ಪಾಸ್‌ಪೋರ್ಟ್ ಮಾಡಿಸುವುವವರಿಗೆ ಸಂತಸದ ವಿಚಾರ: ಪೊಲೀಸ್ ವೆರಿಫಿಕೇಷನ್ ಕಿರಿಕಿರಿ ತಪ್ಪಲಿದೆ..!

ಪಾಸ್‌ಫೋರ್ಟ್ ಸಹ ಆನ್‌ಲೈನಿನಲ್ಲಿ ದೊರೆಯುತ್ತಿತ್ತು, ಆದರೆ ಪೊಲೀಸ್ ವೆರಿಫೀಕೆಷನ್‌ನಿಂದಾಗಿ ಪಾಸ್‌ಪೋರ್ಟ್ ದೊರೆಯವುದು ವಿಳಂಬವಾಗುತ್ತಿತ್ತು.

|

ಪಾಸ್‌ಫೋರ್ಟ್ ಮಾಡಿಸಬೇಕು ಎಂದವರಿಗೆ ಶುಭದಿನಗಳು ಹತ್ತಿರವಾಗುತ್ತಿದೆ. ಎಲ್ಲಾ ಸರಕಾರಿ ಸೇವೆಗಳು ಆನ್‌ಲೈನ್ ಹಾದಿಯನ್ನು ಹಿಡಿಯುತ್ತಿರುವ ಕಾರಣ ಪಾಸ್‌ಫೋರ್ಟ್ ಸಹ ಆನ್‌ಲೈನಿನಲ್ಲಿ ದೊರೆಯುತ್ತಿತ್ತು, ಆದರೆ ಪೊಲೀಸ್ ವೆರಿಫೀಕೆಷನ್‌ನಿಂದಾಗಿ ಪಾಸ್‌ಪೋರ್ಟ್ ದೊರೆಯವುದು ವಿಳಂಬವಾಗುತ್ತಿತ್ತು.

ಪಾಸ್‌ಪೋರ್ಟ್ ಮಾಡಿಸುವುವವರಿಗೆ ಸಂತಸದ ವಿಚಾರ: ಕಿರಿಕಿರಿ ಇನಿಲ್ಲ

ಓದಿರಿ: ಉಚಿತವಾಗಿ ಆನ್‌ಲೈನಿನಲ್ಲಿ ಪಾಸ್‌ಪೋರ್ಟ್ ಮಾಡಿಸಿಕೊಳ್ಳುವುದು ಹೇಗೆ..? ಇಲ್ಲಿದೇ ಮಾಹಿತಿ

ಆದರೆ ಈ ಸಮಸ್ಯೆಗೆ ಪರಿಹಾರವು ದೊರೆಯಲಿದೆ. ಅಲ್ಲದೇ ನಿಮ್ಮ ಪಾಸ್‌ಪೋರ್ಟ್ ಶೀಘ್ರವೇ ನಿಮ್ಮ ಕೈ ಸೇರಲಿದೆ. ಇನ್ನು ಮುಂದೆ ಪೊಲೀಸ್ ವೆರಿಫಿಕೇಷನ್ ಆನ್‌ಲೈನಿನಲ್ಲಿ ನಡೆಯಲಿದೆ ಎನ್ನಲಾಗಿದೆ.

ಅಪರಾಧಿಗಳ ನ್ಯಾಷಿನಲ್ ಡೇಟಾ ಬೇಸ್:

ಅಪರಾಧಿಗಳ ನ್ಯಾಷಿನಲ್ ಡೇಟಾ ಬೇಸ್:

ಕೇಂದ್ರ ಸರ್ಕಾರವು ಅಪರಾಧಿಗಳ ಹಾಗೂ ಅಪರಾಧಗಳ ಬಗ್ಗೆ ಹೊಸದಾಗಿ ನ್ಯಾಷನಲ್ ಡೇಟಾಬೇಸ್ ಮಾಡಲಿದ್ದು, ಈ ಲಿಂಕ್ ಬಳಸಿ ಪಾಸ್‌ ಪೋರ್ಟ್ ಅರ್ಜಿದಾರರ ಬಗ್ಗೆ ಆನ್‌ಲೈನಿನಲ್ಲಿ ವೆರಿಫಿಕೇಷನ್ ಮಾಡವ ಯೋಜನೆಯನ್ನು ರೂಪಿಸಿದೆ. .

ದೇಶದ 15,398 ಪೊಲೀಸ್ ಠಾಣೆ ವಿವರ:

ದೇಶದ 15,398 ಪೊಲೀಸ್ ಠಾಣೆ ವಿವರ:

ಕೇಂದ್ರ ಸರಕಾರ ತೆರೆದಿರುವ ಈ ಪೋರ್ಟಲ್ ದೇಶದ 15,398 ಪೊಲೀಸ್ ಠಾಣೆಗಳ ದಾಖಲಾತಿಗಳು ಇರಲಿದ್ದು, ಇಲ್ಲಿಯೇ ವ್ಯಕ್ತಿಯ ಪೂರ್ವಚರಿತ್ರೆ ಪರಿಶೀಲಿಸಬಹುದಾಗಿದೆ. ಇದರಿಂದ ಆನ್‌ಲೈನ್ ವೆರಿಫಿಕೇಷನ್ ಸುಲಭವಾಗಲಿದೆ.

ಶೀಘ್ರವೇ ಕಾರ್ಯಚರಣೆ ಆರಂಭ:

ಶೀಘ್ರವೇ ಕಾರ್ಯಚರಣೆ ಆರಂಭ:

ಪಾಸ್‌ಪೋರ್ಟ್ ಸೇವಾ ಸಾಫ್‌ವೇರ್ ಜೊತೆಗೂ ಸಂಯೋಜನೆ ಮಾಡುವ ಯೋಜನೆಯಿದ್ದು, ಇದರಿಂದ ಶೀಘ್ರವೇ ಪಾಸ್‌ಪೋರ್ಟ್ ಆನ್‌ಲೈನ್ ವೆರಿಫಿಕೇಷನ್ ಆರಂಭವಾಗಲಿದೆ.

ಪೊಲೀಸರಿಗೆ ಕೆಲಸ ಕಡಿಮೆ:

ಪೊಲೀಸರಿಗೆ ಕೆಲಸ ಕಡಿಮೆ:

ಈಗಾಗಲೇ ರಜೆ ಸಿಗಲ್ಲ, ಕೆಲಸದ ಹೊರೆ ಹೆಚ್ಚು ಎನ್ನುವ ಪೊಲೀಸರಿಗೆ ಅರ್ಜಿದಾರರ ವಿಳಾಸಕ್ಕೆ ಹೋಗಿ ಅವನ/ಅವಳ ಮಾಹಿತಿಯನ್ನು ಸಂಗ್ರಹಿಸುವ ಪೊಲೀಸರ ಕೆಲಸ ಕಡಿಮೆಯಾಗಲಿದೆ. ಅವರಿಗೂ ಕೆಲಸದ ಹೊರೆ ಕಡಿಮೆಯಾಗಲಿದೆ.

Best Mobiles in India

Read more about:
English summary
The Crime and Criminal Tracking Network and Systems is being linked with the passport service that will enable online verification of passport applicants. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X