ವಿವೋ ಮೊಬೈಲ್ ಖರೀದಿಸುವ ಗ್ರಾಹಕರೇ, ಇಲ್ಲಿ ಒಮ್ಮೆ ಗಮನಿಸಿ!
ಜನಪ್ರಿಯ ಮೊಬೈಲ್ ಬ್ರ್ಯಾಂಡ್‌ಗಳ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿರುವ ವಿವೋ (Vivo) ಸಂಸ್ಥೆಯು ಮಾರುಕಟ್ಟೆಯಲ್ಲಿ ಹಲವು ಭಿನ್ನ ಶ್ರೇಣಿಯ ಮೊಬೈಲ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಪ್ರಮುಖವಾಗಿ ವಿವೋ ಸಂಸ್ಥೆಯು ಬಜೆಟ್ ಬೆಲೆಯ ಹಾಗೂ ಮೀಡ್‌ರೇಂಜ್ ದರದ ಮೊಬೈಲ್‌ಗಳು ಅಧಿಕ ಡಿಮ್ಯಾಂಡ್ ಪಡೆದಿವೆ. ಅದರಲ್ಲಿಯೂ ಇತ್ತೀಚಿನ ಕೆಲವು ಫೋನ್‌ಗಳು ಗ್ರಾಹಕರು OMG ಎನ್ನುವಂತಹ ಡಿಸೈನ್ ಪಡೆದಿದ್ದು, ಫೀಚರ್ಸ್ ಮೂಲಕವೂ ಗಮನ ಸೆಳದಿವೆ.
ಹೌದು, ವಿವೋ ಸಂಸ್ಥೆಯು ಭಿನ್ನ ರೇಂಜ್‌ನ ಮೊಬೈಲ್‌ಗಳ ಆಯ್ಕೆ ಪಡೆದುಕೊಂಡಿದೆ. ಆ ಪೈಕಿ ಇತ್ತೀಚಿನ ವಿವೋ T ಸರಣಿಯ ಸ್ಮಾರ್ಟ್‌ಫೋನ್‌ಗಳು ಬಜೆಟ್ ಪ್ರೈಸ್ ಟ್ಯಾಗ್‌ನಲ್ಲಿ ಹೆಚ್ಚು ಆಕರ್ಷಕ ಎನಿಸಿವೆ. ಅಂದಹಾಗೆ ಈ ಸರಣಿಯ ಮೊಬೈಲ್‌ಗಳು ಡಿಸ್‌ಪ್ಲೇ, ಬ್ಯಾಟರಿ, ಪ್ರೊಸೆಸರ್ ಹಾಗೂ ಇತರೆ ಆಕರ್ಷಕ ಫೀಚರ್ಸ್‌ಗಳನ್ನು ಪಡೆದಿರುವುದು ಹೈಲೈಟ್ ಎನಿಸಿದೆ. ಹಾಗಾದರೆ ಜನಪ್ರಿಯತೆ ಪಡೆದ ವಿವೋದ ಮೊಬೈಲ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿವೋ T3 ಪ್ರೊ 5G - ಮೊಬೈಲ್
ವಿವೋ T3 ಪ್ರೊ 5G (vivo T3 Pro) ಮೊಬೈಲ್ 6.67 ಇಂಚಿನ 3D ಕರ್ವ್ಡ್ ಅಮೋಲೆಡ್ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದ್ದು, ಇದು 2400 × 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಅಲ್ಲದೇ ಈ ಫೋನ್ ಸ್ನಾಪ್‌ಡ್ರಾಗನ್ 7 ಜೆನ್ 3 SoC ಪ್ರೊಸೆಸರ್ ಪವರ್‌ನಲ್ಲಿ ಕೆಲಸ ನಿರ್ವಹಿಸಲಿದೆ.
ಅಲ್ಲದೇ ವಿವೋ T3 ಪ್ರೊ 5G ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಜೊತೆಗೆ 5500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಸಹ ಪಡೆದುಕೊಂಡಿದ್ದು, ಇದಕ್ಕೆ ಅನುಗುಣವಾಗಿ 80W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಸಹ ಇದೆ.
ವಿವೋ T3 ಅಲ್ಟ್ರಾ ಮೊಬೈಲ್
ವಿವೋ T3 ಅಲ್ಟ್ರಾ (vivo T3 Ultra) ಮೊಬೈಲ್ 6.78 ಇಂಚಿನ 3D ಕರ್ವ್ ಹೆಚ್‌ಡಿ+ ಅಮೋಲೆಡ್ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದು 2800 x 1260 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಅಲ್ಲದೇ ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 9200+ SoC ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ.
ಹಾಗೆಯೇ ವಿವೋ T3 ಅಲ್ಟ್ರಾ ಫೋನ್ ಎರಡು ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಜೊತೆಗೆ ಈ ಮೊಬೈಲ್ 5500 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಸಹ ಪಡೆದಿದ್ದು, ಇದಕ್ಕೆ ಅನುಗುಣವಾಗಿ 80W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಸಹ ಇದೆ.
ವಿವೋ T3 ಲೈಟ್ 5G - ಮೊಬೈಲ್
ವಿವೋ T3 ಲೈಟ್ 5G (vivo T3 Lite) ಮೊಬೈಲ್ 6.56 ಇಂಚಿನ ಫುಲ್ ಹೆಚ್‌ಡಿ+ ಅಮೋಲೆಡ್ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದ್ದು, ಇದು 2400 × 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಅಲ್ಲದೇ ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ.
ಹಾಗೆಯೇ ವಿವೋ T3 ಲೈಟ್ 5G ಫೋನ್ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಫಸ್ಟ್ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಜೊತೆಗೆ ಈ ಮೊಬೈಲ್ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಸಹ ಪಡೆದಿದ್ದು, ಇದಕ್ಕೆ ಅನುಗುಣವಾಗಿ 15W ಫಾಸ್ಟ್ ಚಾರ್ಜಿಂಗ್ ಬೆಂಬಲ ಸಹ ಇದೆ.


Click it and Unblock the Notifications








