'ವೀವೊ ವಿ15 ಪ್ರೋ' ಸ್ಮಾರ್ಟ್‌ಫೋನಿನ ಫೀಚರ್ಸ್‌ ನೋಡಿ ದಂಗಾಗಲಿದೆ 'ರೆಡ್ಮಿ'!

|

ಚೀನಾ ಮೂಲದ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿಗಳಲ್ಲಿ ಭಿನ್ನವಾಗಿ ಗುರುತಿಸಿಕೊಂಡಿರುವ ವೀವೊ ಕಂಪನಿಯು, ಈಗಾಗಲೇ ಸೆಲ್ಫೀ ಕ್ಯಾಮೆರಾ ವೈಶಿಷ್ಟತೆಯಿಂದ ಜನಪ್ರಿಯತೆ ಗಳಿಸಿದೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ವೀವೊ ತನ್ನ ಹೊಸ ವಿ15 ಪ್ರೋ ಸ್ಮಾರ್ಟ್‌ಫೋನ್‌ ಕುರಿತಾಗಿ ಮಾರುಕಟ್ಟೆಯಲ್ಲಿ ಭಾರೀ ಸುದ್ದಿಯಲ್ಲಿದ್ದು, ಇದೀಗ ವೀವೊದ 'ವಿ15 ಪ್ರೋ' ಸ್ಮಾರ್ಟ್‌ಫೋನ್‌ 'ಬ್ಲೂ ವೇರಿಯಂಟ್' ಫಸ್ಟ್ ಲುಕ್ ಬಿಡುಗಡೆಯಾಗಿ ಮತ್ತೆ ಸದ್ಧು ಮಾಡುತ್ತಿದೆ.

'ವೀವೊ ವಿ15 ಪ್ರೋ' ಸ್ಮಾರ್ಟ್‌ಫೋನಿನ ಫೀಚರ್ಸ್‌ ನೋಡಿ ದಂಗಾಗಲಿದೆ 'ರೆಡ್ಮಿ'!

ವೀವೊ ವಿ15 ಪ್ರೋ ಸ್ಮಾರ್ಟ್‌ಫೋನಿನ ಬ್ಲೂ ಕಲರ್ ವೇರಿಯಂಟ್‌ನ ಮೊದಲ ನೋಟ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೊದಲ ನೋಟದಲ್ಲೇ ಗ್ರಾಹಕರ ಮನಗೆಲ್ಲುವಂತಿದೆ. ವೀವೊ ವಿ15 ಸ್ಮಾರ್ಟ್‌ಫೋನ್ ಅತೀ ನೂತನ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎಂಬ ಸೂಚನೆಯನ್ನು ನೀಡಿರುವ ಕಂಪನಿ ಸ್ಮಾರ್ಟ್‌ಫೋನ್‌ ಪ್ರಿಯರಲ್ಲಿ ಕುತೂಹಲ ಮೂಡಿಸಿದ್ದು, ಬಿಡುಗಡೆಯ ದಿನಾಂಕವನ್ನೇ ಎದುರು ನೋಡುತ್ತಿದ್ದಾರೆ. ಎನ್ನಲಾಗುತ್ತಿದೆ.

'ವೀವೊ ವಿ15 ಪ್ರೋ' ಸ್ಮಾರ್ಟ್‌ಫೋನಿನ ಫೀಚರ್ಸ್‌ ನೋಡಿ ದಂಗಾಗಲಿದೆ 'ರೆಡ್ಮಿ'!

'ಪಾಪ್-ಅಪ್' ಸೆಲ್ಫೀ ಕ್ಯಾಮೆರಾವನ್ನು ಹೊಂದಿರುವುದು ವೀವೊ ವಿ15 ಸ್ಮಾರ್ಟ್‌ಫೋನಿನ ಪ್ರಮುಖ ಆಕರ್ಷಣೆಯಾಗಿದ್ದು, ಈ 'ಪಾಪ್-ಅಪ್' ಸೆಲ್ಫೀ ಕ್ಯಾಮೆರಾ 2019 ರ ಹೊಸ ಟ್ರೆಂಡ್ ಆಗಲಿದೆ. ಇನ್ನೂ ಇದರೊಂದಿಗೆ 48 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಸೇರಿದಂತೆ ಬಿಗ್‌ ಡಿಸ್‌ಪ್ಲೇ, ಮತ್ತು ಫಿಂಗರ್‌ಪ್ರಿಂಟ್ ಸೆನ್ಸಾರ್ ನಂತಹ ನೂತನ ಫೀಚರ್ಸ್‌ಗಳನ್ನು ಸಹ ಒಳಗೊಂಡಿದೆ. ಇವುಗಳೊಂದಿಗೆ ವೀವೊ ವಿ15 ಪ್ರೋ ಸ್ಮಾರ್ಟ್‌ಫೋನ್ ಇತರೆ ಏನೆಲ್ಲಾ ವಿಶೇಷತೆಗಳನ್ನು ಹೊಂದಿರಲಿದೆ ಎಂಬುದನ್ನು ನೋಡೋಣ ಬನ್ನಿ.

48 ಮೆಗಾಪಿಕ್ಸಲ್ ಕ್ಯಾಮೆರಾ.!

48 ಮೆಗಾಪಿಕ್ಸಲ್ ಕ್ಯಾಮೆರಾ.!

ವೀವೊ ತನ್ನ ಹೊಸ ವಿ 15 ಪ್ರೋ ಸ್ಮಾರ್ಟ್‌ಫೋನ್ ಮೂಲಕ ಮೊದಲ ಬಾರಿಗೆ 48 ಮೆಗಾಪಿಕ್ಸಲ್ ಸಾಮರ್ಥ್ಯ ಇರುವ ಕ್ಯಾಮೆರಾವನ್ನು ಪರಿಚಯಿಸುತ್ತಿದೆ. ಹಿಂಭಾಗದಲ್ಲಿ ಒಟ್ಟು ಮೂರು ಕ್ಯಾಮೆರಾಗಳಿದ್ದು, ಮುಖ್ಯ ಕ್ಯಾಮೆರಾ 48ಮೆಗಾಪಿಕ್ಸಲ್, ಸೆಂಕೆಂಡರಿ ಕ್ಯಾಮೆರಾ 8ಮೆಗಾಪಿಕ್ಸಲ್ ಮತ್ತು ತ್ರಿತಿಯ ಕ್ಯಾಮೆರಾ 5 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

POP UP 32 ಮೆಗಾಪಿಕ್ಸಲ್ ಸೆಲ್ಫೀ ಕ್ಯಾಮೆರಾ.!

POP UP 32 ಮೆಗಾಪಿಕ್ಸಲ್ ಸೆಲ್ಫೀ ಕ್ಯಾಮೆರಾ.!

ಸ್ಮಾರ್ಟ್‌ಫೋನ್‌ನಲ್ಲಿ ಮೊದಲ ಬಾರಿಗೆ 32ಮೆಗಾಪಿಕ್ಸಲ್ ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾ ವೀವೊ ಪರಿಚಯಿಸುತ್ತಿದೆ. POP UP ಸೆಲ್ಫೀ ಕ್ಯಾಮೆರಾ ಇರಲಿದ್ದು, ಈ ಸೆಲ್ಫೀ ಕ್ಯಾಮೆರಾ ವಿಶೇಷವೆಂದರೇ ಬಾಹ್ಯವಾಗಿ ಕ್ಯಾಮೆರಾ ಕಾಣಿಸುವುದಿಲ್ಲ. ಆದರೆ ಸೆಲ್ಫೀ ಸೆರೆಹಿಡಿಯುವಾಗ ಮಾತ್ರ ಕ್ಯಾಮೆರಾ ತೆರೆದುಕೊಳ್ಳುತ್ತದೆ.

ಡಿಸ್‌ಪ್ಲೇ ಮತ್ತು ರಚನೆ

ಡಿಸ್‌ಪ್ಲೇ ಮತ್ತು ರಚನೆ

ವೀವೊ ವಿ 15 ಪ್ರೋ ಸ್ಮಾರ್ಟ್‌ಫೋನ್‌ ಸೂಪರ್ AMOLEDನ 6.4 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್ ಕ್ವಾಲಿಟಿಯ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಇದರೊಂದಿಗೆ ಡಿಸ್‌ಪ್ಲೇಯಲ್ಲಿಯೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯವನ್ನು ಹೊಂದಿರಲಿದೆ ಎನ್ನಲಾಗುತ್ತಿದೆ. ವಿ 15 ಪ್ರೋ ಸ್ಮಾರ್ಟ್‌ಫೋನ್‌ನಿನ ಬಾಹ್ಯರಚನೆ ಸುಂದರವಾಗಿದ್ದು, ಗ್ಲಾಸಿ ಲುಕ್ ನಲ್ಲಿ ಕಂಗೊಳಿಸುತ್ತದೆ.

ಪ್ರೊಸೆಸರ್

ಪ್ರೊಸೆಸರ್

ಕ್ವಾಲ್ಕಂ ಸ್ನಾಪ್‌ಡ್ರಾಗನ್ 675 ಉತ್ತಮ ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿರಲಿದ್ದು, ಇದರೊಂದಿಗೆ 6GB RAM ಸಾಮರ್ಥ್ಯ ಮತ್ತು 128 GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಸಹ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಹೆಚ್ಚು RAM ಬೇಡುವ ಕೆಲಸಗಳು ಮತ್ತು ಹೈ ಎಂಡ್ ಗೇಮ್ಸ್‌ಗಳನ್ನು ಸುಲಭವಾಗಿ ಯಾವುದೇ ಅಡೆ ತಡೆ ಇಲ್ಲದೇ ಆಡಲು ಸಹಕರಿಸುತ್ತದೆ.

ಬೆಲೆ ಮತ್ತು ಲಭ್ಯತೆ.?

ಬೆಲೆ ಮತ್ತು ಲಭ್ಯತೆ.?

ಹಲವು ವಿಶೇಷತೆಗಳಿಂದ ಕೂಡಿರುವ 'ವೀವೊ ವಿ 15 ಪ್ರೋ' ಸ್ಮಾರ್ಟ್‌ಫೋನ್‌ ಇದೇ ಫೆಬ್ರುವರಿಯ 20 ರಂದು ಮಾರುಕಟ್ಟೆಗೆ ಬರುವ ಸಾಧ್ಯತೆಗಳು ಹೆಚ್ಚಾಗಿದೆ. ಇದರ ಬೆಲೆ ಸುಮಾರು 25,000 ರೂ.ಗಳು ಎಂದು ಅಂದಾಜಿಸಲಾಗಿದೆ.

Best Mobiles in India

English summary
vivo's upcoming V15 Pro is in the news a lot these days, whether through leaks or official teasers coming out. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X