ಸದ್ಯದಲ್ಲೇ ಬ್ಲ್ಯಾಕ್‌ಬೆರಿಯಿಂದ ಮಿಡ್‌ ರೇಂಜ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

Posted By:

ನಷ್ಟದಲ್ಲಿರುವ ಬ್ಲ್ಯಾಕ್‌ಬೆರಿ ಕೊನೆಗೂ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಸದ್ಯದಲ್ಲೇ ಬಿಡುಗಡೆ ಮಾಡಲು ಮುಂದಾಗುತ್ತಿದೆ.ಬ್ಲ್ಯಾಕ್‌ಬೆರಿ ಝಿ 3 ಹೆಸರಿನ 5 ಇಂಚಿನ ಸ್ಕ್ರೀನ್‌ ಹೊಂದಿರುವ ಮಿಡ್‌ ರೇಂಜ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲಿದೆ ಎಂದು ವಿದೇಶಿ ಟೆಕ್‌ ಮಾಧ್ಯಮಗಳು ವರದಿ ಮಾಡಿವೆ.


ಈ ಸ್ಮಾರ್ಟ್‌ಫೋನಿನ ವಿಶೇಷತೆ ಸಂಪೂರ್ಣ‌ ಬಹಿರಂಗಗೊಂಡಿಲ್ಲ.ಮುಂದಿನ ವಾರ ಈ ಸ್ಮಾರ್ಟ್‌ಫೋನ್‌ ಇಂಡೋನೇಷ್ಯಾದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌,1.2 GHz ಡ್ಯುಯಲ್‌ ಕೋರ್‍ ಪ್ರೊಸೆಸರ್‍ ಬ್ಲ್ಯಾಕ್‌ಬೆರಿ 10.2.1 ಓಎಸ್‌,8 ಜಿಬಿ ಆಂತರಿಕ ಮೆಮೊರಿಯನ್ನು ಈ ಸ್ಮಾರ್ಟ್‌ಫೋನ್‌ ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತಿದೆ.

 ಸದ್ಯದಲ್ಲೇ ಬ್ಲ್ಯಾಕ್‌ಬೆರಿಯಿಂದ ಮಿಡ್‌ ರೇಂಜ್‌ ಸ್ಮಾರ್ಟ್‌ಫೋನ್‌ ಬಿಡುಗಡೆ


ಮಾಧ್ಯಮಗಳಲ್ಲಿ ಸೋರಿಕೆಯಾಗಿರುವ ಬ್ಲ್ಯಾಕ್‌ಬೆರಿ ಝಿ 3 ವಿಶೇಷತೆಗಳು
ವಿಶೇಷತೆ:
ಸಿಂಗಲ್‌ ಸಿಮ್‌
5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(540 x 960 ಪಿಕ್ಸೆಲ್‌)
1.2 GHz ಡ್ಯುಯಲ್‌ ಕೋರ್‍ ಪ್ರೊಸೆಸರ್‍
ಬ್ಲ್ಯಾಕ್‌ಬೆರಿ 10.2.1 ಓಎಸ್‌
8 ಜಿಬಿ ಆಂತರಿಕ ಮೆಮೊರಿ
1.5 ಜಿಬಿ ರ್‍ಯಾಮ್‌
5 ಎಂಪಿ ಹಿಂದುಗಡೆ ಕ್ಯಾಮೆರಾ
1.1 ಎಂಪಿ ಮುಂದುಗಡೆ ಕ್ಯಾಮೆರಾ

ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot