Subscribe to Gizbot

ಭಾರತದ ಮಾರುಕಟ್ಟೆಗೆ ಬ್ಲ್ಯಾಕ್‌ಬೆರಿ z10 ಬಿಡುಗಡೆ

Posted By:

ಕೊನೆಗೂ ಕೆನಡಾ ಮೂಲದ ಮೊಬೈಲ್‌ ಕಂಪೆನಿ ಬ್ಲ್ಯಾಕ್‌ಬೆರಿ ತನ್ನ z10 ಸ್ಮಾರ್ಟ್‌ಫೋನ್‌ನ್ನು  ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ಈ ಸ್ಮಾರ್ಟ್‌ಫೋನ್‌ ಬ್ಲ್ಯಾಕ್‌ಬೆರಿ 10 ಆಪರೇಟಿಂಗ್‌ ಸಿಸ್ಟಂ ಒಳಗೊಂಡಿದ್ದು ಗ್ರಾಹಕರು ರೂ. 43,490 ದರದಲ್ಲಿ ಈ ಸ್ಮಾರ್ಟ್‌ಫೋನ್‌ ಖರೀದಿಸಬಹುದು.
ವಿಶೇಷತೆ:
4.2 ಇಂಚಿನ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್‌(1280 x 768 ಪಿಕ್ಸೆಲ್)
1.5GHz TI OMAP 4470 ಡ್ಯುಯಲ್‌ ಕೋರ್‌ ಪ್ರೋಸೆಸರ್‌,
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
16GB ಆಂತರಿಕ ಮೊಮೊರಿ
2GB RAM
ಮೈಕ್ರೋ ಎಸ್‌ಡಿ ಸ್ಲಾಟ್‌,ಎಚ್‌ಡಿಎಂಐ ಪೋರ್ಟ್,ವೈಫಿ,ಬ್ಲೂಟೂತ್‌,ಎನ್‌ಎಫ್‌ಸಿ,4G
1,800 mAh ಬ್ಯಾಟರಿ
ಬ್ಲ್ಯಾಕ್‌ಬೆರಿ z10 ವಿಮರ್ಷೆಯನ್ನು ಮುಂದಿನ ಪುಟದಲ್ಲಿ ನೀಡಲಾಗಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ..

ಬ್ಲ್ಯಾಕ್‌ಬೆರಿ ಝಡ್ 10 ಮತ್ತಷ್ಟು ಚಿತ್ರಗಳಿಗಾಗಿ ಗಿಜ್ಬಾಟ್‌ ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟಚ್‌ಸ್ಕ್ರೀನ್‌ ಪರದೆ ಹೇಗೆ ?

ಟಚ್‌ಸ್ಕ್ರೀನ್‌ ಪರದೆ ಹೇಗೆ ?

ಬ್ಲ್ಯಾಕ್‌ಬೆರಿZ10 4.2 ಇಂಚಿನ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್‌ ನೀಡಿದ್ದಾರೆ. ಇದರ ಬೆಲೆ ಮತ್ತು ಪರದೆಯ ಗಾತ್ರಕ್ಕೆ ಹೋಲಿಸಿದರೆ ಪರದೆಯ ರೆಸೊಲೂಶನ್ (1280 x 768 ಪಿಕ್ಸೆಲ್) ಸ್ವಲ್ಪ ಕಡಿಮೆ ಇದೆ ಎನ್ನಬಹುದು.1080 ಪಿಕ್ಸೆಲ್‌ ನೀಡಿದ್ದರೆ ಚೆನ್ನಾಗಿರುತಿತ್ತು.

 ಬ್ಲ್ಯಾಕ್‌ಬೆರಿ 10 ಓಎಸ್‌ ಹೇಗೆ ?

ಬ್ಲ್ಯಾಕ್‌ಬೆರಿ10 ಓಎಸ್‌ ಹೇಗೆ ?

ಈ ಸ್ಮಾರ್ಟ್‌ಫೋನ್‌ ಬ್ಲಾಕ್‌ಬೆರಿ 10 ಓಎಸ್‌ ಆವೃತ್ತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಬ್ಲಾಕ್‌ಬೆರಿ ಹಬ್‌, ಅಲ್ಲದೇ Evernote, Docs To Go, Dropbox ಅಪ್ಲಿಕೇಶನ್‌ಗಳು ಪ್ರೀ ಇನ್‌ಸ್ಟಾಲ್‌ ಆಗಿದೆ. ಹಾಗಾಗಿ ಓಎಸ್‌ ವಿಷಯದಲ್ಲಿ ಉತ್ತಮ ಎಂದು ಹೇಳಬಹುದು.

ಹಾರ್ಡ್‌ವೇರ್‌ ಹೇಗೆ ?

ಹಾರ್ಡ್‌ವೇರ್‌ ಹೇಗೆ ?

ಬ್ಲಾಕ್‌ಬೆರಿ1.5GHz ಕ್ರೈಟ್‌ ಡ್ಯುಯಲ್‌ ಕೋರ್‌ ಪ್ರೋಸೆಸರ್‌ ಮತ್ತು 2GB RAM ನೊಂದಿಗೆ ಮಾರುಕಟ್ಟೆಗೆ ಬಂದಿದೆ. ಪ್ರೋಸೆಸರ್‌ ಮತ್ತು RAM ಶಕ್ತಿಶಾಲಿಯಾಲಿಯಾಗಿರುವುದರಿಂದ ಸುಲಭವಾಗಿ ಆಪರೇಟ್‌ ಮಾಡಬಹುದು. ಆದ್ರೆ ಕ್ವಾಡ್‌ ಕೋರ್‌ ಪ್ರೋಸೆಸರ್‌ ಇರುತ್ತಿದ್ದರೆ ಚೆನ್ನಾಗಿರುತಿತ್ತು. ಯಾಕೆಂದರೆ ಎಚ್‌ಟಿಸಿ ಬಟರ್‌ಫ್ಲೈಯಲ್ಲಿ ಕ್ವಾಡ್‌ ಕೋರ್‌ ಪ್ರೋಸೆಸರ್‌ ಇದೆ.

ಕ್ಯಾಮೆರಾ ಹೇಗೆ ?

ಕ್ಯಾಮೆರಾ ಹೇಗೆ ?

ಬ್ಲಾಕ್‌ಬೆರಿಯಲ್ಲಿ ಹಿಂದುಗಡೆ 8 ಎಂಪಿ ಕ್ಯಾಮೆರಾ, ಮುಂದುಗಡೆ ವೀಡಿಯೋ ಕರೆಗಾಗಿ 2 ಎಂಪಿ ಕ್ಯಾಮೆರಾ ನೀಡಿದ್ದಾರೆ. 8 ಎಂಪಿ ಕ್ಯಾಮೆರಾದೊಂದಿಗೆ ಎಲ್‌ಇಡಿ ಫ್ಲ್ಯಾಶ್‌ ನೀಡಿರುವುದರಿಂದ ಚೆನ್ನಾಗಿ ಫೋಟೋಗಳನ್ನು ತೆಗೆಯಬಹುದು. ಕ್ಯಾಮೆರಾ ವಿಚಾರದಲ್ಲಿ ಬ್ಲಾಕ್‌ಬೆರಿಗೆ ಫುಲ್‌ ಮಾರ್ಕ್‌ ಕೊಡಬಹುದು.

ಬ್ಯಾಟರಿ ಹೇಗೆ ?

ಬ್ಯಾಟರಿ ಹೇಗೆ ?

ಬ್ಲಾಕ್‌ಬೆರಿZ10 1,800 mAh ಬ್ಯಾಟರಿಯೊಂದಿಗೆ ಬಂದಿದೆ.ಈ ವಿಚಾರದಲ್ಲಿ ಸಾಧಾರಣ ಎಂದೇ ಹೇಳಬಹುದು. 2,020 mAh ನೀಡಿದ್ದರೆ ಚೆನ್ನಾಗಿರುತಿತ್ತು.

ಬ್ಲಾಕ್‌ಬೆರಿ ವರ್ಲ್ಡ ಹೇಗೆ ?

ಬ್ಲಾಕ್‌ಬೆರಿ ವರ್ಲ್ಡ ಹೇಗೆ ?

ಈ ಸ್ಮಾರ್ಟ್‌ಫೋನ್‌ ಖರೀದಿಸಿದ್ರೆ ನಿಮಗೆ ಕೇವಲ 70 ಸಾವಿರ ಅಪ್ಲಿಕೇಶನ್‌ಗಳನ್ನು ಮಾತ್ರ ಬಳಸಬಹುದು. ಆದ್ರೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ನಿಮಗೆ ಲಕ್ಷಕ್ಕಿಂತ ಹೆಚ್ಚು ಅಪ್ಲಿಕೇಶನ್‌ ಸಿಗುತ್ತದೆ. ಈ ವಿಚಾರದಲ್ಲಿ ಬ್ಲಾಕ್‌ಬೆರಿ ಇನ್ನೂ ಅಭಿವೃದ್ಧಿಯಾಗಬೇಕಿದೆ.

ಬೆಲೆ ಹೇಗೆ ?

ಬೆಲೆ ಹೇಗೆ ?

ಓಎಸ್ ಒಂದನ್ನು ಬಿಟ್ಟು ಉಳಿದ ವಿಚಾರದಲ್ಲಿ ಎಚ್‌ಟಿಸಿ ಬಟರ್‌ಫ್ಲೈ ಹೋಲಿಸಿದಾಗ ತೀರಾ ದುಬಾರಿ ಆಯ್ತು ಎಂದೇ ಹೇಳಬಹುದು. ಕ್ವಾಡ್‌ ಕೋರ್‌ ಪ್ರೋಸೆಸರ್‌ ಇಲ್ಲ.ಬ್ಯಾಟರಿ, ಸ್ಕ್ರೀನ್‌ ಪಿಕ್ಸೆಲ್‌ ಗುಣಮಟ್ಟದ ಈ ಹ್ಯಾಂಡ್‌ಸೆಟ್‌ ದರಕ್ಕೆ ಹೋಲಿಸಿದ್ರೆ ಸಿಕ್ಕಾಪಟ್ಟೆ ದುಬಾರಿ ಆಗಿದೆ. 35,000 ರೂ ದರವನ್ನು ನಿಗದಿ ಮಾಡಿದ್ರೆ ಚೆನ್ನಾಗಿರುತಿತ್ತು. ಇದೇ ವಿಶೇಷತೆಗಳಿರುವ ನೋಕಿಯಾ ಲ್ಯೂಮಿಯಾದ 920 ಬೆಲೆ ಸದ್ಯ ಮಾರುಕಟ್ಟೆಯಲ್ಲಿ ರೂ. 36,000 ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot