ಆಂಡ್ರಾಯ್ಡ್‌ನಲ್ಲಿರುವ ಈ ಕೂಲ್ ಫೀಚರ್ಸ್ ಐಫೋನ್‌ನಲ್ಲಿ ಅಲಭ್ಯ!
ಬೆಸ್ಟ್ ಫೋನ್ ಎಂದಾಗ ಥಟ್ಟನೇ ಐಫೋನ್‌ನೇ ಹೆಸರೆ ಹೆಚ್ಚಾಗಿ ಕೇಳಿ ಬರುತ್ತದೆ. ಯಸ್, ಐಫೋನ್ ದುಬಾರಿ ಬೆಲೆಯನ್ನು ಹೊಂದಿದ್ದು, ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡು ಭಿನ್ನವಾಗಿ ಗುರುತಿಸಿಕೊಂಡಿದೆ. ಆದರೆ ನಿಮಗೆ ಗೊತ್ತಾ ಆಂಡ್ರಾಯ್ಡ್‌ನಲ್ಲಿ ಇರುವ ಕೇಲವು ಕೂಲ್ ಫೀಚರ್ಸ್‌ಗಳನ್ನು iOS ಓಎಸ್‌ನ ಐಫೋನ್‌ನಲ್ಲಿ ಕಾಣಲು ಸಾಧ್ಯವಿಲ್ಲ. ಹೀಗಾಗಿ ಕೇಲವೊಂದು ಸಮಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಉತ್ತಮ ಎನಿಸುತ್ತವೆ.

ಹೌದು, ಆಂಡ್ರಾಯ್ಡ್ ಓಎಸ್ ಇರುವ ಸ್ಮಾರ್ಟ್‌ಪೋನ್‌ಗಳು ಡಿಸ್‌ಪ್ಲೇ, ವಾಲ್‌ಪೇಪರ್, ವೇಡ್ಜ್, ಬ್ಲೂಟೂತ್, ಇನ್‌ಸ್ಟಂಟ್ ಅಪ್ಲಿಕೇಶನ್, ಕ್ಲೋಸ್ ಆಲ್ ಆಪ್ಸ್ ಸೇರಿದಂತೆ ಹಲವು ಐಫೋನ್‌ನಲ್ಲಿ ಕಾಣದ ಫೀಚರ್ಸ್‌ಗಳಲ್ಲಿ ಹೊಂದಿವೆ. ಇವು ಬಳಕೆದಾರರಿಗೆ ಅಗತ್ಯ ಅನುಕೂಲ ಒದಗಿಸಲಿವೆ. ಹಾಗಾದರೇ ಆಂಡ್ರಾಯ್ಡ್‌ನಲ್ಲಿರುವ ಕೂಲ್ ಫೀಚರ್ಸ್‌ಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಆನ್ ಡಿಸ್‌ಪ್ಲೇ ಆಯ್ಕೆ
ಪ್ರಸ್ತುತ ನೂತನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು OLED ಡಿಸ್‌ಪ್ಲೇಯನ್ನು ಹೊಂದಿದ್ದು, ಆಲ್‌ವೇಸ್ ಆನ್ ಡಿಸ್‌ಪ್ಲೇ ಫೀಚರ್ ಬಳಕೆದಾರರಿಗೆ ಉಪಯುಕ್ತ ಎನಿಸಿದೆ. ಟೈಮ್ ನೋಡಬೇಕಾದಾಗ ಅಥವಾ ರಿಮೈನಿಂಗ್ ಬ್ಯಾಟರಿ ಬ್ಯಾಕ್‌ಅಪ್ ನೋಡಬೇಕಾದಾಗ ಪೂರ್ಣ ಸ್ಕ್ರೀನ್ ಆನ್ ಮಾಡುವ ಅಗತ್ಯ ಇರುವುದಿಲ್ಲ. ಹಾಗೆಯೇ ಕಾಣಿಸುತ್ತದೆ. ಆದರೆ ಐಫೋನ್‌ಗಳಲ್ಲಿ ಈ ಸೌಲಭ್ಯದ ಬೆಂಬಲವಿಲ್ಲ.

ಇನ್‌ಸ್ಟಂಟ್ ಆಪ್
ಗೂಗಲ್ ಇತ್ತೀಚಿಗೆ ಈ ಆಯ್ಕೆಯನ್ನು ನೀಡಿದ್ದು, ಇದು ಬಳಕೆದಾರರಿಗೆ ಹೆಚ್ಚು ಅನುಕೂಲಕರವಾಗಿದೆ. ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳದೇ ಉಪಯೋಗಿಸಿ ನೋಡಬಹುದಾಗ ಅವಕಾಶವಿದ್ದು, ಅಗತ್ಯ ಎನಿಸಿದರೇ ಇನ್‌ಸ್ಟಾಲ್ ಮಾಡಿಕೊಳ್ಳಬಹುದು. ಇದರಿಂದ ಬಳಕೆದಾರರ ಅನಗತ್ಯ ಇನ್‌ಸ್ಟಾಲ್ ಮತ್ತು ಅನ್‌ಇನ್‌ಸ್ಟಾಲ್ ಮಾಡುವ ಪ್ರಕ್ರಿಯೆಯನ್ನು ತಪ್ಪಿಸಲಿದೆ. ಆದರೆ ಎಲ್ಲಾ ಆಪ್‌ಗಳಿಗೆ ಈ ಫೀಚರ್ ಲಭ್ಯವಿಲ್ಲ.

ಆಪ್ಸ್ ಕ್ಲೋಸ್ ಆಯ್ಕೆ
ಫೋನಿನಲ್ಲಿ ಪ್ರತಿದಿನ ಹಲವಾರು ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಅವುಗಳು ಬ್ಯಾಕ್‌ಗ್ರೌಂಡ್ ರನ್ನ ಆಗುತ್ತಿರುತ್ತವೆ ಅವುಗಳಲ್ಲಿ ಅಗತ್ಯ ಇಲ್ಲದ ಆಪ್‌ಅನ್ನು ಕ್ಲಿಯರ್ ಮಾಡುವುದು ಉತ್ತಮ. ಅದಕ್ಕಾಗಿ ಆಂಡ್ರಾಯ್ಡ್ ಮಾದರಿಯ ಫೋನ್‌ಗಳಲ್ಲಿ ಒಂದೇ ಟ್ಯಾಪ್ ಮೂಲಕ ಆಪ್ಸ್‌ಗಳನ್ನು ಕ್ಲಿಯರ್ ಮಾಡಬಹುದಾದ ಆಯ್ಕೆ ಇದೆ. ಆದರೆ ಐಫೋನ್‌ನಲ್ಲಿ ಕ್ಲೋಸ್ ಮಾಡಲು ಸಮಯ ಹಿಡಿಯುತ್ತದೆ.

ಡೀಫಾಲ್ಟ್ ಆಪ್ ಸೆಟ್ಟಿಂಗ್
ಆಂಡ್ರಾಯ್ಡ್‌ನಲ್ಲಿ ಡೀಫಾಲ್ಟ್ ಆಪ್ ಸೆಟ್ಟಿಂಗ್ ಆಯ್ಕೆ ನೀಡಲಾಗಿದ್ದು, ಈ ಆಯ್ಕೆ ಮೂಲಕ ಹಲವು ಫೀಚರ್ಸ್‌ಗಳಿಗೆ ಒಂದೆ ಆಪ್ ಸೆಟ್ ಮಾಡಬಹುದಾಗಿದೆ. ಬ್ರೌಸರ್, ಫೋನ್, ಟೆಕ್ಸ್ಟ್ ಮೆಸೆಜ್, ಮತ್ತು ಓಪೆನ್ ಲಿಂಕ್ಸ್‌ನಂತಹ ಫಿಚರ್ಸ್‌ಗಳಿಗೆ ಒಂದೇ ಆಪ್ ಡೀಫಾಲ್ಟ್ ಆಗಿ ಸೆಟ್ ಮಾಡಬಹುದು. ಆದರೆ ಐಫೋನ್‌ಗಳಲ್ಲಿ ಡೀಫಾಲ್ಟ್ ಆಪ್ ಸೆಟ್ಟಿಂಗ್ ಆಯ್ಕೆ ಅಲಭ್ಯವಾಗಿದೆ.

ಕಸ್ಟಮೈಸ್ ಆಯ್ಕೆ
ಬಳಕೆದಾರರಿಗೆ ಅಗತ್ಯವಾದಂತೆ ಫೀಚರ್ಸ್‌ಗಳನ್ನು ಕಸ್ಟಮೈಸ್ ಮಾಡಿಕೊಳ್ಳುವ ಆಯ್ಕೆಯಲ್ಲಿ ಆಂಡ್ರಾಯ್ಡ್ ಬೆಸ್ಟ್ ಎನಿಸಲಿದೆ. ಇನ್‌ಸ್ಟಾಲಿಂಗ್, ಐಕಾನ್ ಪಾಕ್ಸ್, widgets ಸೇರಿದಂತೆ ಇನ್ನಿತರೆ ಫೀಚರ್ಸ್‌ಗಳನ್ನು ಬೇಕಾದ ಹಾಗೆ ಸೆಟ್ಟ್ ಮಾಡಬಹುದಾಗಿದೆ. ಐಫೋನ್‌ನಲ್ಲಿ ಭಿನ್ನ ಆಯ್ಕೆಗಳಿದ್ದರು ಕಸ್ಟಮೈಸ್‌ಗೊಳಿಸುವ ಫೀಚರ್ ಅನುಕೂಲಕರವಾಗಿಲ್ಲ.


Click it and Unblock the Notifications








