Subscribe to Gizbot

ತನ್ನದೇ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿರುವ ದೀಪಿಕಾ ಪಡುಕೋಣೆ.! ಯಾವುದು ಫೋನ್?

Written By:

ಒಪ್ಪೋ ರಾಯಭಾರಿಯಾಗಿರುವ ಕನ್ನಡ ಮೂಲದ ನಟಿ ದೀಪಿಕಾ ಪಡುಕೋಣೆ ತನ್ನದೇ ಆವೃತ್ತಿಯ ಸ್ಮಾರ್ಟ್‌ಫೋನ್ ವೊಂದನ್ನು ಬಿಡುಗಡೆ ಮಾಡಲಿದ್ದಾರೆ. ಅದುವೇ ಒಪ್ಪೋ F3 ರೋಸ್ ಗೋಲ್ಡ್ ಆವೃತ್ತಿ ಎನ್ನಲಾಗಿದೆ. ಈಗಾಗಲೇ ರೋಸ್ ಗೋಲ್ಡ್ ಆವೃತ್ತಿ ಲಭ್ಯವಿದ್ದು, ಇದರಲ್ಲಿ ಕೊಂಚ ಸ್ಪೇಷಲ್ ಎನ್ನುವಂತೆ ದೀಪಿಕಾ ಪಡುಕೋಣೆ ಆವೃತ್ತಿ ಬರುತ್ತಿದೆ.

ತನ್ನದೇ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿರುವ ದೀಪಿಕಾ ಪಡುಕೋಣೆ.! ಯಾವುದು ಫೋನ್?

ಓದಿರಿ: ಐಫೋನ್‌ ಬೇಕೆ?: ಅಮೆಜಾನ್ ಆಫರ್ ಮತ್ತೇ ಬರಲ್ಲ ಮಿಸ್ ಮಾಡಿಕೊಳ್ಳಬೇಡಿ!

ಈಗಾಗಲೇ ಒಪ್ಪೋ F3 ಬ್ಲಾಕ್, ಗೋಲ್ಡ್ ಮತ್ತು ರೋಸ್ ಗೋಲ್ಡ್ ಆವೃತ್ತಿಗಳು ಲಭ್ಯವಿದ್ದು, ಬೆಲೆಯೂ ರೂ.19,990 ಆಗಿದೆ. ಈಗ ಇದರೊಂದಿಗೆ ದೀಪಿಕಾ ಪಡುಕೋಣೆ ಆವೃತ್ತಿಯೂ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ದೀಪಿಕಾ ಪಡುಕೋಣೆ ವಿನ್ಯಾಸ ಆವೃತ್ತಿ ಇದು:

ದೀಪಿಕಾ ಪಡುಕೋಣೆ ವಿನ್ಯಾಸ ಆವೃತ್ತಿ ಇದು:

ದೀಪಿಕಾ ಪಡುಕೋಣೆ ಖುದ್ದಾಗಿ ವಿನ್ಯಾಸ ಮಾಡಿರುವ ಸ್ಮಾರ್ಟ್ ಫೋನ್ ಇದಾಗಿದೆ. ತಮ್ಮ ಅಭಿಮಾನಿಗಳಿಗಾಗಿಯೇ ದೀಪಿಕಾ ಪಡುಕೋಣೆ ಈ ಫೋನ್ ಅನ್ನು ವಿನ್ಯಾಸ ಮಾಡಿದ್ದಾರೆ ಎಂದು ಕಂಪನಿಯೂ ತಿಳಿಸಿದೆ.

ಲಕ್ಕಿ ವಿನ್ನರ್ ಗೆ ಉಚಿತ ಫೋನ್:

ಲಕ್ಕಿ ವಿನ್ನರ್ ಗೆ ಉಚಿತ ಫೋನ್:

ಇದಲ್ಲದೇ ಈ ಸ್ಮಾರ್ಟ್‌ಫೋನ್ ಬಿಡುಗಡೆ ಸಂದರ್ಭದಲ್ಲಿ ಲಕ್ಕಿ ವಿನ್ನರ್ ಗೆ ಈ ಫೋನ್ ಅನ್ನು ಉಚಿತವಾಗಿ ದೀಪಿಕಾ ಪಡುಕೋಣೆ ನೀಡಲಿದ್ದಾರೆ. ಇದಕ್ಕಾಗಿ ಸ್ಪರ್ಧೆಯೊಂದನ್ನು ನಡೆಸಲಿದ್ದಾರೆ.

ಫೋನ್ ಹೇಗಿದೆ:

ಫೋನ್ ಹೇಗಿದೆ:

ಒಪ್ಪೋ F3 ಸ್ಮಾರ್ಟ್‌ಫೋನಿನಲ್ಲಿ 5.5 ಇಂಚಿನ HD ಡಿಸ್‌ಪ್ಲೇ ಇದ್ದು, 2.5D ಕರ್ವಡ್ ಗ್ಲಾಸ್ ವಿನ್ಯಾಸವನ್ನು ಹೊಂದಿದ್ದು, ಜೊತೆ ಕಾರ್ನಿಂಗ್ ಗೊರಿಲ್ಲ ಗ್ಲಾಸ್ 5 ಸುರಕ್ಷತೆಯೂ ಇದೆ. 4GB RAM ಅಳವಡಿಸಲಾಗಿದ್ದು, ಇದಲ್ಲದೇ 1.GHz ಆಕ್ವಾ ಕೊರ್ ಮಿಡಿಯಾ ಟೆಕ್ ಚಿಪ್ ಸೆಟ್ ಅಳವಡಿಸಲಾಗಿದ್ದು, ವೇಗವಾಗಿ ಕಾರ್ಯನಿರ್ವಹಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
popular Indian actress, Deepika Padukone is coming up with her own edition of the smartphone. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot