Subscribe to Gizbot

ಏಪ್ರಿಲ್ 13ಕ್ಕೆ ಶಿಯೋಮಿ ಬ್ಲಾಕ್ ಶಾರ್ಕ್ ಸ್ಮಾರ್ಟ್‌ಫೋನ್ ಲಾಂಚ್‌...!

Written By:

ಮಾರುಕಟ್ಟೆಗೆ ಮೊನ್ನೇ ತಾನೇ ಹೊಸ ಸ್ಮಾರ್ಟ್‌ ಟಿವಿಯೊಂದನ್ನು ಲಾಂಚ್ ಮಾಡಿದ್ದ ಶಿಯೋಮಿ, ಮತ್ತೊಂದು ಗೇಮಿಂಗ್ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಲು ಮುಂದಾಗಿದ್ದು, ಇದೇ ಏಪ್ರಿಲ್ 13ರಂದು ಚೀನಾದಲ್ಲಿ ಶಿಯೋಮಿ, ಬ್ಲಾಕ್ ಶಾರ್ಕ್ ಗೇಮಿಂಗ್ ಸ್ಮಾರ್ಟ್ಫೋನ್ ಅನ್ನು ಲಾಂಚ್ ಮಾಡಲಿದೆ ಎನ್ನಲಾಗಿದ್ದು, ಈ ಸ್ಮಾರ್ಟ್ ಫೋನ್ ಕುರಿತಂತೆ ಸಾಕಷ್ಟು ನಿರೀಕ್ಷೆಗಳಿದೆ.

ಏಪ್ರಿಲ್ 13ಕ್ಕೆ ಶಿಯೋಮಿ ಬ್ಲಾಕ್ ಶಾರ್ಕ್ ಸ್ಮಾರ್ಟ್‌ಫೋನ್ ಲಾಂಚ್‌...!

ಬ್ಲಾಕ್ಸ್ ಶಾರ್ಕ್ ಕಂಪನಿಯೂ ಶಿಯೋಮಿ ಒಡೆತನಕ್ಕೆ ಸೇರಿದ್ದು, ಇದೇ ಮೊದಲ ಬಾರಿಗೆ ಗೇಮಿಂಗ್ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದೆ. ಮೂಲಗಳ ಪ್ರಕಾರ ಏಪ್ರಿಲ್ 13ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಸ್ಮಾರ್ಟ್‌ಫೋನ್ ಲಾಂಚ್ ಆಗಲಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್ ಹೆಚ್ಚಿನ ಸದ್ದು ಮಾಡುವ ಸಾಧ್ಯತೆಗಳಿದೆ.

ಬ್ಲಾಕ್ ಶಾರ್ಕ್ ಸ್ಮಾರ್ಟ್‌ಫೋನ್ ಒಟ್ಟು ಎರಡು ಆವೃತ್ತಿಯಲ್ಲಿ ದೊರೆಯಲಿದೆ ಎನ್ನಲಾಗಿದ್ದು, 6GB RAM ಮತ್ತು 128GB ಇಂಟರ್ನಲ್ ಮೆಮೊರಿಯಲ್ಲಿ ಹಾಗೂ 8GB RAM ಮತ್ತು 256GB ಇಂಟರ್ನಲ್ ಮೆಮೊರಿಯೊಂದಿಗೆ ಮಾರಾಟವಾಗಲಿದೆ. ಅಲ್ಲದೇ ಈ ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚುವರಿ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಓದಿರಿ: ಆಂಡ್ರಾಯ್ಡ್ ಫೋನಿನಲ್ಲಿ ಸ್ಲೋ ಮೋಷನ್ ವೀಡಿಯೊ ರೆಕಾರ್ಡ್ ಮಾಡುವುದು ಹೇಗೆ..?

ಬ್ಲಾಕ್ ಶಾರ್ಕ್ ಸ್ಮಾರ್ಟ್‌ಫೋನ್ ನಲ್ಲಿ ಸ್ನಾಪ್‌ಡ್ರಾಗನ್ 845 ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, ಆಂಡ್ರಾಯ್ಡ್ 8.0ದಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೇ FHD+ ಗುಣಮಟ್ಟದ ಡಿಸ್‌ಪ್ಲೇ ಈ ಸ್ಮಾರ್ಟ್‌ಫೋನಿನಲ್ಲಿದ್ದು, 18:9 ಅನುಪಾತದ ಡಿಸ್‌ಪ್ಲೇಯನ್ನು ಇರಲಿದೆ. ವೇಗದ ಚಾರ್ಜಿಂಗ್ ಗಾಗಿ ಕ್ವಿಕ್ ಚಾರ್ಜರ್ ಆಯ್ಕೆಯೂ ಇದರಲ್ಲಿದೆ.

ಭಾರತದಲ್ಲಿಯೂ ಈ ಸ್ಮಾರ್ಟ್‌ಫೋನ್ ಲಾಂಚ್ ಆಗಲಿದ್ದು, ಶಿಯೋಮಿಗೆ ಚೀನಾವನ್ನು ಬಿಟ್ಟರೇ ಭಾರತವೇ ಅತೀ ದೊಡ್ಡ ಮಾರಕಟ್ಟೆಯಾಗಿದೆ. ಈ ಹಿನ್ನಲೆಯಲ್ಲಿ ಬ್ಲಾಕ್ ಶಾರ್ಕ್ ಶೀಘ್ರವೇ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಈ ಸ್ಮಾರ್ಟ್‌ಫೋನ್ ವಿನ್ಯಾಸವು ಉತ್ತಮವಾಗಿರಲಿದ್ದು, ಬಳಕೆದಾರರಿಗೆ ಉತ್ತಮ ಗೇಮಿಂಗ್ ಅನುಭವನ್ನು ನೀಡುವಂತೆ ವಿನ್ಯಾಸ ಮಾಡಲಾಗಿದೆ.

English summary
Black Shark gaming smartphone from Xiaomi set to launch on April 13. to know more visit kannda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot