Subscribe to Gizbot

ಮೊಬೈಲ್ ಮಾರುಕಟ್ಟೆ ತಲ್ಲಣ: ರೂ.499ಕ್ಕೆ BSNL ಫೀಚರ್ ಫೋನ್ ಲಾಂಚ್..!

Written By:

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಸಂಪ್ರದಾಯಗಳಿಗೆ ನಾಂದಿ ಹಾಡಿರುವ ರಿಲಯನ್ಸ್ ಮಾಲೀಕತ್ವದ ಜಿಯೋ, ಟೆಲಿಕಾಂ ಸೇವೆಯೊಂದಿಗೆ ಹೆಚ್ಚುವರಿ ಸೇವೆಗಳನ್ನು ಬಳಕೆದಾರರಿಗೆ ನೀಡಲು ಮುಂದಾಗಿತ್ತು. ಇದನ್ನೇ ಇತರೆ ಟೆಲಿಕಾಂ ಕಂಪನಿಗಳು ಫಾಲೋ ಮಾಡಲು ಶುರು ಮಾಡಿರುವುದು ತಿಳಿದಿರುವ ವಿಚಾರ. ಹೀಗೆಯೇ ಜಿಯೋ ಫೋನ್ ಲಾಂಚ್ ಮಾಡಿದ ಮಾದರಿಯಲ್ಲಿ ಇತರೆ ಟೆಲಿಕಾಂ ಕಂಪನಿಗಳು ತಮ್ಮದೇ ಫೋನ್‌ ಗಳನ್ನು ಲಾಂಚ್ ಮಾಡಲು ಮುಂದಾಗಿರುವುದನ್ನು ನಾವು ನೋಡಬಹುದಾಗಿದೆ.

ಮೊಬೈಲ್ ಮಾರುಕಟ್ಟೆ ತಲ್ಲಣ: ರೂ.499ಕ್ಕೆ BSNL ಫೀಚರ್ ಫೋನ್ ಲಾಂಚ್..!

ಸದ್ಯ ಸರಕಾರಿ ಸ್ವಾಮ್ಯದ BSNL ಹೊಸ ಬಳಕೆದಾರರನ್ನು ಸೆಳೆಯುವ ಸಲುವಾಗಿ ಮೊಬೈಲ್ ಫೋನ್ ತಯಾರಿಕ ಕಂಪನಿ ಡಿಟೆಲ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು, ರೂ.499ಕ್ಕೆ ಫೀಚರ್ ಫೋನ್ ಅನ್ನು ಲಾಂಚ್ ಮಾಡಿದೆ. ಈ ಫೋನ್ ನೊಂದಿಗೆ BSNL ಒಂದು ವರ್ಷದ ಆಫರ್ ವೊಂದನ್ನು ನೀಡಲು ಮುಂದಾಗಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊದಲ ಪಾಲುದಾರಿಕೆ:

ಮೊದಲ ಪಾಲುದಾರಿಕೆ:

ಮೊಬೈಲ್ ಫೋನ್ ತಯಾರಿಕ ಕಂಪನಿ ಡಿಟೆಲ್ ದೊಂದಿಗೆ BSNL ಮೊದಲ ಬಾರಿಗೆ ಒಪ್ಪಂದಕ್ಕೆ ಮುಂದಾಗಿದೆ ಎನ್ನಲಾಗಿದೆ. ಈ ಹಿಂದೆ ಭಾರತ್ ಫೀಚರ್ ಫೋನ್ ಬಳಕೆದಾರರಿಗೆ BSNL ಉತ್ತಮ ಆಫರ್ ಗಳನ್ನು ನೀಡಿತ್ತು. ಈಗ ಇದೇ ಮಾದರಿಯಲ್ಲಿ ಡಿಟೆಲ್ D1 ಫೀಚರ್ ಫೋನ್ ಅನ್ನು ರೂ.499ಕ್ಕೆ ಮಾರಾಟ ಮಾಡುತ್ತಿದೆ.

 ಡಿಟೆಲ್ D1 ಫೀಚರ್ ಫೋನ್:

ಡಿಟೆಲ್ D1 ಫೀಚರ್ ಫೋನ್:

ಮಾರುಕಟ್ಟೆಯಲ್ಲಿ ಡಿಟೆಲ್ D1 ಫೀಚರ್ ಫೋನ್ ರೂ.346ಕ್ಕೆ ಲಾಂಚ್ ಆಗಿದ್ದು, BSNL ಈ ಫೀಚರ್ ಫೋನ್ ಅನ್ನು ತನ್ನ ಒಂದು ವರ್ಷದ ಪ್ಲಾನ್‌ ನೊಂದಿಗೆ ಬಿಡುಗಡೆ ಮಾಡುತ್ತಿದ್ದು, ಈ ಹಿನ್ನಲೆಯಲ್ಲಿ ರೂ.499ಕ್ಕೆ ಮಾರಾಟ ಮಾಡಲು ಮುಂದಾಗಿದೆ. ಇದಕ್ಕಾಗಿ ರೂ.153 ಪ್ಲಾನ್ ಅನ್ನು ನೀಡಲಿದೆ.

BSNL ಪ್ಲಾನ್:

BSNL ಪ್ಲಾನ್:

ಡಿಟೆಲ್ D1 ಫೀಚರ್ ಫೋನ್ ಕೊಳ್ಳುವವರಿಗೆ BSNL ರೂ.499ಕ್ಕೆ ಮಾರಾಟವಾಗುತ್ತಿದ್ದು, ರೂ.103 ಟಾಕ್ ಟೈಮ್ ದೊರೆಯಲಿದ್ದು, 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದರಲ್ಲಿ BSN to BSNL 15 ಪೈಸೆ (ಪ್ರತಿ ನಿಮಿಷಕ್ಕೆ)ದರದಲ್ಲಿ ಕರೆ ಮಾಡಬಹುದಾಗಿದೆ. ಹಾಗೆಯೇ BSNL ನಿಂದ ಬೇರೆ ಕಂಪನಿಗಳಿಗೆ 40 ಪೈಸೆ (ಪ್ರತಿ ನಿಮಿಷಕ್ಕೆ)ದರದಲ್ಲಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

ಸಬ್‌ಕಾ ಸಥ್ ಸಬ್‌ಕಾ ವಿಕಾಸ್:

ಸಬ್‌ಕಾ ಸಥ್ ಸಬ್‌ಕಾ ವಿಕಾಸ್:

ಡಿಟೆಲ್ D1 ಫೀಚರ್ ಫೋನ್ ಬಿಡುಗಡೆ ಮಾಡಿರುವ BSNL ಪ್ರಧಾನಿ ಮೋದಿ ಅವರ ಹೇಳಿಕೆಯಾದ 'ಸಬ್‌ಕಾ ಸಥ್ ಸಬ್‌ಕಾ ವಿಕಾಸ್' ಅನ್ನು ಬಳಸಿಕೊಂಡಿದ್ದು, ಕಡಿಮೆ ಬೆಲೆಗೆ ಎಲ್ಲಿಗೂ ಟೆಲಿಕಾಂ ಸೇವೆಯೂ ದೊರೆಯಲಿ ಎಂಬುದೇ ಉದ್ದೇಶ ಎಂದಿದೆ.

ಡಿಟೆಲ್ D1 ಫೀಚರ್ ಫೋನ್ ವಿಶೇಷತೆ:

ಡಿಟೆಲ್ D1 ಫೀಚರ್ ಫೋನ್ ವಿಶೇಷತೆ:

ಡಿಟೆಲ್ D1 ಫೀಚರ್ ಫೋನ್ ನಲ್ಲಿ 1.44 ಇಂಚಿನ ಮೊನೊಕ್ರೊಮ್ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, GSM 2G ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ. ಇದು ಒಂದೇ ಸಿಮ್ ಹಾಕಿಕೊಳ್ಳುವ ಅವಕಾಶವನ್ನು ಹೊಂದಿದೆ. ಜೊತೆಗೆ 650mAh ಬ್ಯಾಟರಿ ಮತ್ತು ಟಾರ್ಚ್ ಲೈಟ್ ಆಯ್ಕೆಯನ್ನು ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
How to read deleted WhatsApp messages - GIZBOT KANNADA

ಓದಿರಿ: ಜಿಯೋ ಹೊಸ ಸೇವೆ: ನಿಮ್ಮ ಜೇಬಿನಲ್ಲಿ ಕಾಸಿರಲೇ ಬೇಕಾಗಿಲ್ಲ..!

English summary
BSNL Detel D1 Feature Phone Priced at Rs 499. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot