Smartphones: ಭಾರತದಲ್ಲಿ ಈ ತಿಂಗಳಲ್ಲಿ ಲಾಂಚ್ ಆಗಲಿವೆ ಈ ವಿಶೇಷ ಸ್ಮಾರ್ಟ್‌ಫೋನ್‌ಗಳು!
ಸ್ಮಾರ್ಟ್‌ಫೋನ್‌ಗಳು (Smartphones) ಇಂದಿನ ದಿನಗಳಲ್ಲಿ ವಿಶೇಷ ಫೀಚರ್ಸ್ ಮೂಲಕ ಬಳಕೆದಾರರಿಗೆ ಹೊಸ ರೀತಿಯ ಅನುಭವ ನೀಡುತ್ತವೆ. ಅದರಂತೆ ಪ್ರತಿ ತಿಂಗಳು ಹೊಸ ಫೋನ್‌ಗಳು ಲಾಂಚ್ ಆಗುತ್ತಿದ್ದು ಈ ತಿಂಗಳು (ಮಾರ್ಚ್) ರಂದು ಸಾಕಷ್ಟು ಫೋನ್‌ಗಳು ಮಾರುಕಟ್ಟೆಯಲ್ಲಿ ಸಂಚಲನ ಉಂಟು ಮಾಡಲಿವೆ.
ಹೌದು, ಹೊಸ ಹೊಸ ಫೋನ್‌ಗಳು ನಿರಂತರವಾಗಿ ಲಾಂಚ್ ಆಗುತ್ತಲೇ ಇವೆ. ಆದರೆ, ಈ ತಿಂಗಳು ಕೆಲವು ಭಿನ್ನ ಫೀಚರ್ಸ್ ಆಯ್ಕೆಯ ಹಾಗೂ ಆಕರ್ಷಕ ಫೀಚರ್ಸ್ ಇರುವ ಸ್ಮಾರ್ಟ್‌ಫೋನ್‌ಗಳು ಅನಾವರಣ ಆಗುತ್ತಿದ್ದು, ಹೊಸ ಫೋನ್ ಖರೀದಿ ಮಾಡುವವರಿಗೆ ಹಬ್ಬ ಎನ್ನಬಹುದು. ಹಾಗಿದ್ರೆ, ಬನ್ನಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳು ಈ ತಿಂಗಳು ಅನಾವರಣ ಆಗಲಿವೆ ಅನ್ನೋದನ್ನು ತಿಳಿಯೋಣ.

ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ಲಸ್: ಇನ್ಫಿನಿಕ್ಸ್ ಈಗಾಗಲೇ ಕಳೆದ ತಿಂಗಳ ಕೊನೆಯಲ್ಲಿ ತನ್ನ ಸ್ಮಾರ್ಟ್ 8 ಪ್ಲಸ್ (Infinix Smart 8 Plus) ಡಿವೈಸ್ ಅನ್ನು ಅನಾವರಣಗೊಳಿಸಿದೆ. ಇದು ಇಂದು ಅಂದರೆ ಮಾರ್ಚ್ 1, 2024 ರಂದು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆ. ಈ ಫೋನ್ ಮೀಡಿಯಾ ಟೆಕ್ ಹಿಲಿಯೊ G36 ಚಿಪ್‌ಸೆಟ್ ಪ್ರೊಸೆಸರ್, ಆಂಡ್ರಾಯ್ಡ್ 13(ಗೋ ಎಡಿಷನ್) ಆಧಾರಿತ XOS 13, ಓಎಸ್ ನಲ್ಲಿ ರನ್ ಆಗಲಿದೆ. ಇದರೊಂದಿಗೆ 6.6 ಇಂಚಿನ ಐಪಿಎಸ್ ಎಲ್‌ಸಿಡಿ 720 x 1612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ ಡಿಸ್‌ಪ್ಲೇ ಆಯ್ಕೆ ಪಡೆದಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ F15 5G: ಈ ಸ್ಮಾರ್ಟ್‌ಫೋನ್ (Samsung Galaxy F15 5G) ಅನ್ನು ಮಾರ್ಚ್ 4, 2024 ರಂದು ಲಾಂಚ್ ಮಾಡಲಾಗುತ್ತಿದೆ. ಬಿಡುಗಡೆ ಪೇಜ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಪಟ್ಟಿ ಮಾಡಲಾಗಿದ್ದು, ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್ ಬಲದಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ sAMOLED ಡಿಸ್‌ಪ್ಲೇ ಆಯ್ಕೆ ಮತ್ತು 6000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿರಲಿದೆ ಎಂದು ತಿಳಿದುಬಂದಿದೆ.

ಲಾವಾ ಬ್ಲೇಜ್ ಕರ್ವ್ 5G : ಲಾವಾದ ಇತ್ತೀಚಿನ ಬ್ಲೇಜ್ ಕರ್ವ್ 5G ಸ್ಮಾರ್ಟ್‌ಫೋನ್ (Lava Blaze Curve 5G) ಅನ್ನು ಮಾರ್ಚ್ 5, 2024 ರಂದು ಲಾಂಚ್ ಮಾಡಲಾಗುತ್ತದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್ ಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 8GB ಯ LPDDR5 RAM, 256GB ಯ UFS 3.1 ಸ್ಟೋರೇಜ್ ಬೆಂಬಲ ಪಡೆದಿದೆ ಎನ್ನಲಾಗಿದ್ದು, 64MP ಸೋನಿ ಮುಖ್ಯ ಕ್ಯಾಮೆರಾ, 5000 mAh ಸಾಮರ್ಥ್ಯದ ಬ್ಯಾಟರಿ ಮತ್ತು 18W ಫಾಸ್ಟ್ ಚಾರ್ಜ್ ಬೆಂಬಲ ಪಡೆದಿದೆ.
ನಥಿಂಗ್ ಫೋನ್ (2a): ಬ್ರ್ಯಾಂಡ್‌ನ ಫೋನ್ (1) ಮತ್ತು ಫೋನ್ (2) ಡಿವೈಸ್‌ಗಳಿಗೆ ಈ ಫೋನ್ ಅನ್ನು ಹೋಲಿಕೆ ಮಾಡಿದ್ರೆ ವಿಭಿನ್ನ ಗ್ಲಿಫ್ ಇಂಟರ್‌ಫೇಸ್ ವಿನ್ಯಾಸವನ್ನು ಹೊಂದಿದೆ ಎನ್ನಲಾಗಿದೆ. ಮಧ್ಯಮ ಶ್ರೇಣಿಯ ನಥಿಂಗ್ ಫೋನ್ (2a) (Nothing phone 2a) ಅನ್ನು ಮಾರ್ಚ್ 5, 2024 ರಂದು ಲಾಂಚ್ ಮಾಡಲಾಗುತ್ತದೆ. ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7200 ಪ್ರೊಸೆಸರ್ ಬಲ ಪಡೆದಿದೆ ಎನ್ನಲಾಗಿದ್ದು, 8GB/128GB & 12GB/256GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿದೆ ಎನ್ನಲಾಗಿದೆ.

ರಿಯಲ್‌ಮಿ 12 & ರಿಯಲ್‌ಮಿ 12+: ರಿಯಲ್‌ಮಿ 12 ಮತ್ತು ರಿಯಲ್‌ಮಿ 12+ (Realme 12 & Realme 12+) ಡಿವೈಸ್‌ಗಳು 6ನೇ ಮಾರ್ಚ್ 2024 ರಂದು ಭಾರತದಲ್ಲಿ ಲಾಂಚ್ ಆಗಲಿದೆ ಈ ಸ್ಮಾರ್ಟ್‌ಫೋನ್ ಸೋನಿ LYT-600 OIS ಕ್ಯಾಮೆರಾ, ಮೀಡಿಯಾ ಟೆಕ್ ಡೈಮೆನ್ಸಿಟಿ 7050 5G ಪ್ರೊಸೆಸರ್ ಬಲ,ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸ್ಕ್ಯಾನರ್ ಸೇರಿದಂತೆ ಅನೇಕ ಆಕರ್ಷಕ ಫೀಚರ್ಸ್ ಅನ್ನು ಈ ಫೋನ್ ಹೊಂದಿರಲಿದೆ ಎಂದು ತಿಳಿದುಬಂದಿದೆ.
ವಿವೋ V30 ಮತ್ತು ವಿವೋ V30 ಪ್ರೊ: ಈ ಸ್ಮಾರ್ಟ್‌ಫೋನ್‌ಗಳನ್ನು (Vivo V30 and Vivo V30 Pro) ಈಗಾಗಲೇ ಅನಾವರಣಗೊಳಿಸಲಾಗಿದೆ ಮತ್ತು ಈ ಎರಡೂ ಡಿವೈಸ್‌ಗಳನ್ನು ಮಾರ್ಚ್ 7, 2024 ರಂದು ಭಾರತದಲ್ಲಿ ಲಾಂಚ್ ಮಾಡಲಾಗುತ್ತದೆ. ಇನ್ನು V30 ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜನ್ 3 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, V30 ಪ್ರೊ ಡಿವೈಸ್ ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.
ಶಿಯೋಮಿ 14: ಈ ಸ್ಮಾರ್ಟ್‌ಫೋನ್ (Xiaomi 14) 7ನೇ ಮಾರ್ಚ್ 2024 ರಂದು ಲಾಂಚ್ ಆಗಲಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 14 ಆಧಾರಿತ ಶಿಯೋಮಿ ಹೈಪರ್ ಓಎಸ್‌ನಲ್ಲಿ ರನ್ ಆಗಲಿದೆ ಎನ್ನಲಾಗಿದೆ. ಇದರೊಂದಿಗೆ 6.36 ಇಂಚಿನ LTPO OLED ಡಿಸ್ಪ್ಲೇ ಹೊಂದಿರಲಿದೆ ಎನ್ನಲಾಗಿದ್ದು, ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆಯಲಿದೆ ಎಂದು ತಿಳಿದುಬಂದಿದೆ. ಇದರ ಜೊತೆಗೆ 32MP ಸೆಲ್ಫಿ ಕ್ಯಾಮೆರಾ, 4610 mAh ಸಾಮರ್ಥ್ಯದ ಬ್ಯಾಟರಿ ಮತ್ತು 90W ವೈರ್ಡ್ ಮತ್ತು 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಫೀಚರ್ಸ್ ಅನ್ನು ಈ ಫೋನ್ ಹೊಂದಿರಲಿದೆ ಎಂದು ಹೇಳಲಾಗಿದೆ.
ಐಕ್ಯೂ Z9 5G : ಈ ಸ್ಮಾರ್ಟ್‌ಫೋನ್ (IQOO Z9 5G) ಮಾರ್ಚ್ 12, 2024 ರಂದು ಲಾಂಚ್ ಆಗಲಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊಸೆಸರ್ ಬಲ ಪಡೆದಿದ್ದು, ಆಂಡ್ರಾಯ್ಡ್ 14 ಓಎಸ್ ನಲ್ಲಿ ರನ್ ಆಗಲಿದೆ ಎನ್ನಲಾಗಿದೆ. ಇದರೊಂದಿಗೆ ಎಫ್‌ಹೆಚ್‌ಡಿ + ಅಮೋಲೆಡ್ ಡಿಸ್‌ಪ್ಲೇ ಹೊಂದಿರಲಿದೆ ಎಂದು ತಿಳಿದುಬಂದಿದ್ದು, 50 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 882 OIS ಮುಖ್ಯ ಕ್ಯಾಮೆರಾ ಮತ್ತು 44W ವೇಗದ ಚಾರ್ಜ್ ಬೆಂಬಲ ಪಡೆದಿರಲಿದೆ ಎನ್ನಲಾಗಿದೆ.

ರಿಯಲ್‌ಮಿ ನಾರ್ಜೋ 70 ಪ್ರೊ: ಈ ಸ್ಮಾರ್ಟ್‌ಫೋನ್ (Realme Narzo 70 Pro) ಲಾಂಚ್ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ. ಆದರೆ, ಅದಾಗ್ಯೂ ಈ ತಿಂಗಳು ಮಾರ್ಚ್ 2024 ರಲ್ಲಿ ಉಡಾವಣೆಯಾಗಲಿದೆ ಎಂದು ಬ್ರ್ಯಾಂಡ್ ದೃಢಪಡಿಸಿದೆ. ಈ ಸ್ಮಾರ್ಟ್‌ಫೋನ್ ಸೋನಿ IMX890 OIS ಮುಖ್ಯ ಕ್ಯಾಮೆರಾವನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ.


Click it and Unblock the Notifications








