Subscribe to Gizbot

ಶಿಯೋಮಿಯಿಂದ ಮತ್ತೊಂದು ಸ್ಮಾರ್ಟ್ ಫೋನ್ : ಬಜೆಟ್ ಬೆಲೆಯಲ್ಲಿ.!

Written By: Lekhaka

ಶಿಯೋಮಿ ಕಂಪನಿಯೂ ಮತ್ತೊಂದು ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಲಿದೆ. ಅದುವೇ ಶಿಯೋಮಿ ರೆಡ್ ಮಿ ನೋಟ್ 5 ಮತ್ತು ನೋಟ್ 5A ಎನ್ನಲಾಗಿದೆ. ಈ ಫೋನಿನ ಕುರಿತು ಕೆಲವು ಮಾಹಿತಿಗಳು ಈಗಾಗಲೇ ಲೀಕ್ ಆಗಿದೆ. ಅದುವೇ ಆಗಸ್ಟ್ 21 ರಿಂದ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದ್ದು, ಅದುವೇ ಚೀನಾದಲ್ಲಿ ಮಾತ್ರ.

ಶಿಯೋಮಿಯಿಂದ ಮತ್ತೊಂದು ಸ್ಮಾರ್ಟ್ ಫೋನ್ : ಬಜೆಟ್ ಬೆಲೆಯಲ್ಲಿ.!

ರೆಡ್ ಮಿ ನೋಟ್ 5A ಭಾರತೀಯ ರೂ.9,500ಕ್ಕೆ ದೊರೆಯಲಿದ್ದು, ಅದುವೇ ಮೊದಲಿಗೆ ಚೀನಾ ದಲ್ಲಿ ಬಿಡುಗಡೆಗೊಳ್ಳಲಿದೆ. ನಂತರ ಭಾರತದಲ್ಲಿಯೂ ಲಭ್ಯವಿರಲಿದೆ.

ರೆಡ್ ಮಿ ನೋಟ್ 5A ಸ್ಮಾರ್ಟ್ ಫೋನಿನಲ್ಲಿ 5.5 ಇಂಚಿನ ಡಿಸ್ ಪ್ಲೇಯನ್ನು ಕಾಣಬಹುದು. ಇದರೊಂದಿಗೆ ಸ್ನಾಪ್ ಡ್ರಾಗನ್ 452 ಪ್ರೋಸೆಸರ್ ಇದ್ದು, 2GB RAM ಇದೆ. ಇದು ಆಂಡ್ರಾಯ್ಡ್ ನ್ಯಾಗಾ 7.1.1 ನಲ್ಲಿ ಕಾರ್ಯನಿರ್ವಹಿಸಲಿದೆ.

ರೆಡ್ ಮಿ ನೋಟ್ 5A ನಲ್ಲಿ 2GB RAM ಮತ್ತು 16GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದ್ದು, ಮೆಮೊರಿ ಕಾರ್ಡ್ ಮೂಲಕ 32 GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಸಾಧ್ಯತೆ ಇದೆ.

ಫೇಸ್‌ಬುಕ್‌ನಲ್ಲಿ 1 ಸಾವಿರ ಲೈಕ್ ಪಡೆದರೆ 1.ಲಕ್ಷ ನೀಡಲಿದೆ ಟಾಟಾ ಕಂಪೆನಿ!!..ಹೇಗೆ ಗೊತ್ತಾ?

ಹಿಂಭಾಗದ 8MP ಕ್ಯಾಮೆರಾ ಇದ್ದು, ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ನೀಡಲಾಗಿದೆ. ಇದರೊಂದಿಗೆ 3080 mAh ಬ್ಯಾಟರಿಯೂ ಇದೆ. ಅಲ್ಲದೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿದೆ.

ಈಗಾಗಲೇ ಹಲವು ಬಜೆಟ್ ಫೋನ್ ಗಳನ್ನು ಬಿಡುಗಡೆ ಮಾಡಿರುವ ಶಿಯೋಮಿ, ಈಗ ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಒಟ್ಟಿನಲ್ಲಿ ಕಡಿಮೆ ಬೆಲೆಗೆ ಉತ್ತಮ ಫೋನ್ ಅನ್ನು ನೀಡಲಿದೆ. 

Source

English summary
Xiaomi Redmi Note 5A is believed to be launched on August 21 for a price equivalent to Rs. 9,500. A recent report has shed light on the complete specs.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot