ಅಗ್ಗದ ಇನ್‌ಫಿನಿಕ್ಸ್ 9 ಮತ್ತು ಇನ್‌ಫಿನಿಕ್ಸ್ 9 ಪ್ರೊ ಫೋನ್‌ಗಳ ಭಿನ್ನತೆಗಳೆನು?
ಇನ್‌ಫಿನಿಕ್ಸ್ ಕಂಪನಿಯು ಕಡಿಮೆ ಬೆಲೆಯಲ್ಲಿ ಆಕರ್ಷಕ ಫೀಚರ್ಸ್‌ನ ಫೋನ್ ಪರಿಚಯಿಸಿ ಮೊಬೈಲ್ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಈ ಸಂಸ್ಥೆಯು ಇತ್ತೀಚಿಗಷ್ಟೆ ಹೊಸದಾಗಿ ಇನ್‌ಫಿನಿಕ್ಸ್ 9 ಮತ್ತು ಇನ್‌ಫಿನಿಕ್ಸ್ 9 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಫೋನ್‌ಗಳು ಬಜೆಟ್ ಬೆಲೆಯ ಪ್ರೈಸ್‌ಟ್ಯಾಗ್ ಅನ್ನು ಹೊಂದಿರುವದು ಪ್ರಮುಖ ಆಕರ್ಷಣೆ ಆಗಿದ್ದು, ಜೊತೆಗೆ ಫೀಚರ್ಸ್‌ಗಳು ಗಮನ ಸೆಳೆದಿವೆ.

ಹೊಸ ಇನ್‌ಫಿನಿಕ್ಸ್ 9 ಮತ್ತು ಇನ್‌ಫಿನಿಕ್ಸ್ 9 ಪ್ರೊ ಸ್ಮಾರ್ಟ್‌ಫೋನ್‌ಗಳ ಈ ಫೋನ್‌ಗಳೆರಡು ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಆಂತರಿಕವಾಗಿ 64GB ಸ್ಟೋರೇಜ್ ಪಡೆದಿವೆ. ಜೊತೆಗೆ 5000mAh ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿರುವುದು ಪ್ಲಸ್ ಪಾಯಿಂಟ್ ಆಗಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳು ಒಂದೇ ತರಹ ಕಂಡು ಬಂದರೂ ಫೀಚರ್ಸ್‌ಗಳಲ್ಲಿ ಭಿನ್ನತೆ ಇದೆ. ಇನ್‌ಫಿನಿಕ್ಸ್ 9 ಮತ್ತು ಇನ್‌ಫಿನಿಕ್ಸ್ 9 ಪ್ರೊ ಫೋನ್ ಫೀಚರ್ಸ್‌ಗಳ ನಡುವಿನ ಭಿನ್ನತೆಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ಡಿಸೈನ್
ಇನ್‌ಫಿನಿಕ್ಸ್ ಹಾಟ್ 9 ಸ್ಮಾರ್ಟ್‌ಫೋನ್ 6.6 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 270ppi ಆಗಿದೆ. ಹಾಗೆಯೇ ಡಿಸ್‌ಪ್ಲೇ ಪಿಕ್ಸಲ್ ರೆಸಲ್ಯೂಶನ್ 720x1600 ಆಗಿದೆ. ಅದೇ ರೀತಿ ಇನ್‌ಫಿನಿಕ್ಸ್ ಹಾಟ್ 9 ಪ್ರೊ ಸ್ಮಾರ್ಟ್‌ಫೋನ್ 720x1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.6-ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ
ಇನ್‌ಫಿನಿಕ್ಸ್ ಹಾಟ್ 9 ಸ್ಮಾರ್ಟ್‌ಫೋನ್ ಹಾಗೂ ಇನ್‌ಫಿನಿಕ್ಸ್ ಹಾಟ್ 9 ಪ್ರೊ ಫೋನ್‌ಗಳೆರಡು ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ P35 ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿವೆ. ಇದರೊಂದಿಗೆ GE8320 GPU ಸಾಮರ್ಥ್ಯ ಇದ್ದು, ಆಂಡ್ರಾಯ್ಡ್ 10 ಓಎಸ್ ಬೆಂಬಲಿಸಲಿವೆ. ಹಾಗೆಯೇ ಈ ಫೋನ್‌ಗಳು 4GB RAM ಮತ್ತು 64GB ಆಂತರಿಕ ಸ್ಟೋರೇಜ್ ಸ್ಥಳಾವಕಾಶದ ವೇರಿಯಂಟ್ ಆಯ್ಕೆ ಇದೆ. ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿಯನ್ನು 256GB ವರೆಗೂ ವಿಸ್ತರಿಸಿಕೊಳ್ಳಲು ಅವಕಾಶ ಹೊಂದಿವೆ.

ನಾಲ್ಕು ಕ್ಯಾಮೆರಾ
ಇನ್‌ಫಿನಿಕ್ಸ್ ಹಾಟ್ 9 ಹಾಗೂ ಇನ್‌ಫಿನಿಕ್ಸ್ ಹಾಟ್ 9 ಪ್ರೊ ಈ ಎರಡು ಸ್ಮಾರ್ಟ್‌ಫೋನ್ ನಾಲ್ಕು ಕ್ಯಾಮೆರಾ ಸೆಟ್‌ಅಪ್ ಹೊಂದಿವೆ. ಆದರೆ ಇನ್‌ಫಿನಿಕ್ಸ್ ಹಾಟ್ 9 ಪ್ರೊ ಫೋನಿನ ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ನಲ್ಲಿದೆ. ಆದರೆ ಇನ್‌ಫಿನಿಕ್ಸ್ ಹಾಟ್ 9 ಫೋನಿನ ಮೇನ್ ಕ್ಯಾಮೆರಾವು 13ಎಂಪಿ ಸೆನ್ಸಾರ್‌ನಲ್ಲಿದೆ. ಇದರೊಂದಿಗೆ ಎರಡು ಫೋನ್‌ಗಳು 8ಎಂಪಿಯ ಸೆಲ್ಫಿ ಕ್ಯಾಮೆರಾವು ಪಡೆದಿದೆ.

ಬ್ಯಾಟರಿ ಬ್ಯಾಕ್‌ಅಪ್
ಇನ್‌ಫಿನಿಕ್ಸ್ ಹಾಟ್ 9 ಹಾಗೂ ಇನ್‌ಫಿನಿಕ್ಸ್ ಹಾಟ್ 9 ಪ್ರೊ ಈ ಎರಡು ಸ್ಮಾರ್ಟ್‌ಫೋನ್‌ಗಳು 5,000mAh ಸಾಮರ್ಥ್ಯ ಬಿಗ್ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ 10W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ನೀಡಿದೆ. ಇದರೊಂದಿಗೆ ಯುಎಸ್‌ಬಿ, ಬ್ಲೂಟೂತ್ v5.0, ಓಟಿಜಿ, ಮೈಕ್ರೋ ಯುಎಸ್‌ಬಿ ಪೋರ್ಟ್ ಆಯ್ಕೆಗಳನ್ನು ಒಳಗೊಂಡಿದೆ.

ಬೆಲೆ ಎಷ್ಟು
ಇನ್‌ಫಿನಿಕ್ಸ್ ಹಾಟ್ 9 ಸ್ಮಾರ್ಟ್‌ಫೋನಿನ 4GB RAM ಮತ್ತು 64GB ಆಂತರಿಕ ಸ್ಟೋರೇಜ್ ವೇರಿಯಂಟ್ ಬೆಲೆಯು 8,499ರೂ. ಹಾಗೆಯೇ ಇನ್‌ಫಿನಿಕ್ಸ್ ಹಾಟ್ 9 ಪ್ರೊ ಸ್ಮಾರ್ಟ್‌ಫೋನ್ 4GB RAM + 64GB ವೇರಿಯಂಟ್ 9,499ರೂ. ಬೆಲೆಯನ್ನ ಹೊಂದಿದೆ.


Click it and Unblock the Notifications








