Home
ಮೊಬೈಲ್

ಜಸ್ಟ್‌ 10000ರೂ. ಒಳಗೆ ಖರೀದಿಗೆ ಲಭ್ಯ ಇರುವ ಅತ್ಯುತ್ತಮ ಮೊಬೈಲ್‌ಗಳು!

ಸದ್ಯ ಸ್ಮಾರ್ಟ್‌ಫೋನ್‌ ಡಿವೈಸ್‌ ಜನರಿಗೆ ಅಗತ್ಯ ಮತ್ತು ಅವಶ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಖರೀದಿದಾರರು ಅವರ ಬಜೆಟ್‌ಗೆ ಅನುಸಾರವಾಗಿ, ಅತ್ಯುತ್ತಮ ಮೊಬೈಲ್‌ ಅನ್ನು ಖರೀದಿ ಮಾಡಲು ಮುಂದಾಗುತ್ತಾರೆ. ಅನೇಕರು ಫೋನ್‌ ಖರೀದಿಸುವಾಗ ಅಗ್ಗದ ಬೆಲೆಯ ಜೊತೆ ಜೊತೆಗೆ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ, ಬ್ಯಾಟರಿ ಮತ್ತು ಕಾರ್ಯ ವೈಖರಿ ಅನ್ನು ಗಮನಿಸುತ್ತಾರೆ.

ಹೌದು, ಬಹುತೇಕ ಖರೀದಿದಾರರು ಸ್ಮಾರ್ಟ್‌ಫೋನ್‌ ಖರೀದಿಸುವಾಗ ಫೋನಿನ ಪ್ರೈಸ್‌ ಬಗ್ಗೆ ಗಮನ ನೀಡುತ್ತಾರೆ. ಹೆಚ್ಚಿನ ಫೋನ್‌ ಬಳಕೆ ಇಲ್ಲದ ಗ್ರಾಹಕರು ಕಡಿಮೆ ಬೆಲೆಯ ಅಂದರೆ ಸುಮಾರು 10000 ರೂ. ಗಳ ಒಳಗಿನ ಸ್ಮಾರ್ಟ್‌ಫೋನ್‌ ಖರೀದಿಗೆ ಮುಂದಾಗುತ್ತಾರೆ. ಅಂದಹಾಗೆ ಇತ್ತೀಚಿನ ಅಗ್ಗದ ಸ್ಮಾರ್ಟ್‌ ಫೋನ್‌ಗಳು ಆಕರ್ಷಕ ಫೀಚರ್ಸ್‌ಗಳಿಂದ ಖರೀದಿದಾರರ ಗಮನ ಸೆಳೆದಿವೆ. ಹಾಗಾದರೇ ಕಡಿಮೆ ದರದಲ್ಲಿ ಖರೀದಿಗೆ ಲಭ್ಯ ಇರುವ ಕೆಲವು ಸ್ಮಾರ್ಟ್‌ ಫೋನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಜಸ್ಟ್‌ 10000ರೂ. ಒಳಗೆ ಖರೀದಿಗೆ ಲಭ್ಯ ಇರುವ ಅತ್ಯುತ್ತಮ ಮೊಬೈಲ್‌ಗಳು!

ಲಾವಾ ಬ್ಲೇಜ್‌ 5G ಸ್ಮಾರ್ಟ್‌ಫೋನ್‌

ಲಾವಾ ಸಂಸ್ಥೆಯ ಲಾವಾ ಬ್ಲೇಜ್‌ 5G ಮೊಬೈಲ್‌ 6.65 ಇಂಚಿನ ಡಿಸ್‌ಪ್ಲೇ ರಚನೆ ಅನ್ನು ಪಡೆದುಕೊಂಡಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 700 ಆಕ್ಟಾ ಕೋರ್ ಪ್ರೊಸೆಸರ್ ಪವರ್‌ ಅನ್ನು ಸಹ ಪಡೆದುಕೊಂಡಿದೆ. ಅಲ್ಲದೇ ಇದು 6 GB RAM + 128GB ಸ್ಟೋರೇಜ್‌ ಆಯ್ಕೆಯನ್ನು ಸಹ ಪಡೆದುಕೊಂಡಿದೆ. ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಆಗಿದೆ. ಹಾಗೆಯೇ 5000 mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಇದು ಪಡೆದುಕೊಂಡಿದೆ.

ಪೊಕೊ M6 5G ಸ್ಮಾರ್ಟ್‌ಫೋನ್‌

ಪೊಕೊ M6 5G ಸ್ಮಾರ್ಟ್‌ಫೋನ್‌ 6.74 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಸೌಲಭ್ಯವನ್ನು ಒಳಗೊಂಡಿದೆ. ಹಾಗೆಯೇ ಈ ಡಿಸ್‌ಪ್ಲೇ 90Hz ರಿಫ್ರೆಶ್‌ ರೇಟ್‌ ಸಪೋರ್ಟ್ ಮಾಡಲಿದ್ದು, 600 nits ಗರಿಷ್ಠ ಬ್ರೈಟ್‌ನೆಸ್‌ ಹೊಂದಿದೆ. ಇನ್ನು ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್‌ ಪವರ್‌ ಅನ್ನು ಹೊಂದಿದ್ದು, ಇದು ಆಂಡ್ರಾಯ್ಡ್‌ 13 ಆಧಾರಿತ MIUI 14 ನಲ್ಲಿ ಕಾರ್ಯ ಮಾಡುತ್ತದೆ.

ಹಾಗೆಯೇ ಈ ಸ್ಮಾರ್ಟ್‌ಫೋನ್‌ 4GB RAM ಮತ್ತು 128 GB, 6GB RAM ಮತ್ತು 128 GB ಹಾಗೂ 8GB RAM ಮತ್ತು 256 GB ಸ್ಟೋರೇಜ್‌ ವೇರಿಯೆಂಟ್‌ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಅಲ್ಲದೇ ಈ ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 18W ಫಾಸ್ಟ್‌ ಚಾರ್ಜಿಂಗ್ ಅನ್ನು ಒಳಗೊಂಡಿದೆ. ಇದು ಡ್ಯುಯಲ್‌ ಕ್ಯಾಮೆರಾ ರಚನೆ ಸಹ ಪಡೆದುಕೊಂಡಿದೆ.

ಟೆಕ್ನೋ ಪಾಪ್‌ 9 5G ಸ್ಮಾರ್ಟ್‌ಫೋನ್‌

ಟೆಕ್ನೋ ಮೊಬೈಲ್‌ ಕಂಪನಿಯ ಇತ್ತೀಚಿಗಿನ ಫೋನ್‌ ಟೆಕ್ನೋ ಪಾಪ್‌ 9 5G ಸ್ಮಾರ್ಟ್‌ಫೋನ್‌ ಕೆಲವು ಆಕರ್ಷಕ ಫೀಚರ್ಸ್‌ ಮೂಲಕ ಗಮನ ಸೆಳದಿದೆ. ಈ ಫೋನ್‌ 6.67 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ರಚನೆ ಅನ್ನು ಪಡೆದುಕೊಂಡಿದೆ. ಹಾಗೆಯೇ ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ ಪವರ್‌ ಅನ್ನು ಸಹ ಪಡೆದುಕೊಂಡಿದೆ. ಅಲ್ಲದೇ ಇದು 4GB RAM + 128GB ಸ್ಟೋರೇಜ್‌ ಆಯ್ಕೆಯನ್ನು ಸಹ ಪಡೆದುಕೊಂಡಿದೆ. ಹಾಗೆಯೇ ಇದು 5000 mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಇದು ಪಡೆದುಕೊಂಡಿದ್ದು, ಇದರೊಂದಿಗೆ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಪಡೆದಿದೆ.

Best Mobiles in India

English summary
Best Smartphones Under Rs 10000 in December 2024. check phone list and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+