆ ಸ್ಪರ್ಧೆ ನೀಡಲು ಸ್ವೈಪ್ ಕಂಪನಿ ಸ್ವೈಪ್ ಕನೆಕ್ಟ್ 4G ನೂತನ ಸ್ಮಾರ್ಟ್‌ಪೋನ್ ಅನ್ನು 2,799 ರೂ.ಗೆ ಬಿಡುಗಡೆ ಮಾಡಿದೆ. ಈ ಪೋನ್ ಡಿಸೆಂಬರ್ 27 ರಿಂದ ಆನ್‌ಲೈನ್ ನಲ್ಲಿ ಲಭ್ಯವಿರಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

VoLTE 4G ಸಪೋರ್ಟ್

VoLTE 4G ಸಪೋರ್ಟ್

ಸ್ವೈಪ್ ಕನೆಕ್ಟ್ 4G ಕಡಿಮೆ ಬೆಲೆಯ ಪೋನ್ ಆದರು ಉತ್ತಮ ಗುಣ ವಿಶೇಷತೆಗಳನ್ನು ಹೊಂದಿದೆ. VoLTE 4G ಸಪೋರ್ಟ್ ಮಾಡಲಿದ್ದು, ಜಿಯೋ ಸಿಮ್ ಬಳಸಲು ಸೂಕ್ತವಾಗಿದೆ. ಜೊತೆಗೆ ಬ್ಲೂಟೂತ್‌, GPS, FM ಮತ್ತು microUSB ಸೌಲಭ್ಯ ಸಹ ಇದೆ.

ಸ್ವೈಪ್ ಕನೆಕ್ಟ್ 4G ವೇಗದ ಪೋನ್

ಸ್ವೈಪ್ ಕನೆಕ್ಟ್ 4G ವೇಗದ ಪೋನ್

ವೇಗವಾಗಿ ಕಾರ್ಯ ನಿರ್ವಹಿಸಲು 1.5GHz ಕ್ವಾಡ್ ಕೋರ್ ಪ್ರೋಸೆಸರ್ ಇದ್ದು, 512 MB RAM ನೊಂದಿಗೆ 4GB ಇಂಟರ್ನಲ್ ಮೊಮೊರಿಯಿದ್ದು, ಆಂಡ್ರಾಯ್ಡ್ 6.0 ಕಾರ್ಯಚರಣೆಯನ್ನು ಹೊಂದಿದೆ.

ಗುಣಮಟ್ಟದ ಕ್ಯಾಮೆರಾ ಮತ್ತು ಡಿಸ್‌ಪ್ಲೇ

ಗುಣಮಟ್ಟದ ಕ್ಯಾಮೆರಾ ಮತ್ತು ಡಿಸ್‌ಪ್ಲೇ

ಸ್ವೈಪ್ ಕನೆಕ್ಟ್ 4G ಪೋನ್ ನಲ್ಲಿ 1280 x 720p HD ರೆಸಲೂಷ್ಯನ್್ನ 4 ಇಂಚಿನ ಡಿಸ್‌ಪ್ಲೇ ಇದೆ. ಜೊತೆಗೆ 5MP ಹಿಂಬದಿ ಕ್ಯಾಮೆರಾ, ಮತ್ತು ಮುಂಭಾಗದಲ್ಲಿ 1.3 MP ಕ್ಯಾಮೆರಾ ಇದೆ. ಜೊತೆ 2000mAh ಬ್ಯಾಟರಿ ಹೊಂದಿದೆ.

ಆನ್‌ಲೈನ್ ನಲ್ಲಿ ಆಫರ್ ಕೂಡ ಇದೆ.

ಆನ್‌ಲೈನ್ ನಲ್ಲಿ ಆಫರ್ ಕೂಡ ಇದೆ.

ಸ್ವೈಪ್ ಕನೆಕ್ಟ್ 4G ಸ್ನಾಪ್‌ಕ್ಲೂಸ್ ನಲ್ಲಿ ಮಾರಾಟಕ್ಕಿದ್ದು, ಮೊದಲೇ ರಿಜಿಸ್ಟರ್ ಮಾಡಿದ 500 ಮಂದಿ ಗ್ರಾಹಕರಿಗೆ 200ರೂಗಳ ರಿಯಾಯಿತಿಯನ್ನು ಘೋಷಿಸಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
ndian cell phone company Swipe has announced a new affordable smartphone dubbed Swipe Konnect 4G. to kone more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X