ಜಿಯೋ ಹೊಸ ಸೇವೆ: ನಿಮ್ಮ ಜೇಬಿನಲ್ಲಿ ಕಾಸಿರಲೇ ಬೇಕಾಗಿಲ್ಲ..!

|

ಭಾರತದ ಡಿಜಿಟಲ್ ವ್ಯವಹಾರವು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಯೋ, ಏರ್‌ಟೆಲ್‌ಗೆ ಸೆಡ್ಡು ಹೊಡೆಯುವ ಸಲುವಾಗಿ ತನ್ನ ಪೇಮೆಂಟ್ ಬ್ಯಾಂಕ್ ಕಾರ್ಯಚರಣೆಯನ್ನು ಆರಂಭಿಸಿದೆ. ಈ ಹಿನ್ನಲೆಯಲ್ಲಿ ತನ್ನ ಬ್ಯಾಂಕ್ ಸೇವೆಯ ಪ್ರಾರಂಭವನ್ನು ಬಳಕೆದಾರರ ನೆನಪಿನಲ್ಲಿ ಉಳಿಯುವಂತೆ ಮಾಡಲು, ಉದ್ಯೋಗಿ ಪ್ರಯೋಜನ ನಿರ್ವಹಣೆಯಲ್ಲಿನ ಮುಂಚೂಣಿಯಲ್ಲಿರುವ ಸೊಡೆಕ್ಸೋ ನೊಂದಿಗೆ ಕೈ ಜೋಡಿಸಿದ್ದು, ಹೊಸ ಮಾದರಿಯ ಸೇವೆಯನ್ನು ನೀಡಲು ಮುಂದಾಗಿದೆ.

ಜಿಯೋ ಹೊಸ ಸೇವೆ: ನಿಮ್ಮ ಜೇಬಿನಲ್ಲಿ ಕಾಸಿರಲೇ ಬೇಕಾಗಿಲ್ಲ..!


ಜಿಯೋ ಪೇಮೆಂಟ್ಸ್ ಬ್ಯಾಂಕ್ ನಿರ್ವಹಿಸುತ್ತಿರುವ ವ್ಯಾಲೆಟ್ 'ಜಿಯೋಮನಿ' ಜೊತೆಗೆ ಸೊಡೆಕ್ಸೋ ಮೀಲ್ ಕಾರ್ಡ್‌ಗಳನ್ನು ಲೀಕ್ ಮಾಡಲು ಮುಂದಾಗಿದ್ದು, ಈ ಸಹಭಾಗಿತ್ವದಿಂದಾಗಿ ದೇಶಾದ್ಯಂತ ಸೊಡೆಕ್ಸೋ ಜಾಲದ ಭಾಗವಾಗಿರುವ ಸಾವಿರಾರು ದಿನಸಿ ಅಂಗಡಿಗಳು, ರೆಸ್ಟೋರೆಂಟ್ ಹಾಗೂ ಕೆಫೆ‌ಗಳಂತಹ ಸ್ಥಳಗಳಲ್ಲಿ ಸೊಡೆಕ್ಸೋ ಕೂಪಲನ್ ಅನ್ನು ಡಿಜಿಟಲ್ ಮೂಲಕ ಪಾವತಿ ಮಾಡಬಹುದಾಗಿದೆ.

ಓದಿರಿ: ತೇಜ್‌ನಲ್ಲಿ ಕಾಸು ಬರ್ತಿಲ್ವಾ: ಭೀಮ್ ಆಪ್‌ ಬಳಸಿ ಭರ್ಜರಿ ಕ್ಯಾಷ್ ಬ್ಯಾಕ್ ಪಡೆಯಿರಿ..!

ಸೊಡೆಕ್ಸೋ  ಲಿಂಕ್:

ಸೊಡೆಕ್ಸೋ ಲಿಂಕ್:

ಸೊಡೆಕ್ಸೋ ಮೀಲ್ ಪಾಸ್ ಅನ್ನು ಜಿಯೋಮನಿ ಖಾತೆಯೊಂದಿಗೆ ಲಿಂಕ್ ಮಾಡುವ ಅವಕಾಶವನ್ನು ನೀಡಲಾಗಿದ್ದು, ಕ್ಷಿಪ್ರವಾಗಿ ಬೆಳೆಯುತ್ತಿರುವ ಜಿಯೋಮನಿ ಗ್ರಾಹಕ ಸಮೂಹಕ್ಕೆ ಈಗಾಗಲೇ ಲಭ್ಯವಿರುವ ಹಲವು ಸಾಧ್ಯತೆಗಳ ಸಾಲಿಗೆ ಇದೊಂದು ಹೊಸ ಸೇರ್ಪಡೆಯಾಗಲಿದೆ. ಆಹಾರ ಮತ್ತು ಆಲ್ಕೋಹಾಲ್‌-ರಹಿತ ಪಾನೀಯಗಳ ಖರೀದಿಗೆ ಸೊಡೆಕ್ಸೋ ಕಾರ್ಡನ್ನು ಕೊಂಡೊಯ್ಯಲೇಬೇಕಾದ ಅನಿವಾರ್ಯ ಈ ಮೂಲಕ ನಿವಾರಣೆಯಾಗಲಿದೆ.

ಜಿಯೋಮನಿ ಆಪ್‌:

ಜಿಯೋಮನಿ ಆಪ್‌:

ಗ್ರಾಹಕರು ತಮ್ಮ ಸೊಡೆಕ್ಸೋ ಖಾತೆಯಲ್ಲಿರುವ ಹಣವನ್ನು ಜಿಯೋಮನಿ ಆಪ್‌ಗೆ ಸೇರಿಸಿಕೊಂಡು ತಮ್ಮ ಖರೀದಿಗಳಿಗೆ ಕ್ಷಿಪ್ರ ಹಣಪಾವತಿ ಮಾಡಬಹುದು. ತಮ್ಮ ಸೇವೆಗಳನ್ನು ಹೆಚ್ಚು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಜಿಯೋ ಹಾಗೂ ಸೊಡೆಕ್ಸೋ ಎರಡೂ ಸಂಸ್ಥೆಗಳು ಕೆಲಸ ಮುಂದುವರೆಸಲಿವೆ.

ಡಿಜಿಟಲ್ ತಂತ್ರಜ್ಞಾನ:

ಡಿಜಿಟಲ್ ತಂತ್ರಜ್ಞಾನ:

ಡಿಜಿಟಲ್ ತಂತ್ರಜ್ಞಾನಗಳ ಪ್ರಯೋಜನವನ್ನು ಎಲ್ಲ ಭಾರತೀಯರಿಗೂ ತಲುಪಿಸುವ, ಡಿಜಿಟಲ್ ಜೀವನಶೈಲಿಯನ್ನು ಸಂಪೂರ್ಣವಾಗಿ ಅನುಭವಿಸಲು ಅವರಿಗೆ ನೆರವಾಗುವ ಜಿಯೋ ಪ್ರಯತ್ನವನ್ನು ಈ ಸಹಭಾಗಿತ್ವ ಮಾಡಿಕೊಂಡಿರಿವುದಾಗಿ ಜಿಯೋಮನಿ ಬಿಸಿನೆಸ್ ಮುಖ್ಯಸ್ಥ ಅನಿರ್ಬನ್ ಎಸ್ ಮುಖರ್ಜಿ ತಿಳಿಸಿದ್ದಾರೆ.

ಮೂರು ಮಿಲಿಯನ್ ಬಳಕೆದಾರರು:

ಮೂರು ಮಿಲಿಯನ್ ಬಳಕೆದಾರರು:

ಪ್ರತಿನಿತ್ಯ ಸೊಡೆಕ್ಸೋ ಸೇವೆಗಳನ್ನು ಮೂರು ಮಿಲಿಯನ್ ಗ್ರಾಹಕರ ಬಳಕೆ ಮಾಡಿಕೊಳ್ಳುತ್ತಿದ್ದು, ಅವರ ಅನುಭವವನ್ನು ಉತ್ತಮಪಡಿಸುವ ಸಲುವಾಗಿ ಜಿಯೋಮನಿಯ ಎಂಪಿಓಎಸ್ ವ್ಯವಸ್ಥೆ ಮೂಲಕ ಆಹಾರ ಹಾಗೂ ಆಹಾರೇತರ ಖರೀದಿಗಳನ್ನು ನಡೆಸಲು ಸಹಾಯ ಮಾಡುವುದೇ ಈ ಒಪ್ಪಂದ ಪ್ರಮುಖ ಗುರಿ ಎನ್ನಲಾಗಿದೆ.

Jio Free Caller Tune ! ಜಿಯೋ ಉಚಿತ ಕಾಲರ್‌ಟೂನ್ ಬಳಕೆ ಹೇಗೆ..?
ಮುಂಬೈನಲ್ಲಿ:

ಮುಂಬೈನಲ್ಲಿ:

ಸೊಡೆಕ್ಸೋ ಮೀಲ್ ಕಾರ್ಡ್ ಬಳಸಲು ಹೊಸ ಮಾರ್ಗಗಳನ್ನು ಪರಿಚಯಿಸುವ ಮೂಲಕ ಗ್ರಾಹಕರ ಅನುಭವವನ್ನು ಉತ್ತಮಪಡಿಸಲು ಇದು ಸಹಾಯ ಮಾಡಲಿದ್ದು, ಈ ವ್ಯವಸ್ಥೆಯನ್ನು ಮುಂಬೈನಲ್ಲಿ ಈಗಾಗಲೇ ಪರಿಚಯಿಸಲಾಗಿದ್ದು ಗ್ರಾಹಕರ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ.

ಶೀಘ್ರವೇ ದೇಶದಲ್ಲಿ:

ಶೀಘ್ರವೇ ದೇಶದಲ್ಲಿ:

ದೇಶಾದ್ಯಂತ ಸೊಡೆಕ್ಸೋ ಸ್ವೀಕರಿಸುವ ಎಲ್ಲ ವರ್ತಕರಲ್ಲೂ ಜಿಯೋಮನಿ ವ್ಯವಸ್ಥೆಯನ್ನು ಸದ್ಯದಲ್ಲೇ ಪರಿಚಯಿಸಲಾಗುವುದು. ತಮ್ಮತಮ್ಮ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಜಿಯೋಮನಿ ಹಾಗೂ ಸೊಡೆಕ್ಸೋ ನಡುವಿನ ಈ ಸಹಭಾಗಿತ್ವ ದೇಶದ ಪಾವತಿ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ ತರಲಿದೆ ಎನ್ನಲಾಗಿದೆ.

Best Mobiles in India

Read more about:
English summary
Reliance Jio integrates Sodexo with JioMoney. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X