ಅಗ್ಗದ ಫೋನ್ ಬೇಕಾ? 7,000 ಒಳಗಿನ ಸೊಗಸಾದ ಸ್ಮಾರ್ಟ್‌ಫೋನ್‌ಗಳಿವು! ಇಲ್ಲಿದೆ ಪಟ್ಟಿ
ಈಗೇನಿದ್ದರೂ ಸ್ಮಾರ್ಟ್‌ಫೋನ್‌ಗಳು ಜಮಾನ. ಇದು ಗೊತ್ತಿರುವ ವಿಚಾರವೂ ಹೌದು. ಭಾರತವು ಅತಿದೊಡ್ಡ ಸ್ಮಾರ್ಟ್‌ಫೋನ್ (smartphones) ಮಾರುಕಟ್ಟೆಗಳಲ್ಲಿ ಒಂದಾಗಿದೆ. ಆರಂಭಿಕ ಹಂತದ ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ಪ್ರಮುಖ ಮಾದರಿಗಳವರೆಗೆ ಎಲ್ಲದಕ್ಕೂ ಬೇಡಿಕೆ ಇದೆ. ಆದರೆ, ಮಾರುಕಟ್ಟೆಯಲ್ಲಿ ಎಷ್ಟೇ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾದರೂ, ಅಗ್ಗದ ಮೊಬೈಲ್‌ಗಳ ಅವಶ್ಯಕತೆ ಇದೆ. ಶಾಲಾ ಮಕ್ಕಳಿಗೆ ಆನ್‌ಲೈನ್ ತರಗತಿಗಳಾಗಲಿ ಅಥವಾ ಮನೆಯಲ್ಲಿ ವೃದ್ಧರಿಗೆ ಫೋನ್ ಖರೀದಿಸುವುದಾಗಲಿ, ಹೆಚ್ಚಿನ ಜನರು ಅಗ್ಗದ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಫೋನ್‌ಗಳನ್ನು ಬಯಸುತ್ತಾರೆ. ನಾವು ಈ ಲೇಖನದಲ್ಲಿ 7,000 ರೂ. ಗಿಂತ ಕಡಿಮೆ ಬೆಲೆಯ ಫೋನ್‌ಗಳ ಬಗ್ಗೆ ತಿಳಿಸಿದ್ದೇನೆ.
ಹೌದು, 7000 ರೂ.ಗಿಂತ ಕಡಿಮೆ ಬೆಲೆಯ ಫೋನ್‌ಗಳನ್ನು ಹುಡುಕುತ್ತಿದ್ದರೆ, ಈ ಲೇಖನ ನಿಮಗೆ ಉಪಯುಕ್ತವಾಗಬಹುದು. ಪ್ರಸ್ತುತ, ಇನ್ಫಿನಿಕ್ಸ್, ಮೊಟೊರೊಲಾ, ಐಟೆಲ್, ವಿವೊ, ಲಾವಾ ಮತ್ತು ಇನ್ನೂ ಹೆಚ್ಚಿನ ಕಂಪನಿಗಳು ಭಾರತದಲ್ಲಿ 7,000 ರೂ.ಗಿಂತ (Smartphones Under 7000 in India) ಕಡಿಮೆ ಬೆಲೆಯಲ್ಲಿ ಮೊಬೈಲ್‌ಗಳನ್ನು ಬಿಡುಗಡೆ ಮಾಡಿವೆ. ಈ ಪಟ್ಟಿಯಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್ 9 HD, ಮೊಟೊ G05, ಐಟೆಲ್ A80, ಲಾವಾ O3 ಪ್ರೊ ಮತ್ತು ವಿವೋ Y18i ಸ್ಮಾರ್ಟ್‌ಫೋನ್‌ಗಳು ಸೇರಿವೆ. ಈ ಫೋನ್‌ಗಳ ಬೆಲೆ ಮತ್ತು ವಿಶೇಷತೆಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

7000 ರೂ.ಗಿಂತ ಕಡಿಮೆ ಬೆಲೆಯ ಫೋನ್‌ಗಳಿವು
ಇನ್ಫಿನಿಕ್ಸ್ ಸ್ಮಾರ್ಟ್ 9 HD: 6,699 ರೂ.
ಇನ್ಫಿನಿಕ್ಸ್ ಸ್ಮಾರ್ಟ್ 9 HD (Infinix Smart 9 HD) ಫೋನ್ ಈ ವರ್ಷ (2025) ಜನವರಿ 28 ರಂದು ಬಿಡುಗಡೆ ಮಾಡಲಾಗಿದೆ. ಇದರ ಬೆಲೆ 6,699 ರೂ. ಆಗಿದೆ. ಇದು ಈ ಬೆಲೆ ವಿಭಾಗದಲ್ಲಿ ಇತ್ತೀಚಿನ ಫೋನ್ ಆಗಿದೆ. ಇದು ಮೀಡಿಯಾ ಟೆಕ್ ಹೆಲಿಯೊ G50 ಪ್ರೊಸೆಸರ್ ಹೊಂದಿದೆ. 3GB RAM + 3GB ವಿಸ್ತೃತ RAM ಹೊಂದಿದೆ. ಹಾಗೆಯೇ 64GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ. ಈ ಮೊಬೈಲ್ 90Hz ರಿಫ್ರೆಶ್ ದರದೊಂದಿಗೆ 6.7 ಇಂಚಿನ HD+ ಡಿಸ್ಪ್ಲೇ ಹೊಂದಿದೆ. ಈ ಫೋನಿನಲ್ಲಿ 13 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆ ಇದೆ. ಈ ಇನ್ಫಿನಿಕ್ಸ್ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ.
ಮೋಟೊ G05: 6,999 ರೂ.
ಮೋಟೊ G05 (Moto G05) ಸ್ಮಾರ್ಟ್‌ಫೋನ್ ಸಹ ಈ ವರ್ಷ (2025) ಜನವರಿ 7 ರಂದು ಬಿಡುಗಡೆ ಆಗಿದೆ. ಈ ಫೋನ್ 4GB RAM + 64GB ಸ್ಟೋರೇಜ್ ಆಯ್ಕೆ ಹೊಂದಿದೆ. ಇದರ ಬೆಲೆ 6,999 ರೂ. ಆಗಿದೆ. ಈ ಮೊಬೈಲ್ ಮೀಡಿಯಾ ಟೆಕ್ ಹೆಲಿಯೊ G81 ಎಕ್ಸ್‌ಟ್ರೀಮ್ ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಇದು 90Hz ರಿಫ್ರೆಶ್ ದರದೊಂದಿಗೆ 6.67 ಇಂಚಿನ HD+ ಡಿಸ್ಪ್ಲೇ ಹೊಂದಿದೆ. ಈ ಮೊಬೈಲ್ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಈ ಅಗ್ಗದ ಫೋನ್ 5200mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಇದನ್ನು ಚಾರ್ಜ್ ಮಾಡಲು, 18W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ಈ ಸುದ್ದಿ ಓದಿದ್ದೀರಾ?: ಸಿಹಿಸುದ್ದಿ! ಬಂತು ಹೊಸ SwaRail ಆಪ್.. ಒಂದೇ ಆಪ್‌ನಲ್ಲಿ ಸಿಗುತ್ತೆ ಎಲ್ಲ ಸೇವೆ.. ಹೀಗೆ ಡೌನ್‌ಲೋಡ್ ಮಾಡಿ
ಐಟೆಲ್ A80: 6,699 ರೂ.
ಐಟೆಲ್ A80 (itel A80) ಸ್ಮಾರ್ಟ್‌ಫೋನ್ ಜನವರಿ 6, 2025 ರಂದು ಭಾರತದಲ್ಲಿ ಬಿಡುಗಡೆ ಆಗಿದೆ. ಇದರ ಬೆಲೆ 6,699 ರೂ. ಆಗಿದೆ. ಇದು ಯುನಿಸಾಕ್ T603 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಇದು 8GB RAM (4GB+4GB) ಜೊತೆಗೆ ಬರುತ್ತದೆ. ಈ ಮೊಬೈಲ್ ಆಂಡ್ರಾಯ್ಡ್ 14 ಗೋ ಓಎಸ್‌ನಲ್ಲಿ ಕೆಲಸ ಮಾಡುತ್ತದೆ. ಈ ಅಗ್ಗದ ಫೋನ್ 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಜೊತೆಗೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ಈ ಐಟೆಲ್ A80 ಮೊಬೈಲ್ 5000mAh ಬ್ಯಾಟರಿ ಮತ್ತು 10W ಚಾರ್ಜಿಂಗ್ ಸೌಲಭ್ಯ ಹೊಂದಿದೆ. ಈ ಫೋನಿನಲ್ಲಿ 6.67 ಇಂಚಿನ ದೊಡ್ಡ ಡಿಸ್ಪ್ಲೇ ಲಭ್ಯವಿದೆ. ಇದು 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ.
ಲಾವಾ O3 ಪ್ರೊ: 6,999 ರೂ.
ಲಾವಾ O3 ಪ್ರೊ (Lava O3 Pro) ಸ್ಮಾರ್ಟ್‌ಫೋನ್ 2024ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿದೆ. ಇದರ ಬೆಲೆ 6,999 ರೂ. ಆಗಿದೆ. ಈ ಮೊಬೈಲ್ 4GB RAM ಹೊಂದಿದೆ. ಜೊತೆಗೆ 4GB ವರ್ಚುವಲ್ RAM ಜೊತೆಗೆ ಬರುತ್ತದೆ. ಇದು ಯುನಿಸಾಕ್ T606 ಆಕ್ಟಾಕೋರ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಲಾವಾ O3 ಪ್ರೊ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ಈ ಮೊಬೈಲ್ 5000mAh ಬ್ಯಾಟರಿ ಹೊಂದಿದೆ. ಇದನ್ನು ಚಾರ್ಜ್ ಮಾಡಲು, 10W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ವಿವೋ Y18i: 7,999 ರೂ.
ವಿವೋ Y18i (vivo Y18i) ಫೋನನ್ನು 2024ರ ಜುಲೈ ತಿಂಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಬೆಲೆ ಕೇವಲ 7,999 ರೂ. ಆಗಿದೆ. ಈ ಮೊಬೈಲ್ 4GB ವರ್ಚುವಲ್ RAM ಜೊತೆಗೆ 4GB ಭೌತಿಕ RAM ಸಹ ಹೊಂದಿದೆ. ಈ ಫೋನ್ 64GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ. ಇದು ಯುನಿಸಾಕ್ ಟೈಗರ್ T612 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ವಿವೋ ಮೊಬೈಲ್ 13 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 6.56 ಇಂಚಿನ ದೊಡ್ಡ ಡಿಸ್ಪ್ಲೇ, 5000mAh ಬ್ಯಾಟರಿಯನ್ನು ಒಳಗೊಂಡಿದೆ.


Click it and Unblock the Notifications








