ಕೈಗೆಟುಕವ ಬೆಲೆಯಲ್ಲಿ ಡ್ಯುಯಲ್ ಕ್ಯಾಮರಾ, 6GB RAM ಹೊಂದಿರುವ ಕೂಲ್‌ಪ್ಯಾಡ್ ಕೂಲ್ ಪ್ಲೇ 6
ಕೂಲ್‌ಪ್ಯಾಡ್ ಕೂಲ್ ಪ್ಲೇ 6 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಹೊಂದಿದ್ದು, ಕೈಗೆಟುಕುವ ಬೆಲೆಯಲ್ಲಿ ದೊರೆಯಲಿದೆ.
ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಕೂಲ್ ಪ್ಯಾಡ್ ನೂತನ ಸ್ಮಾರ್ಟ್‌ಫೋನ್ ವೊಂದನ್ನು ಬಿಡುಗಡೆ ಮಾಡಿದ್ದು, ಅದುವೇ ಕೂಲ್‌ಪ್ಯಾಡ್ ಕೂಲ್ ಪ್ಲೇ 6. ಈ ಸ್ಮಾರ್ಟ್‌ಫೋನ್ ಅಮೆಜಾನ್ ಮೂಲಕ ಮಾರಾಟವಾಗಲಿದ್ದು, ಸೆಪ್ಟೆಂಬರ್ 4 ರಿಂದ ಸೇಲ್ ಆರಂಭವಾಗಲಿದೆ.

ಓದಿರಿ: ಶಿಯೋಮಿಯಿಂದ ಮತ್ತೊಂದು ಸ್ಮಾರ್ಟ್ ಫೋನ್ : ಬಜೆಟ್ ಬೆಲೆಯಲ್ಲಿ.!
ಕೂಲ್‌ಪ್ಯಾಡ್ ಕೂಲ್ ಪ್ಲೇ 6 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಹೊಂದಿದ್ದು, ಕೈಗೆಟುಕುವ ಬೆಲೆಯಲ್ಲಿ ದೊರೆಯಲಿದ್ದು, ರೂ. 14,999ಕ್ಕೆ ಮಾರಾಟವಾಗಲಿದೆ. ಈ ಹಿನ್ನಲೆಯಲ್ಲಿ ಕೂಲ್‌ಪ್ಯಾಡ್ ಕೂಲ್ ಪ್ಲೇ 6 ಫೋನಿನ ವಿಶೇಷತೆಗಳೇನು ಎಂಬುದನ್ನು ನೋಡುವ.

5.5 ಇಂಚಿನ FHD ಡಿಸ್‌ಪ್ಲೇ:
ಕೂಲ್‌ಪ್ಯಾಡ್ ಕೂಲ್ ಪ್ಲೇ 6 ಸ್ಮಾರ್ಟ್‌ಫೋನಿನಲ್ಲಿ 5.5 ಇಂಚಿನ FHD ಡಿಸ್‌ಪ್ಲೇ ಕಾಣಬಹುದಾಗಿದ್ದು, ಇದರೊಂದಿಗೆ 1.4 GHz ವೇಗದ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 653 ಆಕ್ವಾ ಕೋರ್ ಪ್ರೋಸೆರ್ ಅನ್ನು ಕಾಣಬಹುದಾಗಿದೆ.

6GB RAM ನೀಡಲಾಗಿದೆ:
ವೇಗದ ಕಾರ್ಯಚರಣೆಗೆ ಕೂಲ್‌ಪ್ಯಾಡ್ ಕೂಲ್ ಪ್ಲೇ 6 ಸ್ಮಾರ್ಟ್‌ಫೋನಿನಲ್ಲಿ 6GB RAM ಅನ್ನು ನೀಡಲಾಗಿದೆ. ಇದರೊಂದಿಗೆ 64GB ಇಂಟರ್ನಲ್ ಮೆಮೊರಿ ಸಹ ಈ ಫೋನಿನಲ್ಲಿದೆ.

13 MP ಡ್ಯುಯಲ್ ಕ್ಯಾಮೆರಾ:
ಕೂಲ್‌ಪ್ಯಾಡ್ ಕೂಲ್ ಪ್ಲೇ 6 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 13MP ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗಿದ್ದು, ಇದರೊಂದಿಗೆ ಡ್ಯುಯಲ್ ಟೂನ್ LED ಫ್ಲಾಷ್ ಲೈಟ್ ಸಹ ಇದೆ. ಅಲ್ಲದೇ ಫೆಸ್ ಡಿಡೆಕ್ಷನ್ ಆಟೋ ಪೋಕಸ್ ಸಹ ಇದರಲ್ಲಿದೆ. ಇನ್ನು ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರವನ್ನು ಅಳವಡಿಸಲಾಗಿದೆ.

4000mAh ಬ್ಯಾಟರಿ:
ಕೂಲ್‌ಪ್ಯಾಡ್ ಕೂಲ್ ಪ್ಲೇ 6 ಸ್ಮಾರ್ಟ್‌ಫೋನಿನಲ್ಲಿ ಬ್ಯಾಟರಿ ಬಾಳಿಕೆ ಉತ್ತಮವಾಗಿದ್ದು, 4000mAh ಬ್ಯಾಟರಿ ಅಳವಡಿಸಲಾಗಿದೆ. ಇದು 300 ಗಂಟೆಗಳ ಸ್ಟಾಂಡ್ ಬೈ ನೀಡಲಿದೆ ಎಂದು ಕಂಪನಿಯೂ ತಿಳಿಸಿದೆ.

ಆಂಡ್ರಾಯ್ಡ್ ನ್ಯಾಗಾ:
ಕೂಲ್‌ಪ್ಯಾಡ್ ಕೂಲ್ ಪ್ಲೇ 6 ಸ್ಮಾರ್ಟ್‌ಫೋನಿನಲ್ಲಿ ಸದ್ಯ ಆಂಡ್ರಾಯ್ಡ್ ನ್ಯಾಗಾ ಬಳಕೆಯಾಗುತ್ತಿದ್ದು, ಶೀಘ್ರವೇ ಲಾಂಚ್ ಆಗಲಿರುವ ಆಂಡ್ರಾಯ್ಡ್ O ಆಪ್‌ಡೇಟ್ ಸಹ ಈ ಫೋನ್‌ಗೆ ದೊರೆಯಲಿದೆ ಎಂದು ಕಂಪನಿ ತಿಳಿಸಿದೆ. ಅಲ್ಲದೇ ಈ ಫೋನಿನಲ್ಲಿ ಡ್ಯುಯಲ್ ಸಿಮ್ ಹಾಕಬಹುದು.


Click it and Unblock the Notifications