ಆಫರ್‌ಗಳ ಅಡ್ಡಾ ಫ್ಲಿಪ್‌ಕಾರ್ಟ್‌ನಲ್ಲಿ ಶುರುವಾಗಿದೆ 'ಆಸೂಸ್ OMG ಡೇಸ್' ಸೇಲ್!
ಆಸೂಸ್ ಕಂಪನಿಯ ಸ್ಮಾರ್ಟ್‌ಫೋನ್ ಖರೀದಿಗೆ ಇದೀಗ ಸೂಕ್ತ ಸಮಯ ಬಂದಿದ್ದು, ಜನಪ್ರಿಯ ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ ಸಹಯೋಗದಲ್ಲಿ 'ಆಸೂಸ್ ಓ ಮೈ ಗಾಡ್ ಡೇಸ್' ಹೆಸರಿನ ಮೇಳವನ್ನು ಆಯೋಜಿಸಲಾಗಿದೆ. ಒಟ್ಟು ನಾಲ್ಕು ದಿನಗಳ ಕಾಲ ನಡೆಯುವ ಈ ಮೇಳವು (ಏ,15) ಇಂದು ಆರಂಭವಾಗಿದ್ದು, ಇದೇ 18ರ ವರೆಗೂ ಇದರಲಿದೆ. ಗ್ರಾಹಕರಿಗೆ ಆಸೂಸ್ ಸ್ಮಾರ್ಟ್‌ಫೋನ್ ಉತ್ಪನ್ನಗಳ ಮೇಲೆ ಭರ್ಜರಿ ಡಿಸ್ಕೌಂಟ್ ದೊರೆಯಲಿದೆ.

ಆಫರ್‌ಗಳ ಅಡ್ಡಾ ಫ್ಲಿಪ್‌ಕಾರ್ಟ್ ಆಯೋಜಿಸಿರುವ ಓ ಮೈ ಗಾಡ್ ಡೇಸ್' ಮೇಳದಲ್ಲಿ ಕಂಪನಿಯ ಆರಂಭಿಕ ಮಾದರಿಯ ಸ್ಮಾರ್ಟ್‌ಫೋನ್‌ಗಳಿಂದ, ಫ್ಲ್ಯಾಗ್‌ಶಿಪ್ ಮಾದರಿಯ ಸ್ಮಾರ್ಟ್‌ಫೋನ್‌ಗಳ ವರೆಗೂ ರಿಯಾಯಿತಿ ಲಭ್ಯವಾಗಲಿದ್ದು, ಇದರೊಂದಿಗೆ ನೋಕಾಸ್ಟ್ ಇಎಮ್‌ಐ ಆಯ್ಕೆಯ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ. ಹಾಗಾದರೇ ಆಸೂಸ್ ಓ ಮೈ ಗಾಡ್ ಡೇಸ್ ಮೇಳದಲ್ಲಿ ಡಿಸ್ಕೌಂಟ್ ಪಡೆದ ಆಯ್ದ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ನೋಡೋಣ ಬನ್ನಿರಿ.

ಆಸೂಸ್ ಝೆನ್‌ಫೋನ್ 5Z
ಆಸೂಸ್ ಝೆನ್‌ಫೋನ್ 5Z ಸ್ಮಾರ್ಟ್‌ಫೋನ್ 6GB+128GB ವೇರಿಯಂಟ್ ಮಾದರಿಯ ಬೆಲೆಯು 32,999ರೂ.ಗಳು ಆಗಿದ್ದು, ಇದೀಗ ಆಫರ್ ಮೇಳದಲ್ಲಿ 24,999ರೂ.ಗಳಿಗೆ ದೊರೆಯಲಿದೆ. ಹಾಗೇ 8GB+256GB ವೇರಿಯಂಟ್ ಮಾದರಿಯ ಸ್ಮಾರ್ಟ್‌ಫೋನ್ 28,999ರೂ.ಗಳಿಗೆ ಲಭ್ಯವಾಗಲಿದೆ.

ಆಸೂಸ್ ಝೆನ್‌ಫೋನ್ ಮ್ಯಾಕ್ಸ್‌ಪ್ರೋ ಎಂ1
ಆಸೂಸ್ ಝೆನ್‌ಫೋನ್ ಮ್ಯಾಕ್ಸ್‌ಪ್ರೋ ಎಂ1 ಮೂರು ವೇರಿಯಂಟ್‌ಗಳನ್ನು ಹೊಂದಿದ್ದು, ಆರಂಭಿಕ ಮಾದರಿ 3GB RAM 32GB ವೇರಿಯಂಟ್ 7,999 ರೂ.ಗಳಿಗೆ ದೊರೆಯಲಿದೆ. 4GB+64GB ವೇರಿಯಂಟ್ 9,999ರೂ.ಗಳಿಗೆ ಹಾಗೂ 6GB+64GB ವೇರಿಯಂಟ್ 11,999ರೂ.ಗಳಿಗೆ ಪಡೆಯಬಹುದಾಗಿದೆ.

ಆಸೂಸ್ ಝೆನ್‌ಫೋನ್ ಮ್ಯಾಕ್ಸ್‌ಪ್ರೋ ಎಂ2
ಆಸೂಸ್ ಝೆನ್‌ಫೋನ್ ಮ್ಯಾಕ್ಸ್‌ಪ್ರೋ ಎಂ2 ಸ್ಮಾರ್ಟ್‌ಫೋನಿನ ದರ ಕಡಿತ ಮಾಡಿದ್ದು, 3GB+32GB ಮಾದರಿಯ ವೇರಿಯಂಟ್ 7,999ರೂ.ಗಳಿಗೆ ಗ್ರಾಹಕರ ಕೈ ಸೇರಲಿದೆ. ಹಾಗೇ 4GB+64GB ವೇರಿಯಂಟ್ ಮಾದರಿಯ ಸ್ಮಾರ್ಟ್‌ಫೋನ್ 9,999ರೂ.ಗಳ ಬೆಲೆಯಲ್ಲಿ ದೊರೆಯಲಿದೆ. ಇದರೊಂದಿಗೆ 799ರೂ.ಗಳ ಮೊಬೈಲ್ ಪ್ರೋಟೆಕ್ಷನ್ ಕಿಟ್, 99ರೂ.ಗಳಿಗೆ ಸೀಗಲಿದೆ.

ಆಸೂಸ್ ಝೆನ್‌ಫೋನ್ ಲೈಟ್ ಎಲ್1
ಆಸೂಸ್ ಕಂಪನಿಯ ಬೇಸಿಕ್ ಮಾದರಿಯ ಈ ಸ್ಮಾರ್ಟ್‌ಫೋನ್ ಬೆಲೆಯು 6999ರೂ.ಗಳು ಆಗಿದ್ದು, ಮೇಳದಲ್ಲಿ ಭಾರೀ ಡಿಸ್ಕೌಂಟ್ ನೀಡಲಾಗಿದ್ದು, ಇದೀಗ ಕೇವಲ 4,999ರೂ.ಗಳು ಗ್ರಾಹಕರಿಗೆ ದೊರೆಯಲಿದೆ. ಇಎಮ್‌ಐ ಆಯ್ಕೆ ಸಹ ನೀಡಲಾಗಿದೆ.

ನೋಕಾಸ್ಟ್ EMI
ಫ್ಲಿಪ್‌ಕಾರ್ಟ್ ಆಯೋಜಿಸಿರುವ ಆಸೂಸ್ ಓ ಮೈ ಗಾಡ್ ಡೇಸ್ ಮೇಳದಲ್ಲಿ ಆಯ್ದ ಆಸೂಸ್ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ ಇದ್ದು, ಇದರೊಂದಿಗೆ ಬ್ಯಾಂಕ್‌ಗಳು ನೋಕಾಸ್ಟ್ ಇಎಮ್‌ಐ ಆಯ್ಕೆಗಳನ್ನು ನೀಡುತ್ತಿವೆ.

ಮೊಬೈಲ್ ಬ್ಯಾಕ್ ಕವರ್ @99
ಆಸೂಸ್ ಓ ಮೈ ಗಾಡ್ ಡೇಸ್' ಮೇಳದಲ್ಲಿ ಆಸೂಸ್ ಪ್ರಮುಖ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ವಿಶೇಷ ರಿಯಾಯಿತಿ ನೀಡುವುದರ ಜೊತೆಗೆ ಆಸೂಸ್ ಸ್ಮಾರ್ಟ್‌ಫೋನ್‌ಗಳ ಬ್ಯಾಕ್‌ಕವರ್‌ಗಳ ಮೇಲೂ ಭರ್ಜರಿ ಡಿಸ್ಕೌಂಟ್ ನೀಡಲಾಗುತ್ತಿದೆ. ಬ್ಯಾಕ್‌ಕವರ್‌ಗಳ ಆರಂಭಿಕ ದರವು ಕೇವಲ 99ರೂ.ಗಳು ಆಗಿದೆ.


Click it and Unblock the Notifications








