ಶಿಯೋಮಿ ಎಂ.ಐ ನೋಟ್ 2 ಹೇಗಿರುತ್ತದೆ ಗೊತ್ತೆ?

|

ಶಿಯೋಮಿ ಕಂಪನಿಯು ಎರಡು ಹೊಸ ಸ್ಮಾರ್ಟ್ ಫೋನುಗಳಾದ ರೆಡ್ ಮಿ 4 ಮತ್ತು ಎಂ.ಐ ನೋಟ್ 2ನ ಕೆಲಸದಲ್ಲಿ ತೊಡಗಿದೆ ಎಂಬ ಗಾಳಿ ಸುದ್ದಿಗಳಿವೆ. ರೆಡ್ ಮಿ 4 ಆಗಷ್ಟ್ 25ರಂದು ಬಿಡುಗಡೆಗೊಳ್ಳಬಹುದು ಎನ್ನಲಾಗಿದೆ, ಎಂ.ಐ ನೋಟ್ 2 ಸೆಪ್ಟೆಂಬರ್ ಐದಕ್ಕೆ ಮಾರುಕಟ್ಟೆಗೆ ಬರಬಹುದು ಎಂಬ ನಿರೀಕ್ಷೆಗಳಿವೆ.

ಶಿಯೋಮಿ ಎಂ.ಐ ನೋಟ್ 2 ಹೇಗಿರುತ್ತದೆ ಗೊತ್ತೆ?

ಶಿಯೋಮಿ ಎಂ.ಐ ನೋಟ್ ನ ಹೊಸ ಆವೃತ್ತಿಯಲ್ಲಿರಬಹುದಾದ ಹೊಸ ವಿಶಿಷ್ಟತೆಗಳ ಬಗ್ಗೆ ಒಂದಷ್ಟು ಮಾಹಿತಿ ಸೋರಿಕೆಯಾಗಿತ್ತು. ಇತ್ತೀಚಿನ ಸೋರಿಕೆಯ ಪ್ರಕಾರ ಶಿಯೋಮಿ ಎಂ.ಐ ನೋಟ್ 2 ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 7 ಎಡ್ಜ್ ನಲ್ಲಿ ಇರುವಂತೆಯೇ ಎರಡೂ ಬದಿ ಬಾಗಿದ ಕರ್ವ್ಡ್ ಗಾಜಿನ ಪರದೆ ಇರುತ್ತದೆ ಎಂದು ತಿಳಿದು ಬಂದಿದೆ.

ಓದಿರಿ: ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನನ್ನು ವೇಗವಾಗಿ ಚಾರ್ಜ್ ಮಾಡಲು ಏಳೂ ಟಿಪ್ಸುಗಳು.

ಸೋರಿಕೆಯಾದ ಈ ಗಾಜಿನ ಪ್ಯಾನೆಲ್ ನಿಂದ ತಿಳಿಯುವುದೇನೆಂದರೆ, ಮುಂಭಾಗದಲ್ಲಿಹೋಮ್ ಬಟನ್ ಗೊಂದು ಜಾಗವಿದೆ, ಈ ಹೋಮ್ ಬಟನ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಆಗಿ ಕೂಡ ಕಾರ್ಯನಿರ್ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಎಂ.ಐ ನೋಟ್ 2 ನ ಗಾಜಿನ ಪರದೆ ಎನ್ನಲಾದ ಈ ಪರದೆಯನ್ನು ಮೊದಲು ಸೋರಿಕೆಗೊಳಿಸಿದ್ದು ವ್ಹೀಬೋ.

ಓದಿರಿ: ಮನೆಯೊಳಗಿನ ಲೈಟ್‌ನಿಂದಲೇ 2GB/s ವೇಗದ ಇಂಟರ್ನೆಟ್ ಪಡೆಯಿರಿ!

ಶಿಯೋಮಿ ಎಂ.ಐ ನೋಟ್ 2ನ ಹೊಸ ವಿಶಿಷ್ಟತೆಗಳನ್ನು ಕೆಳಗೆ ಗಮನಿಸಿ.

ಎಂ.ಐ ನೋಟ್ 2ನ ಎರಡು ಆವೃತ್ತಿಗಳು ಬರಬಹುದು.

ಎಂ.ಐ ನೋಟ್ 2ನ ಎರಡು ಆವೃತ್ತಿಗಳು ಬರಬಹುದು.

ಇತ್ತೀಚಿನ ವರದಿಗಳ ಪ್ರಕಾರ, ಶಿಯೋಮಿ ಎಂ.ಐ ನೋಟ್ 2 ಸ್ಯಾಮ್ಸಂಗಿನ ಎಸ್ 7 ಮತ್ತು ಎಸ್ 7 ಎಡ್ಜ್ ಮಾದರಿಯಲ್ಲೇ ಎರಡು ಫೋನುಗಳನ್ನು ಬಿಡಬಹುದು. ಚಪ್ಪಟೆ ಪರದೆಯ ಒಂದು ಆವೃತ್ತಿ ಮತ್ತು ಎರಡೂ ಬದಿಯಲ್ಲಿ ಬಾಗಿದ ಪರದೆಯಿರುವ ಮತ್ತೊಂದು ಆವೃತ್ತಿಯನ್ನು ಶಿಯೋಮಿ ಹೊರತರಬಹುದು.

ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹೊಂದಿರುವ ಪ್ರೀಮಿಯಮ್ ಫೋನ್.

ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹೊಂದಿರುವ ಪ್ರೀಮಿಯಮ್ ಫೋನ್.

ಎಂ.ಐ ನೋಟ್ 2ನಲ್ಲಿ ಸ್ಯಾಮ್ಸಂಗ್ ತಯಾರಿಸಿರುವ ಅಮೊಲೆಡ್ ಪರದೆಯಿರುವ ಸಾಧ್ಯತೆ ಹೆಚ್ಚು. ಮೆಟಲ್ ದೇಹವನ್ನೊಂದಿರುವ ನೋಟ್ 2, ಫಿಂಗರ್ ಪ್ರಿಂಟ್ ಸ್ಕ್ಯಾನರನ್ನೂ ಹೊಂದಿರಲಿದೆ.

ಸ್ನಾಪ್ ಡ್ರಾಗನ್ 821 ಎಸ್.ಒ.ಸಿ

ಸ್ನಾಪ್ ಡ್ರಾಗನ್ 821 ಎಸ್.ಒ.ಸಿ

ಶಿಯೋಮಿ ಸ್ಮಾರ್ಟ್ ಫೋನಿನಲ್ಲಿ ಕ್ವಾಲ್ ಕಮ್ಮಿನ ಹೊಸ ಚಿಪ್ ಸ್ನಾಪ್ ಡ್ರಾಗನ್ 821 ಎಸ್.ಒಸಿ ಪ್ರೊಸೆಸರ್ ಇರುತ್ತದೆ. ಈ ಹೊಸ ಪ್ರೊಸೆಸರ್ ಸ್ನಾಪ್ ಡ್ರಾಗನ್ 820ಗಿಂತ ಹತ್ತು ಪರ್ಸೆಂಟ್ ವೇಗವಾಗಿ ಕಾರ್ಯನಿರ್ವಹಿಸುತ್ತದೆ ಎನ್ನಲಾಗುತ್ತದೆ.

ಎರಡು ರೀತಿಯ ಸಂಗ್ರಹ ಸಾಮರ್ಥ್ಯ.

ಎರಡು ರೀತಿಯ ಸಂಗ್ರಹ ಸಾಮರ್ಥ್ಯ.

6 ಜಿಬಿ ರ್ಯಾಮ್ ಹೊಂದಲಿರುವ ಎಂ.ಐ ನೋಟ್ 2 ಎರಡು ಸಂಗ್ರಹ ಸಾಮರ್ಥ್ಯದೊಂದಿಗೆ ಬರುವ ಸಾಧ್ಯತೆ ಇದೆ - ಒಂದರಲ್ಲಿ 64 ಜಿಬಿಯಷ್ಟು ಆಂತರಿಕ ಸಂಗ್ರಹ ಸಾಮರ್ಥ್ಯವಿದ್ದರೆ ಮತ್ತೊಂದರಲ್ಲಿ 128ಜಿಬಿ ಇರುತ್ತದೆ.

ದರ ಕೂಡ ಸೋರಿಕೆಯಾಗಿದೆ

ದರ ಕೂಡ ಸೋರಿಕೆಯಾಗಿದೆ

ಸೋರಿಕೆಯಾದ ಮಾಹಿತಿಯ ಪ್ರಕಾರ, 64 ಜಿಬಿ ಸಾಮರ್ಥ್ಯದ ಎಂ.ಐ ನೋಟ್ 2ರ ಬೆಲೆ ಸಿ.ಎನ್.ವೈ 2,499 (ಅಂದಾಜು 25,000 ರುಪಾಯಿ) ಮತ್ತು 128 ಜಿಬಿ ಸಾಮರ್ಥ್ಯದ ಫೋನಿಗೆ ಸಿ.ಎನ್.ವೈ 2,799 (ಅಂದಾಜು 28,000 ರುಪಾಯಿ).

Best Mobiles in India

English summary
Xiaomi Mi Note 2 has been leaked showing the dual-curved edge screen as the Samsung Galaxy S7 edge. The device seems to arrive with a flat screen version as well. Take a look at the concepts of the device that have hit the web.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X