ದುಬಾರಿ ಬ್ಲ್ಯಾಕ್‌ಬೆರ್ರಿ ಪಾಸ್‌ಪೋರ್ಟ್‌ ಖರೀದಿಗೆ ಸೂಪರ್ ತಾಣ

Written By:

ಸಪ್ಟೆಂಬರ್‌ನಲ್ಲಿ ಬ್ಲ್ಯಾಕ್‌ಬೆರ್ರಿ ತನ್ನ ಅತ್ಯಾಧುನಿಕ ಪಾಸ್‌ಪೋರ್ಟ್ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ರೂ 49,990 ಕ್ಕೆ ಲಾಂಚ್ ಮಾಡಿದೆ. ಇನ್ನು ಹೆಸರೇ ಹೇಳುವಂತೆ ಈ ಫೋನ್ ಪಾಸ್‌ಪೋರ್ಟ್ ಆಕಾರದಲ್ಲಿದ್ದು, 4.5 ಇಂಚಿನ ಡಯೋಗ್ನಲ್ ಸ್ಕ್ರೀನ್ ಅನ್ನು ಹೊಂದಿದೆ. ಅತ್ಯಾಕರ್ಷಕ ಡಿಸ್‌ಪ್ಲೇ ಗುಣಮಟ್ಟ ಮತ್ತು ಸುಂದರ ಕೀಪ್ಯಾಡ್ ಹೊಂದಿರುವ ಬ್ಲ್ಯಾಕ್‌ಬೆರ್ರಿ ಪಾಸ್‌ಪೋರ್ಟ್ ಈಗಾಗಲೇ ಭಾರತದ ಉಪ ಪ್ರಾಂತ್ಯಗಳಲ್ಲಿ ಮಾರಾಟವನ್ನು ಕಂಡುಕೊಂಡಿದೆ.

ಅದಕ್ಕೆಂದೇ ಬ್ಲ್ಯಾಕ್‌ಬೆರ್ರಿ ಪಾಸ್‌ಪೋರ್ಟ್ ದೊರೆಯುವ ಹತ್ತು ಆನ್‌ಲೈನ್ ತಾಣಗಳ ಮಾಹಿತಿಯೊಂದಿಗೆ ಇಂದಿನ ಗಿಜ್‌ಬಾಟ್ ಲೇಖನ ಬಂದಿದೆ. ಇನ್ನು ಡೀಲ್ಸ್ ಕಡೆಗೆ ಹೋಗುವ ಮುಂಚೆ ಬ್ಲ್ಯಾಕ್‌ಬೆರ್ರಿ ಪಾಸ್‌ಪೋರ್ಟ್ ವಿಶೇಷತೆಗಳನ್ನು ತಿಳಿದುಕೊಳ್ಳೋಣ.

ಇದನ್ನೂ ಓದಿ: ವಿಂಡೋಸ್‌ನಲ್ಲಿ ವಯಸ್ಕರ ಸೈಟ್ ನಿರ್ಬಂಧನೆಗೆ ಸಲಹೆಗಳು

ಚೌಕಾಕಾರದ ಪರದೆಯನ್ನು ಹೊಂದಿರುವ ಬ್ಲ್ಯಾಕ್‌ಬೆರ್ರಿ ಪಾಸ್‌ಪೋರ್ಟ್ 4.5 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದೆ ಇದರ ರೆಸಲ್ಯೂಶನ್ 1440x1440 ಪಿಕ್ಸೆಲ್‌ಗಳಾಗಿವೆ. ಫೋನ್‌ನಲ್ಲಿ 2.2 GHZ ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ಇದ್ದು 3 ಜಿಬಿ RAM ಅನ್ನು ಡಿವೈಸ್‌ನಲ್ಲಿ ನಮಗೆ ಕಾಣಬಹುದಾಗಿದೆ. ಬ್ಲ್ಯಾಕ್‌ಬೆರ್ರಿ ಪಾಸ್‌ಪೋರ್ಟ್‌ನಲ್ಲಿ ಬ್ಲ್ಯಾಕ್‌ಬೆರ್ರಿ 10.3 ಓಎಸ್ ಅನ್ನು ಕಾಣಬಹುದಾಗಿದೆ. ಅಮೆಜಾನ್ ಅಪ್ಲಿಕೇಶನ್ ಸ್ಟೋರ್ ಅನ್ನು ಡಿವೈಸ್‌ನಲ್ಲಿ ಈಗಾಗಲೇ ಇನ್‌ಸ್ಟಾಲ್ ಮಾಡಲಾಗಿದೆ. ಬ್ಲ್ಯಾಕ್‌ಬೆರ್ರಿ ವರ್ಲ್ಡ್‌ನಿಂದ ಬಳಕೆದಾರರು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಇನ್ನು ಫೋನ್‌ನ ಕ್ಯಾಮೆರಾ ಕಡೆಗೆ ಗಮನ ಹರಿಸುವುದಾದರೆ, ಇದು 13 ಮೆಗಾಪಿಕ್ಸೆಲ್ ಕ್ಯಾಮೆರಾದ ಜೊತೆಗೆ ಆಟೋ ಫೋಕಸ್, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಮತ್ತು ಎಲ್‌ಇಡಿ ಫ್ಲ್ಯಾಶ್ ಜೊತೆಗೆ ಬಂದಿದೆ. ರಿಯರ್ ಕ್ಯಾಮೆರಾವು ವೀಡಿಯೊವನ್ನು ಪೂರ್ಣ ಎಚ್‌ಡಿಯಲ್ಲಿ ದಾಖಲಿಸಲು ಸಾಧ್ಯವಾಗಿರುವಂತಿದೆ. ಇನ್ನು ಫೋನ್ ಮುಂಭಾಗದಲ್ಲಿ 2 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾವನ್ನು ಹೊಂದಿದೆ.

ಇನ್ನು ಫೋನ್‌ನ ಆಂತರಿಕ ಸಂಗ್ರಹಣಾ ಸಾಮರ್ಥ್ಯವು 32 ಜಿಬಿಯಾಗಿದ್ದು ಇದು ಮೈಕ್ರೋ ಎಸ್‌ಡಿ ಕಾರ್ಡ್ ಜೊತೆಗೆ ಬಂದಿದೆ. ಇನ್ನು ಸಂಪರ್ಕ ಅಂಶಗಳೆಂದರೆ ಎನ್‌ಎಫ್‌ಸಿ, ಮಿರಾಕಾಸ್ಟ್, ಬ್ಲ್ಯೂಟೂತ್ ಆವೃತ್ತಿ 4.0, ವೈ-ಫೈ ಮತ್ತು 4ಜಿ ಎಲ್‌ಟಿಇ/3ಜಿ ಯನ್ನು ಡಿವೈಸ್ ಪಡೆದುಕೊಂಡಿದೆ. ದುಬಾರಿ ಫೋನ್ ಆಗಿರುವ ಬ್ಲ್ಯಾಕ್‌ಬೆರ್ರಿ ಪಾಸ್‌ಪೋರ್ಟ್‌ನಲ್ಲಿ 3,450mAh ಬ್ಯಾಟರಿಯನ್ನು ಕಾಣಬಹುದಾಗಿದೆ. 30 ಗಂಟೆಗಳ ಚಾರ್ಜಿಂಗ್ ಅವಧಿಯನ್ನು ಇದು ಒದಗಿಸಲಿದೆ.

ಇನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಬ್ಲ್ಯಾಕ್‌ಬೆರ್ರಿ ಪಾಸ್‌ಪೋರ್ಟ್ ಲಭ್ಯವಿರುವ ಆನ್‌ಲೈನ್ ತಾಣಗಳ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫ್ಲಿಪ್‌ಕಾರ್ಟ್

#1

ಖರೀದಿ ಬೆಲೆ ರೂ: 49,389
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಅಮೆಜಾನ್

#2

ಖರೀದಿ ಬೆಲೆ ರೂ: 49,990
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

TheElectronicStore

#3

ಖರೀದಿ ಬೆಲೆ ರೂ: 48,111
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಇಬೇ

#4

ಖರೀದಿ ಬೆಲೆ ರೂ: 56,499
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಸ್ನ್ಯಾಪ್‌ಡೀಲ್

#5

ಖರೀದಿ ಬೆಲೆ ರೂ: 49,900
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಕ್ರೋಮಾ

#6

ಖರೀದಿ ಬೆಲೆ ರೂ: 49,900
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ದ ಮೊಬೈಲ್ ಸ್ಟೋರ್

#7

ಖರೀದಿ ಬೆಲೆ ರೂ: 47,160
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about BlackBerry Passport Now Available with 4G Support, 3GB RAM: Top 7 Online Deals to Buy in India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot