ಫ್ಲಿಪ್ ಕಾರ್ಟ್ ಸಹ ಸಂಸ್ಥಾಪಕನಿಂದ ಭಾವಪೂರ್ಣ ವಿದಾಯ!!

|

ಬೆಂಗಳೂರಿನ ಒಂದು ಚಿಕ್ಕ ಅಪಾರ್ಟ್‌ಮೆಂಟ್‌ನಲ್ಲಿ ಹುಟ್ಟಿ ಇಡೀ ವಿಶ್ವವೇ ಆಶ್ಚರ್ಯವಾಗುವಂತೆ ಮಾಡಿದ ಫ್ಲಿಪ್ ಕಾರ್ಟ್ ಕಂಪೆನಿಯ ಸಹ ಸಂಸ್ಥಾಪಕ ಸಚಿನ್ ಬನ್ಸಾಲ್ ಅವರು ಫೇಸ್‌ಬುಕ್‌ನಲ್ಲಿ ಭಾವಪೂರ್ಣವಿದಾಯವನ್ನು ಹೇಳಿದ್ದಾರೆ. ಭವಿಷ್ಯದಲ್ಲಿ ತಮ್ಮ ವೈಯಕ್ತಿಕ ಪ್ರಾಜೆಕ್ಟ್ಸ್ ಗಳನ್ನು ಮುಗಿಸಲು ಸ್ವಲ್ಪ ಕಾಲಾವಕಾಶ ತೆಗೆದುಕೊಳ್ಳುತ್ತಿದ್ದಾರೆ.

ಹೌದು, ಅಮೆರಿಕಾ ಮೂಲದ ರಿಟೈಲರ್ ಸಂಸ್ಥೆ ವಾಲ್ ಮಾರ್ಟ್ ಇಂಕ್ ಶೇಕಡಾ 77ರಷ್ಟು ಫ್ಲಿಪ್ ಕಾರ್ಟ್ ಷೇರನ್ನು ಖರೀದಿಸಿದ ನಂತರ, ಫ್ಲಿಪ್ ಕಾರ್ಟ್ ನಿಂದ ಅದರ ಸಹ ಸಂಸ್ಥಾಪಕ ಸಚಿನ್ ಬನ್ಸಲ್ ನಿರ್ಗಮಿಸುತ್ತಿದ್ದು, ಮಕ್ಕಳ ಆಟಿಕೆ ಉದ್ಯಮ ಮತ್ತು ಸಂಕೇತ ಕೌಶಲ್ಯ ಉದ್ಯಮ ಆರಂಭಕ್ಕೆ ತಮ್ಮ ಮೂಲ ದಿನಗಳ ಕಡೆಗೆ ಒಲವು ತೋರುತ್ತಿದ್ದಾರೆ.

ಫ್ಲಿಪ್ ಕಾರ್ಟ್ ಸಹ ಸಂಸ್ಥಾಪಕನಿಂದ ಭಾವಪೂರ್ಣ ವಿದಾಯ!!

ನಾನು ಸ್ವಲ್ಪ ಸಮಯ ಸುದೀರ್ಘ ರಜೆ ತೆಗೆದುಕೊಳ್ಳುತ್ತಿದ್ದು ಕೆಲವು ವೈಯಕ್ತಿಕ ಪ್ರಾಜೆಕ್ಟ್ ಗಳನ್ನು ಮುಗಿಸಲು ಗಮನ ಹರಿಸಲಿದ್ದೇನೆ. ಅದಕ್ಕೆ ನನಗೆ ಈವರೆಗೆ ಸಮಯ ಸಿಗುತ್ತಿರಲಿಲ್ಲ. ಮಕ್ಕಳ ಆಟಿಕೆ ಉದ್ಯಮದ ಕಡೆಗೆ ಒಲವು ತೋರುತ್ತಿದ್ದೇನೆ ಎಂದು ಬನ್ಸಲ್ ಅವರು ತಮ್ಮ ವಯಕ್ತಿಕ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಫೇಸ್‌ಬುಕ್ ಅನ್ನು ಸಹ ಬಳಸಬಹುದಾದ ಈ ಫೀಚರ್ ಪೋನ್ ಅತ್ಯುತ್ತಮವಾಗಿದೆ

ಫ್ಲಿಪ್ ಕಾರ್ಟ್ ಜೊತೆಗೆ ನನ್ನ ಕೆಲಸ ಇಲ್ಲಿಗೆ ಮುಕ್ತಾಯವಾಗುತ್ತಿದ್ದು, 10 ವರ್ಷಗಳ ನಂತರ ನನ್ನ ಕೆಲಸವನ್ನು ಬೇರೆಯವರಿಗೆ ವಹಿಸಿ ಇಲ್ಲಿಂದ ನಿರ್ಗಮಿಸುವ ಸಮಯ ಬಂದಿದೆ. ಆದರೂ, ಕೂಡ ಹೊರಗಿದ್ದುಕೊಂಡು ಫ್ಲಿಪ್ ಕಾರ್ಟ್ ತಂಡಕ್ಕೆ ಅದರ ಅಭಿವೃದ್ಧಿಗೆ ಬೆಂಬಲಿಸುತ್ತಿರುತ್ತೇನೆ ಎಂದು ಫೇಸ್‌ಬುಕ್‌ನಲ್ಲಿ ವಿಸ್ತಾರವಾಗಿ ಬರೆದುಕೊಂಡಿದ್ದಾರೆ.

ಫ್ಲಿಪ್ ಕಾರ್ಟ್ ಸಹ ಸಂಸ್ಥಾಪಕನಿಂದ ಭಾವಪೂರ್ಣ ವಿದಾಯ!!

2007ರಲ್ಲಿ ಬಿನ್ನಿ ಬನ್ಸಲ್ ಜೊತೆಗೆ ಫ್ಲಿಪ್ ಕಾರ್ಟ್ ನ್ನು ಸ್ಥಾಪಿಸಿದ್ದ ಸಚಿನ್ ಬನ್ಸಲ್ ಒಪ್ಪಂದದ ನಂತರ ಕಂಪೆನಿ ತೊರೆದಿದ್ದಾರೆ. ಸಚಿನ್ ಮತ್ತು ಬಿನ್ನಿ ಈ ಮೊದಲು ಅಮೆಜಾನ್.ಕಾಮ್ ಇಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಅಮೆಜಾನ್ ಬಿಟ್ಟು ತಮ್ಮದೇ ಇ ಕಾಮರ್ಸ್ ಸಂಸ್ಥೆಯನ್ನು ಪ್ರಾರಂಭಿಸಿ ಭಾರತದ ನಂಬರ್ ಒನ್ ಇ ಕಾಮರ್ಸ್ ಕಂಪೆನಿಯಾಗಿ ಬೆಳೆಸಿದ್ದರು.

Best Mobiles in India

English summary
sachin Bansal, who had co-founded Flipkart with Binny Bansal in 2007, would exit the company after the deal, while Binny will stay on. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X