ಪ್ರಸ್ತುತ ಹತ್ತು ಸಾವಿರದೊಳಗೆ ಲಭ್ಯವಿರುವ 5 ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು.!

|

ದೇಶಿಯ ಮಾರುಕಟ್ಟೆಗೆ ಸಾಕಷ್ಟು ಸ್ಮಾರ್ಟ್‌ಫೋನ್‌ ಎಂಟ್ರಿ ಕೊಡುತ್ತಲೇ ಸಾಗಿದ್ದು, ಸ್ಮಾರ್ಟ್‌ಫೋನ್‌ ಖರೀದಿಸು ಗ್ರಾಹಕರು ಫೋನಿನ ಫೀಚರ್ಸ್‌ಗಳನ್ನು ಗಮನಿಸುತ್ತಾರೆ ಅದರ ಜೊತೆಗೆ ಬೆಲೆಯನ್ನು ನೋಡದೇ ಇರರು. ಬಜೆಟ್‌ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಪೋನ್‌ ಭಾರತೀಯ ಗ್ರಾಹಕರ ಮೊದಲ ಆಯ್ಕೆ ಆಗಿದ್ದು, ಹೀಗಾಗಿ ಪ್ರಮುಖ ಕಂಪನಿಗಳು ಬಜೆಟ್‌ ದರದ ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಲು ಉತ್ಸುಕವಾಗಿರುತ್ತವೆ.

ಪ್ರಸ್ತುತ ಹತ್ತು ಸಾವಿರದೊಳಗೆ ಲಭ್ಯವಿರುವ 5 ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು.!

ಹೌದು, ಭಾರತದಲ್ಲಿ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಅತ್ಯುತ್ತಮ ಮಾರುಕಟ್ಟೆ ಇದ್ದು, ಅದರಲ್ಲಿ ಚೀನಾ ಮೂಲಕ ಕಂಪನಿಯ ಸ್ಮಾರ್ಟ್‌ಫೋನ್‌ಗಳ ಪಾಲು ಹೆಚ್ಚಿದೆ. ಕಾರಣ ಅಗ್ಗದ ದರದಲ್ಲಿ ನೂತನ ಫೀಚರ್ಸ್‌ಗಳನ್ನು ಪರಿಚಯಿಸಿ ಗ್ರಾಹಕರನ್ನು ಸೆಳೆಯುತ್ತಿವೆ. ಹಾಗಾದರೇ ಪ್ರಸ್ತುತ ಸುಮಾರು ಹತ್ತುಸಾವಿರ ರೂಪಾಯಿ ಒಳಗೆ ದೊರೆಯುವ 5 ಉತ್ತಮ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ನೋಡೋಣ ಬನ್ನಿರಿ.

ರಿಯಲ್‌ ಮಿ3

ರಿಯಲ್‌ ಮಿ3

ಕಡಿಮೆ ಅವಧಿಯಲ್ಲಿ ಗುರುತಿಸಿಕೊಂಡಿರುವ ರಿಯಲ್‌ ಮಿ ಕಂಪನಿಯ, ಇತ್ತೀಚಿನ ರಿಯಲ್‌ ಮಿ 3 ಸ್ಮಾರ್ಟ್‌ಫೋನ್‌ 6.2 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಬಾಹ್ಯದಲ್ಲಿ 3D ಡಿಸೈನ್‌ ಹೊಂದಿದೆ. ಇದರೊಂದಿಗೆ ಮೀಡಿಯಾ ಟೆಕ್ P70 SoC ಪ್ರೊಸೆಸರ್ ಈ ಫೋನಿನಲ್ಲಿ ಕಾರ್ಯನಿರ್ವಹಿಸಲಿದೆ. ಇದರ ಬೆಲೆಯು 8,999ರೂ.ಗಳು ಆಗಿದೆ.

ಶಿಯೋಮಿ ರೆಡ್ಮಿ ನೋಟ್ 7

ಶಿಯೋಮಿ ರೆಡ್ಮಿ ನೋಟ್ 7

ಶಿಯೋಮಿ ರೆಡ್ಮಿ ನೋಟ್7 ಸ್ಮಾರ್ಟ್‌ಫೋನ್‌ ಈಗಾಗಲೇ ಗ್ರಾಹಕರನ್ನು ಸೆಳೆದಿದ್ದು, 6.3 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದರೊಂದಿಗೆ ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್‌ ಅನ್ನು ಹೊಂದರಲ್ಲಿ ಕಾರ್ಯನಿರ್ವಹಿಸಲಿದ್ದು, 4,000mAh ಸಾಮರ್ಥ್ಯದ ಬ್ಯಾಟರಿ ಇದೆ. ಇ ಕಾಮರ್ಸ್‌ನಲ್ಲಿ ಸೆಕೆಂಡ್ ಸೇಲ್ ಇದೇ ಏಪ್ರಿಲ್ 3ರಂದು ಇದ್ದು, ಇದರ ಬೆಲೆಯು 9,999ರೂ.ಗಳು ಆಗಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ10

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ10

ಗುಣಮಟ್ಟದ ಉತ್ಪನ್ನಗಳಿಗೆ ಹೆಸರಾಗಿರುವ ಸ್ಯಾಮ್‌ಸಂಗ್‌ನ ಹೊಸ ಗ್ಯಾಲ್ಯಾಕ್ಸಿ ಎಂ10 ಸ್ಮಾರ್ಟ್‌ಫೋನ್ 6.2 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದರೊಂದಿಗೆ Exynos 7870 SoC ಪ್ರೊಸೆಸರ್‌ ಕಾರ್ಯನಿರ್ವಹಿಸಲಿದೆ. 3GB RAM ಮತ್ತು 3GB RAM ಮತ್ತು 32GB ಸಂಗ್ರಹ ಸಾಮರ್ಥ್ಯದ ವೇರಿಯಂಟ್ ಬೆಲೆಯು 8,990ರೂ.ಗಳು ಆಗಿದೆ.

ರೆಡ್ಮಿ ಗೋ

ರೆಡ್ಮಿ ಗೋ

1280 x 720 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದ 5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರುವ ಈ ಫೋನ್ ಸ್ನ್ಯಾಪ್‌ಡ್ರಾಗನ್ 425 SoC ಪ್ರೊಸೆಸರ್ ಕಾರ್ಯನಿರ್ವಹಿಸಲಿದೆ. 8GB ಆಂತರಿಕ ಸಂಗ್ರಹ ಸಾಮರ್ಥ್ಯದಲ್ಲಿದ್ದು, ಇದರೊಟ್ಟಿಗೆ 3,000mAh ಶಕ್ತಿಯ ಬ್ಯಾಟರಿ ಬಾಳಿಕೆ ಇರಲಿದೆ. ಇದರ ಬೆಲೆಯು 4499ರೂ.ಗಳು ಆಗಿದೆ.

ಶಿಯೋಮಿ ರೆಡ್ಮಿ 6A

ಶಿಯೋಮಿ ರೆಡ್ಮಿ 6A

5.45 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಕ್ವಾಡ್‌ಕೋರ್‌ ಮೀಡಿಯಾ ಟೆಕ್‌ ಪ್ರೊಸೆಸರ್‌ ಈ ಸ್ಮಾರ್ಟ್‌ಫೋನಿನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 3,000mAh ಸಾಮರ್ಥ್ಯದ ಬ್ಯಾಟರಿಯಿದ್ದು, ದೀರ್ಘಕಾಲ ಬಾಳಿಕೆ ಬರಲಿದೆ. ಇದರ ಬೆಲೆಯು 5,999ರೂ.ಗಳು ಆಗಿದೆ.

Best Mobiles in India

English summary
Best smartphones under Rs 10,000 to buy in March 2019.to know more visit to kannada.gizbot

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X