ಬ್ಲ್ಯಾಕ್‌ಬೆರಿ ಸ್ಮಾರ್ಟ್‌ಫೋನಿನ ಬೆಲೆ ದಿಢೀರ್ ಇಳಿಕೆ
ಬ್ಲ್ಯಾಕ್‌ಬೆರಿ ಝಡ್ 10 ಸ್ಮಾರ್ಟ್‌ಫೋನಿನ ಬೆಲೆ ದಿಢೀರ್ ಇಳಿಕೆಯಾಗಿದೆ. 43,490 ಬೆಲೆಯಲ್ಲಿ ಬಿಡುಗಡೆಯಾಗಿದ್ದ ಸ್ಮಾರ್ಟ್‌ಫೋನ್ ಈಗ ಮಾರುಕಟ್ಟೆಯಲ್ಲಿ 17,990 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ.
ಬ್ಲ್ಯಾಕ್‌ಬೆರಿ ತನ್ನ 10 ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಆಫರ್ ಪ್ರಕಟಿಸಿದೆ. ಈ 60 ದಿನಗಳ ಸೀಮಿತ ಅವಧಿಯ ಆಫರ್ ಇದಾಗಿದ್ದು ನಂತರ ಈ ಸ್ಮಾರ್ಟ್‌ಫೋನಿನ ಬೆಲೆ ಹೆಚ್ಚಾಗಲಿದೆ. ಬ್ಲ್ಯಾಕ್‌ಬೆರಿ 10 ಓಎಸ್ ,2 ಜಿಬಿ ರ್‍ಯಾಮ್,16 ಜಿಬಿ ಆಂತರಿಕ ಮೆಮೊರಿ, 8 ಎಂಪಿ ಹಿಂದುಗಡೆ ಕ್ಯಾಮೆರಾವನ್ನು ಹೊಂದಿದೆ.ಸದ್ಯದ ಮಾರುಕಟ್ಟೆಯಲ್ಲಿ ವಿದೇಶಿ ಕಂಪೆನಿಗಳು ಬಿಡುಗಡೆ ಮಾಡಿರುವ 2 ಜಿಬಿ ರ್‍ಯಾಮ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳ ಪೈಕಿ ಅತಿ ಕಡಿಮೆ ಬೆಲೆಗೆ ಲಭ್ಯವಾಗುವ ಸ್ಮಾರ್ಟ್‌ಫೋನ್ ಇದಾಗಿದೆ.
ಬ್ಲ್ಯಾಕ್‌ಬೆರಿ ಝಡ್ 10
ವಿಶೇಷತೆ:
ಸಿಂಗಲ್ ಸಿಮ್
4.2 ಇಂಚಿನ ಕೆಪಾಸಿಟಿವ್ ಸ್ಕ್ರೀನ್(1280 x 768 ಪಿಕ್ಸೆಲ್)
1.5 GHz ಡ್ಯುಯಲ್ ಕೋರ್ ಪ್ರೊಸೆಸರ್
ಬ್ಲ್ಯಾಕ್‌ಬೆರಿ 10 ಓಎಸ್
2 ಜಿಬಿ ರ್‍ಯಾಮ್
16 ಜಿಬಿ ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
64ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್
1800 mAh ಬ್ಯಾಟರಿ
ಇದನ್ನೂ ಓದಿ: ಮಾರುಕಟ್ಟೆಯಲ್ಲಿರುವ ಟಾಪ್ ಮಿಡ್ ರೇಂಜ್ ಸ್ಮಾರ್ಟ್‌ಫೋನ್‌ಗಳು


Click it and Unblock the Notifications




