ರಿಲಾಯನ್ಸ್ ಜಿಯೋ 4G ಸಿಮ್‌ನ 5 ಅನುಕೂಲಗಳು ಮತ್ತು 5 ಅನಾನುಕೂಲಗಳು!
ಸೆಪ್ಟೆಂಬರ್ 1 ರಂದು 'ರಿಲಾಯನ್ಸ್ ಜಿಯೋ' ಅಧ್ಯಕ್ಷರಾದ 'ಮುಕೇಶ್ ಅಂಬಾನಿ'ರವರು ಎಜಿಎಮ್ ಸಭೆಯಲ್ಲಿ ಜಿಯೋ ಸೇವೆಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದರು. ಅಲ್ಲದೇ ಸೆಪ್ಟೆಂಬರ್ 5 ರಿಂದ ಕೆಲವು ಆಯ್ಕೆಗೊಂಡ ನಗರಗಳಲ್ಲಿ ಸೇವೆಯನ್ನು ಆರಂಭಿಸಿ, ಸಿಮ್ ಕಾರ್ಡ್‌ಗಳನ್ನು ಸಹ ದೇಶದಾದ್ಯಂತ ನೀಡಲಾಯಿತು.
ಆದರೆ ಪ್ರಸ್ತುತ ಜಿಯೋ ಸಿಮ್ ಪಡೆದ ಹಲವರು ಹಲವು ರೀತಿಯ ಸಮಸ್ಯೆಗಳನ್ನು ಎದರಿಸುತ್ತಿದ್ದಾರೆ. ಅವುಗಳಲ್ಲಿ ಸಿಮ್ ಆಕ್ಟಿವೇಶನ್, ಸಿಮ್ ಪಡೆಯಲು ಆಗದ ಸಮಸ್ಯೆಯು ಸಹ ಸೇರಿದೆ. ಆದರೆ ಈಗ ಅಧಿಕೃತ ಮಾಹಿತಿಯ ಪ್ರಕಾರ ಕಂಪನಿ ಸಿಮ್ ಕಾರ್ಡ್ ನೀಡುವುದನ್ನು ನಿಲ್ಲಿಸಿದೆ ಎನ್ನಲಾಗಿದೆ.
ರಿಲಾಯನ್ಸ್ ಜಿಯೋ ಸಿಮ್ ಖರೀದಿಗೆ ಮುನ್ನ ತಿಳಿಯಲೇಬೇಕಾದ 5 ಆಘಾತಕಾರಿ ಸತ್ಯಗಳು
ಹಲವು ಜಿಯೋ ಸಿಮ್ ಬಳಕೆದಾರರು ಪ್ರಿವೀವ್ ಆಫರ್‌ನಲ್ಲಿ ಉತ್ತಮ ವೇಗದ ಡಾಟಾ ಪಡೆಯುತ್ತಿಲ್ಲ, ಅಲ್ಲದೇ ಪ್ರಿವೀವ್ ಆಫರ್ ಹೊರತು ಪಡಿಸಿ ವೆಲ್ಕಮ್ ಆಫರ್‌ನ ಸಿಮ್ ಬಳಕೆದಾರರು ಪ್ರಿವೀವ್ ಆಫರ್ ಸಿಮ್ ಡಾಟಾ ವೇಗವನ್ನು ಪಡೆಯುತ್ತಿಲ್ಲ ಎಂದು ಹೇಳಿದ್ದಾರೆ.
ರಿಲಾಯನ್ಸ್ ಜಿಯೋ(Jio) ಸೇವೆ ಇತರೆ ಟೆಲಿಕಾಂಗಳಿಗಿಂತ ಹೆಚ್ಚು ಭಿನ್ನ. ಆದರೆ ಟೆಲಿಕಾಂ ಕ್ಷೇತ್ರದಲ್ಲಿ ಕಂಪನಿ ಮಾತ್ರ ಸ್ಥಿರವಾಗಿದೆ. ಇಂದಿನ ಲೇಖನದಲ್ಲಿ ರಿಲಾಯನ್ಸ್ ಜಿಯೋ 4G ಸಿಮ್ ನೆಟ್‌ವರ್ಕ್‌ನ 5 ಅನುಕೂಲಗಳು ಮತ್ತು 5 ಅನಾನುಕೂಲಗಳನ್ನು ತಿಳಿಸುತ್ತಿದ್ದೇವೆ. ಈ ಮಾಹಿತಿಯನ್ನು ಸಿಮ್ ಖರೀದಿ ಮಾಡುವವರು, ಈಗಾಗಲೇ ಸಿಮ್ ಖರೀದಿ ಮಾಡಿರುವವರು ಸಹ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.
ರಿಲಾಯನ್ಸ್ ಜಿಯೋ 4G ನೆಟ್‌ವರ್ಕ್‌ಗೆ ಆಕರ್ಷಿಸುವ 7 ಬೆನಿಫಿಟ್‌ಗಳು

ಅನುಕೂಲಗಳು: LTE ಓನ್ಲಿ ನೆಟ್‌ವರ್ಕ್
ರಿಲಾಯನ್ಸ್ ಜಿಯೋ ಭಾರತದ ಮೊದಲ LTE ನೆಟ್‌ವರ್ಕ್ ಆಗಿದ್ದು, ಆದ್ದರಿಂದ ಬಳಕೆದಾರರು ಜಿಯೋ 2G, 3G ಗೆ ಕುಸಿಯುತ್ತದೆ ಎಂದು ಭಯಪಡುವ ಅವಶ್ಯಕತೆ ಇಲ್ಲ. ಇತರೆ ಟೆಲಿಕಾಂಗಳು 4G ನೆಟ್‌ವರ್ಕ್ ಅನ್ನು ಕಷ್ಟದಿಂದ ಪಡೆಯುತ್ತಿವೆ, ಅಲ್ಲದೇ ಏರ್‌ಟೆಲ್ ಈಗಾಗಲೇ 3G, 2G ನೆಟ್‌ವರ್ಕ್‌ಗೆ ಕುಸಿದಿದೆ.

ಅನುಕೂಲಗಳು: VoLTE ಕರೆಗಳು
ರಿಲಾಯನ್ಸ್ ಜಿಯೋ ಲಾಂಚ್ ವೇಳೆಯಲ್ಲಿ 'ಮುಕೇಶ್ ಅಂಬಾನಿ'ಯವರು ಗ್ರಾಹಕರು ಕೇವಲ ಡಾಟಾ'ಗೆ ಹಣ ಪಾವತಿಸಬೇಕು ಎಂದಿದ್ದಾರೆ. ಅಂದರೆ ಈ ಫೀಚರ್‌ನಲ್ಲಿ ವಾಯ್ಸ್ ಕರೆಗಳು Voice Over LTE (VoLTE) ಇವೆ ಎಂದರ್ಥ. ಈ ಫೀಚರ್ ದೇಶದಲ್ಲಿ ಹೊಸದಾಗಿದೆ. ಅಲ್ಲದೇ ಸಾಮಾನ್ಯ ಧ್ವನಿ ಕರೆಗಳಿಗಿಂತ ಇದು ಗುಣಮಟ್ಟದ ಧ್ವನಿ ಕರೆಗಳನ್ನು ನೀಡುವ ಭರವಸೆ ಹೊಂದಿದೆ.
ಅಂದಹಾಗೆ ನಿಮ್ಮ ಸ್ಮಾರ್ಟ್‌ಫೋನ್ VoLTE ಗೆ ಸಪೋರ್ಟ್ ಮಾಡಬೇಕು. ಆದರೆ ಸಾಮಾನ್ಯ 4G LTE ಫೋನ್‌ಗಳು ವಾಯ್ಸ್ ಕರೆಗಳಿಗೆ ಸಪೋರ್ಟ್ ಮಾಡುವುದಿಲ್ಲ. ವಾಯ್ಸ್ ಕರೆಗಳಿಗೆ ನಿಮ್ಮ ಮೊಬೈಲ್ ಡಾಟಾ ಸದಾಕಾಲ ಆನ್ ಆಗಿರಬೇಕು.

ಅನುಕೂಲಗಳು: ಮೆಸೇಜ್‌ಗಳಿಗೆ ಮತ್ತು ಕರೆಗಳಿಗೆ ಯಾವುದೇ ಚಾರ್ಜ್ ಇಲ್ಲ
ಲಾಂಚ್ ವೇಳೆ ಹೇಲಿದಂತೆ ವಾಯ್ಸ್ ಕರೆಗಳು ಮತ್ತು ಮೆಸೇಜ್‌ಗಳು ಖಂಡಿತ ಉಚಿತ. ಜಿಯೋ ನೆಟ್‌ವರ್ಕ್ ತನ್ನ ಟ್ಯಾರಿಫ್ ಪ್ಯಾಕ್‌ನೊಂದಿಗೆ ಉಚಿತ ಮೆಸೇಜ್‌ಗಳನ್ನು ನೀಡಿದೆ. ಆದರೆ ಗರಿಷ್ಟವಾಗಿ ಟ್ರಾಯ್ ನಿಯಮದ ಪ್ರಕಾರ 100 ಮೆಸೇಜ್‌ಗಳನ್ನು ಸೆಂಡ್ ಮಾಡಬಹುದು.

ಅನುಕೂಲಗಳು : ರಾಷ್ಟ್ರವ್ಯಾಪಿ ಉಚಿತ ರೋಮಿಂಗ್
ಇತರೆ ಟೆಲಿಕಾಂ ಸೇವೆಗಳ ವಿರುದ್ಧ ರಿಲಾಯನ್ಸ್ ಜಿಯೋದ ಅತಿದೊಡ್ಡ ಅನುಕೂಲವೆಂದರೆ, ರಾಷ್ಟ್ರವ್ಯಾಪಿ ಉಚಿತ ರೋಮಿಂಗ್ ಆಫರ್ ನೀಡಿದೆ. ನೀವು ಡಾಟಾಗೆ ಮಾತ್ರ ಹಣ ಪಾವತಿಸಬೇಕಿದೆ.

ಅನುಕೂಲಗಳು: ವೈಫೈ ಡಾಟಾ ಪ್ಲಾನ್‌ಗಳು
ಟ್ಯಾರಿಫ್ ಪ್ಲಾನ್‌ಗಳ ಸೇವೆಯಲ್ಲಿ ಜಿಯೋದ ವೈಫೈ ಡಾಟಾ ಒಳಗೊಂಡಿದ್ದು, ಗ್ರಾಹಕರು ಇದರಿಂದಲೂ ಸ್ವಲ್ಪ ಪ್ರಮಾಣದ ಡಾಟಾ ಸೇವೆ ಪಡೆಯುತ್ತಾರೆ. ಕಂಪನಿಯ ವೈಫೈ ಹಾಟ್‌ಸ್ಪಾಟ್‌ನಿಂದ ಡಾಟಾ ಸಂಪರ್ಕ ಪಡೆಯುತ್ತಾರೆ.

ಅನಾನುಕೂಲಗಳು: ರೂ.50 ಕ್ಕೆ 1GB ಯ ಯಾವುದೇ ಪ್ಯಾಕ್‌ಗಳು ಇಲ್ಲ
ರಿಲಾಯನ್ಸ್ ಜಿಯೋ ಅಧಿಕೃತವಾಗಿ ರೂ.50 ಕ್ಕೆ 1GB ಯ ಯಾವುದೇ ಪ್ಯಾಕ್‌ಗಳನ್ನು ಲಾಂಚ್ ಮಾಡಿಲ್ಲ. ಬದಲಾಗಿ, ಸಾಮಾನ್ಯವಾಗಿ 1MB ಯ ಡಾಟಾ ಬೆಲೆ 5 ಪೈಸೆ ಪ್ರಕಾರ 50 ರೂಗೆ 1GB ಎಂದು ಕಂಪನಿ ಹೇಳಿದೆ. ಟ್ಯಾರಿಫ್ ಪ್ಲಾನ್ ಅನ್ನು ರೀಚಾರ್ಜ್ ಮಾಡದಿದ್ದಲ್ಲಿ ವಾಯ್ಸ್ ಕರೆಗಳು ಉಚಿತವಾಗಿರುವುದಿಲ್ಲ.

ಅನಾನುಕೂಲಗಳು: ಅನ್‌ಲಿಮಿಟೆಡ್ ರಾತ್ರಿ ಡಾಟಾ ಬಳಕೆ ಕೇವಲ ಆಕರ್ಷಣೆ
ಟ್ಯಾರಿಫ್ ಪ್ಲಾನ್‌ಗಳು ರಾತ್ರಿ ಡಾಟಾ ಉಚಿತ ಎಂದು ಹೇಳಿದೆ. ಇದೊಂದು ನೈಸ್ ಡೀಲ್ ಎಂದು ಗ್ರಾಹಕರು ಭಾವಿಸಿದ್ದಾರೆ. ಆದರೆ ನೀವು ಟೈಮ್ ಅನ್ನು ಚೆಕ್ ಮಾಡಬೇಕು. ಕಾರಣ ರಾತ್ರಿ ಡಾಟಾ ಬಳಕೆ ಅವಕಾಶ 2AM ಇಂದ 5AM ವರೆಗೆ. ಅಂದರೆ ದಿನ ಒಂದಕ್ಕೆ ಕೇವಲ 3 ಗಂಟೆಗಳ ಕಾಲ. ಅಲ್ಲದೇ ಆಕರ್ಷಣೆ ಇತರೆ ಟೆಲಿಕಾಂಗಳು ರಾತ್ರಿ ಡಾಟಾ ಆಫರ್ ಅನ್ನು 11pm ನಿಂದ 7am ವರೆಗೆ ನೀಡಿವೆ.

ಅನಾನುಕೂಲಗಳು: VoLTE ಸಪೋರ್ಟ್ ಮಾಡದ ಫೋನ್‌ಗಳಿಗೆ ವಾಯ್ಸ್ ಕರೆ ಸಾಧ್ಯವಿಲ್ಲ
ಇನ್ನೊಂದು ಅನಾನುಕೂಲವೆಂದರೆ, 4G LTE ಸ್ಮಾರ್ಟ್‌ಫೋನ್‌ನಲ್ಲಿ ಜಿಯೋ ಸಿಮ್ ಕಾರ್ಡ್ ಅನ್ನು ಬಳಸಬಹುದು. ಆದರೆ VoLTE ವಾಯ್ಸ್ ಕರೆಯನ್ನು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಜಿಯೋ ಒಂದು ಪರಿಹಾರ ನೀಡಿದೆ. ಗ್ರಾಹಕರು ತಮ್ಮ ಡಿವೈಸ್‌ಗೆ Jio4GVoice ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಕರೆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಎಂದಿದೆ.

ಅನಾನುಕೂಲಗಳು: ವೆಲ್ಕಮ್ ಆಫರ್ ಡಾಟಾ ಆಕರ್ಷಣೆಯಿಂದ ಬಂದಿದೆ
ಎಲ್ಲರೂ ತಿಳಿದಂತೆ ಪ್ರಿವೀವ್ ಆಫರ್ ಅನ್ನು ಪ್ರಸ್ತುತದಲ್ಲಿ ವೆಲ್ಕಮ್ ಆಫರ್ ಎಂದು ಕರೆಯಲಾಗುತ್ತದೆ. ಈ ಆಫರ್ 2016 ಡಿಸೆಂಬರ್ 31 ರವರರೆಗೆ ಎಲ್ಲಾ ಗ್ರಾಹಕರಿಗೆ ಲಭ್ಯವಿದೆ. ಆದರೆ ವೆಲ್ಕಮ್ ಆಫರ್ ಪ್ರತಿ ದಿನಕ್ಕೆ 4GB 4G ಡಾಟಾ ಲಿಮಿಟ್ ಹೊಂದಿದೆ.

ಅನಾನುಕೂಲಗಳು: ರೀಚಾರ್ಜ್ ಮಾಡದಿದ್ದಲ್ಲಿ ವಾಯ್ಸ್ ಕರೆ ಉಚಿತವಿಲ್ಲ
ಕಂಪನಿ ಹೇಳಿದಂತೆ ವಾಯ್ಸ್ ಕರೆಗಳು ಉಚಿತ. ಆದರೆ ಟ್ಯಾರಿಪ್ ಪ್ಲಾನ್‌ಗಳನ್ನು ರೀಚಾರ್ಜ್ ಮಾಡಿಸಬೇಕು.


Click it and Unblock the Notifications








