3 ಸಿಮ್ ಸಪೋರ್ಟ್‌ನ ಕೂಲ್‌ಪ್ಯಾಡ್ ಮೆಗಾ 3 ಭಾರತದಲ್ಲಿ ಲಾಂಚ್: ಫೀಚರ್‌ಗಳು

By Suneel
|

ಬುಧವಾರ(ಡಿಸೆಂಬರ್ 1) ಟೆಕ್ನಾಲಜಿ ವರ್ಲ್ಡ್‌ನಲ್ಲಿ ಕೂಲ್‌ಪ್ಯಾಡ್ ತನ್ನ 'ಮೆಗಾ 3' ಸ್ಮಾರ್ಟ್‌ಫೋನ್‌ ಅನ್ನು 3 ಸಿಮ್ ಸಪೋರ್ಟ್‌ನೊಂದಿಗೆ ಲಾಂಚ್‌ ಮಾಡಿದೆ. ಹಾಗೆ ವರದಿಯ ಪ್ರಕಾರ ಫ್ಲಿಪ್‌ಕಾರ್ಟ್ ಮೌಲ್ಯ $5.54 ಶತಕೋಟಿ ಕೆಳಗೆ ಕುಸಿದಿದೆ. ಫೇಸ್‌ಬುಕ್ ಗೇಮ್‌ ಪ್ಲೇನಲ್ಲಿ ನ್ಯೂಸ್‌ ಫೀಡ್ ಪಡೆಯಲು ಮೆಸೇಂಜರ್‌ನಲ್ಲಿ ಅವಕಾಶ ನೀಡಿದೆ. ಅಮೆರಿಕ ಮೂಲದ ನೆಟ್‌ಫ್ಲಿಕ್ಸ್ ಹೊಸ ಬಹು ನಿರೀಕ್ಷಿತ ಫೀಚರ್‌ ಅನ್ನು ಪರಿಚಯಿಸಿದೆ. ಇಷ್ಟೆಲ್ಲಾ ಬೆಳವಣಿಗೆ ನೆನ್ನೆ ಟೆಕ್ನಾಲಜಿ ವರ್ಲ್ಡ್‌ನಲಿ ಆಗಿದೆ.

3 ಸಿಮ್ ಸಪೋರ್ಟ್‌ನ ಕೂಲ್‌ಪ್ಯಾಡ್ ಮೆಗಾ 3 ಭಾರತದಲ್ಲಿ ಲಾಂಚ್: ಫೀಚರ್‌ಗಳು

ವಿಶೇಷ ಅಂದ್ರೆ ಕೂಲ್‌ಪ್ಯಾಡ್ 3 ಸಿಮ್‌ ಸಪೋರ್ಟ್ ಮಾಡುವ 'ಮೆಗಾ 3' ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಲಾಂಚ್ ಮಾಡಿರುವುದು ವಿಶೇಷವಾಗಿದೆ. ಕೂಲ್‌ಪ್ಯಾಡ್ ನೋಟ್ 3ಎಸ್ ಅನ್ನು 3GB RAM ಸಾಮರ್ಥ್ಯದೊಂದಿಗೆ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.

2016ರ ಅಗ್ಗದ ಬೆಲೆಯ ಉತ್ತಮ ಫೀಚರ್ ಫೋನ್‌ 'ಕೂಲ್‌ಪ್ಯಾಡ್‌ ಮೆಗಾ 2.5ಡಿ'

ರೂ.6,999 ಬೆಲೆಯ 'ಕೂಲ್‌ಪ್ಯಾಡ್ ಮೆಗಾ 3' 5.5 ಇಂಚಿನ ಡಿಸ್‌ಪ್ಲೇ, 1.25GHz MT6737 ಕ್ವಾಡ್ ಕೋರ್ ಪ್ರೊಸೆಸರ್, 2GB RAM, 16GB ಆಂತರಿಕ ಸ್ಟೋರೇಜ್, ಮೈಕ್ರೋಎಸ್‌ಡಿ ಕಾರ್ಡ್ ಸಪೋರ್ಟ್, 8MP ಹಿಂಭಾಗ ಕ್ಯಾಮೆರಾ ಮತ್ತು 8MP ಮುಂಭಾಗ ಕ್ಯಾಮೆರಾ ಫೀಚರ್‌ ಹೊಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

3 ಸಿಮ್ ಸಪೋರ್ಟ್‌ನ ಕೂಲ್‌ಪ್ಯಾಡ್ ಮೆಗಾ 3 ಭಾರತದಲ್ಲಿ ಲಾಂಚ್: ಫೀಚರ್‌ಗಳು

'ಕೂಲ್‌ಪ್ಯಾಡ್ ಮೆಗಾ 3'(Coolpad Mega 3) ಡಿವೈಸ್ 3050mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಓಎಸ್ ಚಾಲಿತವಾಗಿದೆ.

3 ಸಿಮ್ ಸಪೋರ್ಟ್‌ನ ಕೂಲ್‌ಪ್ಯಾಡ್ ಮೆಗಾ 3 ಭಾರತದಲ್ಲಿ ಲಾಂಚ್: ಫೀಚರ್‌ಗಳು

ವೈಫೈ, ಬ್ಲೂಟೂತ್, 4G (LTE ನೆಟ್‌ವರ್ಕ್‌ನಿಂದ ಬ್ಯಾಂಡ್ 40 ಸಪೋರ್ಟ್) ಸಂಪರ್ಕ ಫೀಚರ್‌ಗಳನ್ನು ಹೊಂದಿದೆ. ಪ್ರಾಕ್ಸಿಮಿಟಿ ಸೆನ್ಸಾರ್, ವೇಗೋತ್ಕರ್ಷದ ಮತ್ತು ವ್ಯಾಪಕ ಬೆಳಕಿನ ಸೆನ್ಸರ್ ಹೊಂದಿದೆ.

ಫೋಟೋಗ್ರಫಿ, ದೀರ್ಘ ಬ್ಯಾಟರಿ ಬಾಳಿಕೆಗಾಗಿ 'ಜೆನ್‌ಫೋನ್‌ 3 ಮ್ಯಾಕ್ಸ್': ಅಂತದ್ದೇನಿದೆ ಫೋನ್‌ನಲ್ಲಿ?

Best Mobiles in India

Read more about:
English summary
Coolpad Mega 3 with TRIPLE SIM SLOTS Launched in India: All You Need to Know. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X