ಐಫೋನಿಗೆ ಬ್ಲ್ಯಾಕ್‌ಬೆರಿ ಕ್ವರ್ಟಿ ಕೀಪ್ಯಾಡ್ :ಕೋರ್ಟ್ ಮೆಟ್ಟಿಲೇರಿದ ಬ್ಲ್ಯಾಕ್‌ಬೆರಿ
ಐಫೋನಿಗೆ ತನ್ನ ಕ್ವರ್ಟಿ ಕೀ ಪ್ಯಾಡ್ ಮಾದರಿಯನ್ನು ತಯಾರಿಸಿದ ಕಂಪೆನಿಗೆ ಬ್ಲ್ಯಾಕ್‌ಬೆರಿ ಬಿಸಿ ಮುಟ್ಟಿಸಿದ್ದು, ಈ ಸಂಬಂಧ ಅಮೆರಿಕದ ಕ್ಯಾಲಿಫೋರ್ನಿಯ ಜಿಲ್ಲಾ ನ್ಯಾಯಾಲಯದಲ್ಲಿ ಬ್ಲ್ಯಾಕ್‌ಬೆರಿ ಅರ್ಜಿ ಸಲ್ಲಿಸಿದ್ದು ಕಾನೂನು ಹೋರಾಟಕ್ಕೆ ಮುಂದಾಗಿದೆ.
ಕ್ಟರ್ಟಿ ಕೀಪ್ಯಾಡ್‌ನ್ನು ವಿನ್ಯಾಸದ ಪೇಟೆಂಟ್‌ನ್ನು ನಾವು ಹೊಂದಿದ್ದೇವೆ. ಈ ಪೇಟೆಂಟ್‌ನ್ನು ಉಲ್ಲಂಘಿಸಿ ನಮ್ಮದೇ ಶೈಲಿಯ ಕ್ವರ್ಟಿ ಕೀಪ್ಯಾಡ್‌ನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವುದು ಅಕ್ರಮ.ಹೀಗಾಗಿ ಟೈಪೋ ಕಂಪೆನಿಯ ವಿರುದ್ಧ ಕಾನೂನು ಸಮರಕ್ಕೆ ಮುಂದಾಗುತ್ತಿದ್ದೇವೆ ಎಂದು ಬ್ಲ್ಯಾಕ್‌ಬೆರಿ ತಿಳಿಸಿದೆ.
ಅಮೆರಿಕದ ಟೈಪೋ ಕಂಪೆನಿ ಐಫೋನ್5 ಬಳಕೆದಾರರು ಸುಲಭವಾಗಿ ಅಕ್ಷರಗಳನ್ನು ಟೈಪ್ ಮಾಡಲು ಈ ಕೀಪ್ಯಾಡ್‌ನ್ನು ಅಭಿವೃದ್ಧಿ ಪಡಿಸಿತ್ತು. ನೋಡಲು ಮೊಬೈಲ್ ಸ್ಟ್ಯಾಂಡಿನಂತಿರುವ ಈ ಟೈಪೋ ಕೀಪ್ಯಾಡ್‌ನ ಒಳಗಡೆ ಸ್ಮಾರ್ಟ್‌ಫೋನ್ ಇರಿಸಿ ಆರಾಮವಾಗಿ ಟೈಪ್ ಮಾಡಬಹುದಾಗಿತ್ತು.
ಬ್ಲೂಟೂತ್ ಮೂಲಕ ಕಾರ್ಯನಿರ್ವಹಿಸುವ ಈ ಟೈಪೋ ಕೀಪ್ಯಾಡ್ ಸದ್ಯಕ್ಕೆ ಮಾರುಕಟ್ಟೆಗೆ ಬಂದಿಲ್ಲ.ಇದೇ ಜನವರಿಯಲ್ಲಿ ಬಿಡುಗಡೆಯಾಗಲಿದ್ದು ಕಂಪೆನಿ ಈ ಕ್ವರ್ಟಿ ಕೀಪ್ಯಾಡ್ 99 ಡಾಲರ್(ಅಂದಾಜು ಆರು ಸಾವಿರ ರೂಪಾಯಿ)ನಿಗದಿ ಮಾಡಿದೆ.
ಇದನ್ನೂ ಓದಿ: ಆಪಲ್ ಪೇಟೆಂಟ್ ನಕಲು ಮಾಡಿದ್ದಕ್ಕೆ ಸ್ಯಾಮ್‌ಸಂಗ್‌ಗೆ ದಂಡ

ಐಫೋನನ್ನು ಬ್ಲ್ಯಾಕ್‌ಬೆರಿಯಾಗಿ ಬದಲಾಯಿಸಿ!
ಟೈಪೋ ಕೀಪ್ಯಾಡ್

ಐಫೋನನ್ನು ಬ್ಲ್ಯಾಕ್‌ಬೆರಿಯಾಗಿ ಬದಲಾಯಿಸಿ!
ಟೈಪೋ ಕೀಪ್ಯಾಡ್

ಐಫೋನನ್ನು ಬ್ಲ್ಯಾಕ್‌ಬೆರಿಯಾಗಿ ಬದಲಾಯಿಸಿ!
ಟೈಪೋ ಕೀಪ್ಯಾಡ್

ಐಫೋನನ್ನು ಬ್ಲ್ಯಾಕ್‌ಬೆರಿಯಾಗಿ ಬದಲಾಯಿಸಿ!
ಟೈಪೋ ಕೀಪ್ಯಾಡ್
ಐಫೋನನ್ನು ಬ್ಲ್ಯಾಕ್‌ಬೆರಿಯಾಗಿ ಬದಲಾಯಿಸಿ!
ಟೈಪೋ ಕೀಪ್ಯಾಡ್


Click it and Unblock the Notifications




