ಆಂಡ್ರಾಯ್ಡ್ ಫೋನಿನಲ್ಲಿ ಸ್ಲೋ ಮೋಷನ್ ವೀಡಿಯೊ ರೆಕಾರ್ಡ್ ಮಾಡುವುದು ಹೇಗೆ..?

|

ಇಂದಿನ ದಿನದಲ್ಲಿ ಸ್ಲೋ ಮೋಷನ್ ವೀಡಿಯೊ ರೆಕಾರ್ಡಿಂಗ್ ಸಾಕಷ್ಟು ಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ. ಆಪಲ್ ಐಫೋನ್ ಮತ್ತು ಟಾಪ್ ಆಂಡ್ರಾಯ್ಡ್ ಫೋನ್ ಗಳಲ್ಲಿ ಮಾತ್ರವೇ ಈ ಆಯ್ಕೆಯನ್ನು ಕಾಣಬಹುದಾಗಿದೆ. ಆದರೆ ಸಾಮಾನ್ಯ ಆಂಡ್ರಾಯ್ಡ್ ಫೋನ್‌ಗಳಲ್ಲಿ ಈ ಆಯ್ಕೆಯನ್ನು ನೋಡಲು ಸಾಧ್ಯವಿಲ್ಲ. ಹಾಗಾಗಿ ಸಾಮಾನ್ಯ ಫೋನಿನಲ್ಲಿಯೂ ಸ್ಲೋ ಮೋಷನ್ ವೀಡಿಯೊ ರೆಕಾರ್ಡ್ ಮಾಡುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

 ಆಂಡ್ರಾಯ್ಡ್ ಫೋನಿನಲ್ಲಿ ಸ್ಲೋ ಮೋಷನ್ ವೀಡಿಯೊ ರೆಕಾರ್ಡ್ ಮಾಡುವುದು ಹೇಗೆ..?

ನಿಮ್ಮ ಸಾಮಾನ್ಯ ಆಂಡ್ರಾಯ್ಡ್ ಫೋನಿನಲ್ಲಿಯೂ ನೀವು ಸ್ಲೋ ಮೋಷನ್ ವೀಡಿಯೊವನ್ನು ರೆಕಾರ್ಡ್ ಮಾಡಬೇಕಾಗಿದರೆ ನೀವು ಪ್ಲೇ ಸ್ಟೋರಿನಲ್ಲಿ ಲಭ್ಯವಿರುವ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿದೆ. ಈ ಹಿನ್ನಲೆಯಲ್ಲಿ ನಿಮ್ಮ ಸ್ಮಾರ್ಟ್‌ಫೋನಿಗೆ ಸೆಟ್ ಆಗುವಂತಹ ಕೆಲವು ಆಪ್‌ಗಳ ಪರಿಚಯವು ಮುಂದಿದೆ.

Slow Motion Video FX

Slow Motion Video FX

ಪ್ಲೇ ಸ್ಟೋರಿನಲ್ಲಿ ದೊರೆಯುತ್ತಿರುವ ಸ್ಲೋ ಮೋಷನ್ ವೀಡಿಯೊ FX ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡಲ್ಲಿ ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸುಲಭವಾಗಿ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದಾಗಿದೆ. ಅಲ್ಲದೇ ಈ ಆಪ್ ಬಳಕೆಯೂ ಉಚಿತವಾಗಿದೆ.

SloPro

SloPro

ಈ ಆಪ್ ಸಹ ಉಚಿತವಾಗಿ ಬಳಕೆದಾರರಿಗೆ ಲಭ್ಯವಿದ್ದು, ಸ್ಲೋ ಮೋಷನ್ ವೀಡಿಯೊಗಳನ್ನು ಸುಂದರವಾಗಿ ಸೆರೆಹಿಡಿಯಲಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಬೆಸ್ಟ್ ಆಪ್‌ಗಳಲ್ಲಿ ಇದು ಒಂದು ಎನ್ನಲಾಗಿದೆ.

Fast & Slow Motion Video Tool

Fast & Slow Motion Video Tool

ಈ ಆಪ್ ನಲ್ಲಿ ಬಳಕೆದಾರರು ಸ್ಲೋ ಮೋಷನ್ ವೀಡಿಯೊಗಳನ್ನು ಮತ್ತು ಫಾಸ್ಟ್ ಮೋಷನ್ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದಾಗಿದೆ. ಅಲ್ಲದೇ ಹೆಚ್ಚಿನ ಆಯ್ಕೆಗಳನ್ನು ಬಳಕೆದಾರರು ಈ ಆಪ್ ನಲ್ಲಿ ಪಡೆಯಬಹುದಾಗಿದೆ.

Videoshop:

Videoshop:

ಇದೊಂದು ವೀಡಿಯೊ ಎಡಿಟ್ ಮಾಡುವ ಆಪ್ ಆಗಿದ್ದು, ಸಾಮಾನ್ಯ ವೀಡಿಯೊವನ್ನು ಸ್ಲೋ ಮೋಷನ್ ವೀಡಿಯೊ ಮಾದರಿಯಲ್ಲಿ ಬದಲಾವಣೆಯನ್ನು ಮಾಡಲಿದೆ ಎನ್ನಲಾಗಿದೆ. ವಿವಿಧ ಮಾದರಿಯಲ್ಲಿ ನೀವು ವೀಡಿಯೊಗಳನ್ನು ಎಡಿಟ್ ಮಾಡಬಹುದಾಗಿದೆ.

AndroVid – Video Editor

AndroVid – Video Editor

ಇದು ಸಹ ಎಡಿಟಿಂಗ್ ಆಪ್ ಆಗಿದ್ದು, ನೀವು ಸೆರೆಹಿಡಿದ ವೀಡಿಯೊವನ್ನು ಸ್ಲೋ ಮೋಷನ್ ನಲ್ಲಿ ತೋರಿಸಲಿದೆ ಎನ್ನಲಾಗಿದೆ. ಇದರಲ್ಲಿಯೂ ವೀಡಿಯೊ ಎಡಿಟಿಂಗ್‌ ಸಾಕಷ್ಟು ಆಯ್ಕೆಗಳು ಲಭ್ಯವಿದೆ.

ಓದಿರಿ: ಜಿಯೋ ಪ್ರೈಮ್ ಸದಸ್ಯತ್ವವನ್ನು ಉಚಿತವಾಗಿ ವಿಸ್ತರಿಸಿಕೊಳ್ಳುವುದು ಹೇಗೆ...?

Best Mobiles in India

English summary
How To Record Slow Motion Videos On Any Android Device. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X