Home
ಸುದ್ದಿಜಾಲ

BSNLನ ಈ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಇನ್ಮುಂದೆ ಅನ್‌ಲಿಮಿಟೆಡ್ ಡೇಟಾ ಸಿಗೋಲ್ಲ: ಅಘಾತಗೊಂಡ ಗ್ರಾಹಕರು!

ಬಿಎಸ್‌ಎನ್‌ಎಲ್‌ ಪ್ರಮುಖ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾಗಿದ್ದು, ಖಾಸಗಿ ಟೆಲಿಕಾಂ ಸಂಸ್ಥೆಗಳ ವಿರುದ್ಧ ತನ್ನ ಅಸ್ತಿತ್ವ ಕಾಪಾಡಿಕೊಳ್ಳಲು ವಿವಿಧ ರೀತಿಯ ಹಾಗೂ ಅಗ್ಗದ ಬೆಲೆಯ ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿಕೊಂಡು ಬರುತ್ತಿದೆ. ಆದರೆ, ಈಗ ತನ್ನ ಗ್ರಾಹಕರಿಗೆ ಬೇಸರವಾಗುವ ನಿರ್ಧಾರ ಪ್ರಕಟಿಸಿದ್ದು, ಈ ಮೂಲಕ ಮಾಹಿತಿ ಹಾಗೂ ಮನರಂಜನೆ ಪಡೆದುಕೊಳ್ಳುವ ವಿಭಾಗಕ್ಕೆ ದೊಡ್ಡ ಕಡಿವಾಣ ಹಾಕಿದೆ.

ಹೌದು, ಭಾರತ ಸಂಚಾರ ನಿಗಮ ಲಿಮಿಟೆಡ್ (BSNL) ತನ್ನ ರೀಚಾರ್ಜ್‌ಗಳ ಬತ್ತಳಿಕೆಯಲ್ಲಿ ಭಾರೀ ಜನಪ್ರಿಯಗೊಂಡಿದ್ದ 398ರೂ. ಗಳ ಪ್ಲ್ಯಾನ್‌ನಲ್ಲಿ ದೊಡ್ಡ ಬದಲಾವಣೆ ಮಾಡಿದೆ. ಈ ಮೂಲಕ ದೇಶದ ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಆಘಾತವಾದಂತೆ ಆಗಿದೆ. ಹಾಗಿದ್ರೆ, ಬಿಎಸ್‌ಎನ್‌ಎಲ್‌ ಮಾಡಿದ ನಿರ್ಧಾರ ಏನು? ಈ ಜನಪ್ರಿಯ ಪ್ಲ್ಯಾನ್‌ನಲ್ಲಿ ಗ್ರಾಹಕರು ಕಳೆದುಕೊಂಡಿದ್ದೇನು ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

BSNLನ ಈ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಇನ್ಮುಂದೆ ಅನ್‌ಲಿಮಿಟೆಡ್ ಡೇಟಾ ಸಿಗೋಲ್ಲ..

ಬಿಎಸ್‌ಎನ್‌ಎಲ್‌ 398ರೂ. ಗಳ ಪ್ಲ್ಯಾನ್‌ನಲ್ಲಿ ಬದಲಾವಣೆ: 398ರೂ. ಗಳ ರೀಚಾರ್ಜ್‌ ಪ್ಲ್ಯಾನ್‌ ಈ ಹಿಂದೆ ಇದ್ದಂತೆ ಇರುವುದಿಲ್ಲ. ಅಂದರೆ ಈ ಪ್ಲ್ಯಾನ್‌ನಲ್ಲಿ ಲಭ್ಯವಾಗುತ್ತಿದ್ದ ಬೃಹತ್ ಡೇಟಾ ಬಳಕೆ ಅಂದರೆ ಅನಿಯಮಿತ ಡೇಟಾ ಬಳಕೆ ಲಭ್ಯವಾಗುವುದಿಲ್ಲ. ವಿಶೇಷ ಏನೆಂದರೆ ಈ ಬದಲಾವಣೆಯನ್ನು ಮೌನವಾಗಿ ಮಾಡಲಾಗಿದ್ದು, ಈ ಮೂಲಕ ಸದ್ದಿಲ್ಲದೆ ಶುಲ್ಕ ಹೆಚ್ಚಳದ ಕ್ರಮವನ್ನು ಅನುಸರಿಸುತ್ತಿದೆ.

ನವೀಕರಿಸಿದ ಪ್ಲ್ಯಾನ್‌ನಲ್ಲಿ ಏನೆಲ್ಲಾ ಲಭ್ಯ?: ಈ ವಿಶೇಷ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಬಳಕೆದಾರರು 120GB ಡೇಟಾವನ್ನು ಪಡೆಯುತ್ತಾರೆ. ಇದು ಮುಗಿದ ನಂತರ 40 Kbps ವೇಗದ ಇಂಟರ್ನೆಟ್‌ ಬಳಕೆ ಲಭ್ಯ. ಹಾಗೆಯೇ ಅನಿಯಮಿತ ಕರೆ ಸೌಲಭ್ಯ ಹಾಗೂ ದಿನವೂ 100 ಎಸ್‌ಎಮ್‌ಎಸ್‌ಗಳನ್ನು ಬಳಕೆ ಮಾಡಿಕೊಳ್ಳಬಹುದು. 120GB ಡೇಟಾ FUP ಮಿತಿಯೊಂದಿಗೆ ಬರುತ್ತಿರುವುದರಿಂದ ಬಿಎಸ್‌ಎನ್‌ಎಲ್‌ನ ಈ ಪ್ಲ್ಯಾನ್‌ ಇನ್ಮುಂದೆ ಬಳಕೆದಾರರಿಗೆ ತುಂಬಾ ದುಬಾರಿಯಾದಂತೆ ಆಗಿದೆ.

ಪ್ರಮುಖ ಟೆಲಿಕಾಂ ಸಂಸ್ಥೆಗಳಾದ ಜಿಯೋ ಮತ್ತುಏರ್‌ಟೆಲ್‌ನ 5G ಬಳಕೆ ಮಾಡುವ ಗ್ರಾಹಕರಿಗೆ ಅನಿಯಮಿತ ಡೇಟಾವನ್ನು ಬಳಕೆ ಮಾಡಲು ಅನುವು ಮಾಡಿಕೊಟ್ಟಿವೆ. ಈ ನಡುವೆ ಬಿಎಸ್‌ಎನ್‌ಎಲ್‌ ಈ ನಿರ್ಧಾರ ಮಾಡಿದ್ದು, ಬಹುಪಾಲು ಬಿಎಸ್‌ಎನ್‌ಎಲ್‌ ಬಳಕೆದಾರರಿಗೆ ದೊಡ್ಡ ಹೊಡೆತ ಎಂದೇ ಹೇಳಬಹುದು. ಹಾಗೆಯೇ ಪ್ರತಿ GB ಡೇಟಾದ ಬೆಲೆ 3.31ರೂ. ಆಗಿದೆ.

BSNLನ ಈ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಇನ್ಮುಂದೆ ಅನ್‌ಲಿಮಿಟೆಡ್ ಡೇಟಾ ಸಿಗೋಲ್ಲ..

ಅದಾಗ್ಯೂ ಸಮಾಧಾನ ಪಟ್ಟುಕೊಳ್ಳುವ ವಿಷಯ ಏನೆಂದರೆ 30 ದಿನಗಳ ಅವಧಿಯಲ್ಲಿ 120GB ಡೇಟಾವನ್ನು ನೀಡುತ್ತಿರುವುದು. ಆದರೆ, ಇದಕ್ಕೆ FUP ಮಿತಿ ನಿಗದಿಪಡಿಸಲಾಗಿದೆ. ಈ ಮೂಲಕ ಗ್ರಾಹಕರು ಡೇಟಾ ವೋಚರ್‌ಗಳನ್ನು ಪಡೆಯಲು ಹೆಚ್ಚುವರಿ ಹಣ ಖರ್ಚು ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಈ ನಡುವೆ ಮುಂದಿನ ದಿನಗಳಲ್ಲಿ ನಿಯಮಿತ ಡೇಟಾ ಆಯ್ಕೆ ಇರುವ ಪ್ಲ್ಯಾನ್‌ ಅನ್ನು ಪರಿಚಯಿಸಲು ಕಂಪೆನಿ ಈ ನಿರ್ದಾರ ಮಾಡಿದೆಯಾ ಎಂಬ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ.

ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಜಿಯೋ ಇದೇ ರೀತಿಯ ಬೆಲೆಯ ಅಂದರೆ 399ರೂ. ಗಳ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ 28 ದಿನಗಳ ಮಾನ್ಯತೆಯೊಂದಿಗೆ ದಿನವೂ 3GB ಡೇಟಾ ನೀಡುತ್ತಿದೆ. ಈ ಮೂಲಕ ಒಟ್ಟಾರೆ 90GB ಡೇಟಾ ಬಳಕೆ ಮಾಡಿಕೊಳ್ಳಬಹುದು. ಹಾಗೆಯೇ ಅನಿಯಮಿತ ಕರೆ ಸೌಲಭ್ಯ ಹಾಗೂ ದಿನವೂ ನೂರು ಎಸ್‌ಎಮ್‌ಎಸ್‌ ಸೌಲಭ್ಯ ಪಡೆದುಕೊಳ್ಳಬಹುದು. ಇದರೊಂದಿಗೆ ಜಿಯೋ ಆಪ್‌ಗಳಿಗೆ ಉಚಿತ ಎಂಟ್ರಿ ನೀಡುತ್ತದೆ.

BSNLನ ಈ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಇನ್ಮುಂದೆ ಅನ್‌ಲಿಮಿಟೆಡ್ ಡೇಟಾ ಸಿಗೋಲ್ಲ..

ಹಾಗೆಯೇ ಏರ್‌ಟೆಲ್‌ ಸಹ 399ರೂ. ಗಳ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ 28 ದಿನಗಳ ಮಾನ್ಯತೆಯೊಂದಿಗೆ ಪ್ರತಿದಿನ 3GB ಡೇಟಾ ಸೌಲಭ್ಯ ನೀಡುತ್ತಿದ್ದು, 5G ಬಳಕೆದಾರರಿಗೆ ಅನಿಯಮಿತ ಡೇಟಾ ಸೌಲಭ್ಯ ಒದಗಿಸುತ್ತಿದೆ. ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆ ಸೌಲಭ್ಯ ಹಾಗೂ ದಿನವೂ ನೂರು ಎಸ್‌ಎಮ್‌ಎಸ್‌ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಇದಿಷ್ಟೇ ಅಲ್ಲದೆ ಏರ್‌ಟೆಲ್‌ ಎಕ್‌ಸ್ಟ್ರೀಮ್‌ ಆಪ್‌ ಹಾಗೂ ವಿಂಗ್‌ ಮ್ಯೂಸಿಕ್‌ ಆಪ್‌ಗೆ ಉಚಿತ ಪ್ರವೇಶವನ್ನು ನೀಡುತ್ತದೆ.

Best Mobiles in India

English summary
Bharat Sanchar Nigam Limited (BSNL) has made changes to its flagship recharge plan of Rs 398, thereby cutting the unlimited data facility.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+