ಮೊಬೈಲ್ ಸ್ಕ್ರೀನ್ ಅನ್ನು 'ಬ್ಲಾಕ್ ಆಂಡ್ ವೈಟ್' ಮಾಡಿ ಎನ್ನುತ್ತಿದ್ದಾರೆ ಗೂಗಲ್‌ನ ಮಾಜಿ ಉದ್ಯೋಗಿ!!
ಸಿಗರೇಟಿಗಿಂತಲೂ ಸ್ಮಾರ್ಟ್‌ಫೋನ್‌ಗಳ ಬಳಕೆಯೇ ಹೆಚ್ಚು ಚಟವಾಗಿದೆ ಎಂದು ಹೇಳವಂತಾಗಿದೆ. ಪ್ರತಿ ನಿಮಿಷಕ್ಕೊಮ್ಮೆ ಸ್ಮಾರ್ಟ್‌ಫೋನ್ ಅನ್ನು ಚೆಕ್ ಮಾಡದೇ ಇದ್ದರೆ, ಹಲವರಿಗೆ ಏನೋ ಕಳೆದುಕೊಂಡಂತಹ ಅನುಭವವಾಗುತ್ತದೆಯಂತೆ. ಅದರಲ್ಲೂ ಮಕ್ಕಳು ಈ ಚಟ ಅಂಟಿಸಿಕೊಂಡಿರುವುದು ಪೋಷಕರಿಗೆ ತಲೆನೋವಾಗಿದೆ.!
ತುಂಬ ಮಂದಿ ಈಗ ಸ್ಮಾರ್ಟ್‌ಫೋನ್‌ಗಳನ್ನು ಚೆಕ್ ಮಾಡುವುದರಲ್ಲಿಯೇ ಬಹುಸಮಯವನ್ನು ಹಾಳು ಮಾಡುತ್ತಿದ್ದಾರೆ. ಇದೊಂದು ಚಟವಾಗಿ ಬದಲಾಗಿದೆ. ಹಾಗಾಗಿ, 'ಮೊಬೈಲ್ ಪೋನಿನ ಸ್ಕ್ರೀನ್ ಅನ್ನು ಬ್ಲಾಕ್ ಆಂಡ್ ವೈಟ್ ಮಾಡುವುದೇ ಇದಕ್ಕೆ ಪರಿಹಾರ ಆಗಬಲ್ಲದು' ಎಂದು ಗೂಗಲ್‌ನ ನಿವೃತ್ತ ವಿನ್ಯಾಸಕಾರ ಟ್ರಿಸ್ಟನ್ ಹ್ಯಾರಿಸ್ ಅವರು ತಿಳಿಸಿದ್ದಾರೆ.

ಮೊಬೈಲ್ ಸ್ಕ್ರೀನ್ ಅನ್ನು ಬ್ಲಾಕ್ ಆಂಡ್ ವೈಟ್ ಮಾಡುವುದರಿಂದ ಫೋನ್ ಚಟವನ್ನು ತಪ್ಪುವುದು ವೈಜ್ಞಾನಿಕವಾಗಿಯೂ ನಿಜವಾಗಿದೆ. ಫೋನಿನ ಸ್ಕ್ರೀನ್ ಬಣ್ಣರಹಿತವಾಗಿದ್ದರೆ ಪೋನ್‌ಕರೆ, ಮೆಸೇಜು ಬಂದಾಗಲೂ ಅದನ್ನು ನೋಡುವಂತೆ ಮಿದುಳಿನ ನರಕೋಶಗಳು ಉತ್ತೇಜನ ನೀಡಲ್ಲ. ಆಗ ಕ್ರಮೇಣ ಫೋನಿನ ಚಟ ಕಡಿಮೆಯಾಗುತ್ತದೆ' ಎಂದು ಅವರು ತಿಳಿಸಿದ್ದಾರೆ.

'ಸ್ಮಾರ್ಟ್‌ಫೋನಿನ ಪರದೆಯಲ್ಲಿನ ಬಣ್ಣಗಳು ಫೋನಿನ ಮೇಲಿನ ಆಕರ್ಷಣೆಯನ್ನು ಹೆಚ್ಚು ಮಾಡುತ್ತದೆ. ಒಂದು ವೇಳೆ ಅದನ್ನು ಆಫ್ ಮಾಡಿದ್ದಲ್ಲಿ ದೊಡ್ಡ ವ್ಯತ್ಯಾಸವನ್ನೇ ಮಾಡಬಹುದು' ಎಂದು ಹ್ಯಾರಿಸ್ ತಿಳಿಸಿದ್ದಾರೆ. ಐಫೋನ್ ಮತ್ತು ಆಂಡ್ರಾಯ್ಡ್ ಫೋನ್‌ಗಳ ಸ್ಕ್ರೀನ್ ಅನ್ನು ಬ್ಲಾಕ್ ಆ್ಯಂಡ್ ವೈಟ್ ಆಗಿ ಇಟ್ಟುಕೊಳ್ಳಬಹುದಾದರೂ, ನಿರ್ಧಾರ ಅಷ್ಟು ಸುಲಭದ್ದಲ್ಲ ಎಂದು ಅವರು ಹೇಳಿದ್ದಾರೆ.

ಓದಿರಿ: ಫ್ಲಿಪ್ ಕಾರ್ಟ್ ಸಹ ಸಂಸ್ಥಾಪಕನಿಂದ ಭಾವಪೂರ್ಣ ವಿದಾಯ!!


Click it and Unblock the Notifications
