ಆಪಲ್‌ ಪೇಟೆಂಟ್‌ ನಕಲು ಮಾಡಿದ್ದಕ್ಕೆ ಸ್ಯಾಮ್‌ಸಂಗ್‌ಗೆ ದಂಡ

Posted By:

ಸ್ಯಾಮ್‌ಸಂಗ್‌ ಮತ್ತು ಆಪಲ್‌ನಡುವಿನ ಕಾನೂನು ಹೋರಾಟಲ್ಲಿ ಆಪಲ್‌ಗೆ ಜಯವಾಗಿದೆ. ಆಪಲ್‌ನ ಪೇಟೆಂಟ್‌ ಮತ್ತು ವಿನ್ಯಾಸವನ್ನು ಸ್ಯಾಮ್‌ಸಂಗ್‌ ಉಲ್ಲಂಘನೆ ಮಾಡಿದ್ದು ಕೋರ್ಟ್‌ ಸ್ಯಾಮ್‌ಸಂಗ್‌ 290 ಮಿಲಿಯನ್‌ ಡಾಲರ್‌ ದಂಡವನ್ನು ವಿಧಿಸಿದೆ.

ವಿಶ್ವದ ನಂಬರ್‌ ಒನ್‌ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪೆನಿ ಸ್ಯಾಮ್‌ಸಂ‌‌ಗ್‌ಗೆ ತೀರ್ಪಿ‌ನಿಂದ ತೀರ್ಪಿ‌ನಿಂದ ಹಿನ್ನೆಡೆಯಾದರೂ ಮತ್ತೊಮ್ಮೆ ತೀರ್ಪ‌ನ್ನು ಪರಿಶೀಲಿಸುವಂತೆ ಮೇಲ್ಮನವಿ ಸಲ್ಲಿಸಲಿದೆ.ಹೀಗಾಗಿ ಇಲ್ಲಿ ಆಪಲ್‌ ಮತ್ತು ಸ್ಯಾಮ್‌ಸಂಗ್‌ ನಡುವಿನ ಕಾನೂನು ಸಮರ ಏನು? ಯಾವ ಪೇಟೆಂಟ್‌ಗಳನ್ನು ಸ್ಯಾಮ್‌ಸಂಗ್‌ ಉಲ್ಲಂಘನೆ ಮಾಡಿದೆ? ಈ ಎರಡು ಕಂಪೆನಿಗಳ ಮಧ್ಯೆ ವಿಶ್ವದ ಯಾವೆಲ್ಲ ದೇಶಗಳಲ್ಲಿ ಕಾನೂನ ಸಮರ ನಡೆಯುತ್ತಿದೆ ಎನ್ನುವ ಮತ್ತಿತರ ಮಾಹಿತಿಗಳು ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ಒಂದು ಸೆಕೆಂಡ್‌ಗೆ ಸ್ಯಾಮ್‌ಸಂಗ್‌ ಗಳಿಸುವ ಆದಾಯ ಎಷ್ಟು?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಆಪಲ್‌ ಸ್ಯಾಮ್‌ಸಂಗ್‌ ಕಾನೂನು ಹೋರಾಟದ ಆರಂಭ

ಆಪಲ್‌ ಸ್ಯಾಮ್‌ಸಂಗ್‌ ಕಾನೂನು ಹೋರಾಟದ ಆರಂಭ

ಆಪಲ್‌ ವರ್ಸಸ್‌ ಸ್ಯಾಮ್‌ಸಂಗ್‌ ಕಾನೂನು ಸಮರ


ಆಪಲ್ ಕಂಪೆನಿ 2011ರಲ್ಲಿ ಅಮೆರಿಕದ ಸ್ಯಾನ್‌ಜೋಸ್‌ನ ಕೋರ್ಟ್‌ನಲ್ಲಿ ಸ್ಯಾಮ್‌ಸಂಗ್ ನಮ್ಮ ಹಕ್ಕುಸ್ವಾಮ್ಯ(ಪೇಟೆಂಟ್‌)ಉಲ್ಲಂಘನೆ,ತಂತ್ರಜ್ಞಾನವನ್ನುನಕಲು ಮಾಡಿದೆ ಎಂದು ಹೇಳಿ ಅರ್ಜಿ ಹಾಕಿತ್ತು. ಹಾಕಿತ್ತು.ಸ್ಯಾಮ್‌ಸಂಗ್‌ನ ಆರೋಪವನ್ನು ವಿಚಾರಣೆ ನಡೆಸಿದ ನ್ಯಾಯಧೀಶರು ಕಳೆದ ವರ್ಷ‌ 26 ಸ್ಯಾಮ್‌ಸಂಗ್‌ ಸಾಧನಗಳು ಆಪಲ್‌ ಪೇಟೆಂಟ್‌ ಉಲ್ಲಂಘಿಸಿದೆ ಎಂದು ಹೇಳಿ,1.05 ಶತಕೋಟಿ ಡಾಲರ್‌ ದಂಡವನ್ನು ಸ್ಯಾಮ್‌ಸಂಗ್‌ಗೆ ವಿಧಿಸಿದ್ದರು.

ಆಪಲ್‌ ವರ್ಸಸ್‌ ಸ್ಯಾಮ್‌ಸಂಗ್‌ ಕಾನೂನು ಹೋರಾಟ

ಆಪಲ್‌ ವರ್ಸಸ್‌ ಸ್ಯಾಮ್‌ಸಂಗ್‌ ಕಾನೂನು ಹೋರಾಟ

ಆಪಲ್‌ ವರ್ಸಸ್‌ ಸ್ಯಾಮ್‌ಸಂಗ್‌ ಕಾನೂನು ಸಮರ


ಸ್ಯಾಮ್‌ಸಂಗ್‌ ಈ ತೀರ್ಪಿ‌ನ ವಿರುದ್ಧ ಮತ್ತೊಮ್ಮೆ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿತ್ತು. ಮನವಿ ಬಳಿಕ ಬಳಿಕ ಇನ್ನೊಬ್ಬ ನ್ಯಾಯಧೀಶರು, 13 ಸಾಧನ ಮತ್ತು ಐದು ಪೇಟೆಂಟ್‌ಗೆ ಸಂಬಂಧಿಸಿದಂತೆ ದಂಡದ ಲೆಕ್ಕಚಾರವನ್ನು ವಿಚಾರಣೆ ನಡೆಸಿದ ನ್ಯಾಯಧೀಶರು ಸರಿಯಾಗಿ ಪರಿಗಣಿಸದ ಕಾರಣ ಸ್ಯಾಮ್‌ಸಂಗ್‌ಗೆ ವಿಧಿಸಿದ ದಂಡದ ಪ್ರಮಾಣ ಹೆಚ್ಚಾಯಿತು. ನ್ಯಾಯಧೀಶರು ಹೊಸದಾಗಿ ಲೆಕ್ಕಚಾರ ಮಾಡಿ ಸ್ಯಾಮ್‌ಸಂಗ್‌ಗೆ 450 ಮಿಲಿಯನ್‌ ಡಾಲರ್‌ ದಂಡವನ್ನು ವಿಧಿಸಿದ್ದರು. ಇದೇ ಸಂದರ್ಭದಲ್ಲಿ ಕೋರ್ಟ್‌ ಸ್ಯಾಮ್‌ಸಂಗ್‌ ಆಪಲ್‌ನ ಪೇಟೆಂಟ್‌ ಉಲ್ಲಂಘನೆ ಮಾಡಿದ್ದಕ್ಕೆ ಪ್ರತ್ಯೇಕ ದಂಡವನ್ನು ವಿಧಿಸಿಬೇಕು ಎಂದು ನ್ಯಾಯಧೀಶರಿಗೆ ಆಜ್ಞಾಪಿಸಿತ್ತು.

 ಹೊಸ ತೀರ್ಪು ಏನು?

ಹೊಸ ತೀರ್ಪು ಏನು?

ಆಪಲ್‌ ವರ್ಸಸ್‌ ಸ್ಯಾಮ್‌ಸಂಗ್‌ ಕಾನೂನು ಸಮರ


ತಮ್ಮ ಪೇಟೆಂಟ್‌ನ್ನು ಸ್ಯಾಮ್‌ಸಂಗ್‌ ಉಲ್ಲಂಘಿಸಿದಕ್ಕಾಗಿ 380 ಮಿಲಿಯನ್‌ ಡಾಲರ್‌ನ್ನುಸ್ಯಾಮ್‌ಸಂಗ್‌ ಪಾವತಿ ಮಾಡಬೇಕು ಎಂದು ಆಪಲ್‌ ವಾದಿಸಿದ್ದರೆ, ಸ್ಯಾಮ್‌ಸಂಗ್‌ ಕೇವಲ 52 ಮಿಲಿಯನ್‌ ಡಾಲರ್‌ ನೀಡುವುದಾಗಿ ವಾದಿಸಿತ್ತು. ಕೊನೆಗೆ ವಿಚಾರಣೆ ನಡೆಸಿ ನ.21ರಂದು ತೀರ್ಪು‌ ಪ್ರಕಟಿಸಿದ ನ್ಯಾಯಧೀಶರು ಆಪಲ್‌ನ ಪೇಟೆಂಟ್‌ ಉಲ್ಲಂಘಿಸಿದ್ದಕ್ಕೆ ಸ್ಯಾಮ್‌ಸಂಗ್‌ಗೆ 290 ಮಿಲಿಯನ್‌ ಡಾಲರ್‌ ದಂಡದ ಪ್ರಮಾಣವನ್ನು ಪ್ರಕಟಿಸಿದ್ದಾರೆ.

 ಸ್ಯಾಮ್‌ಸಂಗ್‌ ಉಲ್ಲಂಘನೆ ಮಾಡಿರುವ ಪೇಟೆಂಟ್‌ಗಳು:

ಸ್ಯಾಮ್‌ಸಂಗ್‌ ಉಲ್ಲಂಘನೆ ಮಾಡಿರುವ ಪೇಟೆಂಟ್‌ಗಳು:

ಆಪಲ್‌ ವರ್ಸಸ್‌ ಸ್ಯಾಮ್‌ಸಂಗ್‌ ಕಾನೂನು ಸಮರ


ಆನ್‌ ಸ್ಕ್ರೀನ್‌ ನ್ಯಾವಿಗೇಶನ್‌,ಪಿಂಚ್‌ ಟು ಝೂಮ್‌,ಬೌನ್ಸ್‌ ಬ್ಯಾಕ್‌ ಎಫೆಕ್ಟ್‌‌ ಮತ್ತು ಐಫೋನ್‌ ಮತ್ತು ಆನ್‌ ಸ್ಕ್ರೀನ್‌ ಐಕಾನ್‌ ವಿನ್ಯಾಸದ ಪೇಟೆಂಟ್‌ಗಳನ್ನು ಸ್ಯಾಮ್‌ಸಂಗ್‌ ಉಲ್ಲಂಘನೆ ಮಾಡಿದೆ ಎಂದು ಕೋರ್ಟ್‌ ಹೇಳಿದೆ.

 ಆಪಲ್‌‌ ಪೇಟೆಂಟ್‌ ಉಲ್ಲಂಘನೆ ಮಾಡಿರುವ ಸ್ಯಾಮ್‌ಸಂಗ್ ಸಾಧನಗಳು:

ಆಪಲ್‌‌ ಪೇಟೆಂಟ್‌ ಉಲ್ಲಂಘನೆ ಮಾಡಿರುವ ಸ್ಯಾಮ್‌ಸಂಗ್ ಸಾಧನಗಳು:

ಆಪಲ್‌ ವರ್ಸಸ್‌ ಸ್ಯಾಮ್‌ಸಂಗ್‌ ಕಾನೂನು ಸಮರ


ಸ್ಯಾಮ್‌ಸಂಗ್‌ನ ಇನ್‌ಫ್ಯೂಸ್‌ 4ಜಿ,ಡ್ರಾಯಿಡ್‌ ಚಾರ್ಜ್‌ ಸ್ಮಾರ್ಟ್‌ಫೋನ್‌ಗಳು ಹೆಚ್ಚಾಗಿ ಉಲ್ಲಂಘನೆ ಮಾಡಿದೆ ಕೋರ್ಟ್ ಅಭಿಪ್ರಾಯ ಪಟ್ಟಿದೆ.ಇವುಗಳ ಮೇಲೆ ಅನುಕ್ರಮವಾಗಿ 100 ಮಿಲಿಯನ್‌ ಡಾಲರ್‌ ಮತ್ತು 60 ಮಿಲಿಯನ್‌ ಡಾಲರ್‌ ದಂಡವನ್ನು ಕೋರ್ಟ್‌ ವಿಧಿಸಿದೆ.ಉಳಿದಂತೆ ಗೆಲಾಕ್ಸಿಟ್ಯಾಬ್‌, ಗೆಲಾಕ್ಸಿ ಕ್ಯಾಪಟಿವೇಟ್‌,ಕಾಂಟಿನಮ್‌,ಎಪಿಕ್‌4ಜಿ,ಎಕ್ಸಿಬಿಟ್‌4ಜಿ,ಜೆಮ್‌ ಇಂಡಲ್ಜ್‌,ನೆಕ್ಸಸ್‌ ಎಸ್‌ 4ಜಿ,ರೆಪ್ಲನಿಶ್‌ಮತ್ತು ಟ್ರಾನ್ಸ್‌ಫಾರಂ ಸಾಧನಗಳು ಹೆಚ್ಚಾಗಿ ಪೇಟೆಂಟ್‌ ಉಲ್ಲಂಘಿಸಿದೆ ಎಂದು ಕೋರ್ಟ್‌ ಅಭಿಪ್ರಾಯ ಪಟ್ಟಿದೆ.

ಫೋಟೋ ಕೃಪೆ: ವಿಕಿಪೀಡಿಯಾ

 ಆಪಲ್‌ಗೆ ಮೂರು ರೀತಿಯಿಂದ ನಷ್ಟ:

ಆಪಲ್‌ಗೆ ಮೂರು ರೀತಿಯಿಂದ ನಷ್ಟ:

ಆಪಲ್‌ ವರ್ಸಸ್‌ ಸ್ಯಾಮ್‌ಸಂಗ್‌ ಕಾನೂನು ಸಮರ


ಸ್ಯಾಮ್‌ಸಂಗ್‌ನಿಂದಾಗಿ ಒಂದು ಐಫೋನ್‌ ಮಾರುಕಟ್ಟೆಗೆ ಹೊಡೆತ, ಎರಡನೇಯದಾಗಿ ಸ್ಯಾಮ್‌ಸಂಗ್‌ ಲಾಭಾಂಶದಲ್ಲಿ ಏರಿಕೆ,ಕೊನೆಗೆ ಸ್ಯಾಮ್‌ಸಂಗ್‌ ಮೇಲೆ ಹೇರಿದ ದಂಡದ ಪ್ರಮಾಣ ಕಡಿಮೆಯಾಗಿದೆ ಎಂದು ಆಪಲ್‌ ಹೇಳಿದೆ.

 ಸ್ಯಾಮ್‌ಸಂಗ್‌ ವಾದ:

ಸ್ಯಾಮ್‌ಸಂಗ್‌ ವಾದ:

ಆಪಲ್‌ ವರ್ಸಸ್‌ ಸ್ಯಾಮ್‌ಸಂಗ್‌ ಕಾನೂನು ಸಮರ


ಕೆಲವೊಂದು ಆಪಲ್‌ ಸಾಧನಗಳ ಪೇಟೆಂಟ್‌‌ಗಳು ಸರಿಯಾಗಿಲ್ಲ ಸ್ಯಾಮ್‌ಸಂಗ್‌ ಹೇಳಿದೆ. ಅಷ್ಟೇ ಅಲ್ಲದೇ ಪಿಂಚ್‌ ಟು ಝೂಮ್‌ ಪೇಟೆಂಟ್‌ಗೆ ಸಂಬಂಧಿಸಿದಂತೆ ಆಪಲ್‌ ಇನ್ನೂ ಸರಯಾದ ದಾಖಲೆ ನೀಡಿಲ್ಲ ಎಂದು ಸ್ಯಾಮ್‌ಸಂಗ್‌‌ ತನ್ನ ವಾದವನ್ನು ಮಂಡಿಸಿದೆ.

 ತೀರ್ಪಿ‌ನ ಬಳಿಕ ಆಪಲ್‌ ಪ್ರತಿಕ್ರಿಯೆ:

ತೀರ್ಪಿ‌ನ ಬಳಿಕ ಆಪಲ್‌ ಪ್ರತಿಕ್ರಿಯೆ:

ಆಪಲ್‌ ವರ್ಸಸ್‌ ಸ್ಯಾಮ್‌ಸಂಗ್‌ ಕಾನೂನು ಸಮರ


ನಮ್ಮ ಸಂಶೋಧಕರು ತಯಾರಿಸಿದ ತಂತ್ರಜ್ಞಾನಕ್ಕೆ ಕೊನೆಗೂ ಗೆಲುವು ಸಿಕ್ಕಿದೆ. ದಂಡ ಪ್ರಮಾಣಕ್ಕೂ ಸಂಶೋಧನೆಗೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಜೊತೆಗೆ ಸ್ಯಾಮ್‌ಸಂಗ್‌ ತನ್ನ ತಂತ್ರಜ್ಞಾನವನ್ನು ನಕಲು ಮಾಡಿದೆ ಎಂದು ತೀರ್ಪು‌ ನೀಡಿದ ನ್ಯಾಯಧೀಶರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಆಪಲ್‌ ಹೇಳಿದೆ.

 ತೀರ್ಪಿ‌ನ ಬಳಿಕ ಸ್ಯಾಮ್‌ಸಂಗ್‌ ಪ್ರತಿಕ್ರಿಯೆ:

ತೀರ್ಪಿ‌ನ ಬಳಿಕ ಸ್ಯಾಮ್‌ಸಂಗ್‌ ಪ್ರತಿಕ್ರಿಯೆ:

ಆಪಲ್‌ ವರ್ಸಸ್‌ ಸ್ಯಾಮ್‌ಸಂಗ್‌ ಕಾನೂನು ಸಮರ


ತೀರ್ಪಿ‌ನ ಬಗ್ಗೆ ಅಸಮಧಾನವಾಗಿದೆ. ಈ ತೀರ್ಪ‌ನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು.ನೂತನ ತಂತ್ರಜ್ಞಾನನದ ಸಂಶೋಧನೆಯನ್ನು ಮುಂದುವರೆಸಿ ಬಳಕೆದಾರರಿಗೆ ಅತ್ಯುತ್ತಮ ಸಾಧನಗಳನ್ನು ನೀಡಲಿದ್ದೇವೆ ಎಂದು ಸ್ಯಾಮ್‌ಸಂಗ್ ಹೇಳಿದೆ.

 ಸ್ಯಾಮ್‌ಸಂಗ್‌ನ ಮುಂದಿನ ನಡೆ:

ಸ್ಯಾಮ್‌ಸಂಗ್‌ನ ಮುಂದಿನ ನಡೆ:

ಆಪಲ್‌ ವರ್ಸಸ್‌ ಸ್ಯಾಮ್‌ಸಂಗ್‌ ಕಾನೂನು ಸಮರ


ಸ್ಯಾಮ್‌ಸಂಗ್‌ ತೀರ್ಪು‌ನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಿದೆ.ಒಂದು ವೇಳೆ ಇದೇ ತೀರ್ಪು ಮತ್ತೊಮ್ಮೆ ಪ್ರಕಟಗೊಂಡರೆ ವಾಷಿಂಗಟನ್‌ನಲ್ಲಿರುವ ಫೆಡರಲ್‌ ಕೋರ್ಟ್‌ನಲ್ಲಿ ಪ್ರಶ್ನಿಸಲಿದ್ದು ಇಲ್ಲೂ ಸೋಲಾದರೆ ಅಮೆರಿಕದ ಸುಪ್ರಿಂ ಕೋರ್ಟ್‌ನಲ್ಲಿ ಪ್ರಶ್ನಿಸುವ ಸಾಧ್ಯತೆಯಿದೆ.

 ಆಪಲ್‌ ಸ್ಯಾಮ್‌ಸಂಗ್‌ ಜಾಗತಿಕ ಯುದ್ದ:

ಆಪಲ್‌ ಸ್ಯಾಮ್‌ಸಂಗ್‌ ಜಾಗತಿಕ ಯುದ್ದ:

ಆಪಲ್‌ ವರ್ಸಸ್‌ ಸ್ಯಾಮ್‌ಸಂಗ್‌ ಕಾನೂನು ಸಮರ


ಅಮೆರಿಕದಲ್ಲಿ ಮಾತ್ರ ಆಪಲ್‌ ಮತ್ತು ಸ್ಯಾಮ್‌ಸಂಗ್‌ ಮಧ್ಯೆ ಕಾನೂನು ಸಮರ ನಡೆಯುತ್ತಿಲ್ಲ. ಬದಲಾಗಿ ಜರ್ಮ‌ನಿ,ಇಂಗ್ಲೆಂಡ್‌,ಫ್ರಾನ್ಸ್‌‌,ದಕ್ಷಿಣ ಕೋರಿಯಾ,ಜಪಾನ್‌,ನೆದರ್‌ಲ್ಯಾಂಡ್‌‌,ಆಸ್ಟ್ರೇಲಿಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಎರಡು ಕಂಪೆನಿಗಳ ಮಧ್ಯೆ ಕಾನೂನು ಸಮರ ನಡೆಯುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting