ಮೈಕ್ರೋಮ್ಯಾಕ್ಸ್ ಫೋನ್‌ಗಳ ಮೇಲೆ ಅದ್ಭುತ ದರಕಡಿತ ಆಫರ್
ಭಾರತೀಯ ಮೂಲದ ಹ್ಯಾಂಡ್‌ಸೆಟ್ ತಯಾರಕರು ಇನ್ನಷ್ಟು ಪ್ರಬಲ ಮತ್ತು ಬಲಿಷ್ಟರಾಗಿ ಬೆಳೆಯುತ್ತಿದ್ದು ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಪೈಪೋಟಿಗೆ ಸರ್ವ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಬಳಕೆದಾರರಲ್ಲಿ ಟಾಪ್ ಆಯ್ಕೆಯನ್ನು ಪಡೆದುಕೊಂಡಿರುವ ಮೈಕ್ರೋಮ್ಯಾಕ್ಸ್ ಬಜೆಟ್ ಸ್ನೇಹಿ ಮಾತ್ರವಲ್ಲದೆ ಅತ್ಯಾಧುನಿಕ ಫೀಚರ್‌ಗಳನ್ನು ತನ್ನಲ್ಲಿ ಮೇಳೈಸಿಕೊಂಡು ಫೋನ್ ಬಳಸುವವರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ.
ಓದಿರಿ: ಭಾರತೀಯರಿಗೆ ಈ ವಾರ ಸ್ಮಾರ್ಟ್‌ಫೋನ್ ಸುಗ್ಗಿ
ದೀಪಾವಳಿ ಹಬ್ಬದ ಸಂಭ್ರಮಕ್ಕೆ ಇನ್ನಷ್ಟು ಮೆರುಗು ತರುವ ಕಾರ್ಯವನ್ನು ಮೈಕ್ರೋಮ್ಯಾಕ್ಸ್ ಮಾಡಿದ್ದು ತನ್ನ ಉತ್ಪನ್ನಗಳಲ್ಲಿ ದರಕಡಿತ ಯೋಜನೆಗಳನ್ನು ಪ್ರಸ್ತುತಪಡಿಸುವ ಮೂಲಕ ಫೋನ್ ಪ್ರಿಯರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ. ಇಂದಿನ ಲೇಖನದಲ್ಲಿ ಕಂಪೆನಿಯ 4ಜಿ ಫೋನ್‌ಗಳಿಂದ ಹಿಡಿದು ಎಲ್‌ಇಡಿ ಟಿವಿಗಳವರೆಗೆ ನಾವು ಪರಿಚಯವನ್ನು ಮಾಡಿಸುತ್ತಿದ್ದೇವೆ.

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಸೆಲ್ಫಿ 2
5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾದೊಂದಿಗೆ ಬರುತ್ತಿರುವ ಮೈಕ್ರೋಮ್ಯಾಕ್ಸ್ ಸೆಲ್ಫಿ ವಿಶೇಷ ಸಂದರ್ಭಗಳ ನೆನಪನ್ನು ಸೆರೆಹಿಡಿಯುವಲ್ಲಿ ನಿಮಗೆ ಸಹಾಯ ಮಾಡಲಿದೆ. ಸೆಲ್ಫಿಗಾಗಿ ಹೇಳಿ ಮಾಡಿಸಿರುವ ಕ್ಯಾಮೆರಾ ಫೋನ್ ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಸೆಲ್ಫಿ 2 ಆಗಿದೆ.

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಸಿಲ್ವರ್ 5
5.1 ಎಮ್‌ಎಮ್ ದಪ್ಪವಾಗಿರುವ ಸ್ಲಿಮ್ ಡಿವೈಸ್ ಎಂದೆನಿಸಿರುವ ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಸಿಲ್ವರ್ 5 ಜಗತ್ತಿನಲ್ಲೇ ಲೈಟ್ ಫೋನ್ ಎಂಬ ಬಿರುದನ್ನು ಪಡೆದುಕೊಂಡಿದೆ. ಮೈಕ್ರೋಮ್ಯಾಕ್ಸ್‌ನ ಹಬ್ಬದ ದರಕಡಿತ ಆಫರ್‌ನಲ್ಲಿ ಫೋನ್ ಅನ್ನು ನೀವು ರೂ 8,499 ವಿನಾಯಿತಿಯಲ್ಲಿ ಪಡೆದುಕೊಳ್ಳಬಹುದು.

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ನೈಟ್ 2
ಮೈಕ್ರೋಮ್ಯಾಕ್ಸ್‌ನ ಹಬ್ಬದ ಸೀಸನ್‌ನಲ್ಲಿ ಕ್ಯಾನ್‌ವಾಸ್ ನೈಟ್ 2 ವನ್ನು ರೂ 9,999 ಕ್ಕೆ ನೀವು ಗಳಿಸಿಕೊಳ್ಳಬಹುದು. ಮೆಟಲ್ ಹಾಗೂ ಗ್ಲಾಸ್ ಬಾಡಿಯೊಂದಿಗೆ ಬಂದಿರುವ ಈ ಡಿವೈಸ್ 5 ಇಂಚಿನ ಸೂಪರ್ ಅಮೋಲೆಡ್ ಎಚ್‌ಡಿ ಸ್ಕ್ರೀನ್ ಜೊತೆಗೆ ಗೋರಿಲ್ಲಾ ಗ್ಲಾಸ್ ಸಂರಕ್ಷಣೆಯನ್ನು ಇದು ಪಡೆದುಕೊಂಡಿದೆ. 2ಜಿಬಿ RAM ಅನ್ನು ಫೋನ್ ಒಳಗೊಂಡಿದ್ದು 1.5GHZ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ಪ್ರೊಸೆಸರ್ ಇದರಲ್ಲಿದೆ.

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಲ್ಯಾಪ್‌ಬುಕ್
ಮೈಕ್ರೋಸಾಫ್ಟ್‌ನ ಅತ್ಯಾಧುನಿಕ ವಿಂಡೋಸ್ 10 ಅನ್ನು ಒಳಗೊಂಡಿರುವ ಈ ಲ್ಯಾಪ್‌ಬುಕ್ ಯುವ ಜನರಿಗೆ ಹೆಚ್ಚು ಮೆಚ್ಚುಗೆಯದ್ದು ಎಂದೆನಿಸಲಿದೆ.

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ನಿಟ್ರೊ 4ಜಿ
1.3GHZ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 415 ಓಕ್ಟಾಕೋರ್ ಪ್ರೊಸೆಸರ್ ಇದರಲ್ಲಿದ್ದು 2ಜಿಬಿ RAM ಅನ್ನು ಡಿವೈಸ್ ಪಡೆದುಕೊಂಡಿದೆ. 4ಜಿ ಸಂಪರ್ಕವನ್ನು ಇದು ಹೊಂದಿದೆ. ಏರ್‌ಟೆಲ್ ಡಬಲ್ ಡೇಟಾ ಪ್ಯಾಕ್ ಅನ್ನು ಈ ಫೋನ್‌ನಲ್ಲಿ ನೀವು ಪಡೆದುಕೊಳ್ಳಬಹುದಾಗಿದ್ದು ಮುಂಭಾಗ ಕ್ಯಾಮೆರಾ 5 ಎಮ್‌ಪಿ ರಿಯರ್ ಕ್ಯಾಮೆರಾ 13 ಎಮ್‌ಪಿ ಸಾಮರ್ಥ್ಯದೊಂದಿಗೆ ಬಂದಿದೆ.

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಫೈರ್ 4ಜಿ
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಫೈರ್ 4ಜಿ ಯಲ್ಲಿ 4ಜಿ ವೇಗವನ್ನು ಆನಂದಿಸಿ. 4.5 ಇಂಚಿನ ಸ್ಕ್ರೀನ್ ಅನ್ನು ಈ ಡಿವೈಸ್ ಪಡೆದುಕೊಂಡಿದ್ದು 1GHZ ಮೀಡಿಯಾಟೆಕ್ ಪ್ರೊಸೆಸರ್ ಅಂತೆಯೇ ವೇಗದ ಬ್ರೌಸಿಂಗ್‌ಗೆ ಇದು ಹೇಳಿ ಮಾಡಿಸಿದ್ದಾಗಿದೆ.

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಬ್ಲೇಜ್ 4ಜಿ
ಮೈಕ್ರೋಮ್ಯಾಕ್ಸ್‌ನ 4ಜಿ ಸ್ಮಾರ್ಟ್‌ಫೋನ್‌ನೊಂದಿಗೆ ದೀಪಾವಳಿ ಹಬ್ಬ ಜೋರಾಗಿ ನಡೆಯಲಿ.

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಟ್ಯಾಬ್ P680
8 ಇಂಚಿನ ಸ್ಕ್ರೀನ್ ಅನ್ನು ಈ ಡಿವೈಸ್ ಪಡೆದುಕೊಂಡಿದ್ದು 1.3GHZ ಪ್ರೊಸೆಸರ್ ಇದರಲ್ಲಿದೆ 1ಜಿಬಿ RAM ಅನ್ನು ಫೋನ್ ಹೊಂದಿದೆ. ವೀಡಿ ಯೊ ವೀಕ್ಷಣೆ, ಹಾಡು ಆಲಿಸುವುದು ಇಂಟರ್ನೆಟ್ ಬ್ರೌಸಿಂಗ್ ಹೀಗೆ ಹಲವಾರು ಚಟುವಟಿಕೆಗಳನ್ನು ಇದರಲ್ಲಿ ನಿಮಗೆ ನಿರ್ವಹಿಸಬಹುದಾಗಿದೆ.

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಟ್ಯಾಬಿ
ಮಕ್ಕಳ ಮನರಂಜನೆಗೆ ಹೆಚ್ಚು ಸೂಕ್ತ ಎಂದೆನಿಸಿರುವ ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಟ್ಯಾಬಿ ಸಂಪೂರ್ಣ ಕುಟುಂಬ ಉತ್ಪನ್ನ ಎಂದೆನಿಸಿದೆ. ವಿದ್ಯಾಭ್ಯಾಸದ ಜೊತೆಗೆ ಮನರಂಜನೆಯನ್ನು ಈ ಟ್ಯಾಬಿ ನಿಮ್ಮ ಮಕ್ಕಳಿಗೆ ನೀಡುತ್ತದೆ.

ಮೈಕ್ರೋಮ್ಯಾಕ್ಸ್ ಎಲ್‌ಇಡಿ ಟಿವಿ
ಈ ಬಾರಿಯ ದೀಪಾವಳಿ ಮೈಕ್ರೋಮ್ಯಾಕ್ಸ್ ಎಲ್‌ಇಡಿ ಟಿವಿಯೊಂದಿಗೆ ಆಚರಿಸಿ. ವಿವಿಧ ಸ್ಕ್ರೀನ್ ಗಾತ್ರದಲ್ಲಿ ಈ ಟಿವಿ ಬಂದಿದ್ದು ಉತ್ತಮ ಚಿತ್ರ ಗುಣಮಟ್ಟ ಮತ್ತು ಧ್ವನಿ ಸಾಮರ್ಥ್ಯವನ್ನು ಹೊಂದಿದೆ 32 ಇಂಚುಗಳ ಮತ್ತು ಮೇಲ್ಮಟ್ಟದ ಮೈಕ್ರೋಮ್ಯಾಕ್ಸ್ ಟಿವಿಯನ್ನು ಖರೀದಿಸಿ ಮತ್ತು 3 ವರ್ಷಗಳ ವಿಸ್ತರಿತ ಉಚಿತ ವಾರಂಟಿಯನ್ನು ಗಳಿಸಿ


Click it and Unblock the Notifications








