ಎಂಟ್ರಿ ಕೊಡಲಿದೆ ಬಹುನಿರೀಕ್ಷಿತ ಶಿಯೋಮಿ 'ಬ್ಲ್ಯಾಕ್ ಶಾರ್ಕ್‌ 2' ಗೇಮಿಂಗ್ ಸ್ಮಾರ್ಟ್‌ಪೋನ್.!

|

ಯಾವುದೇ ಅಡೆತಡೆ ಇಲ್ಲದೇ ಸ್ಮಾರ್ಟ್‌ಫೋನ್‌ಗಳಲ್ಲಿ ಗೇಮ್ಸ್‌ ಆಡಲು ಇದೀಗ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಆಕರ್ಷಕ ಆಗುತ್ತಿದ್ದು, ಪ್ರಮುಖ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿಗಳು ಗೇಮಿಂಗ್ ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಲು ಮುಂದಾಗಿವೆ. ಇತ್ತೀಚಿಗೆ ವೀವೊ iQOO ಗೇಮಿಂಗ್ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಿ ಸುದ್ದಿ ಮಾಡಿತ್ತು. ಇದೀಗ ಶಿಯೋಮಿ ಗೇಮಿಂಗ್ ಸ್ಮಾರ್ಟ್‌ಫೋನ್ ಗ್ರ್ಯಾಂಡ್‌ ಎಂಟ್ರಿ ಕೊಡಲಿದೆ.

ಎಂಟ್ರಿ ಕೊಡಲಿದೆ ಬಹುನಿರೀಕ್ಷಿತ ಶಿಯೋಮಿ 'ಬ್ಲ್ಯಾಕ್ ಶಾರ್ಕ್‌ 2' ಸ್ಮಾರ್ಟ್‌ಪೋನ್!

ಹೌದು, ಶಿಯೋಮಿ ಕಂಪನಿಯ 'ಬ್ಲ್ಯಾಕ್ ಶಾರ್ಕ್‌ 2' ಹೆಸರಿನ ಗೇಮಿಂಗ್ ಸ್ಮಾರ್ಟ್‌ಫೋನ್‌ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದ್ದು, ಮೊದಲು ಚೀನಾ ಮಾರುಕಟ್ಟೆಯಲ್ಲಿ ಪ್ರವೇಶ ಪಡೆಯಲಿದೆ. ನಂತರ ಯುರೋಪ್ ಮತ್ತು ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ವೀವೋ iQOO ಗೇಮಿಂಗ್ ಸ್ಮಾರ್ಟ್‌ಫೋನಿಗೆ ಪ್ರಬಲ ಎದುರಾಳಿ ಆಗಲಿದ್ದು, ಗೇಮ್ಸ್ ಪ್ರಿಯರಿಗೆ ಗೇಮಿಂಗ್‌ನ ರೋಚಕ ಅನುಭೂತಿ ನೀಡಲಿದೆ.

ಎಂಟ್ರಿ ಕೊಡಲಿದೆ ಬಹುನಿರೀಕ್ಷಿತ ಶಿಯೋಮಿ 'ಬ್ಲ್ಯಾಕ್ ಶಾರ್ಕ್‌ 2' ಸ್ಮಾರ್ಟ್‌ಪೋನ್!

ಈ ಗೇಮಿಂಗ್ ಸ್ಮಾರ್ಟ್‌ಫೋನ್ 12GB RAM ಸಾಮರ್ಥ್ಯವನ್ನು ಹೊಂದಿರಲಿದ್ದು, ಗೇಮ್ಸ್‌ ಆಡುವಾಗ ಸ್ಮಾರ್ಟ್‌ಫೋನ್ ಹೆಚ್ಚು ಬಿಸಿ ಆಗುವುದನ್ನು ತಡೆಯಲು 'ಲಿಕ್ವಿಡ್‌ ಕೂಲ್ 3.0' ಕೂಲಿಂಗ್ ತಂತ್ರಜ್ಞಾನವನ್ನು ಒಳಗೊಂಡಿರಲಿದೆ ಎನ್ನಲಾಗುತ್ತಿದೆ. ಹಾಗಾದರೇ ಶಿಯೋಮಿ 'ಬ್ಲ್ಯಾಕ್ ಶಾರ್ಕ್‌ 2' ಗೇಮಿಂಗ್ ಸ್ಮಾರ್ಟ್‌ಫೋನ್ ಇತರೆ ಏನೆಲ್ಲಾ ಗೇಮಿಂಗ್ ಫೀಚರ್ಸ್‌ಗಳನ್ನು ಒಳಗೊಂಡು ಬರಲಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಗೇಮಿಂಗ್ ಶಕ್ತಿ

ಗೇಮಿಂಗ್ ಶಕ್ತಿ

ಅಧಿಕ ಡೇಟಾ ನಿರೀಕ್ಷಿಸುವ ಅತ್ಯುನ್ನತ ಗೇಮ್ಸ್‌ಗಳು ಮತ್ತು ಆನ್‌ಲೈನ್ ಲೈವ್‌ ಆಡುವ ಗೇಮ್ಸ್‌ ಸರಾಗವಾಗಿ ಆಡಲು ಹೆಚ್ಚಿನ ಆಂತರಿಕ ಶಕ್ತಿಯನ್ನು (RAM) ಬೇಡುತ್ತದೆ. ಇದರಿಂದ ಆಟವಾಡುವಾಗ ಯಾವುದೇ ಅಡೆತಡೆಗಳು ಕಾಣಿಸುವುದಿಲ್ಲ. ಹೀಗಾಗಿ ಗೇಮಿಂಗ್ ಸ್ಮಾರ್ಟ್‌ಫೋನಗಳ ಮೊದಲ ಆದ್ಯತೆ ಆಂತರಿಕ ಶಕ್ತಿ ಒದಗಿಸುವುದು ಮತ್ತು ಪ್ರೊಸೆಸರ್ ಸಾಮರ್ಥ್ಯವನ್ನು ನೀಡುವುದು.

ಹೈ ಸ್ಪೀಡ್‌ RAM

ಹೈ ಸ್ಪೀಡ್‌ RAM

ಶಿಯೋಮಿ ಬ್ಲ್ಯಾಕ್ ಶಾರ್ಕ್‌ 2 ಗೇಮಿಂಗ್ ಸ್ಮಾರ್ಟ್‌ಫೋನ್ ಸುಮಾರು 12GB RAM ಸಾಮರ್ಥ್ಯವನ್ನು ಹೊಂದಿರಲಿದ್ದು, ಆಂತರಿಕ ಸಂಗ್ರಹಕ್ಕಾಗಿ 128GB ಸಾಮರ್ಥ್ಯದ ಸ್ಥಳಾವಕಾಶವನ್ನು ಒದಗಿಸಲಾಗುವುದು. ಇದರೊಂದಿಗೆ ಸ್ನ್ಯಾಪ್‌ಡ್ರಾಗನ್ 855 soc ಸಾಮರ್ಥ್ಯದ ಪ್ರೊಸೆಸರ್‌ ಅನ್ನು ಸಹ ಒಳಗೊಂಡಿರಲಿದೆ ಎಂದು ಹೇಳಲಾಗುತ್ತಿದೆ.

ಕೂಲಿಂಗ್ ತಂತ್ರಜ್ಞಾನ

ಕೂಲಿಂಗ್ ತಂತ್ರಜ್ಞಾನ

ಸ್ಮಾರ್ಟ್‌ಫೋನ್‌ಗಳಲ್ಲಿ ಗೇಮ್ಸ್‌ ಆಡುವುದರಿಂದ ಫೋನ್‌ಗಳು ಬಿಸಿ ಆಗುತ್ತವೆ ಆದರೆ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳಲ್ಲಿ ಈ ರೀತಿ ಹೆಚ್ಚು ಬಿಸಿ ಆಗದಂತೆ ತಡೆಯಲು ತಂತ್ರಜ್ಞಾನ ಬಳಸುತ್ತಾರೆ. ಶಿಯೋಮಿಯ ಬ್ಲ್ಯಾಕ್ ಶಾರ್ಕ್‌ 2 ಗೇಮಿಂಗ್ ಸ್ಮಾರ್ಟ್‌ಫೋನ್‌ನಲ್ಲಿ 'ಲಿಕ್ವಿಡ್‌ ಕೂಲ್ 3.0' ಟೆಕ್ನಾಲಜಿ ನೀಡಲಾಗಿದ್ದು, ಇದು ಗೇಮ್ಸ್‌ ಆಡುವಾಗ ಫೋನ್ ಹೆಚ್ಚು ಬಿಸಿ ಆಗುವುದನ್ನು ತಡೆಯುತ್ತದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ಬ್ಲ್ಯಾಕ್ ಶಾರ್ಕ್‌ 2 ಗೇಮಿಂಗ್ ಸ್ಮಾರ್ಟ್‌ಫೋನ್ 1080 x 2160 ಪಿಕ್ಸಲ್ ರೆಸಲ್ಯೂಶನ್ ಹೊಂದಿರುವ 6.01 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಆಡ್ರಿಯೋ 630 ಗ್ರಾಫಿಕ್ ಸಹ ಒಳಗೊಂಡಿರಲಿದೆ ಎನ್ನಲಾಗುತ್ತಿದೆ. ಪೋನ್‌ ಬಾಹ್ಯ ಬಾಡಿಯಿಂದ ಡಿಸ್‌ಪ್ಲೇ ನಡುವಿನ ಅನುಪಾತ ಶೇ. 77.47% ಆಗಿದೆ.

ಕ್ಯಾಮೆರಾ

ಕ್ಯಾಮೆರಾ

ಹಿಂಬದಿಯಲ್ಲಿ ಎರಡು ಕ್ಯಾಮೆರಾಗಳನ್ನು ಒಳಗೊಂಡಿರಲಿದ್ದು, ಮೊದಲ ಕ್ಯಾಮೆರಾ 12 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದ್ದರೇ, ಸೆಕೆಂಡರಿ ಕ್ಯಾಮೆರಾ 20 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿರಲಿದೆ ಎನ್ನಲಾಗುತ್ತಿದೆ. ಸೆಲ್ಫಿಗಾಗಿ 20 ಮೆಗಾಪಿಕ್ಸಲ್ ಕ್ಯಾಮೆರಾವನ್ನು ನೀಡಲಾಗಿರಲಿದೆ ಎಂದು ತಿಳಿದುಬಂದಿದೆ.

ಬ್ಯಾಟರಿ

ಬ್ಯಾಟರಿ

ಶಿಯೋಮಿ ಬ್ಲ್ಯಾಕ್ ಶಾರ್ಕ್‌ 2 ಗೇಮಿಂಗ್ ಸ್ಮಾರ್ಟ್‌ಫೋನ್ 4000 mAh ಸಾಮರ್ಥ್ಯ ದೀರ್ಘಬಾಳಿಕೆಯ ಬ್ಯಾಟರಿಯನ್ನು ಹೊಂದಿರಲಿದ್ದು, ಇದರೊಂದಿಗೆ v3.0 ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿ ಇರಲಿದ್ದು, ವೇಗದ ಚಾರ್ಜಿಂಗ್ ಸೌಲಭ್ಯ ದೊರೆಲಿದೆ ಎನ್ನಲಾಗುತ್ತಿದೆ.

ಲಭ್ಯತೆ

ಲಭ್ಯತೆ

ಇದೇ ಮಾರ್ಚ್‌ 18 ರಂದು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿರು 'ಶಿಯೋಮಿ ಬ್ಲ್ಯಾಕ್ ಶಾರ್ಕ್‌ 2' ಗೇಮಿಂಗ್ ಸ್ಮಾರ್ಟ್‌ಫೋನ್ ಶೀಘ್ರದಲ್ಲಿಯೇ ಭಾರತ ಮತ್ತು ಯುರೋಪ್ ಮಾರುಕಟ್ಟೆಗಳಿಗೂ ಪ್ರವೇಶ ನೀಡಲಿದೆ.

Best Mobiles in India

English summary
Xiaomi’s Black Shark 2 gaming phone will be unveiled on March 18.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X