ನಿಮ್ಮ ಐಫೋನಿನಲ್ಲಿ ಮಾಡಬೇಕಾದ ಮೊದಲ ಹತ್ತು ಕೆಲಸಗಳು!

|

ನೀವು ಐಫೋನ್ ಬಳಕೆದಾರರಾಗಿದ್ದರೆ ಐಫೋನ್ 7 ಅಥವಾ 7 ಪ್ಲಸ್ ಅನ್ನು ಉಪಯೋಗಿಸುವುದು ಅಂತಹ ದೊಡ್ಡ ವಿಷಯವೇನಲ್ಲ ಬಿಡಿ!

ನಿಮ್ಮ ಐಫೋನಿನಲ್ಲಿ ಮಾಡಬೇಕಾದ ಮೊದಲ ಹತ್ತು ಕೆಲಸಗಳು!

ಓದಿರಿ: ರಿಲಾಯನ್ಸ್ ಜಿಯೋ 4G ಸಿಮ್‌ನ 5 ಅನುಕೂಲಗಳು ಮತ್ತು 5 ಅನಾನುಕೂಲಗಳು!

ಆದರೆ ಈ ಮುಂಚೆ ಐಫೋನ್ ಬಳಸದೇ ಇದ್ದವರಿಗೆ ಶುರುವಿನಲ್ಲಿ ಕೊಂಚ ಗಲಿಬಿಲಿ ಉಂಟಾಗಬಹುದು. ಇದನ್ನು ಮನಸ್ಸಲ್ಲಿ ಇಟ್ಟುಕೊಂಡು ಮೊದಲ ಸಲ ಐಫೋನ್ ಖರೀದಿಸುವವರು ಮಾಡಬೇಕಾದ ಮೊದಲ ಹತ್ತು ಕಾರ್ಯಗಳನ್ನಿಲ್ಲಿ ಪಟ್ಟಿ ಮಾಡಿದ್ದೀವಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೇಗನೊಮ್ಮೆ ಕಣ್ಣಾಡಿಸಿ.

ಆ್ಯಪಲ್ ಐಡಿ ಸೃಷ್ಟಿಸಿ.

ಆ್ಯಪಲ್ ಐಡಿ ಸೃಷ್ಟಿಸಿ.

ಮೊದಲು ಮಾಡಬೇಕಾದ ಕೆಲಸ ಆ್ಯಪಲ್ ಐ.ಡಿಯನ್ನು ಸೃಷ್ಟಿಸುವುದು. ಐಫೋನ್ ಅಥವಾ ಯಾವುದೇ ಆ್ಯಪಲ್ ಉತ್ಪನ್ನಗಳನ್ನು ಉಪಯೋಗಿಸಲು ಇದು ಅತ್ಯವಶ್ಯ. ಆ್ಯಪಲ್ ಪರಿಸರಕ್ಕೆ ಸೇರಲು ಐ.ಡಿ ಟಿಕೇಟ್ ಇದ್ದಂತೆ.

ನೀವು ಆ್ಯಪ್ ಗಳನ್ನು ಡೌನ್ ಲೋಡ್ ಮಾಡಬೇಕೆಂದರೆ, ಹಾಡುಗಳನ್ನು ಖರೀದಿಸಬೇಕೆಂದರೆ, ಸಿನಿಮಾಗಳನ್ನು ಡೌನ್ ಲೋಡ್ ಮಾಡಲು, ಐಕ್ಲೌಡ್, ಫೇಸ್ ಟೈಮ್ ಉಪಯೋಗಿಸಲು ಆ್ಯಪಲ್ ಐಡಿ ಬೇಕು.

ನಿಮ್ಮ ಕಂಪ್ಯೂಟರಿನಲ್ಲಿ ಐಟ್ಯೂನ್ಸ್ ಇನ್ಸ್ಟಾಲ್ ಮಾಡಿ.

ನಿಮ್ಮ ಕಂಪ್ಯೂಟರಿನಲ್ಲಿ ಐಟ್ಯೂನ್ಸ್ ಇನ್ಸ್ಟಾಲ್ ಮಾಡಿ.

ನೀವು ಮಾಡಬೇಕಾದ ಮತ್ತೊಂದು ಪ್ರಮುಖ ಕೆಲಸವೆಂದರೆ ಆ್ಯಪಲ್ ಐಟ್ಯೂನ್ಸ್ ಅನ್ನು ಡೌನ್ ಲೋಡ್ ಮಾಡುವುದು. ಹಾಡನ್ನು ಸೇರಿಸಲು, ಡಿಲೀಟ್ ಮಾಡಲು, ಫೋನ್ ಅಪ್ ಡೇಟ್ ಮಾಡಲು, ಬ್ಯಾಕ್ ಅಪ್ ಮಾಡುವ ಕೆಲಸಗಳಿಗೆಲ್ಲ ಐಟ್ಯೂನ್ಸ್ ಅವಶ್ಯಕ. ಥರ್ಡ್ ಪಾರ್ಟಿ ಆ್ಯಪ್ ಗಳನ್ನು ಉಪಯೋಗಿಸಿಯೂ ಇವುಗಳಲ್ಲಿ ಕೆಲವನ್ನು ಮಾಡಬಹುದು, ಆದರೆ ಐಟ್ಯೂನ್ಸ್ ಉಪಯೋಗಿಸುವುದು ಸೂಕ್ತ.

ಫೋನ್ ಉಪಯೋಗಿಸಲು ಪ್ರಾರಂಭಿಸಿ.

ಫೋನ್ ಉಪಯೋಗಿಸಲು ಪ್ರಾರಂಭಿಸಿ.

ಆ್ಯಪಲ್ ಐಡಿ ತೆರೆದ ನಂತರ ನಿಮ್ಮ ಐಫೋನನ್ನು ಉಪಯೋಗಿಸಲು ಪ್ರಾರಂಭಿಸಿ. ಫೋನ್ ಆನ್ ಮಾಡಿದಾಗ ಹಲೋ ಸಂದೇಶ ಬರುತ್ತದೆ. ಅಲ್ಲಿ ಇರುವ ಸಲಹೆ ಸೂಚನೆಗಳನ್ನು ಉಪಯೋಗಿಸಿಕೊಂಡು ನಿಮ್ಮ ಸಾಧನವನ್ನು ನಿಮ್ಮನುಕೂಲಕ್ಕೆ ತಕ್ಕಂತೆ ಸೆಟ್ ಮಾಡಿಕೊಳ್ಳಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೋಮ್ ಬಟನ್ ಹೇಗಿರಬೇಕೆಂದು ನಿರ್ಧರಿಸಿ.

ಹೋಮ್ ಬಟನ್ ಹೇಗಿರಬೇಕೆಂದು ನಿರ್ಧರಿಸಿ.

ಹೆಡ್ ಫೋನ್ ಪೋರ್ಟನ್ನು ತೆಗೆದುಹಾಕಿದ ಆ್ಯಪಲ್, ಕ್ಲಿಕ್ ಮಾಡುವ ಹೋಮ್ ಬಟನ್ನನ್ನೂ ತೆಗೆದುಹಾಕಿದೆ. ಅದರ ಬದಲಿಗೆ ಮ್ಯಾಕ್ ಬುಕ್ ಪ್ರೋದಲ್ಲಿರುವ ಫೋರ್ಸ್ ಟಚ್ ಟ್ರ್ಯಾಕ್ ಪ್ಯಾಡ್ ನಂತಹ ಹೋಮ್ ಬಟನ್ನನ್ನು ಹಾಕಿದೆ. ಈ ಹೊಸ ಬಟನ್ ಆ್ಯಪಲ್ ನ ಟ್ಯಾಪ್ಟಿಕ್ ಇಂಜಿನ್ ಉಪಯೋಗಿಸಿಕೊಂಡು ಪ್ರೆಸ್ ಬಟನ್ನಿನಂತೆಯೇ ಕಾರ್ಯನಿರ್ವಹಿಸಲಿದೆ.

ಟಚ್ ಐಡಿಯನ್ನು ಹೊಂದಿಸಿ.

ಟಚ್ ಐಡಿಯನ್ನು ಹೊಂದಿಸಿ.

ನಂತರ, ಟಚ್ ಐಡಿಯನ್ನು ಹೊಂದಿಸಿ. ಇದನ್ನು ಉಪಯೋಗಿಸಿ ನೀವು ನಿಮ್ಮ ಫೋನನ್ನು ಅನ್ ಲಾಕ್ ಮಾಡಬಹುದು ಅಥವಾ ಇತರೆ ವ್ಯವಹಾರಕ್ಕೂ ಉಪಯೋಗಿಸಬಹುದು. ಉದಾಹರಣೆಗೆ, ನೀವು ಆ್ಯಪ್ ಸ್ಟೋರ್ ನಿಂದ ತಂತ್ರಾಂಶವೊಂದನ್ನು ಡೌನ್ ಲೋಡ್ ಮಾಡಿಕೊಂಡರೆ, ಪಾಸ್ ವರ್ಡ್ ಬಳಸುವ ಬದಲಿಗೆ ಟಚ್ ಐಡಿಯನ್ನು ಬಳಸಬಹುದು.

ಫೈಂಡ್ ಮೈ ಐಫೋನನ್ನು ಹೊಂದಿಸಿ.

ಫೈಂಡ್ ಮೈ ಐಫೋನನ್ನು ಹೊಂದಿಸಿ.

ಬಹಳಷ್ಟು ಬಳಕೆದಾರರು ಇದನ್ನು ಮಾಡುವುದಿಲ್ಲ, ಆದರೆ ಮೊದಲ ದಿನವೇ ಫೈಂಡ್ ಮೈ ಐಫೋನನ್ನು ಶುರು ಮಾಡುವುದನ್ನು ನಾವು ಶಿಫಾರಸು ಮಾಡುತ್ತೇವೆ. ನಿಮ್ಮ ಐಫೋನ್ ಕಳೆದುಹೋದರೆ ಇದು ಬಹಳ ಉಪಕಾರಿ. ನಿಮ್ಮ ಕಳೆದುಹೋದ ಫೋನ್ ಎಲ್ಲಿದೆ ಎಂದು ಪತ್ತೆ ಹಚ್ಚಬಹುದು.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫೋನನ್ನು ಸಂಶೋಧಿಸಿ.

ಫೋನನ್ನು ಸಂಶೋಧಿಸಿ.

ಹಿಂದಿನ ಐಫೋನಿಗಿಂತ ಇದು ತುಂಬಾ ವಿಭಿನ್ನವಾಗಿರದೇ ಇದ್ದರೂ, ಐಫೋನ್ 7 ನಲ್ಲಿ ಹೊಸ ವೈಶಿಷ್ಟ್ಯತೆಗಳಿವೆ. ಅವುಗಳನ್ನು ನೋಡಲು ಮರೆಯದಿರಿ.

ಲೈವ್ ಚಿತ್ರಗಳನ್ನು ಸೆರೆಹಿಡಿಯಿರಿ.

ಲೈವ್ ಚಿತ್ರಗಳನ್ನು ಸೆರೆಹಿಡಿಯಿರಿ.

ಕ್ಯಾಮೆರಾವನ್ನು ಪರೀಕ್ಷಿಸಲು ನೀವು ತುದಿಗಾಲಲ್ಲಿ ನಿಂತಿದ್ದೀರಾ ಎಂದು ನಮಗೆ ಗೊತ್ತಿದೆ. ಯಾಕಾಗಬಾರದು? ಈ ಸ್ಮಾರ್ಟ್ ಫೋನಿನಲ್ಲಿ ಅತ್ಯುತ್ತಮ ಎನ್ನಬಹುದಾದ ಕ್ಯಾಮೆರಾ ಇದೆ. ಐಫೋನ್ 7ನಲ್ಲಿ ಲೈವ್ ಚಿತ್ರಗಳನ್ನು ಸೆರೆಹಿಡಿಯಬಹುದು. 32ಜಿಬಿಯನ್ನು ಚಿತ್ರಗಳಿಂದ ತುಂಬಿಸಿ.

4ಕೆ ವೀಡಿಯೋ ಚಿತ್ರಿಸಿ.

4ಕೆ ವೀಡಿಯೋ ಚಿತ್ರಿಸಿ.

ಆ್ಯಪಲ್ಲಿನ ಹೊಸ 12 ಮೆಗಾಪಿಕ್ಸೆಲ್ ಕ್ಯಾಮೆರಾದಲ್ಲಿ ನೀವು 30ಎಫ್.ಪಿ.ಎಸ್ ವೇಗದಲ್ಲಿ 4ಕೆ ವೀಡಿಯೋ ಚಿತ್ರಿಸಬಹುದು. ನೀವೇನು ಮಾಡುತ್ತಿದ್ದೀರೋ ಅದನ್ನು ನಿಲ್ಲಿಸಿ ವೀಡಿಯೋ ತೆಗೆಯಿರಿ!

ಹೊಸ ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಿ.

ಹೊಸ ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಿ.

ಆ್ಯಪಲ್ ಆ್ಯಪ್ ಸ್ಟೋರಿನಲ್ಲಿ ಅಸಂಖ್ಯಾತ ಆ್ಯಪ್ ಗಳಿವೆ. ನಿಮಗೆ ಇಚ್ಛೆಯಾಗುವ ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಿ. ನೆನಪಿಡಿ, ಆ್ಯಪ್ ಗಳನ್ನು ಡೌನ್ ಲೋಡ್ ಮಾಡಲು ಆ್ಯಪಲ್ ಐಡಿ ಬೇಕೇ ಬೇಕು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Switching to the new iPhone 7 or iPhone 7 Plus won't be a big deal if you are/ were an iPhone user.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X