ಬ್ಲಾಕ್ ಬೆರಿ ಕರ್ವ್ 9320 ಸ್ಮಾರ್ಟ್ ಫೋನ್ ಬಿಡುಗಡೆ

Posted By: Varun
ಬ್ಲಾಕ್ ಬೆರಿ ಕರ್ವ್ 9320 ಸ್ಮಾರ್ಟ್ ಫೋನ್ ಬಿಡುಗಡೆ

ಬ್ಲಾಕ್ ಬೆರಿಯ ಕರ್ವ್ ಶ್ರೇಣಿಯ ಸ್ಮಾರ್ಟ್ ಫೋನುಗಳು ಭಾರತದಲ್ಲಿ ಜನಪ್ರಿಯವಾಗುತ್ತಿದ್ದು, ಕಳೆದ ತಿಂಗಳು ಬಿಡುಗಡೆಯಾಗಿದ್ದ ಬ್ಲಾಕ್ ಬೆರಿ ಕರ್ವ್ 9220 ಕಡಿಮೆ ಬಜೆಟ್ ಫೋನಿನ ಪ್ರತಿಕ್ರಿಯೆ ಚೆನ್ನಾಗಿದ್ದರಿಂದ ಉತ್ತೇಜಿತರಾಗಿರುವ ಬ್ಲಾಕ್ ಬೆರಿ, ಈಗ ಬ್ಲಾಕ್ ಬೆರಿ ಕರ್ವ್ 9320 ಮಾಡಲ್ ಅನ್ನು ಅಧೀಕೃತವಾಗಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಕಾಲೇಜು ವಿದ್ಯಾರ್ಥಿಗಳಿಗೆ ಹಾಗು ಇಮೇಲ್, ಸಾಮಾಜಿಕ ಜಾಲತಾಣಗಳಲ್ಲಿ ಬ್ಯುಸಿ ಇರುವ ಬಳಕೆದಾರರನ್ನು ಮನದಲ್ಲಿ ಇಟ್ಟುಕೊಂಡು ಡಿಸೈನ್ ಮಾಡಲಾಗಿರುವ ಈ ಸ್ಮಾರ್ಟ್ ಫಿಒನಿನ ಫೀಚರುಗಳು ಈ ರೀತಿ ಇವೆ.

 • 2.44 ಇಂಚಿನ ಡಿಸ್ಪ್ಲೇ, 320 X 240 ಪಿಕ್ಸೆಲ್ ರೆಸೊಲ್ಯೂಶನ್

 • ಬ್ಲಾಕ್ ಬೆರಿ OS 7.1 ತಂತ್ರಾಂಶ

 • QWERTY ಕೀಪ್ಯಾಡ್

 • 3.2 ಮೆಗಾ ಪಿಕ್ಸೆಲ್ ಕ್ಯಾಮೆರಾ (ಫ್ಲಾಶ್ ಮತ್ತು ಜಿಯೋ ಟ್ಯಾಗಿಂಗ್ ವೈಶಿಷ್ಟ್ಯಗಳೊಂದಿಗೆ)

 • 4x ಡಿಜಿಟಲ್ ಜೂಮ್ ವಿಡಿಯೋ ರೆಕಾರ್ಡಿಂಗ್

 • 512 MB ರಾಮ್ ಮತ್ತು ರೋಮ್

 • 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ

 • ಮೈಕ್ರೋ SD ಕಾರ್ಡ್ ಸ್ಲಾಟ್

 • ಬ್ಲೂಟೂತ್, ಜಿಪಿಎಸ್,3G ಸಂಪರ್ಕ

 • FLAC ಆಡಿಯೋ ಪ್ಲೇಯರ್, RDS ಎಫ್ಎಂ ರೇಡಿಯೋ, ಗೇಮ್ಸ್

 • 3.5 ಮಿಮೀ ಆಡಿಯೋ ಜ್ಯಾಕ್

 • ಲಿ-ಇಯಾನ್ ದೀರ್ಘಾವಧಿ ಬ್ಯಾಟರಿ
 

ಬ್ಲಾಕ್ ಬೆರಿ ಕರ್ವ್ 9320 ಸ್ಮಾರ್ಟ್ ಫೋನ್ 15,990 ರೂಪಾಯಿಗೆ ಲಭ್ಯವಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot