ಜಾಹಿರಾತಿನ ಮೂಲಕ ಗ್ರಾಹಕರನ್ನು ಏರ್‌ಟೆಲ್ ಹಾದಿತಪ್ಪಿಸುತ್ತಿದೆ: ಜಿಯೋ

Written By:

ದೇಶಿಯ ಟಿಲಿಕಾಂ ವಲಯದಲ್ಲಿ ವಿವಿಧ ಕಂಪನಿಗಳ ನಡುವೆ ಸಮರ ಶುರುವಾಗಿದ್ದು, ರಿಲಯನ್ಸ್ ಮಾಲೀಕತ್ವದ ಜಿಯೋ ಆರಂಭದ ನಂತರದಲ್ಲಿ ಸ್ಪರ್ಧೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಒಂದು ಕಂಪನಿಗಳ ಮೇಲೆ ಇನ್ನೊಂದು ಕಂಪನಿಗಳ ಕತ್ತಿ ಮಸೆಯುತ್ತಿವೆ.

ಜಾಹಿರಾತಿನ ಮೂಲಕ ಗ್ರಾಹಕರನ್ನು ಏರ್‌ಟೆಲ್ ಹಾದಿತಪ್ಪಿಸುತ್ತಿದೆ: ಜಿಯೋ

ಓದಿರಿ: ಜಿಯೋ ಹಾದಿ ಹಿಡಿದ ಐಡಿಯಾ: ಡಿಜಿಟಲ್ ಐಡಿಯಾ ಆಪ್ ಬಿಡುಗಡೆ

ಈ ಹಿಂದೆ ಜಿಯೋ ಮೂರು ತಿಂಗಳಿಗಿಂತ ಹೆಚ್ಚಿನ ಕಾಲ ಉಚಿತ ಸೇವೆಯನ್ನು ನೀಡುವುದು ತಪ್ಪು ಎಂದು ತರಕಾರು ತೆಗೆದಿದ್ದ ಏರ್‌ಟೆಲ್‌ ವಿರುದ್ಧ ಸದ್ಯ ಜಿಯೋ ತೊಡೆ ತಟ್ಟಿದ್ದು, ಜಾಹಿರಾತಿನ ಮೂಲಕ ಏರ್‌ಟೆಲ್ ಗ್ರಾಹಕರನ್ನು ಹಾದಿ ತಪ್ಪಿಸುತ್ತಿದೆ ಎಂದು ಟ್ರಾಯ್‌ಗೆ ಜಿಯೋ ದೂರು ನೀಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊದಲು ಜಿಯೋ ವಿರುದ್ಧ ದೂರು ನೀಡಿದ್ಧ ಏರ್‌ಟೆಲ್‌:

ಮೊದಲು ಜಿಯೋ ವಿರುದ್ಧ ದೂರು ನೀಡಿದ್ಧ ಏರ್‌ಟೆಲ್‌:

ಈ ಹಿಂದೆ ಜಿಯೋ ಆರಂಭದ ಕೊಡುಗೆಯಾಗಿ 'ವೆಲ್‌ಕಮ್ ಆಫರ್' ಹೆಸರಿನಲ್ಲಿ ಮೂರು ತಿಂಗಳ ಕಾಲ ಉಚಿತ 4G ಡೇಟಾ ಮತ್ತು ಉಚಿತ ಅನ್‌ಲಿಮೆಟೆಡ್ ಕರೆ ಮಾಡುವ ಸೇವೆಯನ್ನು ನೀಡಿತ್ತು. ನಂತರ ಮತ್ತೆ ಮೂರು ತಿಂಗಳನ ಕಾಲ ಈ ಸೇವೆಯನ್ನು ಮುಂದುವರೆಸಲು ಸಿದ್ಧತೆ ನಡೆಸಿದ ಸಂದರ್ಭದಲ್ಲಿ ಏರ್‌ಟೆಲ್ ಕಂಪನಿಯೂ ಟ್ರಾಯ್‌ಗೆ ದೂರು ದಾಖಲಿಸಿತ್ತು.

ಈಗ ಏರ್‌ಟೆಲ್‌ ಮೇಲೆ ದೂರು ದಾಖಲಿಸಿದ ಜಿಯೋ:

ಈಗ ಏರ್‌ಟೆಲ್‌ ಮೇಲೆ ದೂರು ದಾಖಲಿಸಿದ ಜಿಯೋ:

ಯಾವುದೇ ಟೆಲಿಕಾಂ ಕಂಪನಿಗಳು ಪ್ರೋಮೊಷನ್ ಆಫರ್ ಅನ್ನು 90 ದಿನಗಳ ಕಾಲಕ್ಕಿಂತೆ ಹೆಚ್ಚಿನ ಅವಧಿಗೆ ಮುಂದುವರೆಸುವಂತೆ ಇಲ್ಲ ಎಂದು ಏರ್‌ಟೆಲ್ ಖ್ಯಾತೆ ತೆಗೆದಿತ್ತು. ಅಲ್ಲದೇ ಇದು ಆರೋಗ್ಯಕರ ಸ್ಪರ್ಧೆಯಲ್ಲ ಎಂದು ದೂರಿತ್ತು. ಈಗ ಇದೇ ಅಸ್ತ್ರವನ್ನು ಜಿಯೋ ಬಳಸಿಕೊಂಡು ಏರ್‌ಟೆಲ್ ಮೇಲೆ ಟ್ರಾಯ್‌ಗೆ ದೂರು ನೀಡಿದ್ದು, ಏರ್‌ಟೆಲ್‌ಗೆ ಹೆಚ್ಚಿನ ಮೊತ್ತದ ದಂಡವನ್ನು ವಿಧಿಸುವಂತೆ ಮನವಿ ಮಾಡಿದೆ.

ಏರ್‌ಟೆಲ್ ಗ್ರಾಹಕರನ್ನು ಹಾದಿತಪ್ಪಿಸುತ್ತಿದೆ:

ಏರ್‌ಟೆಲ್ ಗ್ರಾಹಕರನ್ನು ಹಾದಿತಪ್ಪಿಸುತ್ತಿದೆ:

ಏರ್‌ಟೆಲ್‌ ತನ್ನ ಗ್ರಾಹಕರನ್ನು ಹಾದಿ ತಪ್ಪಿಸುತ್ತಿದ್ದು, ಜಾಹಿರಾತಿನಲ್ಲಿ ಪ್ರೀಪೆಯ್ಡ್ ಮತ್ತು ಪೋಸ್ಟ್‌ ಪೇಯ್ಡ್ ಗ್ರಾಹಕರಿಗೆ ಉಚಿತ ಅನ್‌ಲಿಮಿಟೆಡ್ ಕಾಲ್‌ ನೀಡುವುದಾಗಿ ತಿಳಿಸಿದೆ. ಆದರೆ ಈ ವಿಶೇಷ ಟಾರಿಫ್‌ಗೆ ಏರ್‌ಟೆಲ್ 345 ರೂಗಳನ್ನು ವಿಧಿಸುತ್ತಿದೆ ಎಂದು ಆರೋಪಿಸಿದೆ.

ಏರ್‌ಟೆಲ್ ಉಚಿತ ಕರೆ ಬರೀ ಸುಳ್ಳು:

ಏರ್‌ಟೆಲ್ ಉಚಿತ ಕರೆ ಬರೀ ಸುಳ್ಳು:

ಅಲ್ಲದೇ ಫೇರ್‌ ಯುಸೇಜ್ ಪಾಲಿಸಿಯಂತೆ ಪ್ರೀಪೇಯ್ಡ್ ಗ್ರಾಹಕರಿಗೆ ಕೇವಲ 300 ನಿಮಿಷ ಪ್ರತಿದಿನ ಹಾಗೂ 1,200 ನಿಮಿಷ ಪ್ರತಿ ವಾರಕ್ಕೆ ನೀಡುತ್ತಿದೆ. ಇದರಲ್ಲಿ ಅನ್‌ಲಿಮಿಟೆಡ್‌ ಎಲ್ಲಿಂದ ಬಂತು ಎಂದು ಪ್ರಶ್ನೆ ಮಾಡಿದ್ದು, ಇದೇ ಮಾದರಿಯಲ್ಲಿ ಪೋಸ್ಟ್‌ ಪೇಯ್ಡ್‌ ಗ್ರಾಹಕರಿಗೂ ಉಚಿತ ಸೇವೆ ಎಂದು ದರ ವಿಧಿಸುತ್ತಿದೆ ಎಂದು ಆರೋಪಿಸಿದೆ.

ಏರ್‌ಟೆಲ್ ಡೇಟಾ ಉಚಿತ ಅಲ್ಲ:

ಏರ್‌ಟೆಲ್ ಡೇಟಾ ಉಚಿತ ಅಲ್ಲ:

ಅಲ್ಲದೇ ಏರ್‌ಟೆಲ್ ಜಾಹಿರಾತಿನಲ್ಲಿ '12 ತಿಂಗಳಿಗೆ 9,000 ರೂ ಮೌಲ್ಯದ ಉಚಿತ ಇಂಟರ್ನೆಟ್‌' ಎಂದು ಘೋಷಣೆ ಮಾಡಿರುವುದನ್ನು ಎತ್ತಿ ತೋರಿಸಿರುವ ಜಿಯೋ, ಇದು ಸಹ ಉಚಿತವಲ್ಲ ಈ ಪ್ರತಿ ತಿಂಗಳು 3GB ಡೇಟಾ ಪಡೆಯಲು ಗ್ರಾಹಕರು ರೂ. 450 ಅನ್ನು ಪಾವತಿಸಬೇಕಿದೆ ಈ ಹಿನ್ನಲೆಯಲ್ಲಿ ಈ ಸೇವೆ ಉಚಿತವಾಗಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Reliance Jio alleges that Airtel’s ads for prepaid and postpaid tariff packs offering unlimited calls and free data go against telecommunication laws. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot