ಬ್ಲಾಕ್‌ಬೆರಿಯಿಂದ ಬಜೆಟ್ ಸ್ಮಾರ್ಟ್‌ಪೋನ್ ಮಾರುಕಟ್ಟೆಗೆ
ಮುಂದಿನ ತಿಂಗಳೂ ಬಾರ್ಸಿಲೋನಾದಲ್ಲಿ ನಡೆಯಲಿರುವ mwc ಶೋನಲ್ಲಿ ನೂತನ ಬಜೆಟ್ ಸ್ಮಾರ್ಟ್‌ಪೋನುಗಳನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ.
ದುಬಾರಿ ಬೆಲೆ ಸ್ಮಾರ್ಟ್‌ಪೋನ್ ತಯಾರಿಕೆಯಲ್ಲಿ ಖ್ಯಾತಿಗಳಿಸಿರುವ ಬ್ಲಾಕ್‌ಬೆರಿ ಈ ಬಾರಿ ಮಧ್ಯಮ ವರ್ಗವನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಸ್ಮಾರ್ಟ್‌ಪೋನುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮನಸ್ಸು ಮಾಡಿದೆ.

ಓದಿರಿ: ಜಾಹಿರಾತಿನ ಮೂಲಕ ಗ್ರಾಹಕರನ್ನು ಏರ್‌ಟೆಲ್ ಹಾದಿತಪ್ಪಿಸುತ್ತಿದೆ: ಜಿಯೋ
ಮುಂದಿನ ತಿಂಗಳೂ ಬಾರ್ಸಿಲೋನಾದಲ್ಲಿ ನಡೆಯಲಿರುವ mwc ಶೋನಲ್ಲಿ ನೂತನ ಬಜೆಟ್ ಸ್ಮಾರ್ಟ್‌ಪೋನುಗಳನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಈ ನೂತನ ಪೋನಿಗೆ BBC100-1 ಎಂದು ಕೋಡ್ ನೀಡಿದೆ.

5.5 ಇಂಚಿನ HD ಡಿಸ್‌ಪ್ಲೇ
ಬ್ಲಾಕ್‌ಬೆರಿ ಬಿಡುಗಡೆ ಮಾಡಲಿರುವ ಬಜೆಟ್ ಸ್ಮಾರ್ಟ್‌ಪೋನು ಡುಯಲ್ ಸಿಮ್ ಹಾಕುವ ಸಾಮಾರ್ಥ್ಯವನ್ನು ಹೊಂದಿದ್ದು, 5.5 ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ.

4GB RAM
ಈ ಪೋನಿನಲ್ಲಿ 1.4 GHz ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 425 ಚಿಪ್ ಸೆಟ್ ಹೊಂದಿದ್ದು, 4GB RAM ಸಹ ಈ ಪೋನಿನಲ್ಲಿರಲಿದೆ. ಅಲ್ಲದೇ 32GB ಇಂಟರ್ನಲ್ ಮೆಮೊರಿ ಸಹ ಈ ಪೋನು ಹೊಂದಿದೆ. ಆದರೆ ಮೆಮೊರಿ ಹೆಚ್ಚಿಸಿಕೊಳ್ಳುವ ಅವಕಾಶ ನೀಡಿಲ್ಲ ಎನ್ನಲಾಗಿದೆ.

3000mAh ಬ್ಯಾಟರಿ
3000mAh ಬ್ಯಾಟರಿ ಈ ಪೋನಿನಲ್ಲಿರಲಿದ್ದು, 13MP ಹಿಂಬದಿ ಕ್ಯಾಮೆರಾ ಹಾಗೂ ಮುಂಭಾಗದಲ್ಲಿ 8MP ಕ್ಯಾಮೆರಾ ಇದೆ. ಜೊತೆಗೆ ಹೊಸ ಆಂಡ್ರಾಯ್ಡ್ ನಲ್ಲಿ ಈ ಪೋನು ಕಾರ್ಯ ನಿರ್ವಹಿಸಲಿದೆ ಎನ್ನಲಾಗಿದೆ.


Click it and Unblock the Notifications