ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನನ್ನು ವೇಗವಾಗಿ ಚಾರ್ಜ್ ಮಾಡಲು ಏಳೂ ಟಿಪ್ಸುಗಳು.

|

ಪ್ರತಿನಿತ್ಯ, ನೀವು ಹೋಗುವ ಕಡೆಗೆಲ್ಲಾ ನಿಮ್ಮ ಸ್ಮಾರ್ಟ್ ಫೋನನ್ನೂ ಹೊತ್ತೊಯ್ಯುತ್ತೀರಿ ಮತ್ತು ಬಹುತೇಕ ಎಲ್ಲಾ ರೀತಿಯ ಕೆಲಸಗಳಿಗೆ ಅದನ್ನು ಉಪಯೋಗಿಸುತ್ತೀರಿ. ಬಹಳ ಸಲ ನೀವು ಎಲ್ಲಿಗೋ ಹೊರಡುವ ತರಾತುರಿಯಲ್ಲಿದ್ದಾಗ ಕೊನೆಯ ಕ್ಷಣದಲ್ಲಿ ನೋಡಿಕೊಳ್ಳುತ್ತೀರಿ, ನಿಮ್ಮ ಸ್ಮಾರ್ಟ್ ಫೋನಿನ ಬ್ಯಾಟರಿ ತುಂಬ ಕಡಿಮೆಯಾಗಿಬಿಟ್ಟಿದೆ ಮತ್ತು ಅದನ್ನು ಚಾರ್ಜ್ ಮಾಡಲು ನೀವು ಮರೆತುಬಿಟ್ಟಿದ್ದೀರಿ.

ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನನ್ನು ವೇಗವಾಗಿ ಚಾರ್ಜ್ ಮಾಡಲು ಏಳೂ ಟಿಪ್ಸುಗಳು.

ಕೆಲವು ನಿಮಿಷಗಳ ಕಾಲ ನೀವದನ್ನು ಚಾರ್ಜ್ ಮಾಡಬಹುದು, ಆದರೆ ನಿಮ್ಮ ಸ್ಮಾರ್ಟ್ ಫೋನ್ ಕೇವಲ 2ರಿಂದ 3 ಪರ್ಸೆಂಟಿನಷ್ಟು ಮಾತ್ರ ಚಾರ್ಜ್ ಆಗಿರುತ್ತದೆ. ನೀವು ಇಂಟರ್ನೆಟ್ಟಿಗೆ ಕನೆಕ್ಟ್ ಆಗಿ ಇಮೇಲ್ ಮತ್ತು ವಾಟ್ಸ್ ಅಪ್ ಮೆಸೇಜುಗಳನ್ನು ನೋಡುವಷ್ಟರಲ್ಲಿ ಆ ಚಾರ್ಜ್ ಖಾಲಿಯಾಗಿಬಿಟ್ಟಿರುತ್ತದೆ.

ಓದಿರಿ: 1 ವರ್ಷದ ಉಚಿತ ಇಂಟರ್ನೆಟ್ ಬ್ರೌಸಿಂಗ್‌ನೊಂದಿಗೆ 1,499 ಕ್ಕೆ ಡಾಟಾ ವಿಂಡ್ ಫೋನ್

ಇಂತಹ ಪರಿಸ್ಥಿತಿಯನ್ನು ತಡೆಗಟ್ಟುವುದು ಹೇಗೆ? ನಿಮ್ಮ ಆ್ಯಂಡ್ರಾಯ್ಡ್ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡುವ ಕೆಲವು ಟಿಪ್ಸುಗಳು ನಿಮಗೆ ಗೊತ್ತಿದ್ದರೆ ಇದು ಸಾಧ್ಯ. ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಸ್ಮಾರ್ಟ್ ಫೋನನ್ನು ವೇಗವಾಗಿ ಚಾರ್ಜ್ ಮಾಡಲು ಕೆಲವು ಟಿಪ್ಸುಗಳು ಇಲ್ಲಿವೆ.

ವೈರ್ ಲೆಸ್ ಚಾರ್ಜಿಂಗ್ ಮಾಡಬೇಡಿ

ವೈರ್ ಲೆಸ್ ಚಾರ್ಜಿಂಗ್ ಮಾಡಬೇಡಿ

ತುರ್ತು ಸಂದರ್ಭದಲ್ಲಿ ವೈರ್ ಲೆಸ್ ಚಾರ್ಜಿಂಗ್ ಮಾಡದಿರುವುದು ಉತ್ತಮ. ವೈರ್ ಚಾರ್ಜಿಂಗಿಗೆ ಹೋಲಿಸಿದರೆ ವೈರ್ ಲೆಸ್ ಚಾರ್ಜಿಂಗ್ ನಿಧಾನಗತಿಯದು. ಯು.ಎಸ್.ಬಿ ಚಾರ್ಜಿಂಗಿಗೆ ಹೋಲಿಸಿದರೆ ವೈರ್ ಲೆಸ್ ಕ್ವಿಕ್ ಚಾರ್ಜಿಂಗ್ ವೇಗವಾಗಿ ಕೆಲಸ ಮಾಡುತ್ತದೆ ಆದರೆ ನೆನಪಿಡಿ ಮಾಮೂಲಿ ವಾಲ್ ಚಾರ್ಜರ್ ನಷ್ಟು ವೇಗವಾಗಲ್ಲ.

ಫಾಸ್ಟ್ ಚಾರ್ಜರನ್ನು ಖರೀದಿಸಿ

ಫಾಸ್ಟ್ ಚಾರ್ಜರನ್ನು ಖರೀದಿಸಿ

ಈಗಂತೂ, ಬಹುತೇಕ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನುಗಳಲ್ಲಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿರುತ್ತದೆ. ಆ ಸೌಲಭ್ಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಫಾಸ್ಟ್ ಚಾರ್ಜರ್ ಅವಶ್ಯಕ. ನಿಮ್ಮ ಸ್ಮಾರ್ಟ್ ಫೋನಿನೊಡನೆ ಬಂದ ಚಾರ್ಜರ್ ಫಾಸ್ಟ್ ಚಾರ್ಜರ್ ಆಗಿರದೇ ಹೋದಲ್ಲಿ, ಒಂದು ಫಾಸ್ಟ್ ಚಾರ್ಜರನ್ನು ಖರೀದಿಸಿ ಮತ್ತು ನಿಮ್ಮ ಫೋನಿನ ಬ್ಯಾಟರಿಯನ್ನು ಶೀಘ್ರವಾಗಿ ಚಾರ್ಜ್ ಮಾಡಿ.

ವಾಲ್ ಚಾರ್ಜರನ್ನು ಉಪಯೋಗಿಸಿ

ವಾಲ್ ಚಾರ್ಜರನ್ನು ಉಪಯೋಗಿಸಿ

ಎಲ್ಲಾ ಆ್ರಂಡ್ರಾಯ್ಡ್ ಚಾರ್ಜರುಗಳು ನೋಡುವುದಕ್ಕೆ ಒಂದೇ ರೀತಿ ಇದ್ದರೂ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಾಸವಿರುತ್ತವೆ. ನಿಮ್ಮ ಫೋನನ್ನು ಲ್ಯಾಪ್ ಟಾಪಿನ ಮೂಲಕ ವೇಗವಾಗಿ ಚಾರ್ಜ್ ಮಾಡುವುದಕ್ಕಾಗದು. ಯು.ಎಸ್.ಬಿ 2.0 ಪೋರ್ಟಿನಿಂದ ಬರುವ 2.5 ವ್ಯಾಟ್ಸ್ ಅಥವಾ ಯು.ಎಸ್.ಬಿ 3.0 ಪೋರ್ಟಿನಿಂದ ಬರುವ 4.5 ವ್ಯಾಟ್ಸ್ ನಿಮ್ಮ ಸ್ಮಾರ್ಟ್ ಫೋನನ್ನು ವೇಗವಾಗಿ ಚಾರ್ಜ್ ಮಾಡಲಾರದು. ವೇಗವಾಗಿ ಚಾರ್ಜ್ ಮಾಡಲು ವಾಲ್ ಚಾರ್ಜರ್ ಸೂಕ್ತವಾದುದು.

ಫೋನ್ ಸ್ವಿಚ್ ಆಫ್ ಮಾಡುವುದು ಒಳ್ಳೆಯದು

ಫೋನ್ ಸ್ವಿಚ್ ಆಫ್ ಮಾಡುವುದು ಒಳ್ಳೆಯದು

ಸಾಧ್ಯವಾದರೆ, ಚಾರ್ಜ್ ಮಾಡುವಾಗ ನಿಮ್ಮ ಸ್ಮಾರ್ಟ್ ಫೋನನ್ನು ಸ್ವಿಚ್ ಆಫ್ ಮಾಡಿದರೆ ಚಾರ್ಜಿಂಗ್ ವೇಗ ಪಡೆದುಕೊಳ್ಳುತ್ತದೆ, ಇದು ಏರ್ ಪ್ಲೇನ್ ಮೋಡ್ ಗೆ ಹಾಕುವುದಕ್ಕಿಂತ ಉತ್ತಮ. ಇದರಿಂದ ಮತ್ತೆ ಫೋನ್ ಆನ್ ಮಾಡುವವರೆಗೆ ನೋಟಿಫಿಕೇಷನ್ ಪಡೆದುಕೊಳ್ಳುವುದು ಸಾಧ್ಯವಾಗದೇ ಹೋಗಬಹುದು ಆದರೆ ಬ್ಯಾಟರಿ ವೇಗವಾಗಿ ಚಾರ್ಜ್ ಆಗುತ್ತದೆ.

ಏರ್ ಪ್ಲೇನ್ ಮೋಡನ್ನು ಎನೇಬಲ್ ಮಾಡಿ

ಏರ್ ಪ್ಲೇನ್ ಮೋಡನ್ನು ಎನೇಬಲ್ ಮಾಡಿ

ಚಾರ್ಜ್ ಮಾಡುವಾಗ ನಿಮ್ಮ ಫೋನ್ ಕಾರ್ಯನಿರ್ವಹಿಸುತ್ತಿದ್ದರೆ ಚಾರ್ಜಿಂಗ್ ಸಮಯ ದೀರ್ಘವಾಗುತ್ತದೆ. ಆದ್ದರಿಂದ, ಸ್ಮಾರ್ಟ್ ಫೋನನ್ನು ವೇಗವಾಗಿ ಚಾರ್ಜ್ ಮಾಡಲು ಏರ್ ಪ್ಲೇನ್ ಮೋಡನ್ನು ಆನ್ ಮಾಡಿ. ಏರ್ ಪ್ಲೇನ್ ಮೋಡನ್ನು ಆನ್ ಮಾಡುವುದರಿಂದ ವೈರ್ ಲೆಸ್ ರೀಡಿಯೋ ಬ್ಲಾಕ್ ಆಗುತ್ತದೆ, ನಿಮ್ಮ ಫೋನ್ ಅನೇಕ ಕಾರ್ಯಗಳನ್ನು ಮಾಡುವುದು ನಿಲ್ಲುತ್ತದೆ. ನಿಮ್ಮ ಫೋನಿಗೆ ಮೆಸೇಜುಗಳಾಗಲೀ, ಕರೆಗಳಾಗಲೀ ಬರುವುದಿಲ್ಲ, ಆದರೆ ವೇಗವಾಗಿ ಚಾರ್ಜ್ ಆಗಿ ಹಲವು ಘಂಟೆಗಳ ಕಾಲ ಮೊಬೈಲನ್ನು ಉಪಯೋಗಿಸಬಹುದು.

ಪವರ್ ಸೇವಿಂಗ್ ಮೋಡನ್ನು ಉಪಯೋಗಿಸಿ

ಪವರ್ ಸೇವಿಂಗ್ ಮೋಡನ್ನು ಉಪಯೋಗಿಸಿ

ಈಚೆಗೆ ಮಾರುಕಟ್ಟೆಗೆ ಬಂದಿರುವ ಬಹುತೇಕ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲಿ ಒಂದಲ್ಲ ಒಂದು ರೀತಿಯ ಪವರ್ ಸೇವಿಂಗ್ ಮೋಡ್ ಇರುತ್ತದೆ. ಚಾರ್ಜ್ ಮಾಡುವಾಗ ಇದನ್ನು ಆನ್ ಮಾಡಿ ಬ್ಯಾಟರಿಯನ್ನು ಉಳಿಸಿದರೆ ಬೇಗ ಚಾರ್ಜ್ ಆಗುತ್ತದೆ.

ಬೇಡದ ಫೀಚರ್ರುಗಳನ್ನು ಆಫ್ ಮಾಡಿ

ಬೇಡದ ಫೀಚರ್ರುಗಳನ್ನು ಆಫ್ ಮಾಡಿ

ನಿಮ್ಮ ಸ್ಮಾರ್ಟ್ ಫೋನನ್ನು ಚಾರ್ಜರ್ರಿಗೆ ಕನೆಕ್ಟ್ ಮಾಡಿದಾಗ ಬೇಡದ ಫೀಚರ್ರುಗಳಾದ ವೈಫೈ, ಜಿಪಿಎಸ್, ಬ್ಲೂಟೂಥನ್ನು ಆಫ್ ಮಾಡಿ. ಈ ಫೀಚರ್ರುಗಳು ತುಂಬಾ ಶಕ್ತಿಯನ್ನು ಉಪಯೋಗಿಸಿಬಿಡುತ್ತವೆ. ಎಲ್ಲಾ ಆ್ಯಪುಗಳನ್ನು ಕ್ಲೋಸ್ ಮಾಡಿ ಮತ್ತು ನಿಮ್ಮ ಫೋನ್ ಸ್ವಯಂಚಾಲಿತವಾಗಿ ಬ್ಯಾಕ್ ಅಪ್ ಮಾಡುವುದನ್ನು ಅಥವಾ ಆ್ಯಪುಗಳು ಅಪ್ ಡೇಟ್ ಆಗುವುದನ್ನು ನಿಲ್ಲಿಸಿರಿ.

Best Mobiles in India

English summary
Well, you can do it by knowing some tricks that will help you charge your Android battery faster. Here is our guide to charge your Android smartphone faster so that it is useful in case of any emergency.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X