Subscribe to Gizbot

ಜಿಯೋ ಫೋನ್‌ಗೆ ಮಾರಕವಾಗಲಿದೆ ಈ ಭಾರತೀಯ ಫೋನ್ : ಕೇವಲ ರೂ.299ಕ್ಕೆ ಮಾರಾಟ.!

Posted By:

ದೇಶದಲ್ಲಿ ಜಿಯೋ ಫೋನ್ ಆರ್ಭಟ ಹೆಚ್ಚಾಗಿರುವ ಹಿನ್ನಲೆಯಲ್ಲಿ ಜಿಯೋ ಫೋನ್‌ಗೆ ಸೆಡ್ಡು ಹೊಡೆಯುವ ಸಲುವಾಗಿ ಮತ್ತೊಂದು ಫೀಚರ್ ಫೋನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಕೇವಲ ರೂ.299ಕ್ಕೆ ದೊರೆಯಲಿದೆ ಎನ್ನಲಾಗಿದೆ. ಅದುವೇ ಭಾರತೀಯ ಮೂಲದಾಗಿರುವುದು ವಿಶೇಷವಾಗಿದೆ.

ಜಿಯೋ ಫೋನ್‌ಗೆ ಮಾರಕವಾಗಲಿದೆ ಈ ಭಾರತೀಯ ಫೋನ್ : ಕೇವಲ ರೂ.299ಕ್ಕೆ ಮಾರಾಟ.!

ಓದಿರಿ: ಪಾಸ್‌ಪೋರ್ಟ್ ಮಾಡಿಸುವುವವರಿಗೆ ಸಂತಸದ ವಿಚಾರ: ಪೊಲೀಸ್ ವೆರಿಫಿಕೇಷನ್ ಕಿರಿಕಿರಿ ತಪ್ಪಲಿದೆ..!

ಈ ಫೋನಿನ ಹೆಸರು ಡಿಟೆಲ್ D1 ಎಂದು ಇದನ್ನು ಡಿಟೆಲ್ ಇಂಡಿಯಾ ಕಂಪನಿಯೂ ಲಾಂಚ್ ಮಾಡುತ್ತಿದೆ. ಮೂಲಗಳ ಪ್ರಕಾರ ಭಾರತದಲ್ಲಿ ದೊರೆಯುತ್ತಿರುವ ಅತೀ ಕಡಿಮೆ ಬೆಲೆಯ ಫೋನ್ ಎಂದರೆ ಇದೇ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಟೆಲ್ D1 ಫೋನಿನ ವಿಶೇಷತೆ:

ಡಿಟೆಲ್ D1 ಫೋನಿನ ವಿಶೇಷತೆ:

ಈ ಫೋನಿನಲ್ಲಿ 1.44 ಇಂಚಿನ ಡಿಸ್‌ಪ್ಲೇ ಕಾಣಬಹುದಾಗಿದ್ದು, ಸಿಂಗಲ್ ಸಿಮ್ ಹಾಕಿಕೊಳ್ಳಬಹುದಾಗಿದೆ. ಅಲ್ಲದೇ 650mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, 15 ದಿನಗಳ ಸ್ಟಾಂಡ್ ಬೈ ನೀಡಲಿದೆ ಎನ್ನಲಾಗಿದೆ.

ಎಫ್‌ಎಂ ರೇಡಿಯೋ ಇದೆ:

ಎಫ್‌ಎಂ ರೇಡಿಯೋ ಇದೆ:

ಇದಲ್ಲದೇ ಈ ಫೋನಿನಲ್ಲಿ ಎಫ್‌ಎಂ ರೇಡಿಯೋ ಸಹ ನೀಡಲಾಗಿದ್ದು, ಇದರೊಂದಿಗೆ ಟಾರ್ಚ್ ಲೈಟ್ ಸಹ ಅಳವಡಿಸಲಾಗಿದೆ. ಇದು ಈ ಫೋನಿನ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಲಿದೆ.

ಆನ್‌ಲೈನಿನಲ್ಲಿ ಲಭ್ಯ:

ಆನ್‌ಲೈನಿನಲ್ಲಿ ಲಭ್ಯ:

ಸದ್ಯ ಈ ಫೋನ್ ಆನ್‌ಲೈನಿನಲ್ಲಿ ಮಾತ್ರವೇ ದೊರೆಯಲಿದ್ದು, ರೂ. 299ಕ್ಕೆ ದೊರೆಯುವ ಈ ಫೋನ್ ಅನ್ನು ಬುಕ್ ಮಾಡಬೇಕಾದರೆ http://detel-india.com/ ತಾಣ ಕ್ಕೆ ಭೇಟಿ ನೀಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Detel D1 phone: It has 1.44 inch of Monochrome Display. The phone has single SIM facility and it is powered by a 650 mAh battery. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot